ರಾಜ್ಯದ ಜನತೆಗೆ ಮತ್ತೆ ಎದುರಾಯ್ತು ಶಾಕ್: ಕೊರೊನಾ ಚಿಕಿತ್ಸಾ ದರ ಏರಿಕೆ ಮಾಡಲು ಮುಂದಾದ ಆರೋಗ್ಯ ಇಲಾಖೆ

ಕೊರೊನಾ ಚಿಕಿತ್ಸಾ ದರ ಏರಿಕೆ ವಿಚಾರವಾಗಿ ಖಾಸಗಿ ಆಸ್ಪತ್ರೆಗಳು ಹಲವು ಬೇಡಿಕೆಗಳನ್ನು ಆರೋಗ್ಯ ಇಲಾಖೆ ಮುಂದಿಟ್ಟಿವೆ. ಕೊವಿಡ್ ಚಿಕಿತ್ಸಾ ವೆಚ್ಚವನ್ನ ಹೆಚ್ಚಳದ ಜೊತೆ ಇತರೆ ಹಲವು 70ಕ್ಕೂ ಹೆಚ್ಚು ಚಿಕಿತ್ಸೆಗಳ ದರಗಳ ಏರಿಕೆಗೂ ಪಟ್ಟು ಹಿಡಿಯಲಾಗಿದೆ.

ರಾಜ್ಯದ ಜನತೆಗೆ ಮತ್ತೆ ಎದುರಾಯ್ತು ಶಾಕ್: ಕೊರೊನಾ ಚಿಕಿತ್ಸಾ ದರ ಏರಿಕೆ ಮಾಡಲು ಮುಂದಾದ ಆರೋಗ್ಯ ಇಲಾಖೆ
ಪ್ರಾತಿನಿಧಿಕ ಚಿತ್ರ
TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Jul 02, 2022 | 9:32 AM

ಬೆಂಗಳೂರು: ರಾಜ್ಯದ ಜನರೇ ಎಚ್ಚರ ಎಚ್ಚರ ನಿಮ್ಮ ಆರೋಗ್ಯದ (Health) ಬಗ್ಗೆ ಕಾಳಜಿ ಇರಲಿ. ಇಲ್ಲವೆಂದರೆ ಜೇಬಿಗೆ ಕತ್ತರಿ ಬೀಳೊದು ಫಿಕ್ಸ್. ರಾಜ್ಯದಲ್ಲಿ ಪೆಟ್ರೋಲ್, ಗ್ಯಾಸ್, ಕರೆಂಟ್ ದರ ಏರಿಕೆಯ ಬಳಿಕ ಈಗ ಮತ್ತೊಂದು ಶಾಕ್ ನೀಡಲು ಸರ್ಕಾರ ಮುಂದಾಗಿದ್ದು, ಕೊರೊನಾ (Covid) ಚಿಕಿತ್ಸಾ ದರ ಏರಿಕೆ ಮಾಡಲು ಆರೋಗ್ಯ ಇಲಾಖೆ ಮುಂದಾಗಿದೆ. ಹಾಗಾಗಿ ಇನ್ಮುಂದೆ ನಿಮ್ಮ ಆರೋಗ್ಯ ಚಿಕಿತ್ಸಾ ವೆಚ್ಚವು ಹೆಚ್ಚಾಗಲಿದೆ. ಕೊರೊನಾ ಒಕ್ಕರಿಸಿದರೆ ಮತ್ತೆ ಜೇಬಿಗೆ ಕತ್ತರಿ ಬೀಳೊದು ಫಿಕ್ಸ್. ಖಾಸಗಿ ಆಸ್ಪತ್ರೆಗಳಿಗೆ ಲಾಭ ಮಾಡಲು ಜನರ ಕಣ್ಣೀರು ಹಾಕಿಸಲು ಆರೋಗ್ಯ ಇಲಾಖೆ ಮುಂದಾಯ್ತಾ ಎನ್ನುವ ಪ್ರಶ್ನೆಗಳು ಉಂಟಾಗಿವೆ. ಕೊರೊನಾ ಚಿಕಿತ್ಸಾ ದರ ಏರಿಕೆ ವಿಚಾರವಾಗಿ ಖಾಸಗಿ ಆಸ್ಪತ್ರೆಗಳು ಹಲವು ಬೇಡಿಕೆಗಳನ್ನು ಆರೋಗ್ಯ ಇಲಾಖೆ ಮುಂದಿಟ್ಟಿವೆ. ಕೊವಿಡ್ ಚಿಕಿತ್ಸಾ ವೆಚ್ಚವನ್ನ ಹೆಚ್ಚಳದ ಜೊತೆ ಇತರೆ ಹಲವು 70ಕ್ಕೂ ಹೆಚ್ಚು ಚಿಕಿತ್ಸೆಗಳ ದರಗಳ ಏರಿಕೆಗೂ ಪಟ್ಟು ಹಿಡಿಯಲಾಗಿದೆ. ಕೊವಿಡ್ ಚಿಕಿತ್ಸೆ ಕೊಡಲು ಮೆಡಿಸಿನ್ ದರ ಸೇರಿದಂತೆ ಬೇರೆ ಬೇರೆಯ ಖರ್ಚು ಹೆಚ್ಚಾಗಿದೆ. ಮೆಡಿಸಿನ್ ದರ ಏರಿಕೆಯ ಎಫೆಕ್ಟ್ ಆಸ್ಪತ್ರೆಗೆ ತಟ್ಟುತ್ತಿದೆ.

ಇದನ್ನೂ ಓದಿ: Nail Care: ನಿಮಗೆ ಉಗುರು ಕಚ್ಚುವ ಅಬ್ಯಾಸವಿದೆಯೇ? ಕೂಡಲೇ ಬಿಟ್ಟುಬಿಡಿ

ಹೀಗಾಗಿ ಕೊವಿಡ್ ಚಿಕಿತ್ಸೆಯ ವೆಚ್ಚ ಹೆಚ್ಚಳ ಮಾಡುವಂತೆ ಖಾಸಗಿ ಆಸ್ಪತ್ರೆಗಳ ಆರೋಗ್ಯ ಇಲಾಖೆಗೆ ಡಿಮ್ಯಾಂಡ್ ಮಾಡಿವೆ. ಕೊವಿಡ್ ಚಿಕಿತ್ಸಾ ದರ ಪರಿಷ್ಕರಣೆಯ ಬೇಡಿಕೆಯ ಜೊತೆ ಇತರೆ ಕೆಲವು ಚಿಕಿತ್ಸಾ ದರ ಏರಿಕೆಗೂ ಬೇಡಿಕೆಯಿಟ್ಟಿವೆ. ದರ ಪರಿಷ್ಕರಣೆ ಆದರೆ ಚಿಕಿತ್ಸೆ ಕೊಡೋದಕ್ಕೆ ನೆರವಾಗುತ್ತದೆ. ಇಲ್ಲವಾದರೆ ಖಾಸಗಿ ಆಸ್ಪತ್ರೆಗಳಿಗೆ ಸಮಸ್ಯೆಯಾಗುತ್ತೆ ಅಂತಾ ಬೇಡಿಕೆ ಇಟ್ಟಿವೆ. ಹೀಗಾಗಿ ಖಾಸಗಿ ಆಸ್ಪತ್ರೆಗಳ ಚಿಕಿತ್ಸಾ ವೆಚ್ಚ ಏರಿಕೆಯ ವಿಚಾರವಾಗಿ ಇಲಾಖೆ ಒಂದು ಸಮಿತಿ ರಚನೆ ಮಾಡಿದೆ. ತಜ್ಞರ ವರದಿ ಪಡೆದು ಕೊವಿಡ್ ಚಿಕಿತ್ಸಾ ವೆಚ್ಚ ಮರು ಪರಿಷ್ಕರಣೆಯ ಬಗ್ಗೆ ನಿರ್ಣಯ ಕೈಗೊಳ್ಳಲು ಮುಂದಾಗಿದೆ. ಖಾಸಗಿ ಆಸ್ಪತ್ರೆಗಳ ಸಮಸ್ಯೆ ಪರಿಹರಿಸಲು ಜನರ ಹೊಟ್ಟೆ ಮೇಲೆ ಹೊಡೆಯಲು ಸರ್ಕಾರ ಮುಂದಾಯ್ತಾ ಅನ್ನೊ ಆತಂಕವು ಹೆಚ್ಚಾಗಿದೆ.

ಮಾಸ್ಕ್ ​ಧರಿಸದಿದ್ದರೆ ದಂಡ ವಿಧಿಸಲು ಸರ್ಕಾರಕ್ಕೆ ಕೊರೊನಾ ತಾಂತ್ರಿಕ ಸಲಹಾ ಸಮಿತಿ ಶಿಫಾರಸ್ಸು

ರಾಜ್ಯದಲ್ಲಿ ದಿನೇದಿನೆ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆ ಮಾಸ್ಕ್ ​ಧರಿಸದಿದ್ದರೆ ದಂಡ ವಿಧಿಸಲು ಸರ್ಕಾರಕ್ಕೆ ಕೊರೊನಾ ತಾಂತ್ರಿಕ ಸಲಹಾ ಸಮಿತಿ ಶಿಫಾರಸ್ಸು ಮಾಡಿದೆ. ಮಾಸ್ಕ್​ ದಂಡದ ಬಗ್ಗೆ ಈ ವಾರದಿಂದಲೇ ಜಾರಿಗೆ ಬರುವ ನಿರೀಕ್ಷೆ ಇದೆ. ಆರೋಗ್ಯ ಇಲಾಖೆ ವರದಿ ಸಂಜೆ ವೇಳೆಗೆ ಸರ್ಕಾರಕ್ಕೆ ತಲುಪಲಿದೆ. ವರದಿ ಸಲ್ಲಿಸಿದ ನಂತರ ಮಾಸ್ಕ್​ ಧರಿಸದಿದ್ದರೆ ದಂಡದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ದಂಡದ ಪ್ರಸ್ತಾವನೆ ಕುರಿತು ಸರ್ಕಾರದ ಮಟ್ಟದಲ್ಲಿ ಸಭೆ ನಡೆದಿದ್ದು, ಸಭೆ ಬಳಿಕ ಮಾಸ್ಕ್ ದಂಡದ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಆರೋಗ್ಯ ‌ಇಲಾಖೆಯ ಆಯುಕ್ತ ಡಿ.ರಂದೀಪ್ ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಪ್ರತಿಭಟನೆ ಮುಂದುವರೆಸಿದ ಪೌರಕಾರ್ಮಿಕರು! ಸಿಎಂ ಬೊಮ್ಮಾಯಿ ಹೇಳಿದ್ದೇನು?

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada