ತಾರಕ್ಕೇರುತ್ತಿರುವ ಚಾಮರಾಜಪೇಟೆ ಮೈದಾನ ವಿವಾದ! ಬಿಬಿಎಂಪಿ ಹೇಳಿಕೆ ವಿರುದ್ಧ ತಿರುಗಿ ಬಿದ್ದ ಸ್ಥಳೀಯ ನಿವಾಸಿಗಳು, ನಾಳೆ ಮಹತ್ವದ ಸಭೆ
ದಿನಕ್ಕೊಂದು ಹೇಳಿಕೆ ನೀಡಿ ಗೊಂದಲ ಹುಟ್ಟು ಹಾಕುತ್ತಿದ್ದಾರೆಂದು ಚಾಮರಾಜಪೇಟೆ ನಾಗರಿಕರ ಒಕ್ಕೂಟ ವೇದಿಕೆ, ನಾಳೆ (ಜೂನ್ 03) ಬೆಳಗ್ಗೆ 10.30ಕ್ಕೆ ಜಂಗಮ ಮಠದಲ್ಲಿ ಸಭೆ ನಡೆಸುವುದಕ್ಕೆ ನಿರ್ಧರಿಸಿದೆ.
ಬೆಂಗಳೂರು: ಚಾಮರಾಜಪೇಟೆ (Chamrajpet) ಈದ್ಗಾ ಮೈದಾನ (Idgah Maidan) ವಿವಾದ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸದ್ಯ ಬಿಬಿಎಂಪಿ ಹೇಳಿಕೆ ವಿರುದ್ಧ ಸ್ಥಳೀಯ ನಿವಾಸಿಗಳು ತಿರುಗಿ ಬಿದ್ದಿದ್ದು, ಸಭೆ ನಡೆಸಲು ಮುಂದಾಗಿದ್ದಾರೆ. ಬಿಬಿಎಂಪಿ ಅಧಿಕಾರಿಗಳು ವಿನಾಕಾರಣ ಗೊಂದಲ ಸೃಷ್ಟಿಸುತ್ತಿದ್ದಾರೆ. ದಿನಕ್ಕೊಂದು ಹೇಳಿಕೆ ನೀಡಿ ಗೊಂದಲ ಹುಟ್ಟು ಹಾಕುತ್ತಿದ್ದಾರೆಂದು ಚಾಮರಾಜಪೇಟೆ ನಾಗರಿಕರ ಒಕ್ಕೂಟ ವೇದಿಕೆ, ನಾಳೆ (ಜುಲೈ 03) ಬೆಳಗ್ಗೆ 10.30ಕ್ಕೆ ಜಂಗಮ ಮಠದಲ್ಲಿ ಸಭೆ ನಡೆಸುವುದಕ್ಕೆ ನಿರ್ಧರಿಸಿದೆ.
ಸಭೆಯಲ್ಲಿ ಹಿಂದೂಪರ ಸಂಘಟನೆಗಳು, ಪ್ರಗತಿಪರ ಚಿಂತಕರು, ಹೋರಾಟಗಾರರು, ಸ್ಥಳೀಯ ಮುಖಂಡರು ಭಾಗಿಯಾಗಲಿದ್ದಾರೆ. ಚಾಮರಾಜಪೇಟೆ ಕ್ಷೇತ್ರದ ಸಂಘ-ಸಂಸ್ಥೆಗಳು, ಪದಾಧಿಕಾರಿಗಳು, ಸಾರ್ವಜನಿಕರು ತಪ್ಪದೇ ಸಭೆಯಲ್ಲಿ ಭಾಗಿಯಾಗುವಂತೆ ನಾಗರಿಕರ ಒಕ್ಕೂಟ ವೇದಿಕೆ ಮನವಿ ಮಾಡಿದ್ದು, ಇದು ಬಿಬಿಎಂಪಿ ಮೈದಾನ ರಾಜ್ಯ ಸರ್ಕಾರದ ಸ್ವತ್ತು. ಎಲ್ಲರೂ ಒಗ್ಗೂಡಿ ಆಟದ ಮೈದಾನ ಉಳಿಸಿಕೊಳ್ಳುವಂತೆ ತಿಳಿಸಿದೆ.
ಇದನ್ನೂ ಓದಿ: Karnataka Rain: ಕರ್ನಾಟಕ ರಾಜ್ಯದಲ್ಲಿ ಮುಂದುವರೆದ ವರುಣನ ಆರ್ಭಟ: ಇನ್ನೆರಡು ದಿನ ಬೆಂಗಳೂರಿನಲ್ಲಿ ಮಳೆ
ಇನ್ನು ನಾಗರಿಕರ ಒಕ್ಕೂಟ ವೇದಿಕೆ ಚಾಮರಾಜಪೇಟೆಯ ಪ್ರತಿ ಮನೆ ಮನೆಗೆ ತೆರಳಿ ಕರಪತ್ರ ಹಂಚಿಕೆ ಮಾಡುತ್ತಿದೆ. ಸುಮಾರು 10 ಸಾವಿರ ಜನರಿಗೆ ಕರಪತ್ರ ಹಂಚಿಕೆ ಮಾಡಲಾಗಿದೆ.
ನಾವೇ ನಿರ್ಧರಿಸುತ್ತೇವೆ-ರುಕ್ಮಾಂಗದ: ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಬಿಬಿಎಂಪಿ ಪಶ್ಚಿಮ ವಲಯದ ಜಂಟಿ ಆಯುಕ್ತ ಶ್ರೀನಿವಾಸ್ಗೂ ಸಭೆಗೆ ಬರುವಂತೆ ಆಹ್ವಾನಿಸಲಾಗಿದೆ ಎಂದು ಚಾಮರಾಜಪೇಟೆ ನಾಗರೀಕರ ಒಕ್ಕೂಟ ವೇದಿಕೆ ಮುಖಂಡ ರುಕ್ಮಾಂಗದ ತಿಳಿಸಿದ್ದಾರೆ. ಚಾಮರಾಜಪೇಟೆ ಮೈದಾನ ಬಿಬಿಎಂಪಿ ಆಸ್ತಿ ಅಂತ ಶ್ರೀನಿವಾಸ್ ಹೇಳಿದರು. ಜೂನ್ 8 ರಂದು ಶ್ರೀನಿವಾಸ್ ಅವರು ಈ ಹೇಳಿಕೆ ಕೊಡುತ್ತಾರೆ. ಇವರು ಹೇಳಿಕೆ ಕೊಟ್ಟ ಮೇಲೆ ಬಿಬಿಎಂಪಿ ಆಯುಕ್ತರು ಬಿಬಿಎಂಪಿ ಸ್ವತ್ತಲ್ಲ ಅಂತಾರೆ. ಇವರ ಹೇಳಿಕೆಯಿಂದಲೇ ಇಷ್ಟೆಲ್ಲ ಸಮಸ್ಯೆ. ಇತ್ತ ವಕ್ಫ್ ಬೋರ್ಡ್ನವರು ಮೈದಾನ ನಮ್ಮದು ಅಂತಾರೆ. ಸರ್ಕಾರ ಮಧ್ಯ ಪ್ರವೇಶಿಸಿ ಇದು ನಮ್ಮ ಆಸ್ತಿ ಅಂತ ಘೋಷಿಸಬೇಕು. ಜಮೀರ್ ಅವರು ಚಾಮರಾಜಪೇಟೆಗೆ ಶಾಸಕರೋ ಅಥವಾ ಮುಸ್ಲಿಂ ಧರ್ಮಕ್ಕೆ ಶಾಸಕರೋ ಗೊತ್ತಿಲ್ಲ. ಮೈದಾನದ ವಿವಾದ ಭುಗಿಲೆದ್ದರೂ ತುಟಿಕ್ ಪಿಟಿಕ್ ಅಂತಿಲ್ಲ. ನಾಳೆ ಸಭೆ ನಡೆಸಿ ಏನು ತೀರ್ಮಾನ ಕೈಗೊಳ್ಳಬೇಕು ಅಂತ ನಿರ್ಧರಿಸುತ್ತೇವೆ. ಅಧಿಕಾರಿಗಳು ವಿಫಲರಾಗಿದ್ದಾರೆ, ಹೀಗಾಗಿ ನಾವೇ ಒಂದು ತೀರ್ಮಾನಕ್ಕೆ ಬರುತ್ತೇವೆಂದು ರುಕ್ಮಾಂಗದ ಹೇಳಿದರು.
ಇದನ್ನೂ ಓದಿ: Nail Care: ನಿಮಗೆ ಉಗುರು ಕಚ್ಚುವ ಅಬ್ಯಾಸವಿದೆಯೇ? ಕೂಡಲೇ ಬಿಟ್ಟುಬಿಡಿ
Published On - 8:39 am, Sat, 2 July 22