ಬೆಂಗಳೂರಿನಲ್ಲಿ ಪ್ರತಿಭಟನೆ ಮುಂದುವರೆಸಿದ ಪೌರಕಾರ್ಮಿಕರು! ಸಿಎಂ ಬೊಮ್ಮಾಯಿ ಹೇಳಿದ್ದೇನು?
ನಗರದ ಫ್ರೀಡಂಪಾರ್ಕ್ನಲ್ಲಿ ಅಹೋರಾತ್ರಿಯೂ ಧರಣಿ ನಡೆಸಿದ್ದು, ಲಿಖಿತ ರೂಪದ ಆದೇಶ ಪ್ರತಿ ಬಂದ ಬಳಿಕ ಧರಣಿ ಕೈಬಿಡುತ್ತೇವೆಂದು ಪ್ರತಿಭಟನಕಾರರು ಹೇಳುತ್ತಿದ್ದಾರೆ.
ಬೆಂಗಳೂರು: ವಿವಿಧ ಬೇಡಿಕೆಗಳನ್ನ ಈಡೇರಿಸುವಂತೆ ಆಗ್ರಹಿಸಿ ಪೌರಕಾರ್ಮಿಕರು (Pourakarmikas) ರಾಜ್ಯದಲ್ಲಿ ಹಲವು ಕಡೆ ನಿನ್ನೆಯಿಂದ (ಜುಲೈ 1) ಪ್ರತಿಭಟನೆ ನಡೆಸುತ್ತಿದ್ದಾರೆ. ನಗರದ ಫ್ರೀಡಂಪಾರ್ಕ್ನಲ್ಲಿ ಅಹೋರಾತ್ರಿಯೂ ಧರಣಿ ನಡೆಸಿದ್ದು, ಲಿಖಿತ ರೂಪದ ಆದೇಶ ಪ್ರತಿ ಬಂದ ಬಳಿಕ ಧರಣಿ ಕೈಬಿಡುತ್ತೇವೆಂದು ಪ್ರತಿಭಟನಕಾರರು ಹೇಳುತ್ತಿದ್ದಾರೆ. ಈ ಬಗ್ಗೆ ಟಿವಿ9 ಜೊತೆ ಮಾತನಾಡಿದ ಪ್ರತಿಭಟನಾನಿರತ ಪೌರಕಾರ್ಮಿಕ ವೆಂಕಟೇಶ್, ನಿನ್ನೆ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ. ಆದ್ರೆ, ಪತ್ರ ನೀಡಿಲ್ಲ. ಅಧಿಕೃತ ಆದೇಶ ಪತ್ರ ನೀಡಿ ನಮ್ಮನ್ನು ಖಾಯಂಗೊಳಿಸಬೇಕು. ಖಾಯಂಗೊಳಿಸುವವರೆಗೂ ನಮ್ಮ ಧರಣಿ ಮುಂದುವರಿಯುತ್ತೆ ಎಂದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಬಸವರಾಜ ಬೊಮ್ಮಾಯಿ, ಪೌರಕಾರ್ಮಿಕರ ಜೊತೆಗೆ ಎಲ್ಲಾ ಮಾತನಾಡಿದ್ದೇನೆ. ಸಹಾನುಭೂತಿಯಿಂದ ಮಾನವೀಯತೆಯಿಂದ ಕ್ರಮಕೈಗೊಂಡು ಹೊಸ ಕಾನೂನು ಮಾಡಬೇಕು ಎಂದು ಅಂದುಕೊಂಡಿದ್ದೇವೆ. 3 ತಿಂಗಳಲ್ಲಿ ಯಾವ ರೀತಿ ನೇಮಕಾತಿ ಮಾಡಬೇಕೆಂದು ಚರ್ಚೆ ಮಾಡುತ್ತೇವೆ. ಪೌರ ಕಾರ್ಮಿಕರು, ಅಧಿಕಾರಿಗಳ ಜಂಟಿ ಸಮಿತಿ ಮಾಡಿದ್ದೇವೆ. ಪೌರಕಾರ್ಮಿಕರ ಸಂರಕ್ಷಣೆ, ಹೆಲ್ತ್, ಶಿಕ್ಷಣದ ಬಗ್ಗೆ ಕಾನೂನು ಕಾನೂನನ್ನು ರಚನೆ ಮಾಡಬೇಕು. ಮುಂದಿನ ಅಧಿವೇಶನದಲ್ಲಿ ಈ ವಿಚಾರ ಪ್ರಸ್ತಾಪ ಮಾಡುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ: ENG vs IND 5th Tets: ಭಾರತ-ಇಂಗ್ಲೆಂಡ್ 5ನೇ ಟೆಸ್ಟ್ನ ಮೊದಲ ದಿನದಾಟದ ರೋಚಕ ಫೋಟೋಗಳು ನೋಡಿ
ಇದೇ ವೇಳೆ ಬಿಜೆಪಿ ಕಾರ್ಯಕಾರಿಣಿಯಲ್ಲಿ ಭಾಗವಹಿಸಲು ತೆರಳುತ್ತಿದ್ದೇನೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು. ನಾಳೆ ಸಂಜೆ ಹೈದರಾಬಾದ್ನಿಂದ ಬೆಂಗಳೂರಿಗೆ ಹಿಂದಿರುಗುತ್ತೇನೆ. ರಾಷ್ಟ್ರದ ಎಲ್ಲಾ ನಾಯಕರು ಕಾರ್ಯಕಾರಿಣಿಗೆ ಆಗಮಿಸುತ್ತಾರೆ. ಟೈಮ್ ಸಿಕ್ಕರೆ ಅಮಿತ್ ಶಾ ಅವರೊಂದಿಗೆ ಮಾತನಾಡುತ್ತೇನೆ. ಅಮಿತ್ ಶಾ, ಜೆಪಿ ನಡ್ಡಾರನ್ನ ಭೇಟಿಯಾಗಲು ಯತ್ನಿಸುತ್ತೇನೆ ಎಂದರು.
Published On - 9:18 am, Sat, 2 July 22