ಈ 5 ವಸ್ತುಗಳನ್ನು ಬಟ್ಟೆಯಲ್ಲಿ ಕಟ್ಟಿ ನೆತ್ತಿಯ ಮೇಲೆ ಮಸಾಜ್ ಮಾಡಿ, ರೇಷ್ಮೆಯಂತಹ ಕೂದಲು ಪಡೆಯಬಹುದು
ಕೂದಲಿನ ಕಾಳಜಿಯನ್ನು ಎಲ್ಲರೂ ಮಾಡುತ್ತಾರೆ. ಆದರೆ ಈ ಕೂದಲಿನ ಆರೈಕೆಯನ್ನು ನೈಸರ್ಗಿಕವಾಗಿಯೂ ಮಾಡಬಹುದು. ಅದಕ್ಕಾಗಿ ಆಯುರ್ವೇದ ಪೌಷ್ಟಿಕತಜ್ಞೆ ಶ್ವೇತಾ ಶಾ ತನ್ನ ಇನ್ಸ್ಟಾ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದರಿಂದ ಕೂದಲಿನ ಬೆಳವಣಿಗೆ ಹಾಗೂ ಇತರ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಬಹುದು. ಈ ಕುರಿತಾದ ಮಾಹಿತಿ ಇಲ್ಲಿದೆ.

ಕೂದಲಿನ ಆರೈಕೆ (hair growth) ಮಾಡಲು ಅನೇಕ ರಾಸಾಯನಿಕ ವಸ್ತುಗಳನ್ನು ಬಳಸುತ್ತಾರೆ. ತಲೆಹೊಟ್ಟು ಮತ್ತು ಕೂದಲು ಉದುರುವಿಕೆ ಮುಂತಾದ ಸಮಸ್ಯೆಗಳು ಸಾಮಾನ್ಯ ವಿಚಾರಗಳು. ರಾಸಾಯನಿಕ ಉತ್ಪನ್ನಗಳ ಬಳಕೆಯಿಂದ ಹೇಳಿಕೊಳ್ಳುವ ಪರಿಹಾರ ಸಿಗುವುದಿಲ್ಲ. ಈ ಬಗ್ಗೆ ಆಯುರ್ವೇದ ಪೌಷ್ಟಿಕತಜ್ಞೆ ಶ್ವೇತಾ ಶಾ ಇನ್ಸ್ಟಾಗ್ರಾಮ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ಪೊಟ್ಲಿ ಕೂದಲಿನ ಬೇರುಗಳನ್ನು ಬಲಪಡಿಸುವಲ್ಲಿ, ಅವುಗಳನ್ನು ಹೊಳೆಯುವಂತೆ ಮಾಡಲು ಮತ್ತು ತಲೆಹೊಟ್ಟು ಕಡಿಮೆ ಮಾಡಲು ಪರಿಣಾಮಕಾರಿಯಾಗಿದೆ ಎಂದು ಪೌಷ್ಟಿಕತಜ್ಞರು ಹೇಳುತ್ತಾರೆ. ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಈ ಪೊಟ್ಲಿಯನ್ನು ತಯಾರಿಸಲು ನಿಮಗೆ ಯಾವ ವಸ್ತುಗಳು ಬೇಕಾಗುತ್ತವೆ ಮತ್ತು ಇದು ಹೇಗೆ ಪರಿಣಾಮ ಉಂಟು ಮಾಡುತ್ತದೆ ಎಂಬ ಬಗ್ಗೆಯೂ ಹೇಳಿದ್ದಾರೆ.
ಪೊಟ್ಲಿಯ ಪ್ರಯೋಜನಗಳು:
ಈ ಪೊಟ್ಲಿ ಕೂದಲಿಗೆ ಒಂದು ರೀತಿಯ ನೈಸರ್ಗಿಕ ಚಿಕಿತ್ಸೆಯಾಗಿದೆ. ಇದರಲ್ಲಿ ಆಯುರ್ವೇದ ಪದಾರ್ಥಗಳನ್ನು ಬಳಸಲಾಗುತ್ತದೆ, ಇದು ಕೂದಲಿನ ಬೇರುಗಳಿಗೆ ಪೋಷಣೆಯನ್ನು ಒದಗಿಸುತ್ತದೆ.
ಇಲ್ಲಿದೆ ನೋಡಿ ವಿಡಿಯೋ:
View this post on Instagram
ಇದಕ್ಕೆ ಬೇಕಾದ ವಸ್ತುಗಳು:
- ಕರಿಬೇವು ಎಲೆಗಳು
- ಮೆಂತ್ಯ ಬೀಜಗಳು
- ತೆಂಗಿನಕಾಯಿ ಪುಡಿ
- ಈರುಳ್ಳಿ ಸಿಪ್ಪೆ
- ಕಲ್ಲುಪ್ಪು
ಮಾಡುವುದು ಹೇಗೆ?
- ಮೇಲೆ ಹೇಳಿರುವ ವಸ್ತುಗಳನ್ನು ತೆಗೆದುಕೊಂಡು ಸ್ವಚ್ಛವಾದ ಬಟ್ಟೆಯಲ್ಲಿ ಕಟ್ಟಿ ಒಂದು ಬಂಡಲ್ ಮಾಡಿ.
- ಅದನ್ನು ಸ್ವಲ್ಪ ಬಿಸಿ ಮಾಡಿ, ಇದು ನಿಮ್ಮ ನೆತ್ತಿಯನ್ನು ಸುಡಡುವಂತಿದ್ದರೆ ಸಾಕು.
- ಸುಮಾರು 10 ನಿಮಿಷಗಳ ಕಾಲ ಸ್ವಲ್ಪ ಬೆಚ್ಚಗಿನ ಬಂಡಲ್‌ನಿಂದ ನಿಮ್ಮ ತಲೆಯನ್ನುನಿಧಾನವಾಗಿ ಮಸಾಜ್ ಮಾಡಿ.
- ಮಸಾಜ್ ಮಾಡುವಾಗ, ಬಂಡಲ್ ಅನ್ನು ಸಂಪೂರ್ಣ ನೆತ್ತಿ ಮತ್ತು ಕೂದಲಿನ ಮಧ್ಯೆ ಇರುವ ಬೇರುಗಳ ಮೇಲೆ ಸರಿಸಿ. ಇದು ನೇರವಾಗಿ ನೆತ್ತಿಯನ್ನು ತಲುಪುತ್ತದೆ.
- ಮಸಾಜ್ ಮಾಡಿದ ನಂತರ, ಕೂದಲನ್ನು ಅರ್ಧ ಗಂಟೆ ಹಾಗೆಯೇ ಬಿಟ್ಟು ನಂತರ ಸೌಮ್ಯವಾದ ಶಾಂಪೂ ಬಳಸಿ ತೊಳೆಯಿರಿ.
ಇದನ್ನೂ ಓದಿ: ಬಾಳೆಹಣ್ಣಿನ ಸಿಪ್ಪೆಗೆ ಈ 2 ವಸ್ತುಗಳನ್ನು ಬೆರೆಸಿ ಮುಖಕ್ಕೆ ಹಚ್ಚಿದ್ರೆ ಮುಖ ಹೊಳೆಯುವುದು ಖಂಡಿತ
ಪ್ರಯೋಜನಗಳೇನು? ಇಲ್ಲಿದೆ ನೋಡಿ:
- ಇದು ರಕ್ತ ಪರಿಚಲನೆ ಸುಧಾರಿಸುತ್ತದೆ, ಇದು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ.
- ಕರಿಬೇವು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಲು ಮತ್ತು ಕೂದಲು ಬಿಳಿ ಆಗುವುದನ್ನು ತಡೆಯಲು ಸಹಾಯ ಮಾಡುತ್ತದೆ.
- ಮೆಂತ್ಯ ಬೀಜಗಳು ತಲೆಹೊಟ್ಟು ಕಡಿಮೆ ಮಾಡಿ ಕೂದಲಿನ ಬೇರುಗಳನ್ನು ಬಲಪಡಿಸುತ್ತವೆ.
- ತೆಂಗಿನಕಾಯಿ ಪುಡಿ ನೈಸರ್ಗಿಕ ಕಂಡಿಷನರ್ ಆಗಿ ಕಾರ್ಯನಿರ್ವಹಿಸುತ್ತದೆ ಹಾಗೂ ಕೂದಲನ್ನು ಮೃದುಗೊಳಿಸುತ್ತದೆ.
- ಈರುಳ್ಳಿ ಸಿಪ್ಪೆಗಳು ಕೂದಲಿಗೆ ಹೊಳಪನ್ನು ನೀಡುತ್ತವೆ, ಉದುರುವುದನ್ನು ಕಡಿಮೆ ಮಾಡುತ್ತದೆ.
- ಕಲ್ಲುಪ್ಪು ನೆತ್ತಿಯಲ್ಲಿರುವ ಖನಿಜಗಳ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ.
ಈ ಪೊಟ್ಲಿಯೂ ಕೂದಲು ನೈಸರ್ಗಿಕವಾಗಿ ರೇಷ್ಮೆಯಂತೆ ಮಾಡಿ ಹೊಳೆಯುವಂತೆ ಮಾಡುತ್ತದೆ. ಕೂದಲಿನ ಬೆಳವಣಿಗೆಯೂ ಸುಧಾರಿಸುತ್ತದೆ. ಸಂಪೂರ್ಣವಾಗಿ ನೈಸರ್ಗಿಕವಾಗಿದೆ ಮತ್ತು ಯಾವುದೇ ಅಡ್ಡಪರಿಣಾಮಗಳಿಲ್ಲ. ವಾರಕ್ಕೆ ಕನಿಷ್ಠ 1-2 ಬಾರಿ ಇದನ್ನು ಬಳಸುವುದರಿಂದ, ಶೀಘ್ರ ಪರಿಹಾರ ಪಡೆಯಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








