Karnataka Rain: ಕರ್ನಾಟಕ ರಾಜ್ಯದಲ್ಲಿ ಮುಂದುವರೆದ ವರುಣನ ಆರ್ಭಟ: ಇನ್ನೆರಡು ದಿನ ಬೆಂಗಳೂರಿನಲ್ಲಿ ಮಳೆ
ಕೊಡಗು ಜಿಲ್ಲೆಯಲ್ಲಿ ಮಳೆಯಿಂದ ನದಿಗಳು ತುಂಬಿ ಹರಿಯುತ್ತಿವೆ. ಕಾವೇರಿ ನದಿ, ಲಕ್ಷ್ಮಣತೀರ್ಥ, ಪಯಸ್ವಿನಿ ಹಾಗೂ ಅಟ್ಟಿಹೊಳೆ, ಕೀರೆಹೊಳೆ, ತ್ರಿವೇಣಿ ಸಂಗಮ, ಹಾರಂಗಿ ಡ್ಯಾಂ ಭರ್ತಿ ಹಿನ್ನೆಲೆ ನದಿ ಪಾತ್ರದ ಜನರು ಪ್ರವಾಹ ಎದುರಾಗುವ ಭೀತಿಯಲ್ಲಿದ್ದಾರೆ.

ಬೆಂಗಳೂರು: ಚುರುಕುಗೊಂಡ ನೈಋತ್ಯ ಮುಂಗಾರು ಮಳೆ (Rain) ಹಿನ್ನೆಲೆ ರಾಜ್ಯದಲ್ಲಿ ವರುಣನ ಆರ್ಭಟ ಮುಂದುವರೆಯಲಿದ್ದು, ಇನ್ನೆರಡು ದಿನ ಬೆಂಗಳೂರಿನಲ್ಲಿ ಮಳೆ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇನ್ನೂ ಮೂರು ದಿನ ಕರಾವಳಿ ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಇರಲಿದೆ. ಪಶ್ಚಿಮ ಘಟ್ಟ ಜಿಲ್ಲೆಗಳಲ್ಲೂ ಮೂರು ದಿನ ಯೆಲ್ಲೋ ಅಲರ್ಟ್ ಇರಲಿದ್ದು, ಜುಲೈ 4ರಂದು ಬೆಳಗಾವಿ, ಹಾವೇರಿ, ಧಾರಾವಾಡ, ಜುಲೈ 2ರಂದು ಚಾಮರಾಜನಗರದಲ್ಲಿ ಯೆಲ್ಲೋ ಅಲರ್ಟ್ ಇರಲಿದೆ. ಉತ್ತರ ಒಳನಾಡಿನಲ್ಲಿ ಎರಡು ದಿನ ಉತ್ತಮ ಮಳೆ ಸಾಧ್ಯತೆಯಿದ್ದು, ದಕ್ಷಿಣ ಒಳನಾಡಿನ ಹಲವೆಡೆ ನಾಲ್ಕು ದಿನ ಮಳೆಯಾಗಲಿದೆ. ಕರಾವಳಿ ಸಮುದ್ರದಲ್ಲಿ ಪ್ರತಿ ಗಂಟೆಗೆ 40-50 ಕಿ.ಮೀ. ವೇಗದಲ್ಲಿ ಚಲನೆ ಇರಲಿದ್ದು, ಮೀನುಗಾರರು ಸಮುದ್ರಕ್ಕಿಳಿಯದಂತೆ ಸೂಚನೆ ನೀಡಲಾಗಿದೆ. ಗುಜರಾತ್ನಿಂದ ಕರ್ನಾಟಕದ ಉತ್ತರ ಕರಾವಳಿ ಕಡೆ ಸಮುದ್ರ ಮಟ್ಟದಿಂದ ಮಳೆ ಮೋಡ ಹಾದು ಹೋಗುತ್ತಿದೆ.
ಇದನ್ನೂ ಓದಿ; ಶನಿ ಗ್ರಹ ವಕ್ರೀ ಸಂಚಾರ 2022: ಈ 6 ರಾಶಿಯವರಿಗೆ ಮತ್ತೆ ಶನಿ ಗ್ರಹದ ಪ್ರಭಾವ ಆರಂಭವಾಗಲಿದೆ
ಪ್ರವಾಹ ಎದುರಾಗುವ ಭೀತಿ
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಳೆಯಿಂದ ನದಿಗಳು ತುಂಬಿ ಹರಿಯುತ್ತಿವೆ. ಕಾವೇರಿ ನದಿ, ಲಕ್ಷ್ಮಣತೀರ್ಥ, ಪಯಸ್ವಿನಿ ಹಾಗೂ ಅಟ್ಟಿಹೊಳೆ, ಕೀರೆಹೊಳೆ, ತ್ರಿವೇಣಿ ಸಂಗಮ, ಹಾರಂಗಿ ಡ್ಯಾಂ ಭರ್ತಿ ಹಿನ್ನೆಲೆ ನದಿ ಪಾತ್ರದ ಜನರು ಪ್ರವಾಹ ಎದುರಾಗುವ ಭೀತಿಯಲ್ಲಿದ್ದಾರೆ.
ಇಂದು ಯಾವ ರಾಜ್ಯಗಳಲ್ಲಿ ಮಳೆ?:
ಇಂದು ರಾಜಸ್ಥಾನ, ಕೊಂಕಣ ಮತ್ತು ಮಲಬಾರ್ ಕರಾವಳಿಯಲ್ಲಿ ಗುಡುಗು ಸಹಿತ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ. ಬಂಗಾಳಕೊಲ್ಲಿಯಿಂದ ತೇವದ ಹರಿವಿನಿಂದಾಗಿ ಈಶಾನ್ಯ ಭಾರತದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ, ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ, ಬಿಹಾರ, ಜಾರ್ಖಂಡ್, ಛತ್ತೀಸ್‌ಗಢ, ಒಡಿಶಾ, ಪಶ್ಚಿಮ ಬಂಗಾಳ, ಗುಜರಾತ್, ಗೋವಾ, ತೆಲಂಗಾಣ, ಕರ್ನಾಟಕ, ಕೇರಳ, ಭಾಗದಲ್ಲಿ ಅಲ್ಲಲ್ಲಿ ತುಂತುರು ಮಳೆ ಮತ್ತು ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ತಮಿಳುನಾಡು, ಆಂಧ್ರಪ್ರದೇಶ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಮತ್ತು ಲಕ್ಷದ್ವೀಪಗಳಲ್ಲಿಯೂ ಮಳೆ ಮುಂದುವರೆಯಲಿದೆ. ಲಡಾಖ್ ಮತ್ತು ಮಹಾರಾಷ್ಟ್ರದ ಒಳನಾಡಿನಲ್ಲಿ ಕೂಡ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.
ಇದನ್ನೂ ಓದಿ: Rishabh Pant: ರಿಷಭ್ ಪಂತ್ ಶತಕ ಸಿಡಿಸಿದಾಗ ಡಗೌಟ್ನಲ್ಲಿ ಕೋಚ್ ರಾಹುಲ್ ದ್ರಾವಿಡ್ ಮಾಡಿದ್ದೇನು ನೋಡಿ