Vitamins: ನಿಮ್ಮ ದೇಹದಲ್ಲಿ ಈ ವಿಟಮಿನ್ ಕೊರತೆ ಇದ್ರೂ ನಿಮಗೆ ನಿದ್ರೆ ಬರುವುದಿಲ್ಲ
ಕೆಲವರು ರಾತ್ರಿ ಸರಿಯಾಗಿ ನಿದ್ರೆ ಬರುವುದೇ ಇಲ್ಲ 4 ರಿಂದ 5 ತಾಸು ನಿದ್ರೆ ಬಂದ್ರೆ ಹೆಚ್ಚು ಅಂತಾರೆ. ನೀವು ತಿನ್ನುವ ಆಹಾರ ಸರಿ ಇಲ್ವೇನೋ, ದೇಹ ಇನ್ನಷ್ಟು ದಣಿಯಬೇಕು, ರಾತ್ರಿ ತಡವಾಗಿ ಮಲಗಬಾರದು, ಮಲಗುವ ಮುನ್ನ ಹೆಚ್ಚು ಹೊತ್ತು ಮೊಬೈಲ್ ನೋಡುತ್ತಿರಬಾರದು ಎಂದು ಸಲಹೆ ನೀಡುತ್ತಾರೆ.
ಕೆಲವರು ರಾತ್ರಿ ಸರಿಯಾಗಿ ನಿದ್ರೆ ಬರುವುದೇ ಇಲ್ಲ 4 ರಿಂದ 5 ತಾಸು ನಿದ್ರೆ ಬಂದ್ರೆ ಹೆಚ್ಚು ಅಂತಾರೆ. ನೀವು ತಿನ್ನುವ ಆಹಾರ ಸರಿ ಇಲ್ವೇನೋ, ದೇಹ ಇನ್ನಷ್ಟು ದಣಿಯಬೇಕು, ರಾತ್ರಿ ತಡವಾಗಿ ಮಲಗಬಾರದು, ಮಲಗುವ ಮುನ್ನ ಹೆಚ್ಚು ಹೊತ್ತು ಮೊಬೈಲ್ ನೋಡುತ್ತಿರಬಾರದು ಎಂದು ಸಲಹೆ ನೀಡುತ್ತಾರೆ. ಆದರೆ ನಿಮ್ಮ ದೇಹದಲ್ಲಿ ವಿಟಮಿನ್ ಡಿ ಕೊರತೆಯೂ ನಿಮ್ಮ ನಿದ್ರೆಯನ್ನು ಕಸಿಯಬಹುದು ಎಂಬುದು ತಿಳಿದಿದೆಯೇ?. ನಿದ್ರಾಹೀನತೆಯು ಅನೇಕ ರೋಗಗಳಿಗೆ ಕಾರಣವಾಗಬಹುದು. ಯಾವುದೇ ವ್ಯಕ್ತಿಗೆ 6-8 ಗಂಟೆಗಳ ನಿದ್ರೆ ಅವಶ್ಯಕ ಎಂದು ಹೇಳಲಾಗುತ್ತದೆ. ಒಬ್ಬ ವ್ಯಕ್ತಿಯು ಸಾಕಷ್ಟು ನಿದ್ರೆ ಮಾಡದಿದ್ದರೆ ಆತ ದೈಹಿಕವಾಗಿ ಮತ್ತು ಮಾನಸಿಕವಾಗಿ ತೊಂದರೆಗೊಳಗಾಗಬಹುದು.
ಈ ಕಾರಣದಿಂದಾಗಿ, ಹಾರ್ಮೋನುಗಳ ವ್ಯತ್ಯಾಸವಾಗಬಹುದು. ಮೂಡ್ ಸ್ವಿಂಗ್ಸ್ ಮತ್ತು ಆತಂಕದಂತಹ ಅನೇಕ ಸಮಸ್ಯೆಗಳು ಪ್ರಾರಂಭವಾಗಬಹುದು. ನಿದ್ರಿಸದಿರಲು ಹಲವು ಕಾರಣಗಳಿರಬಹುದು, ಆದರೆ ವೈದ್ಯರ ಪ್ರಕಾರ, ಕೆಲವೊಮ್ಮೆ ವಿಟಮಿನ್ಗಳ ಕೊರತೆಯೂ ನಿದ್ರೆ ಬಾರದಿರಲು ಕಾರಣ.
ಮತ್ತಷ್ಟು ಓದಿ: Health Tips: ನಿದ್ರಾಹೀನತೆ ಹೃದಯದ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿದಿದೆಯೇ? ನಿದ್ರಾಹೀನತೆ ಸಮಸ್ಯೆ ನಿವಾರಣೆಗೆ ಇಲ್ಲಿದೆ ಪರಿಹಾರ
ವಿಟಮಿನ್ ಡಿ ಮತ್ತು ವಿಟಮಿನ್ ಬಿ 12 ಕೊರತೆಯಿಂದಾಗಿ ನಿದ್ರೆಯ ಸಮಸ್ಯೆಯುಂಟಾಗಬಹುದು. ವಿಟಮಿನ್ ಡಿ ಕೊರತೆಯು ಮಕ್ಕಳು ಮತ್ತು ವೃದ್ಧರಲ್ಲಿ ಸಂಭವಿಸಬಹುದು. ನಿದ್ದೆ ಮಾಡದಿರುವುದು ಮತ್ತು ರಾತ್ರಿ ಎಚ್ಚರವಾಗಿರುವುದು ಇವೆಲ್ಲವೂ ಸಮಸ್ಯೆಯಾಗಿರಬಹುದು. ಮೆದುಳು ಆರೋಗ್ಯವಾಗಿರಲು ವಿಟಮಿನ್ ಡಿ ಬಹಳ ಮುಖ್ಯ. ನಿದ್ರೆಯ ಹಾರ್ಮೋನ್ ಆಗಿರುವ ಮೆಲಟೋನಿನ್‌ಗೆ ಇದು ತುಂಬಾ ಪ್ರಯೋಜನಕಾರಿಯಾಗಿದೆ.
ಮಳೆಗಾಲದಲ್ಲಿ ಹಾಲು ಕುಡಿಯುವುದರಿಂದ ಮೆಲಟೋನಿನ್ ಕೊರತೆ ಉಂಟಾಗುತ್ತದೆ. ಇದರಿಂದಾಗಿ ನಿದ್ರೆಯ ಕೊರತೆಯುಂಟಅಗಬಹುದು. ಇದರಿಂದಾಗಿ ನಿದ್ರೆಯ ಚಕ್ರವು ತೊಂದರೆಗೊಳಗಾಗುತ್ತದೆ.
ವಿಟಮಿನ್ ಡಿ ಕೊರತೆಯನ್ನು ಹೇಗೆ ನಿವಾರಿಸುವುದು ವಿಟಮಿನ್ ಡಿ ಕೊರತೆಯನ್ನು ಹೋಗಲಾಡಿಸಲು, ಬೆಳಗ್ಗೆ ಬೇಗನೆ ಎದ್ದು ಬಿಸಿಲಿನಲ್ಲಿ ಕುಳಿತುಕೊಳ್ಳಿ ಇದು ನಿಮ್ಮ ನಿದ್ರೆಯ ಚಕ್ರವನ್ನು ಸುಧಾರಿಸುತ್ತದೆ. ನೀವು ಉತ್ತಮ ಕೆಲಸದ ಆರಂಭವನ್ನು ಪಡೆಯುತ್ತೀರಿ. ಮೆದುಳು ಮತ್ತು ಕಣ್ಣುಗಳಿಗೆ ಸೂರ್ಯನ ಬೆಳಕು ಬಹಳ ಮುಖ್ಯ. ಆಗ ಮಾತ್ರ ಅದು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಇದರೊಂದಿಗೆ ನೀವು ಉತ್ತಮ ಕೆಲಸವನ್ನು ಮಾಡಲು ಸಾಧ್ಯವಾಗುತ್ತದೆ. ಇದರೊಂದಿಗೆ ವಿಟಮಿನ್ ಡಿ ಸಮೃದ್ಧವಾಗಿರುವ ಹಾಲು, ಮೊಟ್ಟೆ ಮತ್ತು ಅಣಬೆಗಳಂತಹ ಆಹಾರಗಳನ್ನು ಸೇವಿಸಿ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ