ಹೃದಯ ಆರೋಗ್ಯವಾಗಿದ್ದರೆ ಜೀವನವೂ ಸುಂದರ; ಈ ಕ್ರಮಗಳನ್ನು ಅನುಸರಿಸಿ ಹೃದಯದ ಆರೋಗ್ಯ ಕಾಪಾಡಿಕೊಳ್ಳಿ

ಹೃದಯ ಆರೋಗ್ಯವಾಗಿದ್ದರೆ ಜೀವನವೂ ಸುಂದರ; ಈ ಕ್ರಮಗಳನ್ನು ಅನುಸರಿಸಿ ಹೃದಯದ ಆರೋಗ್ಯ ಕಾಪಾಡಿಕೊಳ್ಳಿ
ಸಾಂಕೇತಿಕ ಚಿತ್ರ

ಹೆಚ್ಚು ನಾರು, ಹಸಿರು ತರಕಾರಿಗಳನ್ನು ಸೇವಿಸಿ. ಇದು ನಿಮ್ಮ ಹೃದಯವನ್ನು ಸದೃಢವಾಗಿ ಮತ್ತು ಆರೋಗ್ಯವಾಗಿಡುವಂತೆ ಮಾಡುತ್ತದೆ. ಪ್ರತಿದಿನ ಕನಿಷ್ಠ ಒಂದೆರಡು  ಹಣ್ಣು,  ತರಕಾರಿಯನ್ನು ಸೇವಿಸಿ.

TV9kannada Web Team

| Edited By: Pavitra Bhat Jigalemane

Jan 28, 2022 | 1:24 PM

ದೇಹದ ಸಂಪೂರ್ಣ ಆರೋಗ್ಯ ನಿಂತಿರುವುದು ಹೃದಯದ ಸುರಕ್ಷತೆಯ ಮೇಲೇಯೇ. ಹೀಗಾಗಿ ಹೃದಯ (Heart)ದ ಆರೋಗ್ಯದೆಡೆಗೆ ಒಂದಷ್ಟು ಹೆಚ್ಚಾಗಿಯೇ ಗಮನ ನೀಡುವುದು ಅಗತ್ಯವಾಗಿದೆ. ಅದಕ್ಕೆ ಆಹಾರವನ್ನು ಸರಿಯಾದ ಕ್ರಮದಲ್ಲಿ ಸೇವಿಸಬೇಕು. ಹೃದಯವನ್ನು ಸುರಕ್ಷಿತವಾಗಿಡುವ ಆಹಾರ ನಿಮ್ಮ ಡಯೆಟ್(Diet) ​ನಲ್ಲಿ ಇದ್ದರೆ ಒಳಿತು. ಈಗಂತೂ ಕೊರೋನಾ ಸಾಂಕ್ರಾಮಿಕ ಬಂದ ಮೇಲೆ ಹೃದಯದ ಆರೋಗ್ಯ ಸೇರಿದಂತೆ ದೇಹಕ್ಕೆ ರೋಗ ನಿರೋಧಕ ಶಕ್ತಿ (Immunity Power) ಎಷ್ಟು ಮುಖ್ಯ ಎನ್ನುವುದು ಅರಿವಾಗಿದೆ. ವರದಿಯ ಪ್ರಕಾರ ಸಾಂಕ್ರಾಮಿಕ ಇಲ್ಲದಿದ್ದರೂ ಜಗತ್ತಿನಲ್ಲಿ ಸರಿಸುಮಾರು  9 ಮಿಲಿಯನ್​ಗೂ ಹೆಚ್ಚು ಜನ ಹೃದಯ ಸಂಬಂಧಿ ಕಾಯಿಲೆಯಿಂದ ಸಾವನ್ನಪ್ಪುತ್ತಿದ್ದಾರೆ. ಅದರಲ್ಲಿ  30 ರಿಂದ 70 ವರ್ಷ ವಯಸ್ಸಿನವರು ಸುಮಾರು 6 ಮಿಲಿಯನ್​ ಜನರು ಹೃದಯದ ಅನಾರೋಗ್ಯದಿಂದ ಸಾವನ್ನಪ್ಪುತ್ತಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.  ಆದ್ದರಿಂದ ಕೆಲವೊಂದು ಆಹಾರಗಳನ್ನು ಹೃದಯದ ಆರೋಗ್ಯಕ್ಕೆಂದು ಅಗತ್ಯವಾಗಿ ಸೇವಿಸಬೇಕು ಎನ್ನುತ್ತಾರೆ ತಜ್ಞರು. ಅದಕ್ಕೆ ಈ 5 ಅಂಶಗಳು ನಿಮಗೆ ಸಹಕಾರಿಯಾಗಬಲ್ಲದು.

ಮಾನಸಿಕ ಆರೋಗ್ಯದೆಡೆಗೆ ಗಮನವಿರಲಿ: ದಿನಕಳೆದಂತೆ, ಜವಾಬ್ದಾರಿಗಳು ಹೆಚ್ಚಾಗುತ್ತವೆ. ಇದರಿಂದ ಮನಸ್ಸಿನ ಮೇಲಿನ ಒತ್ತಡವೂ ಅಧಿಕವಾಗುತ್ತದೆ. ಇದು ನಿಮ್ಮ ಹೃದಯದ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರಲಿದೆ. ಆದ್ದರಿಂದ ನಿಮ್ಮ ಮಾನಸಿಕ ಸ್ಥಿಮಿತದ ಬಗ್ಗೆ ಗಮನವಿರಲಿ. ಕಾಲಕಾಲಕ್ಕೆ ವೈದ್ಯರನ್ನು ಸಂಪರ್ಕಿಸಿ ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ನ್ಯಟ್ರೀಯಂಟ್ಸ್​ಗಳು, ಪ್ರೋಟೀನ್​ ಅಂಶಗಳು ದೊರೆಯುತ್ತಿವೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಯೋಗ, ಧ್ಯಾನದಂತಹ ಅಭ್ಯಾಸಗಳನ್ನು ರೂಢಿಸಿಕೊಳ್ಳಿ.

ಅತಿಯಾದ ಉಪ್ಪಿನ ಸೇವನೆ ಬೇಡ: ದೇಹದಲ್ಲಿನ ರಕ್ತದೊತ್ತಡವನ್ನು ನಿಯಂತ್ರಿಸಲು ಉಪ್ಪಿನ ಸೇವನೆ ಅಗತ್ಯವಾಗಿರುತ್ತದೆ. ಹೀಗಾಗಿ ಹೆಚ್ಚು ಉಪ್ಪು ತಿನ್ನುವ ಮುನ್ನ ಎಚ್ಚರವಹಿಸಿ. ಇದು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಿ ಹೃದಯಕ್ಕೆ ಹಾನಿ ತರಬಹುದು. ಕೇವಲ ಉಪ್ಪು ಮಾತ್ರವಲ್ಲ, ಉಪ್ಪಿನ ಅಂಶವಿರುವ ಪದಾರ್ಥಗಳ ಸೇವನೆಯ ಬಗ್ಗೆಯೂ ಗಮನವಿರಲಿ. ಉದಾಹರಣೆಗೆ ಉಪ್ಪಿನಕಾಯಿ, ಪಾಪಡ್​ ಸೇರಿದಂತೆ ಇತರ ಹೆಚ್ಚು ಉಪ್ಪಿರುವ ಆಹಾರಗಳು. ನೆನಪಿಡಿ ಅತಿಯಾದ ಉಪ್ಪಿನ ಸೇವನೆ ಕೇವಲ ಹೃದಯಕ್ಕೆ ಮಾತ್ರವಲ್ಲ ಕಿಡ್ನಿಗೂ ಹಾನಿಯುಂಟು ಮಾಡುತ್ತದೆ.

ಸರಿಯಾದ ನಿದ್ದೆ: ನಿದ್ದೆ ದೇಹದ ಸರ್ವಾಂಗೀಣ ಆರೋಗ್ಯವನ್ನು ಕಾಪಾಡುತ್ತದೆ. ನಿದ್ದೆಯ ಕೊರತೆ ನಿಮ್ಮ ಸೌಂದರ್ಯದ ಮೇಲೆ ಮಾತ್ರವಲ್ಲ,  ನಿಮ್ಮ ಮಾಸನಸಿಕ ಆರೋಗ್ಯ, ನಿಮ್ಮ ಕ್ರಿಯೇಟಿವಿಟಿಯನ್ನೂ ಕುಗ್ಗಿಸುತ್ತದೆ. ಆದ್ದರಿಂದ ದಿನಕ್ಕೆ ಕನಿಷ್ಠ 7-8ಗಂಟೆ ನಿದ್ದೆ ಮಾಡಿ. ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಮಧ್ಯಾಹ್ನದ ನಿದ್ದೆಯನ್ನು ತಪ್ಪಿಸಿ. ಜತೆಗೆ ಮಲಗುವ ಮೊದಲು ಕ್ಯಾಪಿನ್​ ಅಂಶವಿರುವ ಆಹಾರಗಳನ್ನು ಸೇವಿಸಬೇಡಿ.

ಹೃದಯವನ್ನು ಸುರಕ್ಷಿತವಾಗಿಡುವ ಆಹಾರ : ಹೆಚ್ಚು ನಾರು, ಹಸಿರು ತರಕಾರಿಗಳನ್ನು ಸೇವಿಸಿ. ಇದು ನಿಮ್ಮ ಹೃದಯವನ್ನು ಸದೃಢವಾಗಿ ಮತ್ತು ಆರೋಗ್ಯವಾಗಿಡುವಂತೆ ಮಾಡುತ್ತದೆ. ಪ್ರತಿದಿನ ಕನಿಷ್ಠ ಒಂದೆರಡು  ಹಣ್ಣು,  ತರಕಾರಿಯನ್ನು ಸೇವಿಸಿ. ಆದಷ್ಟು ತರಕಾರಿಗಳನ್ನು ಹಸಿಯಾಗಿಯೇ ಸೇವಸಿ. ಇದು ನಿಮ್ಮ ಆರೋಗ್ಯವನ್ನು  ಕಾಪಾಡುತ್ತದೆ.  ನಾನ್​ವೆಜ್​ ತಿನ್ನುವ ಮೊದಲು ಯೋಚಿಸಿ. ಏಕೆಂದರೆ ಮಾಂಸಾಹಾರಗಳಲ್ಲಿ ಕ್ಯಾಲೋರೀಸ್​ ಹೆಚ್ಚಅಗಿ ಇರುತ್ತದೆ. ಇವು ಹೃದಯಕ್ಕೆ ಹಾನಿಯುಂಟು ಮಾಡಬಹುದು.

ಕ್ರೀಯಾಶೀಲರಾಗಿರಿ: ಸದಾ ಕಾಲ ಕುಳಿತುಕೊಂಡು ಕೆಲಸ ಮಾಡುವುದು ಹೃದಯಕ್ಕೆ ಒಳಿತಲ್ಲ. ಕೆಲಸದ ಮಧ್ಯೆ ಚಿಕ್ಕದಾದ ವಿರಾಮ ಪಡೆದುಕೊಳ್ಳಿ ಪ್ರತೀ ಗಂಟೆಗೊಮ್ಮೆಯಾದರೂ 5 ನಿಮಿಷ ಬ್ರೇಕ್​ ಪಡೆದುಕೊಳ್ಳಿ. ವಾರದಲ್ಲಿ  ಮೂರರಿಂದ ಐದು ದಿನ ವ್ಯಾಯಾಮ ಮಾಡಿ, ಹೆಚ್ಚು ನಡೆದಾಡಿ. ಇದು ನಿಮ್ಮ ದೆಹದಲ್ಲಿ ಸೇಖರಣೆಯಾದ ಅನಗತ್ಯ ಕೊಬ್ಬನ್ನು ನಿವಾರಿಸುತ್ತದೆ. ಜತೆಗೆ ಮಧುಮೇಹ, ಕಾಲುನೋವಿನಂತಹ ಸಮಸ್ಯೆಗಳಿಂದಲೂ ದೂರವಿಡುತ್ತದೆ.

(ಇಲ್ಲಿರುವ ಸಲಹೆಗಳು ಟಿವಿ9 ಡಿಜಿಟಲ್​ನ ಅಭಿಪ್ರಾಯವಾಗಿರುವುದಿಲ್ಲ. ಟೈಮ್ಸ್​ನೌ.ನ ವರದಿಯನ್ನು ಆಧರಿಸಿ ಮಾಹಿತಿಯನ್ನು ನೀಡಲಾಗಿದೆ.)

ಇದನ್ನೂ ಓದಿ:

ರಾತ್ರಿ ನಿದ್ದೆ ಬರದೆ ಒದ್ದಾಡುತ್ತಿದ್ದರೆ ಅಸಮರ್ಪಕ ಆಹಾರಶೈಲಿ ಕಾರಣವಿರಬಹದು; ಎಚ್ಚರವಿರಲಿ

Follow us on

Related Stories

Most Read Stories

Click on your DTH Provider to Add TV9 Kannada