Benefits of beetroot: ಆರೋಗ್ಯಕರ ಮತ್ತು ಗುಲಾಬಿ ತುಟಿಗಳಿಗೆ ಬೀಟ್ರೂಟ್ ಸಹಕಾರಿ..!
ವರ್ಷವಿಡೀ ತುಟಿಗಳು ಬಿರುಕು ಬಿಡುವ ಸಮಸ್ಯೆ ಅನೇಕರಿಗೆ ಇರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಅವುಗಳನ್ನು ನೈಸರ್ಗಿಕವಾಗಿ ಆರೋಗ್ಯಕರವಾಗಿಡಲು ಬಯಸಿದರೆ, ಬೀಟ್ರೂಟ್ನ್ನು ಬಳಸಬಹುದು.
ಗುಲಾಬಿ ಬಣ್ಣದ ತುಟಿಗಳು (Lips) ಮತ್ತು ಕೆನ್ನೆಗಳನ್ನು ಉತ್ತಮ ಆರೋಗ್ಯದ ಲಕ್ಷಣವೆಂದು ಹೇಳಲಾಗುತ್ತದೆ. ಒಡೆದ ಮತ್ತು ನಿರ್ಜೀವ ತುಟಿಗಳು ಮುಖದ ಸೌಂದರ್ಯ ಮತ್ತು ವ್ಯಕ್ತಿತ್ವವನ್ನು ಹಾಳುಮಾಡುತ್ತದೆ. ನಿಮ್ಮ ತುಟಿಗಳು ಕಪ್ಪಾಗುತ್ತಿದ್ದರೆ ಅಥವಾ ಒಣಗುತ್ತಿದ್ದರೆ ಮತ್ತು ನಿರ್ಜೀವವಾಗಿದ್ದರೆ ನಿಮ್ಮ ದೇಹದಲ್ಲಿನ ಪೋಷಕಾಂಶಗಳ ಕೊರತೆಯೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತದೆ. ಉತ್ತಮ ಆರೋಗ್ಯಕ್ಕಾಗಿ ಕಬ್ಬಿಣ, ಸೋಡಿಯಂ, ಪೊಟ್ಯಾಸಿಯಮ್, ಫೈಬರ್, ರಂಜಕ ಮತ್ತು ವಿಟಮಿನ್‌ಗಳಂತಹ ಪೋಷಕಾಂಶಗಳನ್ನು ಹೋದುವುದು ಅವಶ್ಯಕವಾಗಿದೆ. ಬೀಟ್‌ರೂಟ್‌ನಲ್ಲಿ ಇಂತಹ ಅನೇಕ ಪೋಷಕಾಂಶಗಳಿದ್ದು, ಇದು ದೇಹಕ್ಕೆ ಶಕ್ತಿಯನ್ನು ನೀಡುವ ಮೂಲಕ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ, ಚರ್ಮ ಮತ್ತು ತುಟಿಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಬೀಟ್ರೂಟ್ ಬಳಕೆ ಒಣ ತುಟಿಗಳಿಗೆ ತೇವಾಂಶ ಮತ್ತು ಪೋಷಣೆಯನ್ನು ನೀಡಲು ಸಹಕರಿಸುತ್ತದೆ.
ಬೀಟ್ರೂಟ್ನ್ನು ಬಳಸುವುದು ಹೇಗೆ?
ಬೀಟ್ರೂಟ್ ತುಟಿಗಳಿಗೆ ಅತ್ಯುತ್ತಮ ನೈಸರ್ಗಿಕ ಮಾಯಿಶ್ಚರೈಸರ್ ಎಂದು ಪರಿಗಣಿಸಲಾಗಿದ್ದು, ನಿಮ್ಮ ತುಟಿಗಳಿಗೆ ಸಂಪೂರ್ಣ ಪೋಷಣೆಯನ್ನು ಒದಗಿಸುತ್ತದೆ. ಬೀಟ್ರೂಟ್ ಬಳಕೆಯಿಂದ ಒಣ ಮತ್ತು ಒಡೆದ ತುಟಿಗಳನ್ನು ಹೋಗಲಾಡಿಸಬಹುದು.
ತುಟಿಗಳನ್ನು ಎಫ್ಫೋಲಿಯೇಟ್:
ಬೀಟ್ ಪೇಸ್ಟ್ಗೆ ಸಕ್ಕರೆ ಸೇರಿಸಿ ಮಿಶ್ರಣವನ್ನು ತಯಾರಿಸಿ. ಇದಕ್ಕೆ ಸ್ವಲ್ಪ ಆಲಿವ್ ಎಣ್ಣೆಯನ್ನು ಸೇರಿಸುವ ಮೂಲಕ ನೀವು ತುಟಿಗಳಿಗೆ ಸ್ಕ್ರಬ್ ತಯಾರಿಸಬಹುದು. ಎರಡು-ಮೂರು ದಿನಗಳ ಅಂತರದಲ್ಲಿ ಈ ಸ್ಕ್ರಬ್ನ್ನು ಬಳಸಬಹುದು. ಕಾಲಕಾಲಕ್ಕೆ ತುಟಿಗಳನ್ನು ಸ್ಕ್ರಬ್ ಮಾಡುವುದು ಬಹಳ ಮುಖ್ಯ, ಇದರಿಂದ ಸತ್ತ ಚರ್ಮವನ್ನು ತೆಗೆದುಹಾಕುವುದರೊಂದಿಗೆ ತುಟಿಗಳು ಆರೋಗ್ಯಕರವಾಗಿರುತ್ತವೆ.
ಬೀಟ್ರೂಟ್ ತುಟಿಗಳನ್ನು ಹೈಡ್ರೇಟ್ ಮಾಡುತ್ತದೆ:
ಬೀಟ್ರೂಟ್ ರಸವು ತುಟಿಗಳಿಗೆ ತ್ವರಿತ ಹೊಳಪನ್ನು ನೀಡುವುದರೊಂದಿಗೆ ಹೈಡ್ರೇಟ್ ಕೂಡ ಮಾಡುತ್ತದೆ. ಬೀಟ್ರೂಟ್ ರಸವನ್ನು ನಿಯಮಿತವಾಗಿ ಅನ್ವಯಿಸುವುದರಿಂದ ತುಟಿಗಳು ಹೈಡ್ರೀಕರಿಸುವುದಲ್ಲದೆ ಪೋಷಣೆಯನ್ನು ನೀಡುತ್ತದೆ. ತಾಜಾ ಬೀಟ್ರೂಟ್ನ ಪೇಸ್ಟ್ನ್ನು ತಯಾರಿಸಿ, ಅದಕ್ಕೆ ಅಲೋವೆರಾ ಜೆಲ್ ಮತ್ತು ವ್ಯಾಸಲೀನ್ನ್ನು ಸೇರಿಸುವ ಮೂಲಕ ನೀವು ಲಿಪ್ ಬಾಮ್ನ್ನು ತಯಾರಿಸಬಹುದು. ಈ ಮಿಶ್ರಣವನ್ನು ಗಾಳಿಯಾಡದ ಪಾತ್ರೆಯಲ್ಲಿ ಇರಿಸಿ. ಇದನ್ನು ಫ್ರಿಡ್ಜ್ನಲ್ಲಿ ಇಟ್ಟು ತಿಂಗಳುಗಟ್ಟಲೆ ಬಳಸಬಹುದು. ತುಟಿಗಳು ಹೊಳೆಯುವಂತೆ ಮಾಡಲು, ಒಂದು ಚಮಚ ಬೀಟ್ರೂಟ್ ರಸವನ್ನು ಕೆಲವು ಹನಿ ನಿಂಬೆ ರಸದೊಂದಿಗೆ ಬೆರೆಸಿ ತುಟಿಗಳಿಗೆ ಹಚ್ಚುವುದರಿಂದ ವಿಟಮಿನ್ ಸಿ ಗುಣಗಳನ್ನು ಒದಗಿಸುತ್ತದೆ.
ಲಿಪ್ ಮಾಸ್ಕ್:
ಮಾರುಕಟ್ಟೆಯಲ್ಲಿ ಅನೇಕ ಲಿಪ್ ಮಾಸ್ಕ್‌ಗಳು ಲಭ್ಯವಿವೆ. ಆದರೆ ಅವೆಲ್ಲವೂ ದುಬಾರಿ ಮತ್ತು ರಾಸಾಯನಿಕ ಸಮೃದ್ಧವಾಗಿವೆ. ಅದಕ್ಕಾಗಿಯೇ ಲಿಪ್ ಮಾಸ್ಕ್ ಮಾಡಲು, ಬೀಟ್ರೂಟ್ನ್ನು ಕತ್ತರಿಸಿ ಅದನ್ನು ಮೃದುವಾದ ಪೇಸ್ಟ್ ತಯಾರಿಸಿಕೊಳ್ಳಿ. ಅದಕ್ಕೆ ರೋಸ್ ವಾಟರ್, ಅಲೋವೆರಾ ಜೆಲ್ ಮತ್ತು ಸ್ವಲ್ಪ ತಾಜಾ ಕ್ರೀಮ್ ಸೇರಿಸಿ ಮಾಸ್ಕ್ ತಯಾರಿಸಿ. ಈ ಫೇಸ್ ಮಾಸ್ಕ್ ವಾರಕ್ಕೆ ಎರಡರಿಂದ ಮೂರು ಬಾರಿ ತುಟಿಗಳ ಮೇಲೆ 20 ನಿಮಿಷಗಳ ಕಾಲ ಅನ್ವಯಿಸಿ. ಅದು ಒಣಗಿದ ನಂತರ ತುಟಿಗಳನ್ನು ತಣ್ಣೀರಿನಿಂದ ತೊಳೆಯಿರಿ. ಈ ರೀತಿಯಾಗಿ ಬೀಟ್ರೂಟ್ನ್ನು ಬಳಸುವುದರೊಂದಿಗೆ ತುಟಿಯ ಅಂದವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಬಹುದು.