AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Green Tea: ಗ್ರೀನ್ ಟೀ ಕುಡಿಯುವುದರಿಂದ ಕೊರೊನಾ ಸೋಂಕು ದೂರವಾಗುವುದೇ?

ಆರೋಗ್ಯ ಹಾಗೂ ಫಿಟ್​ನೆಸ್ ವಿಚಾರಕ್ಕೆ ಬಂದರೆ ಹಲವು ಮಂದಿಗೆ ಗ್ರೀನ್ ಟೀ ಉತ್ತಮ ಪರಿಹಾರವಾಗಿದೆ. ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳಲು, ಹಲವು ಇನ್​ಫೆಕ್ಷನ್​ಗಳಿಂದ ಅಂತರ ಕಾಯ್ದುಕೊಳ್ಳಲು, ತೂಕ ಇಳಿಸಿಕೊಳ್ಳಲು ಗ್ರೀನ್​ ಟೀಯನ್ನು ಕುಡಿಯುತ್ತಾರೆ

Green Tea: ಗ್ರೀನ್ ಟೀ ಕುಡಿಯುವುದರಿಂದ ಕೊರೊನಾ ಸೋಂಕು ದೂರವಾಗುವುದೇ?
Green Tea
TV9 Web
| Edited By: |

Updated on:Jul 08, 2022 | 12:11 PM

Share

ಆರೋಗ್ಯ ಹಾಗೂ ಫಿಟ್​ನೆಸ್ ವಿಚಾರಕ್ಕೆ ಬಂದರೆ ಹಲವು ಮಂದಿಗೆ  ಗ್ರೀನ್ ಟೀ ಉತ್ತಮ ಪರಿಹಾರವಾಗಿದೆ. ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳಲು, ಹಲವು ಇನ್​ಫೆಕ್ಷನ್​ಗಳಿಂದ ಅಂತರ ಕಾಯ್ದುಕೊಳ್ಳಲು, ತೂಕ ಇಳಿಸಿಕೊಳ್ಳಲು ಗ್ರೀನ್​ ಟೀಯನ್ನು ಕುಡಿಯುತ್ತಾರೆ.

ಆದರೆ ಕೊರೊನಾ ಸೋಂಕಿನ ಲಕ್ಷಣಗಳಿರುವವರು ಗ್ರೀನ್ ಟೀ ಕುಡಿದರೆ ಸೋಂಕು ಕೊಂಚ ಮಟ್ಟಿಗೆ ಕಡಿಮೆಯಾಗಬಹುದೇ ಎನ್ನುವ ಪ್ರಶ್ನೆಯನ್ನು ಹಲವು ಮಂದಿ ಇಟ್ಟಿದ್ದಾರೆ.

ಸಾರ್ಸ್​ ಕೋವ್ 2 ಬಹಳಷ್ಟು ಮಂದಿಗೆ ಹಲವು ದಿನಗಳ ಕಾಲ ಮೈಗ್ರೇನ್ ಸಮಸ್ಯೆ ಕಾಡುತ್ತಿದೆ. ಹಾಗಾದರೆ ಕೊರೊನಾ ಸೋಂಕಿನ ಲಕ್ಷಣಗಳಿರುವವರಿಗೆ ಈ ಗ್ರೀನ್ ಟೀ ಸಹಕಾರಿಯೇ ಎಂಬುದರ ಕುರಿತು ಇಲ್ಲಿ ಮಾಹಿತಿ ನೀಡಲಾಗಿದೆ.

ಗ್ರೀನ್ ಟೀ ಕುಡಿದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ

ಗ್ರೀನ್ ಟೀ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ, ನಿಮ್ಮಲ್ಲಿ ಬಹುಗಂಟೆಗಳ ಕಾಲ ಚೈತನ್ಯಭರಿತವಾಗಿರಿಸುತ್ತದೆ. ಇಮ್ಯೂನ್ ಸಿಸ್ಟಂ ಅನ್ನು ಎರಡು ಭಾಗಗಳನ್ನಾಗಿ ವಿಂಗಡಿಸಲಾಗಿದೆ.

ಮೊದಲನೆಯದ್ದು ಇನ್ನೇಟ್ ಹಾಗೂ ಎರಡನೆಯದ್ದು ಅಡಾಪ್ಟೀವ್. ಇನ್ನೇಟ್ ಇಮ್ಯೂನ್ ಸಿಸ್ಟಂ ವೈರಸ್ ವಿರುದ್ಧ ಹೋರಾಡುತ್ತದೆ. ನಮ್ಮ ರಕ್ತದಲ್ಲಿನ ರಾಸಾಯನಿಕಗಳ ವಿರುದ್ಧ ಹೋರಾಡುವುದು, ಗಂಟಲಿನ ತೊಂದರೆಗಳು, ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ.

ಇನ್ನು ಅಡಾಪ್ಟೀವ್ ಇಮ್ಯೂನ್ ಸಿಸ್ಟಂ ದೇಹದಲ್ಲಿ ರೋಗದ ವಿರುದ್ಧ ಪ್ರತಿಕಾಯಗಳ ಸೃಷ್ಟಿಗೆ ಸಹಾಯ ಮಾಡಲಿದೆ. ಎರಡನೇ ಬಾರಿಗೆ ಕೊರೊನಾ ಸೋಂಕು ತಗುಲಿದರೆ ಸೋಂಕು ಕಡಿಮೆಯಾಗಲು ತುಂಬಾ ಸಮಯ ತೆಗೆದುಕೊಳ್ಳುತ್ತದೆ.

ಗ್ರೀನ್ ಟೀ ಸೇವನೆಯಿಂದ ಕೊರೊನಾ ಸೋಂಕು ಗುಣಮುಖವಾಗುವುದೇ?

ವೈದ್ಯರು ನೀಡಿರುವ ಮಾಹಿತಿ ಪ್ರಕಾರ, ಗ್ರೀನ್ ಟೀನಲ್ಲಿ ಪಾಲಿಫೆನಾಲ್ ಅಂಶವಿದ್ದು, ಇದು ಝಿಕಾ, ಹೆಪಟೈಟಿಸ್ ಸಿ, ಇನ್​ಫ್ಲುಯೆನ್ಜಾ, ಡೆಂಗ್ಯೂ ಸೇರಿದಂತೆ ಇತರೆ ರೋಗಗಳ ವಿರುದ್ಧ ಹೋರಾಡುವ ಶಕ್ತಿ ಇದೆ.

ಆದರೆ ಗ್ರೀನ್ ಟೀ ಕುಡಿಯುವುದರಿಂದ ಕೊರೊನಾ ಸೋಂಕು ದೂರವಾಗುತ್ತದೆ ಎನ್ನುವ ಮಾಹಿತಿ ಸುಳ್ಳು ಎಂದಿದ್ದಾರೆ.

ಗ್ರೀನ್ ಟೀ ಕುಡಿಯುವುದರಿಂದಾಗುವ ಇತರೆ ಪ್ರಯೋಜನಗಳು -ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ -ತೂಕವನ್ನು ಕಡಿಮೆ ಮಾಡಲು ಸಹಕಾರಿ -ದೇಹ ಸುಕ್ಕುಗಟ್ಟುವುದನ್ನು ತಡೆಯುವ ಶಕ್ತಿ ಅದಕ್ಕಿದೆ

Published On - 11:57 am, Fri, 8 July 22