Health Tips: ನಿದ್ರಾಹೀನತೆ ಹೃದಯದ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿದಿದೆಯೇ? ನಿದ್ರಾಹೀನತೆ ಸಮಸ್ಯೆ ನಿವಾರಣೆಗೆ ಇಲ್ಲಿದೆ ಪರಿಹಾರ

ದೀರ್ಘಕಾಲದ ನಿದ್ರಾಹೀನತೆಯು ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್, ಹೃದಯಾಘಾತ, ಬೊಜ್ಜು, ಮಧುಮೇಹ ಮತ್ತು ಪಾರ್ಶ್ವವಾಯು ಸೇರಿದಂತೆ ಹಲವಾರು ಸಮಸ್ಯೆಗಳಿಗೆ ಕಾಣವಾಗಬಹುದು. ನಿದ್ರಾಹೀನತೆ ತಪ್ಪಿಸಲು ಇಲ್ಲಿವೆ ಕೆಲವು ಸಲಹೆಗಳು.

Health Tips: ನಿದ್ರಾಹೀನತೆ ಹೃದಯದ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿದಿದೆಯೇ? ನಿದ್ರಾಹೀನತೆ ಸಮಸ್ಯೆ ನಿವಾರಣೆಗೆ ಇಲ್ಲಿದೆ ಪರಿಹಾರ
ಸಾಂಕೇತಿಕ ಚಿತ್ರ
Follow us
TV9 Web
| Updated By: Rakesh Nayak Manchi

Updated on: Jul 08, 2022 | 6:59 AM

ಒಂದು ಮುಷ್ಟಿ ಗಾತ್ರದಷ್ಟು ಇರುವ ಹೃದಯದ ಆರೋಗ್ಯವು ದೇಹದಾದ್ಯಂತ ರಕ್ತವನ್ನು ಪಂಪ್ ಮಾಡಲು ಅವಶ್ಯಕವಾಗಿದೆ. ಕಳಪೆ ಆಹಾರ, ಸೀಮಿತ ವ್ಯಾಯಾಮ ಮತ್ತು ಧೂಮಪಾನವು ಹೃದಯಕ್ಕೆ ಅತ್ಯಂತ ಹಾನಿಕಾರಕವಾಗಿದೆ ಎಂಬುದು ನೆನಪಿನಲ್ಲಿ ಇಡಬೇಕಾದ ಅಂಶ. ಅದಾಗ್ಯೂ ಅನೇಕರಿಗೆ ತಿಳಿಯದ ಸಂಗತಿಯೆಂದರೆ, ನಿದ್ರೆಯನ್ನು ಕಳೆದುಕೊಳ್ಳುವುದು ಹೃದಯದ ಸಮಸ್ಯೆಗೆ ಕಾರಣವಾಗಬಹುದು. ಮಾತ್ರವಲ್ಲದೆ ಅಧಿಕ ರಕ್ತದೊತ್ತಡ, ಹೆಚ್ಚಿನ ಒತ್ತಡದ ಮಟ್ಟಗಳು ಮತ್ತು ಹೃದಯದ ಇತರೆ ಕಾಯಿಲೆಗಳಿಗೆ ಗುರಿಮಾಡುತ್ತದೆ. ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ಪ್ರಕಾರ, ದೀರ್ಘಕಾಲದ ನಿದ್ರಾಹೀನತೆ (insomnia)ಯು ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್ (Cholesterol), ಹೃದಯಾಘಾತ(Heart Attack), ಬೊಜ್ಜು(Obesity), ಮಧುಮೇಹ (Diabetes) ಮತ್ತು ಪಾರ್ಶ್ವವಾಯು(stroke) ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆ (Health problem)ಗಳಿಗೆ ಕಾಣವಾಗಬಹುದು.

ಇದನ್ನೂ ಓದಿ: ಕಳೆದೊಂದು ದಶಕದಲ್ಲಿ ಮೂತ್ರಪಿಂಡದ ಕಾಯಿಲೆಗಳಿಂದ ಬಳಲುತ್ತಿರುವ ವಯಸ್ಕರ ಸಂಖ್ಯೆ ದ್ವಿಗುಣಗೊಂಡಿದೆ!

ಇತ್ತೀಚೆಗೆ, ಬಿಎಲ್​ಕೆ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಅಧ್ಯಕ್ಷ ಮತ್ತು ಕಾರ್ಡಿಯಾಲಜಿ ವಿಭಾಗದ ಮುಖ್ಯಸ್ಥ ಡಾ.ಸುಭಾಷ್ ಚಂದ್ರ ಅವರು ಹಿಂದೂಸ್ತಾನ್ ಟೈಮ್ಸ್‌ಗೆ ನೀಡಿದ ಮಾಹಿತಿ ಪ್ರಕಾರ, “ಬೆಳಿಗ್ಗೆ ಅತಿಯಾದ ಕ್ಯಾಟೆಕೊಲಮೈನ್‌ಗಳನ್ನು ಸ್ರವಿಸುವ ಜನರು 4-8 ಗಂಟೆಯ ನಡುವೆ ಪಾರ್ಶ್ವವಾಯು ಅಥವಾ ಹೃದಯಾಘಾತದಿಂದ ಬಳಲುತ್ತಾರೆ. ವ್ಯಕ್ತಿಯೊಬ್ಬರು ದಿನನಿತ್ಯ ಕನಿಷ್ಟ ಮಾಡಬೇಕಾದ ನಿದ್ರೆಯನ್ನು ಕಳೆದುಕೊಂಡರೆ ದೀರ್ಘಾವಧಿಯಲ್ಲಿ ಇದು ಹೃದಯ ರಕ್ತನಾಳದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಈ ಬಗ್ಗೆ ಹೆಚ್ಚಿನ ಎಚ್ಚರಿಕೆವಹಿಸಬೇಕಿದೆ.

ಹದಿಹರೆಯದಿಂದ ಪ್ರೌಢಾವಸ್ಥೆಯವರೆಗೆ ನಿದ್ರೆಯ ಅವಧಿಯು ಸಮಯದೊಂದಿಗೆ ಕಡಿಮೆಯಾಗುತ್ತದೆ ಎಂದು ಡಾ.ಸುಭಾಷ್ ಚಂದ್ರ ಅವರು ಹೇಳಿದರು. ವಯಸ್ಕರು 7-9 ಗಂಟೆಗಳ ಕಾಲ ನಿದ್ರಿಸುವುದು ಅತ್ಯಗತ್ಯ, ಆದರೆ 5-6 ವರ್ಷ ವಯಸ್ಸಿನ ಮಗುವಿಗೆ 12-14 ಗಂಟೆಗಳ ನಿದ್ರೆ ಬೇಕಾಗುತ್ತದೆ.

ಇದನ್ನೂ ಓದಿ: Mood Swings: ಭಾವನೆಗಳ ಸುನಾಮಿ ಮೂಡ್​ಸ್ವಿಂಗ್ ಬಗ್ಗೆ ನಿಮಗೆಷ್ಟು ಗೊತ್ತು?

ಹಾಗಾದರೆ ನಿದ್ರಾಹೀನತೆ ತಪ್ಪಿಸಲು ಮಾಡಬೇಕಾದ ಉಪಾಯಗಳೇನು? ಇಲ್ಲಿವೆ ನೋಡಿ:

  • ದಿನವಿಡೀ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ದೇಹವು ಹೆಚ್ಚು ದಣಿದಂತೆ ರಾತ್ರಿ ವೇಳೆ ಬೇಗನೇ ನಿದ್ರೆಗೆ ಜಾರಬಹುದು. ಆದರೆ ಮಲಗುವ ಮುನ್ನ ಅಂದರೆ ಮೂರ್ನಾಲ್ಕು ಗಂಟೆಗಳ ಕಾಲ ಕೆಲಸ ಮಾಡುವುದನ್ನು ತಪ್ಪಿಸಬೇಕು.
  • ವಾರಾಂತ್ಯಗಳು ಸೇರಿದಂತೆ ಸ್ಥಿರವಾದ ಮಲಗುವ ದಿನಚರಿಯನ್ನು ಬೆಳೆಸಿಕೊಳ್ಳಿ. ಪ್ರತಿ ರಾತ್ರಿ ಒಂದೇ ಸಮಯದಲ್ಲಿ ಮಲಗುವ ಮತ್ತು ಅದೇ ಸಮಯದಲ್ಲಿ ಏಳುವ ಪರಿಪಾಠವನ್ನು ಬೆಳೆಸಿಕೊಳ್ಳಿ.
  • ಸಾಕಷ್ಟು ನೈಸರ್ಗಿಕ ಬೆಳಕನ್ನು ಪಡೆಯಲು ಬೆಳಗ್ಗೆ ವಾಕಿಂಗ್ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ.
  • ಮಲಗುವ ಸಮಯದ ಕೆಲವು ಗಂಟೆಗಳ ಒಳಗೆ ಮದ್ಯಪಾನ ಸೇವಿಸುವುದನ್ನು ತಪ್ಪಿಸಿ.

ಇದನ್ನೂ ಓದಿ: Trip:ಪ್ರವಾಸದಲ್ಲಿರುವಾಗಲೂ ಫಿಟ್ ಆಗಿರಲು ಮಾರ್ಗಗಳು ಇಲ್ಲಿವೆ

ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್