ಮರೆಗುಳಿತನ ರೋಗ ನಿಮ್ಮನ್ನು ಮರೆಯುವಂತೆ ಮಾಡಬೇಕಾದರೆ ಕೆಲ ಆಹಾರ ಪದಾರ್ಥಗಳ ಸೇವನೆ ಅತ್ಯಗತ್ಯ

ವ್ಯಕ್ತಿಯೊಬ್ಬನಲ್ಲಿ ಡಿಮೆನ್ಶಿಯ ನಿರ್ದಿಷ್ಟವಾಗಿ ಇದೇ ಕಾರಣಕ್ಕೆ ಶುರುವಾಗುತ್ತದೆ ಅಂತ ಹೇಳಲಾಗುವುದಿಲ್ಲವಾದರೂ ಜೀವನ ಶೈಲಿ ಮತ್ತು ಪರಿಸರ ನಿಸ್ಸಂದೇಹವಾಗಿ ಕಾರಣವಾಗುತ್ತವೆ ಎಂದು ವೈದ್ಯರು ಹೇಳುತ್ತಾರೆ. ನಾವು ತಿನ್ನುವ ಆಹಾರ ಕೂಡ ನಮ್ಮ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅದು ಸೂಕ್ತವಾಗಿ ಕಾರ್ಯನಿರ್ವಹಿಸಲು ನೆರವಾಗುತ್ತದೆ ಎನ್ನಲಾಗಿದೆ.

ಮರೆಗುಳಿತನ ರೋಗ ನಿಮ್ಮನ್ನು ಮರೆಯುವಂತೆ ಮಾಡಬೇಕಾದರೆ ಕೆಲ ಆಹಾರ ಪದಾರ್ಥಗಳ ಸೇವನೆ ಅತ್ಯಗತ್ಯ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 06, 2022 | 4:18 PM

New Delhi:  ಮರೆಗುಳಿತನ (ಡಿಮೆನ್ಶಿಯ) (Dementia) ಸಾಮಾನ್ಯವಾಗಿ ವಯಸ್ಕರಲ್ಲಿ ಕಾಡುವ ಒಂದು ಆರೋಗ್ಯದ ಸಮಸ್. ಅಸಲಿಗೆ ಏನಾಗುತ್ತದೆ ಎಂದರೆ ನಮ್ಮ ಮೆದುಳು ಸಂಕುಚಿತಗೊಳ್ಳಲಾರಂಭಿಸಿ ಜೀವಕಣಗಳು (cells) ನಶಿಸಲಾರಂಭಿಸುತ್ತವೆ. ಈ ಸಮಸ್ಯೆಗೆ ಒಳಗಾಗುವ ವ್ಯಕ್ತಿಯಲ್ಲಿ ಯೋಚನೆ ಮಾಡುವ ಶಕ್ತಿ, ನೆನಪಿನ ಶಕ್ತಿ ಕುಂದಲಾರಂಭಿಸುತ್ತದೆ. ಮೆದುಳಿನ ಚಟುವಟಿಕೆ (brian activities) ಕ್ಷೀಣಿಸುವುದರಿಂದ ವರ್ತನೆಯಲ್ಲಿ ಬದಲಾವಣೆ ಕಂಡುಬರುತ್ತದೆ. ಮರೆಗುಳಿತನ ಈ ರೋಗದ ಪ್ರಮುಖ ಲಕ್ಷಣವಾದರೂ ಇದು ದೇಹದ ಹಲವಾರು ಚಟುವಟಿಕೆಗಳನ್ನು ಕುಂಠಿತಗೊಳಿಸುತ್ತದೆ ಮತ್ತು ವ್ಯಕ್ತಿಯ ದಿನಚರಿಯ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ.

ವ್ಯಕ್ತಿಯೊಬ್ಬನಲ್ಲಿ ಡಿಮೆನ್ಶಿಯ ನಿರ್ದಿಷ್ಟವಾಗಿ ಇದೇ ಕಾರಣಕ್ಕೆ ಶುರುವಾಗುತ್ತದೆ ಅಂತ ಹೇಳಲಾಗುವುದಿಲ್ಲವಾದರೂ ಜೀವನ ಶೈಲಿ ಮತ್ತು ಪರಿಸರ ನಿಸ್ಸಂದೇಹವಾಗಿ ಕಾರಣವಾಗುತ್ತವೆ ಎಂದು ವೈದ್ಯರು ಹೇಳುತ್ತಾರೆ. ನಾವು ತಿನ್ನುವ ಆಹಾರ ಕೂಡ ನಮ್ಮ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅದು ಸೂಕ್ತವಾಗಿ ಕಾರ್ಯನಿರ್ವಹಿಸಲು ನೆರವಾಗುತ್ತದೆ ಎನ್ನಲಾಗಿದೆ.

ತಜ್ಞರ ಪ್ರಕಾರ ಕೆಳಗೆ ತಿಳಿಸಿರುವ 7 ಬಗೆಯ ಆಹಾರಗಳು ಡಿಮೆನ್ಶಿಯ ಅಪಾಯವನ್ನು ಕಡಿಮೆ ಮಾಡುತ್ತವೆ.

ಹಸಿರು ತರಕಾರಿ:

ಮುಖ್ಯವಾಗಿ ಕೋಸುಗಡ್ಡೆ, ಹೂಕೋಸು, ಪಾಲಕ್ ಸೊಪ್ಪು, ಎಲೆಕೋಸು ಇತ್ಯಾದಿಗಳನ್ನು ಒಳಗೊಂಡ ಹಸಿರು ತರಕಾರಿಗಳು ಕ್ರೂಸಿಫೆರಸ್ ತರಕಾರಿ ಗುಂಪಿಗೆ ಸೇರಿವೆ ಮತ್ತು ದೇಹ ಮತ್ತು ಮೆದುಳಿನ ಆರೋಗ್ಯಕ್ಕೆ ಪ್ರಯೋಜನಕಾರಿಯಾದ ವಿವಿಧ ಪೋಷಕಾಂಶಗಳಿಂದ ಕೂಡಿರುವುದರಿಂದ ಸೂಪರ್‌ಫುಡ್‌ಗಳೆಂದು ಪರಿಗಣಿಸಲ್ಪಡುತ್ತವೆ.

ಬಾದಾಮಿ:

ನಿಯಮಿತವಾಗಿ ಬಾದಾಮಿಯನ್ನು ತಿನ್ನುವುದು ಮೆದುಳಿಗೆ ಬಹಳ ಪ್ರಯೋಜಕಾರಿ ಎಂದು ಹೇಳಲಾಗುತ್ತದೆ. ಹಲವಾರು ಪೋಷಕಾಂಶಗಳಿಂದ ಕೂಡಿರುವ ಡ್ರೈಫ್ರುಟ್ಸ್ ಮತ್ತು ನಟ್ಸ್ ಗಳನ್ನು ಸಹ ಸೂಪರ್ ಫುಡ್ ಎಂದು ಕರೆಯಲಾಗುತ್ತದೆ. ಇವು ಮೆದುಳಿನ ಆರೋಗ್ಯವನ್ನು ಉತ್ತಮ ಪಡಿಸುತ್ತವೆ ಎಂದಯ ತಜ್ಞರು ಹೇಳುತ್ತಾರೆ.

ಕೊಬ್ಬಿನಾಂಶಯುಕ್ತ ಮೀನು:

ಕೊಬ್ಬಿನಾಂಶಯುಕ್ತ ಮೀನಿನಲ್ಲಿ ಒಮೆಗಾ-3 ಫ್ಯಾಟಿ ಌಸಿಡ್ಸ್ ಮೆದುಳಿನ ಆರೋಗ್ಯವನ್ನು ಉತ್ತಮಪಡಿಸುತ್ತವೆ ಅನ್ನೋದು ಧಡಪಟ್ಟಿರುವ ವಿಚಾರ. ಫ್ಯಾಟಿ ಌಸಿಡ್ಸ್ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತವೆ ಮತ್ತು ವ್ಯಕ್ತಿಯಲ್ಲಿ ಉಲ್ಲಾಸದ ಮನೋಭಾವವನ್ನು ಮೂಡಿಸುತ್ತವೆ. ವಯಸ್ಸಾಗುವ ಕಾರಣಕ್ಕೆ ಉಂಟಾಗುವ ಜೀವಕಣಗಳ ಹಾನಿಯನ್ನು ಸಹ ಇವು ಕಡಿಮೆ ಮಾಡುತ್ತವೆ.

ಪೌಲ್ಟ್ರಿ ಆಹಾರ ಪದಾರ್ಥಗಳು:

ಕನ್ ಮತ್ತು ಇತರ ಪೌಲ್ಟ್ರಿ ಆಹಾರ ಪದಾರ್ಥಗಳಲ್ಲಿ ಪ್ರೊಟೀನ್, ವಿಟಮಿನ್ ಬಿ12, ವಿಟಮಿನ್ ಬಿ6 ಮತ್ತು ಕೊಲೀನ್ ಹೇರಳವಾಗಿ ಸಿಗುತ್ತವೆ. ಈ ಅಹಾರ ಪದಾರ್ಥಗಳು ಆರೋಗ್ಯ ಅದರಲ್ಲೂ ವಿಶೇಷವಾಗಿ ಮೆದುಳಿನ ಆರೋಗ್ಯವನ್ನು ಉತ್ತಮಪಡಿಸುತ್ತವೆ ಎಂದು ಹೇಳಲಾಗುತ್ತದೆ.

ಕೆಫೀನ್​​ಯುಕ್ತ ಪೇಯಗಳು:

ಕೆಫೀನ್ ಯುಕ್ತ ಪೇಯಗಳಾದ ಕಾಫಿ ಮತ್ತು ಟೀ ಮೊದಲಾದವುಗಳನ್ನು ಸಾಮರ್ಥ್ಯಕ್ಕೆ ಬೂಸ್ಟ್ ನೀಡುವ ಪೇಯಗಳೆಂದು ಪರಿಗಣಿಸಲಾಗುತ್ತದೆ. ಇವು ಸಾಮರ್ಥ್ಯವನ್ನು ಹೆಚ್ಚಿಸುವುದಲ್ಲದೆ ಮೂಡ್ ಉತ್ತೇಜಕಗಳಾಗಿಯೂ ಕೆಲಸ ಮಾಡುತ್ತವೆ. ಜ್ಞಾಪಕಾ ಶಕ್ತಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಮತ್ತು ಅಪಾಯಗಳನ್ನು ಇವು ಕುಂಠಿತಗೊಳಿಸುತ್ತವೆ.

ಡಾರ್ಕ್ ಚಾಕೊಲೇಟ್:

ಡಾರ್ಕ್ ಚಾಕೊಲೇಟ್ಗಳಲ್ಲಿ ಹೇರಳವಾಗಿ ಪೌಷ್ಠಿಕಾಂಶಗಳನ್ನು ಹೊಂದಿರುವುದರಿಂದ ಇವುಗಳನ್ನು ಸಹ ಸೂಪರ್ ಫುಡ್ ಗಳೆಂದು ಪರಿಗಣಿಸಲಾಗುತ್ತದೆ. ಹಾಗೆ ನೋಡಿದರೆ ಡಾರ್ಕ್ ಚಾಕೊಲೆಟ್ಗಳು ಒಟ್ಟಾರೆ ಆರೋಗ್ಯದ ಮೇಲೂ ಉತ್ತಮ ಪರಿಣಾಮ ಬೀರುತ್ತವೆ. ಡಿಮೆನ್ಶಿಯ ಮತ್ತು ನೆನಪಿಗೆ ಸಂಬಂಧಿಸಿದ ಮೆದುಳಿನ ಕಂಡೀಶನ್ಗಳಿಗೆ ಅಪಾಯಗಳನ್ನು ಸಹ ಇವು ಕಡಿಮೆ ಮಾಡುತ್ತವೆ.

ದಾಲ್ಚಿನ್ನಿ:

ದಾಲ್ಚಿನ್ನಿ ಸುವಾಸನೆಗೆ ಬಳಸಲಾಗುವ ಮಸಾಲೆ ಪದಾರ್ಥವಾಗಿದೆ. ಅನೇಕ ಅಧ್ಯಯನಗಳು ದಾಲ್ಚಿನ್ನಿ ಸೇವನೆ ಮೆದುಳಿನಲ್ಲಿ ಪ್ರೋಟೀನ್ ಅಂಶ ಹೆಚ್ಚಿಸುತ್ತವೆ ಅಂತ ಹೇಳಿವೆ.

ಇದನ್ನೂ ಓದಿ: Benefits of beetroot: ಆರೋಗ್ಯಕರ ಮತ್ತು ಗುಲಾಬಿ ತುಟಿಗಳಿಗೆ ಬೀಟ್ರೂಟ್​ ಸಹಕಾರಿ..!

ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ