ಗ್ರೀನ್ ಟೀ ಸೇವನೆ ನಿಮ್ಮ ದೇಹಕ್ಕೆ ಪ್ರಯೋಜನಗಳಿಗಿಂತ ಹೆಚ್ಚು ಹಾನಿ ಉಂಟು ಮಾಡುವ ಸಾಧ್ಯತೆಯಿದೆ!
ಆದರೆ ನಾವೆಲ್ಲ ಅರ್ಥಮಾಡಿಕೊಳ್ಳಬೇಕಿರುವ ಸಂಗತಿಯೇನೆಂದರೆ ದಿನವೊಂದಕ್ಕೆ ಮೂರು ಕಪ್ ಗ್ರೀನ್ ಟೀ ಮಾತ್ರ ನಮ್ಮ ದೇಹಕ್ಕೆ ಉತ್ತಮ ಮತ್ತು ಸುರಕ್ಷಿತ. ಅದಕ್ಕಿಂತ ಜಾಸ್ತಿ ಸೇವಿಸಿದರೆ ಅದು ದೇಹದ ಮೇಲೆ ಅಡ್ಡಪರಿಣಾಮಗಳನ್ನು ಬೀರುತ್ತದೆ.
ನವದೆಹಲಿ: ತಜ್ಞರು (experts) ನಮಗೆ ಹೀಗೆ ಮಾಡಿದರೆ ನಿಮ್ಮ ಅರೋಗ್ಯಕ್ಕೆ (health) ಉತ್ತಮ ಅಂತ ಹೇಳಿದರೆ ಸಾಕು, ನಾವು ಅದನ್ನು ಸ್ವಲ್ಪ ಹೆಚ್ಚೇ ಮಾಡುತ್ತೇವೆ. ಅದು ಆಹಾರ ಸೇವನೆಗೆ ಸಂಬಂಧಿಸಿದ ಸಲಹೆಯಾಗಿರಬಹುದು ಇಲ್ಲವೇ ವ್ಯಾಯಾಮ (workout) ಕಸರತ್ತಿಗೆ ಸಂಬಂಧಪಟ್ಟಿರಬಹುದು. ತಿನ್ನುವ ಸಲಹೆ ಸಂಬಂಧಿಸಿದಂತೆ ಹೇಳುವುದಾದರೆ, ನಾವು ಹಿಂದೆ ಮುಂದೆ ಯೋಚನೆ ಮಾಡದೆ ತಿನ್ನಲು ಇಲ್ಲವೇ ಕುಡಿಯಲು ಪ್ರಾರಂಭಿಸುತ್ತೇವೆ. ಅದು ದೇಹದ ಮೇಲೆ ಉತ್ತಮ ಪರಿಣಾಮ ಬೀರುತ್ತಿದೆಯೋ ಅಥವಾ ಅಡ್ಡ ಪರಿಣಾಮ ಬೀರುತ್ತಿದೆಯೋ ಅಂತ ಯೋಚನೆಯನ್ನೇ ನಾವು ಮಾಡುವುದಿಲ್ಲ.
ನಮ್ಮ ಕಿಟೊ ಆಹಾರ ಅಭ್ಯಾಸ ಕ್ರಮ ದೇಹದಲ್ಲಿ ಮಲಬದ್ಧತೆ, ನಿದ್ರೆಗೆ ಸಂಬಂಧಿಸಿದ ಸಮಸ್ಯೆ ಮೊದಲಾದವುಗಳು ಪ್ರಾರಂಭವಾದಾಗಲೇ ಎಲ್ಲೋ ತಪ್ಪುತ್ತಿದೆ ಅನ್ನೋ ವಿಚಾರ ನಮ್ಮ ಗಮನಕ್ಕೆ ಬರುತ್ತದೆ. ಆರೋಗ್ಯಕರ ಪೇಯಗಳ ವಿಷಯ ಚರ್ಚೆಗೆ ಬಂದಾಗ ಮುಂಚೂಣಿಯಲ್ಲಿ ಕಾಣೋದೇ ಗ್ರೀನ್ ಟೀ (ಹಸಿರು ಚಹಾ).
ದೇಹದ ತೂಕ ಕಾಪಾಡಿಕೊಳ್ಳಲು, ಪೌಷ್ಠಿಕಾಂಶಗಳ ಕೊರತೆ ನೀಗಿಸಲು, ರಕ್ತದಲ್ಲಿ ಸಕ್ಕರೆ ಅಂಶ ಜಾಸ್ತಿಯಾದಾಗ ಕಮ್ಮಿಯಾಗಿಇಸಲು ಸೇರಿದಂತೆ ಹಲವಾರು ಸಮಸ್ಯೆಗಳಿಗೆ ಗ್ರೀನ್ ಟೀ ರಾಮಬಾಣ ಅಂತ ಹೇಳುವುದನ್ನು ನಾವೆಲ್ಲ ಕೇಳಿಸಿಕೊಂಡಿದ್ದೇವೆ, ಓದಿದ್ದೇವೆ ಟಿವಿಗಳಲ್ಲಿ ಆ್ಯಡ್ಗಳನ್ನು ನೋಡಿದ್ದೇವೆ. ಇದು ಇತ್ತೀಚಿನ ದಿನಗಳ ಅತ್ಯಂತ ಜನಪ್ರಿಯ ಪೇಯ.
ಆದರೆ ನಾವೆಲ್ಲ ಅರ್ಥಮಾಡಿಕೊಳ್ಳಬೇಕಿರುವ ಸಂಗತಿಯೇನೆಂದರೆ ದಿನವೊಂದಕ್ಕೆ ಮೂರು ಕಪ್ ಗ್ರೀನ್ ಟೀ ಮಾತ್ರ ನಮ್ಮ ದೇಹಕ್ಕೆ ಉತ್ತಮ ಮತ್ತು ಸುರಕ್ಷಿತ. ಅದಕ್ಕಿಂತ ಜಾಸ್ತಿ ಸೇವಿಸಿದರೆ ಅದು ದೇಹದ ಮೇಲೆ ಅಡ್ಡಪರಿಣಾಮಗಳನ್ನು ಬೀರುತ್ತದೆ.
ನಿರಂತರ ತಲೆನೋವು: ಗ್ರೀನ್ ಟೀಯಲ್ಲಿ ಕೆಫೀನ್ ಅಂಶವಿರುತ್ತದೆ, ನಮ್ಮ ದೇಹದದೊಳಗೆ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕೆಫೀನ್ ಸೇರಿದರೆ ಅದು ನಿರಂತರ ತಲೆ ಸಿಡಿತ, ತಲೆನೋವಿಗೆ ಕಾರಣವಾಗುತ್ತದೆ,
ನಿದ್ರೆಯ ಸಮಸ್ಯೆಗಳು: ಇಲ್ಲೂ ಕೂಡ ಅದೇ ಕೆಫೀನ್ ಖಳನಾಯಕ ಮಾರಾಯ್ರೇ. ಪ್ರತಿದಿನ ನಿಮ್ಮ ದೇಹಕ್ಕೆ ಅಗತ್ಯವಿರುವಷ್ಟು ನಿದ್ರೆಯಿಂದ ನಿಮ್ಮನ್ನು ವಂಚಿಸುತ್ತದೆ. ನೀವು ದಿನಕ್ಕೆ ಮೂರಕ್ಕಿಂತ ಹೆಚ್ಚು ಕಪ್ ಗ್ರೀನ್ ಟೀ ಸೇವಿಸುತ್ತಿದ್ದರೆ ಅದು ನಿಮ್ಮಲ್ಲಿ ನಿದ್ರಾಹೀನತೆಯನ್ನು ಉಂಟು ಮಾಡಬಹುದು.
ಮಲಬದ್ಧತೆ: ಗ್ರೀನ್ ಟೀನಲ್ಲಿ ಟ್ಯಾನಿನ್ ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಇವುಗಳ ಸೇವನೆ ಹೆಚ್ಚಾದರೆ ಅದರಲ್ಲೂ ವಿಶೇಷವಾಗಿ ಬೆಳಗಿನ ಹೊತ್ತು ಒಂದು ಕಪ್ ಗ್ರೀನ್ ಟೀ ಸೇವಿಸಿದರೆ ಅದು ಹೊಟ್ಟೆಯಲ್ಲಿ ಆಮ್ಲೀಯ ಪ್ರಮಾಣ ಹೆಚ್ಚಿಸುತ್ತದೆ, ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಸೃಷ್ಟಿಸುತ್ತದೆ, ಅಲ್ಲದೆ ಮಲಬದ್ಧತೆ ಮತ್ತು ಉಬ್ಬರು ಹೊಟ್ಟೆಗೆ ಕಾರಣವಾಗುತ್ತದೆ.
ದೇಹದಲ್ಲಿ ಕಬ್ಬಿಣಾಂಶದ ಕೊತೆಯಾಗುತ್ತದೆ: ಆಘಾತಕಾರಿ ಸಂಗತಿಯೆಂದರೆ, ಗ್ರೀನ್ ಟೀ ಸೇವನೆಯು ದೇಹದಲ್ಲಿ ಕಬ್ಬಿಣಾಂಶ ಕೊರತೆಗೆ ಕಾರಣವಾಗುತ್ತದೆ. ತಜ್ಞರು ಹೇಳುವ ಪ್ರಕಾರ ಈ ಪೇಯದಲ್ಲಿ ಌಂಟಿ ಆಕ್ಸಿಡಂಟ್ ಗಳು ಜಾಸ್ತಿ ಇರುವುದರಿಂದ ಅವು ದೇಹ ಕಬ್ಬಿಣಾಂಶವನ್ನು ಹೀರಿಕೊಳ್ಳಲು ಅಡಚಣೆಯನ್ನುಂಟು ಮಾಡುತ್ತವೆ. ಹಾಗಾಗಿ, ನಿಮ್ಲಲ್ಲಿ ಬಲಹೀನತೆ ಉಂಟಾಗುತ್ತದೆ.
ಯಕೃತ್ತಿನ ಕಾಯಿಲೆ: ಇದು ಸಂಭವಿಸುವುದು ಅಪರೂಪವಾದರೂ, ಹೆಚ್ಚು ಗ್ರೀನ್ ಟೀ ಸೇವಿಸುವುದು ಯಕೃತ್ತಿನ ಸಮಸ್ಯೆಗಳ ಪ್ರಚೋದನೆಗೆ ಕಾರಣವಾಗಬಹುದಾಗಿದೆ. ಇದು ಯಕೃತ್ತಿನ ಗೋಡೆಗಳನ್ನು ಹಾನಿಗೊಳಿಸುತ್ತದೆ ಮತ್ತು ಅಂಗದೊಳಗಿನ ಕೊರೆತಕ್ಕೆ ಕಾರಣವಾಗುತ್ತದೆ.
ಇದನ್ನೂ ಓದಿ: ರಾಜ್ಯದ ಜನತೆಗೆ ಮತ್ತೆ ಎದುರಾಯ್ತು ಶಾಕ್: ಕೊರೊನಾ ಚಿಕಿತ್ಸಾ ದರ ಏರಿಕೆ ಮಾಡಲು ಮುಂದಾದ ಆರೋಗ್ಯ ಇಲಾಖೆ