AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಖಾಲಿ ಹೊಟ್ಟೆಯಲ್ಲಿ ನಿಂಬೆ ಜ್ಯೂಸ್ ಕುಡಿಯುತ್ತಿದ್ದೀರಾ? ಹಾಗಿದ್ದರೆ ಈ ಮಾಹಿತಿ ನಿಮಗಾಗಿ

ಖಾಲಿ ಹೊಟ್ಟೆಯಲ್ಲಿ ನಿಂಬೆ ರಸ ಸೇವನೆ ಮಾಡುವುದು ಒಳ್ಳೆಯದಲ್ಲ. ಇದು ಅನೇಕ ರೀತಿಯ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು. ನಿಂಬೆ ರಸ ಒಳ್ಳೆಯದು ಎಂದು ಅತಿಯಾಗಿ ಸೇವನೆ ಮಾಡಿದರೆ ಅಡ್ಡಪರಿಣಾಮಗಳು ತಪ್ಪಿದ್ದಲ್ಲ. ಅತಿಸಾರ, ಗಂಟಲು ನೋವು, ದಂತಕವಚದ ಸವೆತ, ಮೂತ್ರಪಿಂಡದ ಕಲ್ಲುಗಳು, ಚರ್ಮದ ಕಿರಿಕಿರಿ, ಮತ್ತು ಆಸಿಡ್ ರಿಫ್ಲಕ್ಸ್ ಹೀಗೆ ನಾನಾ ರೀತಿಯ ಸಮಸ್ಯೆಗಳು ಕಂಡುಬರಬಹುದು. ಹಾಗಾಗಿ ಇದರ ಬಗ್ಗೆ ಸರಿಯಾದ ಮಾಹಿತಿ ಪಡೆದುಕೊಳ್ಳುವುದು ಅನಿವಾರ್ಯ. ಹಾಗಾದರೆ ಇದರ ಸೇವನೆಯಿಂದ ಯಾವ ರೀತಿಯ ಆರೋಗ್ಯ ಸಮಸ್ಯೆಗಳು ಕಂಡು ಬರುತ್ತದೆ? ಯಾಕೆ ಒಳ್ಳೆಯದಲ್ಲ ಎಂಬುದನ್ನು ತಿಳಿದುಕೊಳ್ಳಿ.

ಖಾಲಿ ಹೊಟ್ಟೆಯಲ್ಲಿ ನಿಂಬೆ ಜ್ಯೂಸ್ ಕುಡಿಯುತ್ತಿದ್ದೀರಾ? ಹಾಗಿದ್ದರೆ ಈ ಮಾಹಿತಿ ನಿಮಗಾಗಿ
Side Effects Of Lemon Juice
ಪ್ರೀತಿ ಭಟ್​, ಗುಣವಂತೆ
|

Updated on: Aug 23, 2025 | 4:05 PM

Share

ಕೆಲವರು ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ನಿಂಬೆ ರಸವನ್ನು ನೀರಿನೊಂದಿಗೆ ಬೆರೆಸಿ ಸೇವನೆ ಮಾಡುತ್ತಾರೆ. ಈ ಅಭ್ಯಾಸ ಅನೇಕ ರೀತಿಯಲ್ಲಿ ಪ್ರಯೋಜನಕಾರಿಯಾಗಿದ್ದರೂ ಕೂಡ ಇದರಿಂದ ಹಲವಾರು ಅಡ್ಡ ಪರಿಣಾಮಗಳಿರುತ್ತವೆ ಎಂಬುದನ್ನು ಮರೆಯಬಾರದು. ನಿಂಬೆ ರಸದಲ್ಲಿ ಅಮೃತದಂತಹ ಗುಣವಿದೆ. ಆದರೆ ಅತಿಯಾದರೆ ವಿಷವಾಗುತ್ತದೆ. ಆರೋಗ್ಯ ಕಾಪಾಡಿಕೊಳ್ಳಬೇಕು ಎಂಬ ಹಂಬಲದಲ್ಲಿ ಹಲವಾರು ರೀತಿಯ ಆರೋಗ್ಯ ಸಲಹೆಗಳನ್ನು ಪಾಲನೆ ಮಾಡುವುದು ಸಹಜ. ಆದರೆ ಅವುಗಳಿಂದ ಸಿಗುವ ಪ್ರಯೋಜನಗಳ ಜೊತೆ ಜೊತೆಗೆ ಅದರಿಂದಾಗುವ ಅಡ್ಡಪರಿಣಾಮಗಳನ್ನು ಕೂಡ ತಿಳಿಯಯಬೇಕಾಗುತ್ತದೆ. ಅದೇ ರೀತಿ ನಿಂಬೆ ರಸ (Lemon Juice) ಎಲ್ಲರಿಗೂ ಒಳ್ಳೆಯದಲ್ಲ. ಹಾಗಾದರೆ ಇದರ ಸೇವನೆಯಿಂದ ಯಾವ ರೀತಿಯ ಆರೋಗ್ಯ (Health) ಸಮಸ್ಯೆಗಳು ಕಂಡು ಬರುತ್ತದೆ? ಯಾಕೆ ಒಳ್ಳೆಯದಲ್ಲ ಎಂಬುದನ್ನು ತಿಳಿದುಕೊಳ್ಳಿ.

  • ಖಾಲಿ ಹೊಟ್ಟೆಯಲ್ಲಿ ನಿಂಬೆ ರಸವನ್ನು ಕುಡಿಯುವುದರಿಂದ ಮೂಳೆಗಳು ದುರ್ಬಲಗೊಳ್ಳುತ್ತವೆ. ನಿಂಬೆಯಲ್ಲಿರುವ ಆಮ್ಲೀಯತೆಯು ಮೂಳೆಗಳಲ್ಲಿನ ಕೊಬ್ಬನ್ನು ಕಡಿಮೆ ಮಾಡುತ್ತದೆ, ಅವುಗಳನ್ನು ದುರ್ಬಲಗೊಳಿಸುತ್ತದೆ. ಇದು ವಯಸ್ಸಾದಂತೆ ಮೂಳೆ ಸಮಸ್ಯೆಗಳಿಗೆ ಕಾರಣವಾಗಬಹುದು. ಪರಿಣಾಮವಾಗಿ, ಹೊಟ್ಟೆಯಲ್ಲಿ ಸುಡುವ ಸಂವೇದನೆ, ವಾಂತಿ ಮತ್ತು ಅನಿಲದಂತಹ ಸಮಸ್ಯೆಗಳು ಉಂಟಾಗಬಹುದು.
  • ನಿಂಬೆಯಲ್ಲಿರುವ ಆಮ್ಲೀಯತೆಯು ದಂತವನ್ನು ಹಾನಿಗೊಳಿಸುತ್ತದೆ, ಅವುಗಳನ್ನು ಸೂಕ್ಷ್ಮವಾಗಿಸುತ್ತದೆ. ಇದು ಹಲ್ಲುಗಳ ಬಲವನ್ನು ಕಡಿಮೆ ಮಾಡುತ್ತದೆ.
  • ಖಾಲಿ ಹೊಟ್ಟೆಯಲ್ಲಿ ನಿಂಬೆ ರಸ ಕುಡಿಯುವುದರಿಂದ ನಿರ್ಜಲೀಕರಣದ ಸಮಸ್ಯೆಗಳು ಉಂಟಾಗಬಹುದು ಎಂದು ತಜ್ಞರು ಹೇಳುತ್ತಾರೆ. ನಿಂಬೆ ರಸದಲ್ಲಿ ಹೆಚ್ಚಿನ ಪ್ರಮಾಣದ ಆಸ್ಕೋರ್ಬಿಕ್ ಆಮ್ಲವು ಮೂತ್ರ ವಿಸರ್ಜನೆಯನ್ನು ಹೆಚ್ಚಿಸುತ್ತದೆ. ಆದ್ದರಿಂದ, ನಿಂಬೆ ರಸವನ್ನು ಮಿತವಾಗಿ ಮಾತ್ರ ಸೇವಿಸಬೇಕು.
  • ಖಾಲಿ ಹೊಟ್ಟೆಯಲ್ಲಿ ನಿಂಬೆ ರಸ ಕುಡಿಯುವುದರಿಂದ ಹೊಟ್ಟೆಯಲ್ಲಿ ಅತಿಯಾದ ಆಮ್ಲ ಉತ್ಪಾದನೆ ಉಂಟಾಗುತ್ತದೆ, ಇದು ಆಮ್ಲೀಯತೆ, ಎದೆಯುರಿ, ವಾಂತಿ ಮತ್ತು ಅನಿಲದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು.
  • ನಿಂಬೆಯಲ್ಲಿರುವ ಕೆಲವು ಗುಣಗಳು ಮೂತ್ರಪಿಂಡಗಳ ಮೇಲೆ ಒತ್ತಡವನ್ನು ಹೆಚ್ಚಿಸಬಹುದು. ಆದ್ದರಿಂದ, ಖಾಲಿ ಹೊಟ್ಟೆಯಲ್ಲಿ ನಿಂಬೆ ರಸದ ಸೇವನೆ ಒಳ್ಳೆಯದಲ್ಲ. ನಿಂಬೆಯಲ್ಲಿರುವ ಸಿಟ್ರಿಕ್ ಆಮ್ಲ ಮತ್ತು ಆಕ್ಸಲೇಟ್‌ಗಳು ಮೂತ್ರಪಿಂಡದಲ್ಲಿ ಕಲ್ಲುಗಳ ಅಪಾಯವನ್ನು ಹೆಚ್ಚಿಸಬಹುದು, ವಿಶೇಷವಾಗಿ ಮೂತ್ರಪಿಂಡದ ಸಮಸ್ಯೆ ಇರುವವರಲ್ಲಿ. ಹಾಗಾಗಿ ಊಟದ ನಂತರ ನಿಂಬೆ ರಸ ಕುಡಿಯುವುದರಿಂದ ಯಾವುದೇ ಪ್ರತಿಕೂಲ ಪರಿಣಾಮ ಉಂಟಾಗುವುದಿಲ್ಲ.
  • ಹೆಚ್ಚು ನಿಂಬೆ ರಸ ಕುಡಿಯುವುದರಿಂದ ಅತಿಸಾರ, ವಾಕರಿಕೆ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಗಳು ಉಂಟಾಗಬಹುದು, ಏಕೆಂದರೆ ಇದರಲ್ಲಿ, ದೇಹವು ವಿಟಮಿನ್ ಸಿ ಅನ್ನು ಹೀರಿಕೊಳ್ಳುವ ವಿಪ್ರಮಾಣಕ್ಕಿಂತ ಹೆಚ್ಚಿರುತ್ತದೆ.
  • ನಿಂಬೆ ರಸದ ಆಮ್ಲೀಯತೆಯು ಗಂಟಲಿನ ಲೋಳೆಪೊರೆಯನ್ನು ಕೆರಳಿಸಿ ಗಂಟಲು ನೋವು ಉಂಟುಮಾಡಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ