Healthy heart: ಇವು ಹೃದಯದ ಆರೋಗ್ಯ ಕಾಪಾಡುವ ಚಹಾಗಳು
Teas for healthy heart: ಬ್ಲಾಕ್ಟೀ ಸೇವಿಸುವುದರಿಂದ ಹೃದಯದ ಆರೋಗ್ಯಕ್ಕೆ ಒಳಿತು ಎನ್ನುತ್ತಾರೆ ತಜ್ಞರು. ಹೌದು, ಬ್ಲಾಕ್ಟೀಯಲ್ಲಿರುವ ಪ್ಲೇವನಾಯ್ಡ್ಗಳು ದೇಹದಲ್ಲಿ ರಕ್ತದೊತ್ತಡವನ್ನು ಕಡಿಮೆಗೊಳಿಸಿ ಹೃದಯದ ಆರೋಗ್ಯವನ್ನು ಕೂಡ ಸುಧಾರಿಸುತ್ತದೆ.
ಭಾರತದಲ್ಲಿ ಹಲವರಿಗೆ ಬೆಳಗ್ಗೆ ಒಂದು ಕಪ್ ಟೀ (Tea) ಕುಡಿಯದೆ ದಿನವೇ ಆರಂಭವಾಗುವುದಿಲ್ಲ. ಹೀಗಿದ್ದಾಗ ಕೆಫಿನ್(Caffeine ) ಅಂಶವಿರುವ ಟೀ ಕುಡಿಯುವುದರಿಂದ ದೇಹಕ್ಕೆ ಹಾನಿ ಎನ್ನುವ ಮಾತು ಕೇಳಿಬರುತ್ತವೆ. ಆದರೆ ಸರಿಯಾದ ರೀತಿಯಲ್ಲಿ ಸರಿಯಾದ ವಿಧದ ಟೀಯನ್ನು ಸೇವಿಸಿದರೆ ಆರೋಗ್ಯ ಉತ್ತಮವಾಗುತ್ತದೆ. ಹೌದು ಗ್ರೀನ್ ಟೀ (Green Tea), ಬ್ಲಾಕ್ ಟೀ (Black Tea) ಯಂತಹ ಆರೋಗ್ಯಯುತ ಅಂಶಗಳನ್ನು ಹೊಂದಿರುವ ಟೀ ಸೇವನೆಯಿಂದ ಹೃದಯ ಸಂಬಂಧೀ ಕಾಯಿಲೆ ಸೇರಿದಂತೆ ಹಲವು ರೋಗಗಳನ್ನು ತಡೆಗಟ್ಟುತ್ತದೆ ಎನ್ನುತ್ತಾರೆ ತಜ್ಞರು. ಹಾಗಾದರೆ ಯಾವೆಲ್ಲಾ ಟೀಗಳು ದೇಹಕ್ಕೆ ಒಳ್ಳೆಯದು? ಇಲ್ಲಿದೆ ನೋಡಿ ಫೋಟೋ ಸಹಿತ ಮಾಹಿತಿ.
ಬ್ಲಾಕ್ ಟೀ
ಬ್ಲಾಕ್ಟೀ ಸೇವಿಸುವುದರಿಂದ ಹೃದಯದ ಆರೋಗ್ಯಕ್ಕೆ ಒಳಿತು ಎನ್ನುತ್ತಾರೆ ತಜ್ಞರು. ಹೌದು, ಬ್ಲಾಕ್ಟೀಯಲ್ಲಿರುವ ಪ್ಲೇವನಾಯ್ಡ್ಗಳು ದೇಹದಲ್ಲಿ ರಕ್ತದೊತ್ತಡವನ್ನು ಕಡಿಮೆಗೊಳಿಸಿ ಹೃದಯದ ಆರೋಗ್ಯವನ್ನು ಕೂಡ ಸುಧಾರಿಸುತ್ತದೆ. ಜಗತ್ತಿನಾದ್ಯಂತ ಪ್ರಚಲಿತದಲ್ಲಿರುವ ಬ್ಲಾಕ್ ಟೀ ಹಲವು ಆರೋಗ್ಯಯುತ ಗುಣಗಳು ಹೊಂದಿದೆ. ಆದರೆ ಅತಿಯಾದ ಸೇವನೆ ಒಳ್ಳೆಯದಲ್ಲ ಎನ್ನುತ್ತಾರೆ ತಜ್ಞರು.
ಗ್ರೀನ್ ಟೀ
ವೈಟ್ ಟೀ
ವೈಟ್ ಟೀಯನ್ನು ಅತ್ಯಂತ ಶುದ್ಧವಾದ ಟೀ ಎಂದು ಪರಿಗಣಿಸಲಾಗಿದ್ದು, ಇದ ಹೃದಯದ ಆರೋಗ್ಯಕ್ಕೂ ಉತ್ತಮ ಎನ್ನಲಾಗಿದೆ. ರಕ್ತ ಹೆಪ್ಪುಗಟ್ಟುವುದು, ಅಧಿಕ ರಕ್ತದೊತ್ತಡದಂತಹ ಸಮಸ್ಯೆಗಳನ್ನು ವೈಟ್ ಟೀ ನಿವಾರಿಸುತ್ತದೆ ಎನ್ನುತ್ತಾರೆ ತಜ್ಞರು. ಕ್ಯಾಮೆಲಿಯಾ ಸಿನೆನ್ಸಿಸ್ ಎನ್ನುವ ಸಸ್ಯದಿಂದ ತಯಾರಿಸುವ ಈ ಟೀ ಸೇವನೆ ಹೃದಯಕ್ಕೆ ಉತ್ತಮವಾಗಿದೆ.
ಊಲಾಂಗ್ ಟೀ
ಕೊರಿನರಿ ಹೃದಯದ ಸಮಸ್ಯೆ ಇರುವವರಿಗೆ ಊಲಾಂಗ್ ಟೀ ಸೇವನೆ ಉತ್ತಮವಾಗಿದೆ ಎನ್ನಲಾಗಿದೆ. ಇದು ದೇಹದಲ್ಲಿನ ಕೊಲೆಸ್ಟ್ರಾಲ್ ಅನ್ನು ಸಮತೋಲನದಲ್ಲಿಡುತ್ತದೆ. ಜತಗೆ ದೇಹವನ್ನು ಬೆಚ್ಚಗಿರುಸತ್ತದೆ ಎನ್ನುತ್ತಾರೆ ತಜ್ಞರು. ಆದರೆನಿಮ್ಮ ಡಯೆಟ್ ಪಟ್ಟಿಯಲ್ಲಿ ಊಲಾಂಗ್ ಟೀಯನ್ನು ಸೇರಿಸಿಕೊಳ್ಳ ಮೊದಲು ವೈದ್ಯರನ್ನು ಸಂಪರ್ಕಿಸಿ.
ಕ್ಯಾಮೋಮೈಲ್ ಟೀ
ಹೃದಯದ ಕಾಯಿಲೆ ಇರುವವರಿಗೆ ಕ್ಯಾಮೋಮೈಲ್ ಟೀ ಉತ್ತಮ ಪಾನೀಯವಾಗಿದೆ. ಚೆನ್ನಾಗಿ ನಿದ್ದೆ ಬರಲು ಈ ಹರ್ಬಲ್ ಟೀ ಸಹಾಯಕವಾಗಿದೆ. ಕ್ಯಾಮೋಮಯಲ್ ಎನ್ನುವ ಹೂಗಳಿಂದ ತಯಾರಿಸುವ ಈ ಟೀ ಶೂನ್ಯ ಕೆಫಿನ್ ಅಂಶಗಳನ್ನು ಹೊಂದಿದೆ. ಆದ್ದರಿಂದ ನಿಮ್ಮ ಹರದಯದ ಸುರಕ್ಷತೆ ಈ ಟೀ ಸಹಾಯ ಮಾಡುತ್ತದೆ.
ಜಿನ್ಸಿಂಗ್ ಟೀ
ಭಾರತ ಮಾತ್ರವಲ್ಲದೆ ವಿದೇಶಗಳಲ್ಲೂ ಬಳಕೆ ಮಾಡುವ ಗಿಡಮೂಲಿಕೆಗಳಲ್ಲಿ ಜಿನ್ಸಿಂಗ್ ಕೂಡ ಒಂದು. ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಜಿನ್ಸಿಂಗ್ಗಳು ಹೃದಯವನ್ನೂ ಸುರಕ್ಷಿತವಾಗಿಡುತ್ತದೆ. ಅಧ್ಯಯನದ ಪ್ರಕಾರ ಕ್ಯಾನ್ಸರ್ ಮನಿಯಂತ್ರಣಕ್ಕೂ ಜಿನ್ಸಿಂಗ್ ಟೀ ನೆರವಾಗಲಿದೆ.
(ಇಲ್ಲಿರುವ ಸಲಹೆಗಳು ಟಿವಿ9 ಡಿಜಿಟಲ್ನ ಅಭಿಪ್ರಾಯವಾಗಿರುವುದಿಲ್ಲ. ಟೈಮ್ಸ್ ನೌ ನ ವರದಿ ಆಧರಿಸಿ ಮಾಹಿತಿಯನ್ನು ನೀಡಲಾಗಿದೆ)
ಇದನ್ನೂ ಓದಿ:
ಹೃದಯ ಆರೋಗ್ಯವಾಗಿದ್ದರೆ ಜೀವನವೂ ಸುಂದರ; ಈ ಕ್ರಮಗಳನ್ನು ಅನುಸರಿಸಿ ಹೃದಯದ ಆರೋಗ್ಯ ಕಾಪಾಡಿಕೊಳ್ಳಿ
Published On - 7:36 am, Mon, 31 January 22