ಸೇವಿಸುವ ಆಹಾರ ಎಷ್ಟು ಮುಖ್ಯವೋ ಅದನ್ನು ತಯಾರಿಸುವ ವಿಧಾನವೂ ಅಷ್ಟೇ ಪ್ರಮುಖವಾಗಿರುತ್ತದೆ. ಏಕೆಂದರೆ ಆಹಾರದ ಶುದ್ಧತೆ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಕೊರೋನಾ ಸಾಂಕ್ರಾಮಿಕ ಶುರುವಾದಾಗಿನಿಂದ ಎಷ್ಟು ಸ್ವಚ್ಛತೆ ವಹಿಸಿದರೂ ಕಡಿಮೆಯೇ ಎನ್ನುವಂತಾಗಿದೆ. ಅಡುಗೆ ಮನೆಯಲ್ಲಿ ನೀವು ಪಾಲಿಸುವ ಕೆಲವು ಅಭ್ಯಾಸಗಳು ನಿಮ್ಮ ಆಹಾರವನ್ನು ಕಲುಷಿತಗೊಳಿಸಬಹುದು. ಇದರಿಂದ ನಿಮ್ಮ ಆರೋಗ್ಯ ಕೆಡಬಹುದು. ಸಸ್ಯಾಹಾರಿ ಆಗಿರಲಿ ಅಥವಾ ಮಾಂಸಹಾರಿ ಆಗಿರಲಿ ಸೇವಿಸುವ ಮುನ್ನ ಸ್ವಚ್ಛತೆಯಿಂದ ತಯಾರಿಸಬೇಕು. ಹಾಗಾದರೆ ಅಡುಗೆ ಮನೆಯಲ್ಲಿ ಯಾವೆಲ್ಲಾ ತಪ್ಪುಗಳನ್ನು ಮಾಡುವುದರಿಂದ ನಿಮ್ಮ ಆಹಾರ ಕಲುಷಿತಗೊಳ್ಳಬಹುದು. ಆ ಕುರಿತು ಇಲ್ಲಿದೆ ಮಾಹಿತಿ.
ಸ್ಪಾಂಜ್ಗಳ ಬಳಕೆ
ತಿಂಗಳುಗಳ ಕಾಲ ಒಂದೇ ಸ್ಪಾಂಜ್ ಮೂಲಕ ಅಡುಗೆ ಮನೆಯನ್ನು ಸ್ವಚ್ಛಗೊಳಿಸುತ್ತಿದ್ದರೆ ಇದು ಬ್ಯಾಕ್ಟೀರಿಯಾಗಳು ಹರಡಲು ಕಾರಣವಾಗುತ್ತದೆ. ಹೀಗಾಗಿ ಅಡುಮನೆಯನ್ನು ಸ್ಚಚ್ಛಗೊಳಿಸುವ ವೇಳೆ ಬಳಸುವ ವಸ್ತುಗಳ ಬಗ್ಗೆ ಗಮನಹರಿಸಿ. ಒಂದೇ ಸ್ಪಾಂಜ್ಗಳನ್ನು ಹಲವು ದಿನ ಬಳಕೆ ಮಾಡುವುದರಿಂದ ಅದರಿಲ್ಲಿ ಕೊಳೆ ಸಿಲುಕಿ ಕೀಟಾಣುಗಳು ಉತ್ಪತ್ತಿಯಾಗುತ್ತವೆ. ಇವುಗಳು ನಿಮ್ಮ ಆಹಾರದ ಮೇಲೆಯೂ ಪರಿಣಾಮ ಬೀರುತ್ತದೆ.
ಕೌಂಟರ್ಟಾಪ್ಗಳ ಬಳಕೆ
ನೀವು ಮನೆಯಲ್ಲಿ ಮಾಂಸಾಹಾರವನ್ನು ತಯಾರಿಸುತ್ತಿದ್ದೀರಾ ಎನ್ನುವುದಾದರೆ ಕೌಂಟರ್ಟಾಪ್ ಮೇಲೆ ಅವುಗಳನ್ನು ತಯಾರಿಸಬೇಡಿ. ಏಕೆಂದರೆ ಮಾಂಸಾಹಾರ ತಯಾರಿಕೆಯಲ್ಲಿ ವಿವಿಧ ರೀತಿಯ ಮಸಾಲೆಗಳು ಬೇಕಾಗುತ್ತವೆ. ಕೌಂಟರ್ಟಾಪ್ನಲ್ಲಿ ಮಾಂಸದ ಜತೆಗೆ ಅವು ಬಿದ್ದಾಗ ಕೀಟಾಣಿಗಳು ಉತ್ಪತ್ತಿಯಾಗುತ್ತವೆ. ಇದರಿಂದ ವಾಸನೆಯೂ ಬರಲು ಶುರುವಾಗುತ್ತದೆ. ಹೀಗಾಗಿ ಅಡುಗೆ ಮನೆಯಲ್ಲಿ ಮಾಂಸ ತಯಾರಿಕೆಯ ವೇಳೆ ಶುದ್ಧತೆಯನ್ನು ಅಳವಡಿಸಿಕೊಂಡಷ್ಟೂ ಸಾಲದು.
ಮರುಬಳಕೆಯ ಬ್ಯಾಗ್ಗಳನ್ನು ತೊಳೆಯದೇ ಇರುವುದು
ಪರಿಸರಕ್ಕೆ ಹಾನಿ ಮಾಡದ ಮರು ಬಳಕೆ ಬ್ಯಾಗ್ಗಳ ಬಳಕೆ ಮಾಡುವುದು ಉತ್ತಮ. ಅದೇ ರೀತಿ ಆರೋಗ್ಯವನ್ನು ನೀವು ಕಡೆಗಣಿಸುವಂತಿಲ್ಲ. ಒಂದು ಬಾರಿ ಮಾರುಕಟ್ಟೆಗೆ ಹೋಗಿ ಬಂದ ಮೇಲೆ ಅವಶ್ಯವಾಗಿ ಬ್ಯಾಗ್ಗಳನ್ನು ತೊಳೆದು ಸ್ವಚ್ಛಗೊಳಿಸಿ ಇಲ್ಲವಾದರೆ ಅದರಲ್ಲಿ ಕೊಳೆ ತುಂಬಿಕೊಂಡು ಕೀಟಾಣಿಗಳು ಉತ್ಪತ್ತಿಯಾಗುತ್ತವೆ. ಬ್ಯಾಗ್ ಮರುಬಳಕೆಗೆ ಬರುವುದಾದರೂ ಬಳಕೆಗೆ ಯೋಗ್ಯವಾಗದ ರೀತಿ ಆಗುತ್ತದೆ.
ಮಾಂಸವನ್ನು ತೊಳೆಯುವುದು
ಅಡುಗೆ ಮಾಡುವ ಮುನ್ನ ತರಕಾರಿಯನ್ನಾಗಲೀ ಮಾಂಸವನ್ನಾಗಲಿ ತೊಳೆಯಲೇಬೇಕು ಎನ್ನುವುದು ತಿಳಿದ ಸಂಗತಿ. ಆದರೆ ಮಾಂಸವನ್ನು ಹೇಗೆ ತೊಳೆಯುತ್ತೀರಾ ಎನ್ನುವುದು ಮುಖ್ಯವಾಗಿರುತ್ತದೆ. ನೀವು ಸಿಂಕ್ನಲ್ಲಿ ತೊಳೆದಾಗ ಮಾಂಸದಲ್ಲಿರುವ ಅಂಶಗಳು ಸಿಂಕ್ನಲ್ಲಿ ಸುಲಕಿ ನಿಮ್ಮ ಇತರ ಪಾತ್ರೆಗಳಿಗೂ ಅಂಟುತ್ತದೆ. ಆಗ ನಿಮ್ಮ ಆಹಾರ ಅಶುಚಿಯಾಗುತ್ತದೆ
5 ಸೆಕೆಂಡ್ ರೂಲ್ಅನ್ನು ಅನುಸರಿಸುವುದು
ಅಡುಗೆ ಮನೆಯಲ್ಲಿ ಎಣ್ಣೆ ಬಿದ್ದರೆ 5 ಸೆಕೆಂಡ್ ಒಳಗೆ ಸ್ಚಚ್ಛಗೊಳಿಸಬೇಕು ಎನ್ನುವುದು 5 ಸೆಕೆಂಡ್ ರೂಲ್ ಆಗಿದೆ. ಆದರೆ ಇದು ಕೆಲವೇ ಸಂದರ್ಭಗಳಲ್ಲಿ ಮಾತ್ರ ಅನ್ವಯಿಸುತ್ತದೆ. ಹೀಗಾಗಿ ಸಮಸ್ಯೆ ಆಗುವ ಮೊದಲು ಎಚ್ಚರಿಕೆ ವಹಿಸುವುದು ಒಳ್ಳೆಯದು. ಏಕೆಂದರೆ ಎಣ್ಣೆ ಅಥಾ ಇತರ ಮಸಾಲೆ ಪದಾರ್ಥಗಳು ನಿಮ್ಮ ಬಟ್ಟೆಯ ಮೇಲೆ ಬಿದ್ದರೆ 5 ಸೆಕೆಂಡ್ ನಿಯಮ ಅನ್ವಯವಾಗುವುದಿಲ್ಲ ಹೀಗಾಗಿ. ಅಡುಗೆ ಮನೆಯಲ್ಲಿ ಎಚ್ಚರವಹಿಸಿ ಕೆಲಸ ಮಾಡುವುದು ಉತ್ತಮ.
ಇದನ್ನೂ ಓದಿ:
Type 2 Diabetes; ಟೈಪ್ 2 ಮಧುಮೇಹ ನಿಯಂತ್ರಣಕ್ಕೆ ಈ ನೈಸರ್ಗಿಕ ಪದಾರ್ಥಗಳು ಸಹಕಾರಿ