AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಳೆಹಣ್ಣಿನ ಸಿಪ್ಪೆಗೆ ಈ 2 ವಸ್ತುಗಳನ್ನು ಬೆರೆಸಿ ಮುಖಕ್ಕೆ ಹಚ್ಚಿದ್ರೆ ಮುಖ ಹೊಳೆಯುವುದು ಖಂಡಿತ

ಬಾಳೆಹಣ್ಣು ಆರೋಗ್ಯಕ್ಕೆ ಒಳ್ಳೆಯದು. ಆದರೆ ಅದರ ಸಿಪ್ಪೆ ಕೂಡ ಮುಖಕ್ಕೆ ಒಳ್ಳೆಯದು, ಬಾಳೆಹಣ್ಣಿನ ಸಿಪ್ಪೆಯನ್ನು ಎಸೆಯುವ ಬದಲು ಫೇಸ್ ಪ್ಯಾಕ್ ಮಾಡಿ. ಅದನ್ನು ಮುಖಕ್ಕೆ ಹಚ್ಚಿದ್ರೆ ಚರ್ಮದ ಹೊಳೆಯುತ್ತದೆ. ಅದಕ್ಕಾಗಿ ಮನೆಯಲ್ಲೇ ಇದನ್ನು ಹೇಗೆ ತಯಾರಿಸುವುದು ಎಂಬ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ. ಈ ಕ್ರಮಗಳನ್ನು ಅನುಸರಿಸಿದರೆ ಮುಖದಲ್ಲಿ ಬದಲಾವಣೆ ಕಾಣಬಹುದು.

ಬಾಳೆಹಣ್ಣಿನ ಸಿಪ್ಪೆಗೆ ಈ 2 ವಸ್ತುಗಳನ್ನು ಬೆರೆಸಿ ಮುಖಕ್ಕೆ ಹಚ್ಚಿದ್ರೆ ಮುಖ ಹೊಳೆಯುವುದು ಖಂಡಿತ
ಸಾಂದರ್ಭಿಕ ಚಿತ್ರ
ಸಾಯಿನಂದಾ
|

Updated on: Aug 23, 2025 | 3:21 PM

Share

ಹೊಳೆಯುವ ಚರ್ಮ (Face Pack) ಯಾರಿಗೆ ಬೇಡ ಹೇಳಿ, ಎಲ್ಲರೂ ಅಂದವಾಗಿ ಕಾಣಬೇಕು ಎಂದು ಸಿಕ್ಕ ಸಿಕ್ಕ ಕ್ರೀಮ್​​ಗಳನ್ನು ಹಚ್ಚುತ್ತಾರೆ. ಆದರೆ ಅದು ಮುಖ ಅಂದವನ್ನು ಹೆಚ್ಚಿಸುವ ಬದಲು, ಅಡ್ಡ ಪರಿಣಾಮಗಳನ್ನು ಉಂಟು ಮಾಡುತ್ತದೆ. ಅದಕ್ಕಾಗಿ ಮನೆಯಲ್ಲೇ ಈ ಸುಲಭ ವಿಧಾನವನ್ನು ಬಳಸಬಹುದು. ಬಾಳೆಹಣ್ಣು ತಿನ್ನುವುದರಿಂದ ಆರೋಗ್ಯ ಹೆಚ್ಚುತ್ತದೆ. ಆದರೆ ಅದರ ಬಾಳೆಹಣ್ಣಿನ ಸಿಪ್ಪೆ (Banana Peel) ಎಸೆಯುತ್ತೇವೆ. ಅದನ್ನು ಎಸೆಯುವ ಬದಲು ಹೀಗೆ ಉಪಯೋಗಿಸಬಹುದು. ಬಾಳೆಹಣ್ಣಿನ ಸಿಪ್ಪೆಗಳಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಈ ಸಿಪ್ಪೆಗಳನ್ನು ಮುಖಕ್ಕೆ ಸರಿಯಾಗಿ ಹಚ್ಚಿದರೆ, ಮುಖವು ಶುದ್ಧವಾಗುತ್ತದೆ, ಚರ್ಮದಿಂದ ಸತ್ತ ಚರ್ಮದ ಕೋಶಗಳು ಹೊರಬರುತ್ತವೆ. ಇದರಿಂದ ಚರ್ಮವು ಜಲಸಂಚಯನಗೊಳ್ಳುತ್ತದೆ. ಬಿಸಿಲಿನಿಂದ ಮುಖದ ಮೇಲೆ ಬರುವ ಕಪ್ಪು ಕಲೆಗಳನ್ನು ತೆಗೆದು ಹಾಕುತ್ತದೆ. ಟ್ಯಾನಿಂಗ್ ಕಡಿಮೆಯಾಗುತ್ತದೆ ಮತ್ತು ಮುಖವು ಹೊಳೆಯುವಂತೆ ಮಾಡುತ್ತದೆ. ಅದಕ್ಕಾಗಿ ಮನೆಯಲ್ಲೇ ಬಾಳೆಹಣ್ಣಿನ ಸಿಪ್ಪೆಗಳಿಂದ ಫೇಸ್ ಪ್ಯಾಕ್ ಮಾಡಬಹುದು. ಬಾಳೆಹಣ್ಣಿನ ಸಿಪ್ಪೆಗಳಿಂದ ಫೇಸ್ ಪ್ಯಾಕ್ ತಯಾರಿಸುವುದು ಹೇಗೆ ಮತ್ತು ಅದನ್ನು ಮುಖಕ್ಕೆ ಹಚ್ಚುವುದು ಹೇಗೆ ? ಎಂಬುದನ್ನು ಪ್ರಕೃತಿ ಚಿಕಿತ್ಸಕ ಮನೋಜ್ ದಾಸ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಬಾಳೆಹಣ್ಣಿನ ಸಿಪ್ಪೆಯ ಫೇಸ್ ಪ್ಯಾಕ್

ಈ ಫೇಸ್ ಪ್ಯಾಕ್ ಮಾಡಲು, ಮೊದಲು ಬಾಳೆಹಣ್ಣಿನ ಸಿಪ್ಪೆಯನ್ನು ತೆಗೆದುಕೊಂಡು, ಅದನ್ನು ನುಣ್ಣಗೆ ಕತ್ತರಿಸಿ ಪುಡಿಮಾಡಿ ಪೇಸ್ಟ್ ಮಾಡಿ. ಈ ಮಿಶ್ರಣವಾದ ಬಾಳೆಹಣ್ಣಿನ ಸಿಪ್ಪೆಗೆ ಅರ್ಧ ಚಮಚ ಅಕ್ಕಿ ಹಿಟ್ಟು ಮತ್ತು ಅರ್ಧ ಚಮಚ ಸಕ್ಕರೆ ಬೆರೆಸಿ ಪೇಸ್ಟ್ ತಯಾರಿಸಿ. ನಂತರ ಮುಖಕ್ಕೆ ಅರ್ಧ ಗಂಟೆ ಹಚ್ಚಿದ ನಂತರ ತೊಳೆಯಬಹುದು. ಈ ಫೇಸ್ ಪ್ಯಾಕ್ ಅನ್ನು ನಿಯಮಿತವಾಗಿ ಹಚ್ಚಿದರೆ ಇದರ ಪ್ರಯೋಜನಗಳು ಗೋಚರಿಸುತ್ತವೆ. ಅಕ್ಕಿಯಲ್ಲಿ ಪಿಷ್ಟವಿದ್ದು ಅದು ಚರ್ಮಕ್ಕೆ ಹೊಳಪು ಹಾಗೂ ಬಿಗಿಗೊಳಿಸುವ ಗುಣಗಳನ್ನು ನೀಡುತ್ತದೆ, ಸಕ್ಕರೆಯಲ್ಲಿ ಗ್ಲೈಕೋಲಿಕ್ ಆಮ್ಲವಿದೆ ಮತ್ತು ಬಾಳೆಹಣ್ಣಿನಲ್ಲಿ ಬಹಳಷ್ಟು ಪೊಟ್ಯಾಸಿಯಮ್ ಇರುತ್ತದೆ. ಮುಖದ ಮೇಲೆ ಕಲೆಗಳು, ನಸುಕಂದು ಮಚ್ಚೆಗಳು, ಟ್ಯಾನಿಂಗ್ ಇದ್ದರೆ ತಕ್ಷಣ ತೆಗೆದು ಹಾಕುತ್ತದೆ.

ಇದನ್ನೂ ಓದಿ
Image
ಮಕ್ಕಳಿಗೆ ಹೆಚ್ಚು ಫೋನ್‌ ನೋಡಲು ಬಿಡ್ಬೇಡಿ; ಯಾಕೆ ಗೊತ್ತಾ?
Image
ಮಳೆಗಾಲದ ಅನಾರೋಗ್ಯಕ್ಕೆ ಪತಂಜಲಿ ಮನೆಮದ್ದುಗಳು
Image
ನೀವು ಮಲಗುವ ಭಂಗಿ ಬಹಿರಂಗಪಡಿಸುತ್ತೆ ನಿಮ್ಮ ವ್ಯಕ್ತಿತ್ವದ ರಹಸ್ಯ
Image
ಈ ಒಂದು ಸಣ್ಣ ಅಭ್ಯಾಸ ರೂಡಿಸಿಕೊಂಡ್ರೆ ಮಲಬದ್ಧತೆ ಸಮಸ್ಯೆನೇ ಬರಲ್ಲ

ಇಲ್ಲಿದೆ ನೋಡಿ ವಿಡಿಯೋ:

ಇದನ್ನೂ ಓದಿ: ಮಕ್ಕಳಿಗೆ ಹೆಚ್ಚು ಫೋನ್‌ ನೋಡಲು ಬಿಡ್ಬೇಡಿ; ಯಾಕೆ ಗೊತ್ತಾ?

ಇದನ್ನು ಹಚ್ಚುವುದು ಹೇಗೆ?

  • ಬಾಳೆಹಣ್ಣಿನ ಸಿಪ್ಪೆಯ ಹಿಂಭಾಗವನ್ನು ಹಾಗೆಯೇ ಮುಖದ ಮೇಲೆ ಉಜ್ಜಬಹುದು. ಈ ಸಿಪ್ಪೆಯನ್ನು ಮುಖದ ಮೇಲೆ ಉಜ್ಜಿದರೆ, ಸತ್ತ ಚರ್ಮದ ಕೋಶಗಳು ನಿವಾರಣೆಯಾಗುವುದಲ್ಲದೆ, ಮುಖವು ಹೊಳೆಯುವ ಮತ್ತು ಕಾಂತಿಯುತವಾಗಿ ಕಾಣುತ್ತದೆ.
  • ಬಾಳೆಹಣ್ಣಿನ ಸಿಪ್ಪೆಯನ್ನು ನುಣ್ಣಗೆ ಕತ್ತರಿಸಿ ಜೇನುತುಪ್ಪದೊಂದಿಗೆ ಬೆರೆಸಿ ಮುಖಕ್ಕೆ ಹಚ್ಚಬಹುದು. ಈ ಫೇಸ್ ಪ್ಯಾಕ್ ಚರ್ಮವನ್ನು ಮೃದುಗೊಳಿಸುತ್ತದೆ, ಮುಖವು ತಾಜಾವಾಗಿ ಕಾಣುತ್ತದೆ.
  • ಬಾಳೆಹಣ್ಣಿನ ಸಿಪ್ಪೆಯನ್ನು ಪುಡಿಮಾಡಿ ಅದಕ್ಕೆ ಮೊಸರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಫೇಸ್ ಪ್ಯಾಕ್ ತಯಾರಿಸಿ. ಈ ಫೇಸ್ ಪ್ಯಾಕ್ ಅನ್ನು ಮುಖಕ್ಕೆ 15 ರಿಂದ 20 ನಿಮಿಷಗಳ ಕಾಲ ಹಚ್ಚಿ ನಂತರ ತೊಳೆಯಿರಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ