Social Media: ವೈಯಕ್ತಿಕ ಸಂಬಂಧಗಳ ನಡುವೆ ಸೋಶಿಯಲ್ ಮೀಡಿಯಾಗೆ ಜಾಗವಿರಬಾರದು, ನಿಮ್ಮ ಬಂಧಕ್ಕೆ ಮಾರಕವಾಗಬಹುದು

|

Updated on: Jun 30, 2023 | 3:21 PM

ಸಾಮಾಜಿಕ ಮಾಧ್ಯಮ ಎಂಬುದು ಪ್ರತಿಯೊಬ್ಬರ ಜೀವನದಲ್ಲೂ ಹಾಸು ಹೊಕ್ಕಾಗಿದೆ. ಕೆಲಸದಿಂದ ಒಂದೈದು ನಿಮಿಷ ಬಿಡುವಿದೆ ಎಂದರೆ ನಾವು ನಿದ್ರೆ ಮಾಡಲು ಇಷ್ಟಪಡುವುದಿಲ್ಲ ಬದಲಾಗಿ ಮೊಬೈಲ್​ ಕಡೆಗೆ ಕಣ್ಣು ಹರಿಸುತ್ತೇವೆ.

Social Media: ವೈಯಕ್ತಿಕ ಸಂಬಂಧಗಳ ನಡುವೆ ಸೋಶಿಯಲ್ ಮೀಡಿಯಾಗೆ ಜಾಗವಿರಬಾರದು, ನಿಮ್ಮ ಬಂಧಕ್ಕೆ ಮಾರಕವಾಗಬಹುದು
ಸೋಶಿಯಲ್ ಮೀಡಿಯಾ
Image Credit source: Healthshots.com
Follow us on

ಸಾಮಾಜಿಕ ಮಾಧ್ಯಮ ಎಂಬುದು ಪ್ರತಿಯೊಬ್ಬರ ಜೀವನದಲ್ಲೂ ಹಾಸು ಹೊಕ್ಕಾಗಿದೆ. ಕೆಲಸದಿಂದ ಒಂದೈದು ನಿಮಿಷ ಬಿಡುವಿದೆ ಎಂದರೆ ನಾವು ನಿದ್ರೆ ಮಾಡಲು ಇಷ್ಟಪಡುವುದಿಲ್ಲ ಬದಲಾಗಿ ಮೊಬೈಲ್​ ಕಡೆಗೆ ಕಣ್ಣು ಹರಿಸುತ್ತೇವೆ.
ಆದರೆ ಈ ಸೋಶಿಯಲ್ ಮೀಡಿಯಾಗಳು ನಿಮ್ಮ ವೈಯಕ್ತಿಕ ಸಂಬಂಧಗಳ ನಡುವೆ ಬಂದರೆ ಅದು ಮಾರಕವಾಗಬಹುದು. ಎಷ್ಟೋ ಮಂದಿ ದೂರವಾಗಲು ಕೂಡ ಇದೇ ಕಾರಣವಾಗಬಹುದು.

ಅಪ್ಪ, ಅಮ್ಮ, ಅಕ್ಕ, ತಂಗಿ, ಅಣ್ಣ, ತಮ್ಮ, ಗರ್ಲ್​ಫ್ರೆಂಡ್​, ಬಾಯ್​ ಫ್ರೆಂಡ್, ಸ್ನೇಹಿತರು, ಗಂಡ-ಹೆಂಡತಿ ಯಾರೇ ಆಗಿರಲಿ ನಿಮ್ಮವರಿಗಾಗಿ ನೀವು ಸಮಯ ಕೊಡದೆ ಮೂರು ಹೊತ್ತು ಸೋಶಿಯಲ್ ಮೀಡಿಯಾದೊಳಗಿದ್ದರೆ ನಿಮ್ಮವರು ನಿಮ್ಮಿಂದ ಕ್ರಮೇಣವಾಗಿ ದೂರವಾಗುತ್ತಾರೆ.

ಸಾಮಾಜಿಕ ಮಾಧ್ಯಮವು ಸಂಬಂಧಗಳ ಬಗ್ಗೆ ಅವಾಸ್ತವಿಕ ನಿರೀಕ್ಷೆಗಳನ್ನು ಉಂಟುಮಾಡಬಹುದು. ಜನರು ಸಾಮಾನ್ಯವಾಗಿ ತಮ್ಮ ಸಂಬಂಧಗಳ ಮುಖ್ಯಾಂಶಗಳು ಮತ್ತು ಸಕಾರಾತ್ಮಕ ಅಂಶಗಳನ್ನು ತೋರಿಸುತ್ತಾರೆ, ಆದರೆ ಹೋರಾಟಗಳು ಮತ್ತು ಸವಾಲುಗಳನ್ನು ವಿರಳವಾಗಿ ತೋರಿಸಲಾಗುತ್ತದೆ. ಈ ಕಾರಣದಿಂದಾಗಿ, ಸಂಬಂಧಗಳ ಸತ್ಯವು ತಿಳಿದಿಲ್ಲ.

ಮತ್ತಷ್ಟು ಓದಿ:Hygiene: ಮನೆಯಲ್ಲಿರುವ ಈ ವಸ್ತುಗಳು ರೋಗ ಹರಡಲು ಪ್ರಮುಖ ಕಾರಣವಾಗಬಹುದು

ಸಾಮಾಜಿಕ ಮಾಧ್ಯಮವು ಸಾರ್ವಜನಿಕ ಮತ್ತು ಖಾಸಗಿ ಜೀವನದ ನಡುವಿನ ಗಡಿಗಳನ್ನು ಮಸುಕುಗೊಳಿಸುತ್ತದೆ.
ಮಕ್ಕಳ ಜತೆ ಬೆರೆಯಲು ಸಾಧ್ಯವಾಗುವುದಿಲ್ಲ, ನಿಜವಾದ ಪ್ರೀತಿಯ ಬೆಲೆ ಸಿಗುವುದಿಲ್ಲ, ಸಾಮಾಜಿಕ ಮಾಧ್ಯಮಗಳಲ್ಲಿ ತೋರಿಸುವುದೇ ಸತ್ಯ ಎಂದು ನಂಬಿಕೊಂಡು ಜೀವಿಸುತ್ತೀರಿ.

ಹೀಗಾಗಿ ಸೋಶಿಯಲ್ ಮೀಡಿಯಾದಿಂದ ಸ್ವಲ್ಪ ಆಚೆ ಬಂದು ನಿಮ್ಮ ವೈಯಕ್ತಿಕ ಜೀವನ ಹಾಗೂ ನಿಮ್ಮವರ ಕಡೆ ಸ್ವಲ್ಪ ಕಾಳಜಿವಹಿಸುವುದು ಒಳಿತು.