AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗ್ಗೆ ಯಾವ ಸಮಯದಲ್ಲಿ ಏಳೋದು ಸೂಕ್ತ? ಇಲ್ಲಿದೆ ಮಾಹಿತಿ

ಮನುಷ್ಯನಿಗೆ ಆಹಾರ, ನೀರು, ಗಾಳಿ ಎಷ್ಟು ಮುಖ್ಯವೋ ಸರಿಯಾದ ನಿದ್ರೆಯು ಅಷ್ಟೇ ಮುಖ್ಯ. ನಿದ್ರೆ ಚೆನ್ನಾಗಿ ಆಗಿಲ್ಲ ಎಂದರೆ ಇದರಿಂದ ಸಾಕಷ್ಟು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅದಕ್ಕಾಗಿ ಏಳರಿಂದ ಎಂಟು ಗಂಟೆಗಳ ಕಾಲ ನಿದ್ರೆ ಮಾಡಲೇಬೇಕು ಎಂದು ತಜ್ಞರು ಹೇಳುತ್ತಾರೆ. ಅದೇ ರೀತಿ ಆರೋಗ್ಯ ಮತ್ತು ಮನಸ್ಥಿತಿ ಚೆನ್ನಾಗಿರಬೇಕೆಂದರೆ ಬೆಳಗ್ಗೆ ಎಷ್ಟು ಗಂಟೆಗೆ, ಯಾವ ಸಮಯದಲ್ಲಿ ಏಳೋದು ಸೂಕ್ತ ಎಂಬ ವಿಚಾರವನ್ನು ತಿಳಿಯಿರಿ.

ಬೆಳಗ್ಗೆ ಯಾವ ಸಮಯದಲ್ಲಿ ಏಳೋದು ಸೂಕ್ತ? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ Image Credit source: Pinterest
ಮಾಲಾಶ್ರೀ ಅಂಚನ್​
|

Updated on:Aug 24, 2025 | 9:47 AM

Share

ಹಿರಿಯರು ಯಾವಾಗಲೂ ರಾತ್ರಿ, ಬೇಗ ಮಲಗಿ ಬೆಳಗ್ಗೆ ಬೇಗ ಎದ್ದೇಳಬೇಕು (Wakeup Early) ಎಂದು ಹೇಳುತ್ತಿರುತ್ತಾರೆ. ಆದ್ರೆ ಇಂದು ಅನೇಕರು ತಡವಾಗಿ ಮಲಗಿ ತಡವಾಗಿ ಎದ್ದೇಳುತ್ತಾರೆ. ಇನ್ನೂ ಕೆಲವರು ಕಡಿಮೆ ಸಮಯ ನಿದ್ದೆ (Sleep) ಮಾಡ್ತಾರೆ. ಈ ಎರಡೂ ಅಂಶ ಕೂಡ ಆರೋಗ್ಯಕ್ಕೆ ಒಳ್ಳೆಯದಲ್ಲ. ಆರೋಗ್ಯ ಚೆನ್ನಾಗಿರಬೇಕೆಂದರೆ ಏಳರಿಂದ ಎಂಟು ಗಂಟೆಗಳ ಕಾಲ ನಿದ್ರೆ ಮಾಡುವುದು ಎಷ್ಟು ಮುಖ್ಯವೋ, ಅದೇ ರೀತಿ ಬೆಳಗ್ಗೆ ಬೇಗ ಏಳುವುದು ಕೂಡ ಮುಖ್ಯ. ಬೆಳಗ್ಗೆ ಬೇಗ ಏಳಬೇಕು ಎಂದು ಎಲ್ಲರೂ ಹೇಳ್ತಾರೆ, ಆದ್ರೆ ಬೆಳಗ್ಗೆ ಯಾವ ಸಮಯದಲ್ಲಿ ಏಳೋದು ಸೂಕ್ತ ಎಂಬ ವಿಚಾರ ಗೊತ್ತಾ? ಆರೋಗ್ಯ ಮತ್ತು ಮನಸ್ಥಿತಿ ಇವೆರಡೂ ಚೆನ್ನಾಗಿರಬೇಕೆಂದರೆ ಬೆಳಗ್ಗೆ ಈ ಸಮಯದಲ್ಲಿ ಎದ್ದೇಳಬೇಕಂತೆ, ಇದರ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಳಗ್ಗೆ ಏಳಲು ಸರಿಯಾದ ಸಮಯ ಯಾವುದು?

ತಜ್ಞರ ಪ್ರಕಾರ, ಬೆಳಿಗ್ಗೆ 5 ಗಂಟೆಗೆ ಏಳುವುದು ಉತ್ತಮ ಸಮಯ.  ಬೆಳಿಗ್ಗೆ 5 ಗಂಟೆಗೆ ಏಳಲು ಸಾಧ್ಯವಾಗದಿದ್ದರೆ, ಬೆಳಿಗ್ಗೆ 6 ರ ಒಳಗೆ ಎದ್ದೇಳಬೇಕಂತೆ. 5 ರಿಂದ 6 ರ ನಡುವೆ ಎಚ್ಚರಗೊಳ್ಳುವುದು ಉತ್ತಮ ಸಮಯ ಎಂದು ಪರಿಗಣಿಸಲಾಗಿದೆ. ಈ ಸಮಯ ಶಾಂತ ಮತ್ತು ಮಾಲಿನ್ಯ ಮುಕ್ತವಾಗಿರುವುದಲ್ಲದೆ, ಈ ಸಮಯದಲ್ಲಿ ಏಳುವುದರಿಂದ ದೇಹದಲ್ಲಿ ಶಕ್ತಿಯ ಮಟ್ಟವು ಹೆಚ್ಚಾಗಿರುತ್ತದೆ. ಇದು ನಿಮ್ಮ ಆರೋಗ್ಯವನ್ನು ಉತ್ತಮವಾಗಿರಿಸುತ್ತದೆ.

ತಡವಾಗಿ ಎದ್ದರೆ ಏನಾಗುತ್ತದೆ?

ತಜ್ಞರ ಪ್ರಕಾರ, ಬೆಳಿಗ್ಗೆ 9 ರಿಂದ 10 ಗಂಟೆಯವರೆಗೆ ನಿದ್ರಿಸುವ ಜನರು ಹೆಚ್ಚಾಗಿ ಆಲಸ್ಯ, ಕಿರಿಕಿರಿಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಜೊತೆಗೆ ಅವರಿಗೆ ಯಾವುದೇ ಕೆಲಸದಲ್ಲಿ ಏಕಾಗ್ರತೆ ಅನ್ನೋದು ಕೂಡ ಇರುವುದಿಲ್ಲ. ಇದರಿಂದಾಗಿ, ಬೆಳಿಗ್ಗೆ ನೀವು ಪಡೆಯುವ ನೈಸರ್ಗಿಕ ಪೋಷಣೆಯನ್ನು ಪಡೆಯಲು ನಿಮಗೆ ಸಾಧ್ಯವಾಗುವುದಿಲ್ಲ, ದೈಹಿಕ ಚಟುವಟಿಕೆಗಳನ್ನು ಮಾಡಲೂ ಸಾಧ್ಯವಾಗುವುದಿಲ್ಲ. ಇದು ಬೊಜ್ಜು, ಮಧುಮೇಹ, ಹೃದ್ರೋಗ ಸಮಸ್ಯೆಗಳಿಗೆ ಕಾರಣವಾಗಬಹುದು ಮತ್ತು ಮಾನಸಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು.

ಇದನ್ನೂ ಓದಿ
Image
ಯಶಸ್ಸಿಗಾಗಿ ಯಶಸ್ವಿ ಜನರ ಬೆಳಗಿನ ಈ ಅಭ್ಯಾಸಗಳನ್ನು ತಪ್ಪದೇ ಪಾಲಿಸಿ
Image
ಪ್ರತಿದಿನ ಬೆಳಗ್ಗೆ ಈ 5 ಸುಲಭ ಯೋಗಾಸನಗಳನ್ನು ಮಾಡಿ, ಆರೋಗ್ಯಕರವಾಗಿರಿ
Image
ಬೆಳಗಿನ ಸಮಯದ ಈ ಅಭ್ಯಾಸಗಳು ನಿಮ್ಮ ಆರೋಗ್ಯವನ್ನೇ ಹಾಳುಮಾಡುತ್ತೆ
Image
ಬೆಳಗ್ಗೆ 30 ನಿಮಿಷಗಳ ಕಾಲ ವಾಕಿಂಗ್‌ ಮಾಡಿದರೆ ಏನಾಗುತ್ತದೆ ಗೊತ್ತಾ?

ಇದನ್ನೂ ಓದಿ: ನೀವು ಸಕ್ಸಸ್‌ ಆಗ್ಬೇಕಂದ್ರೆ ಯಶಸ್ವಿ ಜನರ ಬೆಳಗಿನ ಈ ಅಭ್ಯಾಸಗಳನ್ನು ತಪ್ಪದೇ ಪಾಲಿಸಬೇಕಂತೆ

ಬೆಳಗ್ಗೆ ಬೇಗ ಏಳುವುದರ ಪ್ರಯೋಜನಗಳೇನು?

  • ಬೆಳಿಗ್ಗೆ ಬೇಗನೆ ಏಳುವುದರಿಂದ ಸಕಾರಾತ್ಮಕತೆ ಹೆಚ್ಚಾಗುತ್ತದೆ.
  • ತಾಜಾ ಗಾಳಿಯನ್ನು ಪಡೆಯಬಹುದು, ಇದು ಆರೋಗ್ಯಕ್ಕೆ ಪ್ರಯೋಜನಕಾರಿ.
  • ದಿನದ ಗುರಿಗಳನ್ನು ಸಾಧಿಸಲು ಹೆಚ್ಚಿನ ಸಮಯ ಸಿಗುತ್ತದೆ.
  • ಬೆಳಿಗ್ಗೆ ಬೇಗ ಏಳುವುದರಿಂದ ದೇಹದಲ್ಲಿ ಶಕ್ತಿಯ ಮಟ್ಟ ಹೆಚ್ಚಾಗುತ್ತದೆ.
  • ಬೆಳಿಗ್ಗೆ ಬೇಗನೆ ಎದ್ದೇಳುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಸುಧಾರಿಸುತ್ತದೆ.
  • ಬೆಳಿಗ್ಗೆ ಎದ್ದರೆ ದೇಹದಲ್ಲಿ ವಿಟಮಿನ್ ಡಿ ಕೊರತೆ ಉಂಟಾಗುವುದಿಲ್ಲ.
  • ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸುತ್ತದೆ.
  • ಆತ್ಮವಿಶ್ವಾಸ ಹೆಚ್ಚುತ್ತದೆ.
  • ಬೆಳಿಗ್ಗೆ ಬೇಗನೆ ಎದ್ದೇಳುವುದರಿಂದ ಬಿಪಿ, ಕೊಲೆಸ್ಟ್ರಾಲ್ ಮತ್ತು ಹೃದಯ ಸಮಸ್ಯೆಗಳು ಭಾದಿಸುವುದಿಲ್ಲವಂತೆ

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:46 am, Sun, 24 August 25

ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ