ಜಮ್ಮು ಮತ್ತು ಕಾಶ್ಮೀರದಲ್ಲಿಇಬ್ಬರು ಲಷ್ಕರ್ ಉಗ್ರರನ್ನು ಸೆರೆ ಹಿಡಿದು ಪೊಲೀಸರಿಗೊಪ್ಪಿಸಿದ ಗ್ರಾಮಸ್ಥರು
ಇಬ್ಬರು ಭಯೋತ್ಪಾದಕರನ್ನು ಪಾಂಪೋರ್‌ನ ಶಾರ್ ಶಾಲಿ ಖ್ರೂ ನಿವಾಸಿ ನವೀದ್ ಶಾಫಿ ವಾನಿ ಮತ್ತು ಅದೇ ಜಿಲ್ಲೆಯ ಕಡ್ಲಾಬಲ್ ನಿವಾಸಿ ಫೈಜಾನ್ ರಶೀದ್ ತೇಲಿ ಎಂದು ಗುರುತಿಸಲಾಗಿದೆ.
ದೆಹಲಿ: ಭಾನುವಾರ ಜಮ್ಮು ಮತ್ತು ಕಾಶ್ಮೀರದ (Jammu kashmir) ರಿಯಾಸಿ ಜಿಲ್ಲೆಯಲ್ಲಿ ಇಬ್ಬರು ಭಾರೀ ಶಸ್ತ್ರಸಜ್ಜಿತ ಲಷ್ಕರ್-ಎ-ತೊಯ್ಬಾ (Lashkar-e-Toiba) ಉಗ್ರರನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ. ರಿಯಾಸಿ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಐಇಡಿ ಸ್ಫೋಟದ ರೂವಾರಿ ಲಷ್ಕರ್ ಕಮಾಂಡರ್ ತಾಲಿಬ್ ಹುಸೇನ್ನ್ನು ಗ್ರಾಮಸ್ಥರು ಹಿಡಿದ ನಂತರ ಟುಕ್ಸಾನ್‌ನಲ್ಲಿ ಭದ್ರತಾ ಪಡೆಗಳು ಬಂಧಿಸಿವೆ. ಜಮ್ಮು ಮತ್ತು ಕಾಶ್ಮೀರ ಪೊಲೀಸರು ಎಲ್‌ಇಟಿ ಕಮಾಂಡರ್‌ಗೆ ಬಹುಮಾನ ಘೋಷಿಸಿದ್ದರು. ಮತ್ತೊಬ್ಬ ಭಯೋತ್ಪಾದಕ ಫೈಝಲ್ ಅಹಮದ್ ದಾರ್ ಎಂಬಾತನನ್ನೂ ಗ್ರಾಮದಲ್ಲಿ ಬಂಧಿಸಲಾಗಿದೆ. ಎಲ್ಇಟಿಯ ಇಬ್ಬರು ಭಯೋತ್ಪಾದಕರನ್ನು ರಿಯಾಸಿ ಜಿಲ್ಲೆಯ ತುಕ್ಸಾನ್ ಗ್ರಾಮಸ್ಥರು ಶಸ್ತ್ರಾಸ್ತ್ರಗಳೊಂದಿಗೆ ಸೆರೆ ಹಿಡಿದಿದ್ದಾರೆ. ಎರಡು ಎಕೆ-47 ರೈಫಲ್‌ಗಳು, ಏಳು ಗ್ರೆನೇಡ್‌ಗಳು ಮತ್ತು ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ. ಗ್ರಾಮಸ್ಥರಿಗೆ ಡಿಜಿಪಿ ₹ 2 ಲಕ್ಷ ಬಹುಮಾನ ಘೋಷಿಸಿದ್ದಾರೆ ಎಂದು ಜಮ್ಮುವಿನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಗ್ರಾಮಸ್ಥರ ಕಾರ್ಯವನ್ನು ಶ್ಲಾಘಿಸಿದ್ದಾರೆ. ಶ್ರೀನಗರದಲ್ಲಿ ಲಷ್ಕರ್-ಎ-ತೊಯ್ಬಾದ ಇಬ್ಬರು ಹೈಬ್ರಿಡ್ ಭಯೋತ್ಪಾದಕರನ್ನು ಬಂಧಿಸಿದ ಕೆಲವು ದಿನಗಳ ನಂತರ ಈ ಘಟನೆ ನಡೆದಿದೆ ಎಂದು ಪಿಟಿಐ ವರದಿ ಮಾಡಿದೆ. ಇಬ್ಬರು ಭಯೋತ್ಪಾದಕರನ್ನು ಪಾಂಪೋರ್‌ನ ಶಾರ್ ಶಾಲಿ ಖ್ರೂ ನಿವಾಸಿ ನವೀದ್ ಶಾಫಿ ವಾನಿ ಮತ್ತು ಅದೇ ಜಿಲ್ಲೆಯ ಕಡ್ಲಾಬಲ್ ನಿವಾಸಿ ಫೈಜಾನ್ ರಶೀದ್ ತೇಲಿ ಎಂದು ಗುರುತಿಸಲಾಗಿದೆ.
ನಾಲ್ಕು ಚೈನೀಸ್ ಪಿಸ್ತೂಲ್‌ಗಳು, ಆರು ಪಿಸ್ತೂಲ್ ಮ್ಯಾಗಜೀನ್‌ಗಳು, 11 ಪಿಸ್ತೂಲ್ ರೌಂಡ್‌ಗಳು, ಒಂದು ಗ್ರೆನೇಡ್, 16 ಜೆಲಾಟಿನ್ ಸೂಪರ್ ಪವರ್ ಸ್ಟಿಕ್‌ಗಳು, ಆರು ಮೀಟರ್ ಕಾರ್ಟೆಕ್ಸ್ ವೈರ್ ಮತ್ತು ಎಂಟು ಡಿಟೋನೇಟರ್‌ಗಳು ಸೇರಿದಂತೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳೊಂದಿಗೆ ಎಲ್‌ಇಟಿಗೆ ಸಂಬಂಧಿಸಿದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
Published On - 1:48 pm, Sun, 3 July 22