ಉದ್ಧವ್ ಠಾಕ್ರೆ ಬೆಂಬಲಿತ ಶಾಸಕರನ್ನು ಕೂಡಿಹಾಕಲಾಗಿತ್ತು: ಆದಿತ್ಯ ಠಾಕ್ರೆ
ಉದ್ಧವ್ ಠಾಕ್ರೆಗೆ ಬೆಂಬಲ ನೀಡುವ ಕೆಲವು ಶಾಸಕರನ್ನು ಕೂಡಿಹಾಕಲಾಗಿತ್ತು ಎಂದು ಮಹಾರಾಷ್ಟ್ರದ ಮಾಜಿ ಸಚಿವ ಆದಿತ್ಯ ಠಾಕ್ರೆ ಆರೋಪಿಸಿದ್ದಾರೆ. ಇಂದು ನಡೆದ ವಿಧಾನಸಭೆ ಸ್ಪೀಕರ್ ಚುನಾವಣೆಗೆ ಆಗಮಿಸಿದ ಆದಿತ್ಯ ಠಾಕ್ರೆ ಈ ಆರೋಪ ಮಾಡಿದ್ದಾರೆ.
ಉದ್ಧವ್ ಠಾಕ್ರೆಗೆ ಬೆಂಬಲ ನೀಡುವ ಕೆಲವು ಶಾಸಕರನ್ನು ಕೂಡಿಹಾಕಲಾಗಿತ್ತು ಎಂದು ಮಹಾರಾಷ್ಟ್ರದ ಮಾಜಿ ಸಚಿವ ಆದಿತ್ಯ ಠಾಕ್ರೆ ಆರೋಪಿಸಿದ್ದಾರೆ. ಇಂದು ನಡೆದ ವಿಧಾನಸಭೆ ಸ್ಪೀಕರ್ ಚುನಾವಣೆಗೆ ಆಗಮಿಸಿದ ಆದಿತ್ಯ ಠಾಕ್ರೆ ಈ ಆರೋಪ ಮಾಡಿದ್ದಾರೆ.
ಉದ್ಧವ್ ಠಾಕ್ರೆಯನ್ನು ಬೆಂಬಲಿಸುವ ಶಾಸಕರನ್ನು ರೂಮಿನೊಳಗೆ ಕೂಡಿ ಹಾಕಿ ಬೀಗ ಹಾಕಲಾಗಿದೆ ಎಂದು ಹೇಳಿದ್ದಾರೆ. ಶಿವಸೇನಾ ಕಚೇರಿಗೆ ಬೀಗ ಹಾಕಿ ನೋಟಿಸ್ ಅಂಟಿಸಿರುವ ಕುರಿತು ಮಾತನಾಡಿರುವ ಅವರು, ಬೇರೆಯವರು ನಮ್ಮ ಶಾಸಕರನ್ನೇ ಕೂಡಿ ಬೀಗ ಹಾಕಿದ್ದಾರೆ, ನಾವು ನಮ್ಮ ಕಚೇರಿಗೆ ಬೀಗ ಹಾಕಿದರೆ ಏನು ತೊಂದರೆ ಎಂದು ಪ್ರಶ್ನಿಸಿದ್ದಾರೆ.
ನಾವು ವಿಧಾನಸಭೆಗೆ ಒಟ್ಟಿಗೆ ಹೋಗಬೇಕು ಎನ್ನುವ ಕಾರಣಕ್ಕೆ ಶಿವಸೇನಾ ಕಚೇರಿಯನ್ನು ಬಂದ್ ಮಾಡಿದ್ದೆವು ಅದನ್ನು ಹೊರತು ಪಡಿಸಿ ಬೇರೆ ಯಾವ ಉದ್ದೇಶವೂ ಇಲ್ಲ ಎಂದರು.
ಶಾಸಕರಿಗೆ ನೈತಿಕತೆಯ ಪರೀಕ್ಷೆ ಇದೆ. ಶಿವಸೇನೆ ವಿಪ್ ಜಾರಿ ಮಾಡಿದೆ. ಯಾರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ ಎಂದು ಆದಿತ್ಯ ಠಾಕ್ರೆ ಹೇಳಿದ್ದಾರೆ.
ಬಿಜೆಪಿ ಅಭ್ಯರ್ಥಿ ರಾಹುಲ್ ನಾರ್ವೇಕರ್ ಮಹಾರಾಷ್ಟ್ರ ವಿಧಾನಸಭೆಯ ನೂತನ ಸ್ಪೀಕರ್ ಆಗಿ ಆಯ್ಕೆ ಆಗಿದ್ದಾರೆ. ಮೊದಲ ಬಾರಿಗೆ ಬಿಜೆಪಿ ಶಾಸಕ ಮತ್ತು ಕೊಲಾಬಾ ಶಾಸಕ ನಾರ್ವೇಕರ್ ಶಿವಸೇನಾ, ಎನ್‍ಸಿಪಿ ಹಾಗೂ ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿ ಆಗಿದ್ದ ರಾಜನ್ ಸಾಲ್ವಿ ಅವರನ್ನು ಸ್ಪೀಕರ್ ಚುನಾವಣೆಯಲ್ಲಿ ಸೋಲಿಸಿದರು.
ಶಿಂಧೆ ಬಣದ ಬಿಜೆಪಿ ಅಭ್ಯರ್ಥಿಯಾದ ನಾರ್ವೇಕರ್ 164 ಮತಗಳನ್ನು ಪಡೆದರೆ, ಸಲ್ವಿ 107 ಮತಗಳನ್ನಷ್ಟೇ ಗಳಿಸಲು ಸಾಧ್ಯವಾದರು.
ಬಗ್ಗೆ ಉಪಸಭಾಪತಿ ನರಹರಿ ಜಿರ್ವಾಲ್ ಮಾತನಾಡಿ, ಶಿಂದೆ ಬಣ ಪಕ್ಷದ ವಿಪ್ ವಿರುದ್ಧ ಮತ ಚಲಾಯಿಸಿದ್ದಾರೆ. ಇದರಿಂದಾಗಿ ಬಿಜೆಪಿ ಜಯ ದಾಖಲಿಸಿದೆ ಎಂದು ಹೇಳಿದ್ದಾರೆ.
ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಅವರು ಶನಿವಾರದಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂದೆ ಅವರನ್ನು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಶಿವಸೇನೆಯಿಂದ ಉಚ್ಛಾಟಿಸಲಾಗಿತ್ತು.