Health Tips: ವರ್ಕೌಟ್ ಬಳಿಕ ಆಹಾರ ಸೇವಿಸದಿದ್ದರೆ ಏನಾಗುತ್ತೆ?
ನೀವು ಆರೋಗ್ಯಕರ ಜೀವನ ನಡೆಸಲು ನಿತ್ಯ ಕೆಲವು ಗಂಟೆಗಳ ಕಾಲ ವ್ಯಾಯಾಮ, ಧ್ಯಾನ, ಯೋಗ ಸೇರಿದಂತೆ ಕೆಲವು ವರ್ಕೌಟ್ಗಳನ್ನು ನೀವು ಮಾಡುತ್ತೀರಿ.
ನೀವು ಆರೋಗ್ಯಕರ ಜೀವನ ನಡೆಸಲು ನಿತ್ಯ ಕೆಲವು ಗಂಟೆಗಳ ಕಾಲ ವ್ಯಾಯಾಮ, ಧ್ಯಾನ, ಯೋಗ ಸೇರಿದಂತೆ ಕೆಲವು ವರ್ಕೌಟ್ಗಳನ್ನು ನೀವು ಮಾಡುತ್ತೀರಿ. ಆದರೆ ಒಂದೊಮ್ಮೆ ನೀವು ವರ್ಕೌಟ್ ಬಳಿಕ ಸರಿಯಾಗಿ ಆಹಾರವನ್ನು ತೆಗೆದುಕೊಳ್ಳದಿದ್ದರೆ ನೀವು ವರ್ಕೌಟ್ ಮಾಡಿಯೂ ಏನೂ ಪ್ರಯೋಜನವಿಲ್ಲದಂತಾಗುತ್ತದೆ.
ಎಂದೂ ವರ್ಕೌಟ್ ಮಾಡುವ ಮುನ್ನ ಆಹಾರ ಸೇವನೆ ಮಾಡಬಾರದು, ವರ್ಕೌಟ್ ಬಳಿಕ ಸೇವನೆ ಮಾಡದೆ ಇರಬಾರದು, ಒಂದೊಮ್ಮೆ ನೀವು ವರ್ಕೌಟ್ ನಂತರ ಏನೂ ತಿನ್ನದಿದ್ದರೆ ಏನೇನು ಸಮಸ್ಯೆಗಳು ಎದುರಾಗಬಹುದು ಎಂಬುದರ ಕುರಿತು ಇಲ್ಲಿ ಮಾಹಿತಿ ನೀಡಲಾಗಿದೆ.
ವರ್ಕೌಟ್ ಬಳಿಕ ಅಹಾರ ಸೇವಿಸದಿದ್ದರೆ ಸುಸ್ತಾದ ಅನುಭವವಾಗಲಿದೆ. ಹಾಗೆಯೇ ಮಧುಮೇಹ ಸೇರಿದಂತೆ ಇತರೆ ಕಾಯಿಲೆಯಿಂದ ಬಳಲುತ್ತಿರುವವರೂ ತುಂಬಾ ಸಮಸ್ಯೆಗಳನ್ನು ಎದುರಿಸಬೇಕಾದೀತು.
ವೈದ್ಯರು ಹೇಳುವುದೇನು? ನೀವು ವರ್ಕೌಟ್ ಮಾಡಿದ 30 ನಿಮಿಷಗಳ ಬಳಿಕ ನೀವು ಆಹಾರವನ್ನು ತೆಗೆದುಕೊಳ್ಳಬೇಕು, ವ್ಯಾಯಾಮದಿಂದ ದಣಿದಿರುವ ಮೂಳೆಗಳಿಗೆ ಶಕ್ತಿಯನ್ನು ನೀಡಲು ಪ್ರೋಟೀನ್ ಸೇವನೆ ಮುಖ್ಯವಾಗಿರುತ್ತದೆ. ನೀವು ಆಹಾರವನ್ನು ಸೇವಿಸದೇ ಇದ್ದರೆ ಕ್ಯಾಲೊರಿಗಳು ಬರ್ನ್ ಆಗಲು ಸಾಧ್ಯವಿಲ್ಲ.
-ನೀವು ತೂಕ ಇಳಿಕೆ ಅಥವಾ ಸಮತೋಲನ ಕಾಯ್ದುಕೊಳ್ಳುವ ದೃಷ್ಟಿಯಿಂದ ವ್ಯಾಯಾಮ ಮಾಡುತ್ತಿರುತ್ತೀರಿ, ನಿಮ್ಮ ದೇಹಕ್ಕೆ ಕ್ಯಾಲೊರಿ ಸೇರ್ಪಡೆಯಾಗದಿದ್ದರೆ ತೂಕ ಇಳಿಕೆ ಮಾಡಲು ಸಾಧ್ಯವೇ ಇಲ್ಲ.
-ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯಬೇಕಾಗಿರುತ್ತದೆ. ನಿಮ್ಮ ದೇಹವನ್ನು ಸದಾ ಹೈಡ್ರೇಟ್ ಆಗಿರಿಸಿಕೊಳ್ಳಬೇಕು. -ನಿಮ್ಮ ದೇಹಕ್ಕೆ ಉಪ್ಪಿನಾಂಶದ ಅಗತ್ಯವಿರುತ್ತದೆ, ದೇಹದಲ್ಲಿರುವ ಲವಣಾಂಶಗಳು ಬೆವರಿನ ಮೂಲಕ ಹೊರ ಹೋದಾಗ ದೇಹಕ್ಕೆ ಲವಣಾಂಶದ ಕೊರತೆ ಎದುರಾಗುತ್ತದೆ., ಹೀಗಾಗಿ ಆಹಾರ ಸೇವನೆ ಮಾಡುವುದರಿಂದ ಈ ಕೊರತೆ ದೂರವಾಗುವುದು.