ಮೈಗ್ರೇನ್ ಸಮಸ್ಯೆಗೆ ಪರಿಹಾರವಾಗಲಿದೆ ಶಂಖಪುಷ್ಪ; 6 ವಿಧಾನಗಳಲ್ಲಿ ಈ ಹೂವನ್ನು ಬಳಸಿ

ಮೈಗ್ರೇನ್ ಸಮಸ್ಯೆಗೆ ಪರಿಹಾರವಾಗಲಿದೆ ಶಂಖಪುಷ್ಪ; 6 ವಿಧಾನಗಳಲ್ಲಿ ಈ ಹೂವನ್ನು ಬಳಸಿ
ಪ್ರಾತಿನಿಧಿಕ ಚಿತ್ರ

Health Tips: ಉರಿಯೂತ ನಿವಾರಕವನ್ನು ಹೊರತುಪಡಿಸಿ, ಶಂಖಪುಷ್ಪ ಬ್ಯಾಕ್ಟೀರಿಯಾ ವಿರೋಧಿ ಮತ್ತು ನೋವು ನಿವಾರಕ ಗುಣಗಳನ್ನು ಹೊಂದಿದೆ. ಇದು ದೇಹದ ಮತ್ತು ವಿಶೇಷವಾಗಿ ತಲೆಯ ನೋವನ್ನು ತೆಗೆದುಹಾಕುವ ಸಾಮರ್ಥ್ಯವನ್ನು ಹೊಂದಿದೆ.

TV9kannada Web Team

| Edited By: preethi shettigar

Jan 31, 2022 | 10:48 AM

ಶಂಖಪುಷ್ಪ ಹೂವಿನ ಬಗ್ಗೆ ನಾವೆಲ್ಲರೂ ಕೇಳಿದ್ದೇವೆ. ಈ ಹೂವನ್ನು ಮನೆಗಳ ಅಂಗಳಗಳಲ್ಲಿ ನೆಡಲಾಗುತ್ತದೆ ಮತ್ತು ಇದು ನೋಡಲು ಕೂಡ ಸುಂದರವಾಗಿ ಕಾಣುತ್ತದೆ. ಇತ್ತೀಚಿನ ದಿನಗಳಲ್ಲಿ ಮನೆಗಳ ಅಂದ ಹೆಚ್ಚಿಸಲು ಶಂಖಪುಷ್ಪ(Aparajita) ಗಿಡವನ್ನು ಹೆಚ್ಚಾಗಿ ನೆಡಲಾಗುತ್ತಿದೆ. ಆದರೆ ಸುಂದರವಾಗಿ ಕಾಣುವ ಈ ಹೂವು ಆರೋಗ್ಯಕ್ಕೂ ಪ್ರಯೋಜನಕಾರಿ ಎಂಬುದು ನಿಮಗೆ ತಿಳಿದಿದೆಯೇ. ಹೌದು, ಆಯುರ್ವೇದದಲ್ಲಿ ಶಂಖಪುಷ್ಪದ ಹಲವು ಗುಣಗಳನ್ನು ಹೇಳಲಾಗಿದೆ. ಬಿಳಿ ಮತ್ತು ನೀಲಿ ಹೂವುಗಳನ್ನು(Flower) ಹೊಂದಿರುವ ಶಂಖಪುಷ್ಪ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ತೂಕವನ್ನು ಕಡಿಮೆ ಮಾಡುವುದರಿಂದ ಹಿಡಿದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವವರೆಗೆ ಶಂಖಪುಷ್ಪ ಕೊಡುಗೆ ಅಪಾರ. ಆದರೆ ಇದು ಮೈಗ್ರೇನ್‌ಗೆ(migraine) ಸಹ ಉಪಯುಕ್ತವಾಗಿದೆ.

ಉರಿಯೂತ ನಿವಾರಕವನ್ನು ಹೊರತುಪಡಿಸಿ, ಶಂಖಪುಷ್ಪ ಬ್ಯಾಕ್ಟೀರಿಯಾ ವಿರೋಧಿ ಮತ್ತು ನೋವು ನಿವಾರಕ ಗುಣಗಳನ್ನು ಹೊಂದಿದೆ. ಇದು ದೇಹದ ಮತ್ತು ವಿಶೇಷವಾಗಿ ತಲೆಯ ನೋವನ್ನು ತೆಗೆದುಹಾಕುವ ಸಾಮರ್ಥ್ಯವನ್ನು ಹೊಂದಿದೆ. ಇಂದು ನಾವು ಶಂಖಪುಷ್ಪ ಬಳಕೆಯಿಂದ ಮನೆಯಲ್ಲಿ ಕುಳಿತು ಮೈಗ್ರೇನ್ ಅನ್ನು ಹೇಗೆ ಹೋಗಲಾಡಿಸಬಹುದು ಎಂದು ತಿಳಿದುಕೊಳ್ಳೋಣ.

ಹಾಲಿನೊಂದಿಗೆ ಬಳಸಿ

ನೀವು ಮೈಗ್ರೇನ್ ನೋವಿನಿಂದ ಬಳಲುತ್ತಿದ್ದರೆ. ಪ್ರತಿ ರಾತ್ರಿ ಮಲಗುವ ಮೊದಲು, 1 ಗ್ಲಾಸ್ ಬೆಚ್ಚಗಿನ ಹಾಲಿಗೆ 1-2 ಗ್ರಾಂ ಶಂಖಪುಷ್ಪ ಬೇರಿನ ಪುಡಿಯನ್ನು ಮಿಶ್ರಣ ಮಾಡಿ. ಮತ್ತು ಇದನ್ನು ಸೇವಿಸಿ. ನೀವು 2 ರಿಂದ 3 ದಿನಗಳಲ್ಲಿ ಮೈಗ್ರೇನ್‌ನಿಂದ ಸಾಕಷ್ಟು ಪರಿಹಾರವನ್ನು ಅನುಭವಿಸುವಿರಿ.

ಬಿಳಿ ಹೂವು

ಶಂಖಪುಷ್ಪ ಹೂವಿನಿಂದ ತಲೆನೋವು ಮತ್ತು ಮೈಗ್ರೇನ್ ಸಮಸ್ಯೆಯನ್ನು ಸುಲಭವಾಗಿ ನಿವಾರಿಸಬಹುದು. ನೋವು ನಿವಾರಣೆಗೆ ಶಂಖಪುಷ್ಪ ಬಿಳಿ ಹೂವುಗಳನ್ನು ರುಬ್ಬಿ ಅದಕ್ಕೆ ಸ್ವಲ್ಪ ಶ್ರೀಗಂಧದ ಪುಡಿಯನ್ನು ಸೇರಿಸಿ ಮತ್ತೆ ಆ ಮಿಶ್ರಣವನ್ನು ತಲೆಗೆ ಹಚ್ಚಿಕೊಂಡರೆ ನೀವೇ ವ್ಯತ್ಯಾಸವನ್ನು ಕಾಣುತ್ತೀರಿ.

ಶಂಖಪುಷ್ಪ ಎಲೆಗಳ ಉಪಯೋಗಗಳು

ಮೈಗ್ರೇನ್ ಮತ್ತು ತಲೆನೋವಿನಿಂದ ನೀವು ಪರಿಹಾರವನ್ನು ಪಡೆಯಲು ಬಯಸಿದರೆ, ಶಂಖಪುಷ್ಪ ಎಲೆಗಳು ಇದಕ್ಕೆ ಪರಿಣಾಮಕಾರಿ. ಮೊದಲನೆಯದಾಗಿ, ಎಲೆಗಳನ್ನು ಜಜ್ಜಿ ನಂತರ ಅದಕ್ಕೆ 1 ಹನಿ ಶುಂಠಿ ರಸವನ್ನು ಸೇರಿಸಿ ಮತ್ತು ಈ ಸಿದ್ಧಪಡಿಸಿದ ಪೇಸ್ಟ್ ಅನ್ನು ನಿಮ್ಮ ತಲೆಯ ಮೇಲೆ ಹಚ್ಚಿ. ಇದು ನಿಮಗೆ ನೋವಿನಿಂದ ತ್ವರಿತ ಪರಿಹಾರವನ್ನು ನೀಡುತ್ತದೆ.

ಶಂಖಪುಷ್ಪ ಬೇರು

ಮೈಗ್ರೇನ್‌ನಿಂದ ಪರಿಹಾರ ಪಡೆಯಲು ನೀವು ಶಂಖಪುಷ್ಪ ಬೇರನ್ನು ಸಹ ಬಳಸಬಹುದು. ಶಂಖಪುಷ್ಪ ಬೇರನ್ನು ಚೆನ್ನಾಗಿ ರುಬ್ಬಿ ಪೇಸ್ಟ್ ಮಾಡಿ. ನಂತರ ಅದಕ್ಕೆ ಸ್ವಲ್ಪ ಒಣ ಶುಂಠಿ ಪುಡಿಯನ್ನು ಸೇರಿಸಿ. ಇದರ ನಂತರ, ಈ ಸಿದ್ಧಪಡಿಸಿದ ಮಿಶ್ರಣವನ್ನು ನಿಮ್ಮ ತಲೆಯ ಮೇಲೆ ಅನ್ವಯಿಸುವ ಮೂಲಕ ಪರಿಹಾರವನ್ನು ಅನುಭವಿಸಿ.

ತಲೆ ದಿಂಬಿನ ಕೆಳಗೆ ಇರಿಸಿ

ನೀವು ಮೈಗ್ರೇನ್ ನೋವಿನಿಂದ ಬಳಲುತ್ತಿದ್ದರೆ, ರಾತ್ರಿ ಮಲಗುವಾಗ ಶಂಖಪುಷ್ಪ ಹೂವುಗಳು ಅಥವಾ ಅದರ ಎಲೆಗಳನ್ನು ನಿಮ್ಮ ದಿಂಬಿನ ಕೆಳಗೆ ಇರಿಸಿ. ಅದು ನಿಮಗೆ ಉತ್ತಮ ಪರಿಹಾರವನ್ನು ನೀಡುತ್ತದೆ.

ಶಂಖಪುಷ್ಪ ಹೂವಿನ ಚಹಾ

ನೋವಿನಿಂದ ಪರಿಹಾರ ಪಡೆಯಲು, ಶಂಖಪುಷ್ಪ ಹೂವುಗಳಿಂದ ಮಾಡಿದ ಚಹಾವನ್ನು ತಯಾರಿಸಿ. ಇದರ ಸೇವನೆಯಿಂದ ದಣಿವು ಸಹ ಹೋಗುತ್ತದೆ. ಈ ಚಹಾವನ್ನು ಮಾಡಲು, ನೀವು 1 ಕಪ್ ನೀರನ್ನು ತೆಗೆದುಕೊಳ್ಳಿ, ನಂತರ ಅದಕ್ಕೆ ಶಂಖಪುಷ್ಪ ಹೂವುಗಳನ್ನು ಸೇರಿಸಿ ಚೆನ್ನಾಗಿ ಕುದಿಸಿ ಮತ್ತು ಫಿಲ್ಟರ್ ಮಾಡಿದ ನಂತರ ಕುಡಿಯಿರಿ.

ಇದನ್ನೂ ಓದಿ: Health Tips: ಈ 5 ಆಹಾರ ಪದಾರ್ಥಗಳು ಮೂಳೆಗಳನ್ನು ದುರ್ಬಲಗೊಳಿಸುತ್ತವೆ; ಆರೋಗ್ಯದ ಬಗ್ಗೆ ಸದಾ ಕಾಳಜಿ ಇರಲಿ

ಶುಂಠಿ ನೀರು ಕುಡಿಯುವ ಅಭ್ಯಾಸ ಇದೆಯೇ? ಆರೋಗ್ಯಕರ ಬದಲಾವಣೆಯ ಬಗ್ಗೆ ತಿಳಿಯಿರಿ

Follow us on

Related Stories

Most Read Stories

Click on your DTH Provider to Add TV9 Kannada