
ತ್ವಚೆಯ ಆರೋಗ್ಯದ ಬಗ್ಗೆ ಎಲ್ಲರಿಗೂ ಕಾಳಜಿ ಇರುತ್ತದೆ. ಅದರಲ್ಲೂ ಹೆಣ್ಮಕ್ಕಳು ನಮ್ಮ ತ್ವಚೆ ನಮ್ಮ ತ್ವಚೆ ಚಂದ್ರನಂತೆ ಫಳ ಫಳ ಹೊಳೆಯಬೇಕು, ಕ್ಲೀಯರ್ ಸ್ಕಿನ್ ನಮ್ಮದಾಗಬೇಕು ಎಂದು ತುಸು ಹೆಚ್ಚೇ ಬಯಸುತ್ತಾರೆ. ಈ ಮುಖದ ಹೊಳಪನ್ನು ಹೆಚ್ಚಿಸುವ ಸಲುವಾಗಿ ದುಬಾರಿ ಉತ್ಪನ್ನಗಳು, ಸೌಂದರ್ಯ ಚಿಕಿತ್ಸೆಗಳನ್ನು ಆಶ್ರಯಿಸುತ್ತಾರೆ. ಆದರೆ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಲು ಒಳಗಿನಿಂದಲೇ ಪೋಷಣೆಯನ್ನು ನೀಡಬೇಕು. ಅವುಗಳಲ್ಲಿ ಈ ಒಂದಷ್ಟು ಪಾನೀಯಗಳು (Drinks For Glowing Skin) ಕೂಡ ಒಂದು. ಈ ಪಾನೀಯಗಳನ್ನು ಪ್ರತಿನಿತ್ಯ ಬೆಳಗ್ಗೆ ಸೇವನೆ ಮಾಡುವುದರಿಂದ ಯಾವುದೇ ದುಬಾರಿ ವೆಚ್ಚವಿಲ್ಲದೆ ಬಲು ಸುಲಭವಾಗಿ ನೀವು ನಿಮ್ಮ ತ್ವಚೆಯ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು. ಮುಖದ ಕಾಂತಿಯನ್ನು ಹೆಚ್ಚಿಸಲು ಸಹಕಾರಿಯಾಗಿರುವ ಆ ಪಾನೀಯಗಳು ಯಾವುವು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ನಿಂಬೆ ನೀರು: ನಿಂಬೆಹಣ್ಣು ವಿಟಮಿನ್ ಸಿ ಯ ಉತ್ತಮ ಮೂಲವಾಗಿದೆ, ಈ ವಿಟಮಿನ್ ಸಿ ಕಾಲಜನ್ ಉತ್ಪಾದನೆಗೆ ಅತ್ಯಗತ್ಯ. ಅಲ್ಲದೆ ನಿಂಬೆ ರಸದಲ್ಲಿ ನೈಸರ್ಗಿಕ ಸಂಕೋಚನ ಮತ್ತು ಹೊಳಪು ನೀಡುವ ಗುಣವಿದ್ದು, ಇದು ಚರ್ಮದ ಹೊಳಪನ್ನು ಹೆಚ್ಚಿಸಲು ಮತ್ತು ಕಲೆಗಳನ್ನು ನಿವಾರಿಸಲು ಸಹಕಾರಿ. ಹಾಗಾಗಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ ಸ್ವಲ್ಪ ನಿಂಬೆ ರಸ ಹಾಕಿ ಕುಡಿಯಿರಿ. ಇದು ಚರ್ಮದ ಕಾಂತಿಯನ್ನು ಹೆಚ್ಚಿಸುವುದರ ಜೊತೆಗೆ ದೇಹದಿಂದ ವಿಷವನ್ನು ಹೊರ ಹಾಕಲು ಸಹಾಯ ಮಾಡುತ್ತದೆ.
ಗ್ರೀನ್ ಟೀ: ಗ್ರೀನ್ ಟೀ ತೂಕ ಇಳಿಕೆಗೆ ಮಾತ್ರವಲ್ಲದೆ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹ ತುಂಬಾನೇ ಸಹಕಾರಿಯಾಗಿದೆ. ಗ್ರೀನ್ ಟೀ ಉತ್ಕರ್ಷಣ ನಿರೋಧಕಗಳಲ್ಲಿ ಅದರಲ್ಲೂ ಕ್ಯಾಟೆಚಿನ್‌ನ ಸಮೃದ್ಧ ಮೂಲವಾಗಿದ್ದು, ಇದು ಯುವಿ ಕಿರಣಗಳಿಂದ ಉಂಟಾಗುವ ಹಾನಿಯಿಂದ ಚರ್ಮವನ್ನು ರಕ್ಷಿಸುತ್ತದೆ, ಉರಿಯೂತವನ್ನು ಕಡಿಮೆ ಮಾಡುತ್ತದೆ, ಚರ್ಮದ ಕೋಶಗಳನ್ನು ಆರೋಗ್ಯಕರವಾಗಿರಿಸುತ್ತದೆ. ಹಾಗಾಗಿ ಪ್ರತಿದಿನ ಬೆಳಗ್ಗೆ ಗ್ರೀನ್ ಟೀ ಕುಡಿಯುವ ಮೂಲಕ ತ್ವಚೆಯ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು.
ಇದನ್ನೂ ಓದಿ: ನಿಮ್ಮ ಮುಖ ಪಳ ಪಳ ಹೊಳೆಯಬೇಕೆಂದರೆ ಪ್ರತಿದಿನ ಬೆಳಗ್ಗೆ ಈ ಕೆಲಸಗಳನ್ನು ಮಾಡಬೇಕು
ಎಳನೀರು: ಎಳನೀರು ದೇಹವನ್ನು ರಿಫ್ರೆಶ್ ಮಾಡುವುದಲ್ಲದೆ, ಇದು ನಿಮ್ಮ ಚರ್ಮಕ್ಕೆ ನೈಸರ್ಗಿಕ ಮಾಯಿಶ್ಚರೈಸರ್ ಆಗಿ ಕಾರ್ಯನಿರ್ವಹಿಸುತ್ತದೆ. ಅಲ್ಲದೆ ಎಳನೀರು ಪೊಟ್ಯಾಸಿಯಂ, ಮೆಗ್ನೇಸಿಯಂ ಮತ್ತು ಕ್ಯಾನ್ಸಿಯಂನಿಂದ ಸಮೃದ್ಧವಾಗಿದ್ದು, ಇದು ದೇಹಕ್ಕೆ ಜಲಸಂಚಯನವನ್ನು ಒದಗಿಸುತ್ತದೆ. ಹೀಗೆ ದೇಹವು ಹೈಡ್ರೇಟ್ ಆದಾಗ ಚರ್ಮವೂ ಹೊಳೆಯುತ್ತದೆ. ಜೊತೆಗೆ ಈ ಪಾನೀಯ ಜೀವಕೋಶದ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ವಯಸ್ಸಾಗುವಿಕೆಯ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಹಾಗಾಗಿ ಪ್ರತಿದಿನ ಬೆಳಗ್ಗೆ ಎಳನೀರು ಕುಡಿಯಿರಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ