ಏನೇ ತಿಂದರೂ ಸರಿಯಾಗಿ ಜೀರ್ಣವಾಗದಿದ್ದಾಗ ಈ ಸರಳ ಸಲಹೆಯನ್ನು ಪಾಲಿಸಿ
ನಿಂಬೆ ರಸವನ್ನು ನೀರಿಗೆ ಬೆರೆಸಿ ಕುಡಿಯುವುದರಿಂದ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳಿಂದ ದೂರವಿರಬಹುದು. ಇದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆದರೆ ಇದನ್ನು ಅನೇಕ ರೀತಿಯಲ್ಲಿ ಕುಡಿಯಲಾಗುತ್ತದೆ. ಕೆಲವರು ಬೆಳಿಗ್ಗೆ ನಿಂಬೆ ರಸದ ಜೊತೆಗೆ ಜೇನುತುಪ್ಪ ಬೆರೆಸಿಕೊಂಡು ಕುಡಿಯುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಅಲ್ಲದೆ, ಇನ್ನು ಕೆಲವರು ಬೇಸಿಗೆಯಲ್ಲಿ, ದೇಹವನ್ನು ತಂಪಾಗಿಸಲು ಸಕ್ಕರೆಯೊಂದಿಗೆ ಕುಡಿಯುತ್ತಾರೆ. ಹೆಚ್ಚು ತಾಜಾತನದ ಅನುಭವ ಪಡೆಯಲು ಪುದೀನಾ ಎಲೆಗಳೊಂದಿಗೆ ಸೇವನೆ ಮಾಡುವವರೂ ಕೂಡ ಇದ್ದಾರೆ. ಹಾಗಾದರೆ ಪ್ರತಿನಿತ್ಯ ಮುಂಜಾನೆ ಇದರ ಸೇವನೆ ಮಾಡುವುದರಿಂದ ಸಿಗುವ ಪ್ರಯೋಜನಗಳೇನು ತಿಳಿದುಕೊಳ್ಳಿ.

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕೆಲವರು ನಿಂಬೆ ರಸದ ನೀರನ್ನು ಕುಡಿಯುವ ಅಭ್ಯಾಸವನ್ನು ಹೊಂದಿರುತ್ತಾರೆ. ಇದು ಉತ್ತಮ ಆರೋಗ್ಯಕರ ಅಭ್ಯಾಸ ಎಂದರೆ ತಪ್ಪಾಗಲಾರದು. ಏಕೆಂದರೆ ಇದು ಒಂದು ರೀತಿಯ ಅಮೃತವಿದ್ದಂತೆ ಕೇವಲ ನಿಂಬೆ ರಸವನ್ನು ನೀರಿಗೆ ಬೆರೆಸಿ ಕುಡಿಯುವುದರಿಂದ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳಿಂದ ದೂರವಿರಬಹುದು. ಇದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆದರೆ ಇದನ್ನು ಅನೇಕ ರೀತಿಯಲ್ಲಿ ಕುಡಿಯಲಾಗುತ್ತದೆ. ಕೆಲವರು ಬೆಳಿಗ್ಗೆ ನಿಂಬೆ ರಸದ ಜೊತೆಗೆ ಜೇನುತುಪ್ಪ ಬೆರೆಸಿಕೊಂಡು ಕುಡಿಯುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಅಲ್ಲದೆ, ಇನ್ನು ಕೆಲವರು ಬೇಸಿಗೆಯಲ್ಲಿ, ದೇಹವನ್ನು ತಂಪಾಗಿಸಲು ಸಕ್ಕರೆಯೊಂದಿಗೆ ಕುಡಿಯುತ್ತಾರೆ. ಹೆಚ್ಚು ತಾಜಾತನದ ಅನುಭವ ಪಡೆಯಲು ಪುದೀನಾ ಎಲೆಗಳೊಂದಿಗೆ ಸೇವನೆ ಮಾಡುವವರೂ ಕೂಡ ಇದ್ದಾರೆ. ಹಾಗಾದರೆ ಪ್ರತಿನಿತ್ಯ ಮುಂಜಾನೆ ಇದರ ಸೇವನೆ ಮಾಡುವುದರಿಂದ ಸಿಗುವ ಪ್ರಯೋಜನಗಳೇನು ತಿಳಿದುಕೊಳ್ಳಿ.
- ನಿಂಬೆ ರಸದಲ್ಲಿ ವಿಟಮಿನ್ ಸಿ, ಉತ್ಕರ್ಷಣ ನಿರೋಧಕಗಳು, ಕ್ಯಾಲ್ಸಿಯಂ, ಫೋಲೇಟ್, ಪೊಟ್ಯಾಸಿಯಮ್ ಮುಂತಾದ ಅಗತ್ಯ ಪೋಷಕಾಂಶಗಳು ಸಮೃದ್ಧವಾಗಿವೆ.
- ಕೆಲವರಿಗೆ ಏನೆ ತಿಂದರೂ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ. ಅಂತವರು ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಇದನ್ನು ತಪ್ಪಿಸಲು ಪ್ರತಿನಿತ್ಯ ನೀರಿಗೆ ನಿಂಬೆ ರಸವನ್ನು ಸೇರಿಸಿ ಕುಡಿಯಬಹುದು. ಇದು ಅಜೀರ್ಣ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ ಮತ್ತು ಜೀರ್ಣಕಾರಿ ರಸಗಳ ಉತ್ಪಾದನೆಯನ್ನು ಸುಧಾರಿಸುತ್ತದೆ. ಪಿಎಚ್ ಮಟ್ಟವನ್ನು ಸಮತೋಲನಗೊಳಿಸುತ್ತದೆ.
- ಪ್ರತಿದಿನ ನೀರಿಗೆ ನಿಂಬೆ ರಸ ಬೆರೆಸಿ ಕುಡಿಯುವುದರಿಂದ ದೇಹವನ್ನು ಹೈಡ್ರೇಟ್ ಆಗಿರಿಸುತ್ತದೆ. ದೇಹಕ್ಕೆ ಸಾಕಷ್ಟು ತೇವಾಂಶವನ್ನು ಒದಗಿಸುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ವಿಟಮಿನ್ ಸಿ ಸಮೃದ್ಧವಾಗಿರುವುದರಿಂದ ದೇಹವನ್ನು ಅನಾರೋಗ್ಯದಿಂದ ರಕ್ಷಿಸುತ್ತದೆ. ನಿಂಬೆ ರಸವು ಸ್ವಭಾವದಲ್ಲಿ ಆಮ್ಲೀಯವಾಗಿದ್ದರೂ, ಇದು ದೇಹದಲ್ಲಿ ಕ್ಷಾರೀಯ ಪರಿಣಾಮವನ್ನು ಹೊಂದಿದ್ದು ಸಮತೋಲನವನ್ನು ಕಾಪಾಡಿಕೊಳ್ಳುತ್ತದೆ.
- ನೀರಿಗೆ ನಿಂಬೆ ರಸ ಬೆರೆಸಿ ಕುಡಿಯುವುದರಿಂದ ತೂಕ ಕಡಿಮೆ ಮಾಡಿಕೊಳ್ಳಬಹುದು. ಇದು ದೀರ್ಘಕಾಲದ ವರೆಗೆ ಹೊಟ್ಟೆ ತುಂಬಿದ ಅನುಭವವನ್ನು ನೀಡುವ ಮೂಲಕ ಹಸಿವನ್ನು ನಿಯಂತ್ರಣದಲ್ಲಿಡುತ್ತದೆ. ಬಾಯಿಯ ದುರ್ವಾಸನೆಯನ್ನು ನೈಸರ್ಗಿಕವಾಗಿ ತಡೆಯುತ್ತದೆ.
- ನಿಂಬೆ ನೀರು ಚರ್ಮದ ಆರೋಗ್ಯಕ್ಕೂ ಒಳ್ಳೆಯದು. ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ಚರ್ಮವನ್ನುಕಾಂತಿಯುತವಾಗಿರುವಂತೆ ನೋಡಿಕೊಳ್ಳುತ್ತದೆ. ಅದೆಲ್ಲದರ ಜೊತೆಗೆ ಪಿತ್ತಜನಕಾಂಗವನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ.
- ಆದರೆ ನಿಂಬೆ ಜ್ಯೂಸ್ ಅನ್ನು ಅತಿಯಾಗಿ ಸೇವನೆ ಮಾಡಬಾರದು. ಏಕೆಂದರೆ ಅದರಲ್ಲಿರುವ ಸಿಟ್ರಿಕ್ ಆಮ್ಲವು ಹಲ್ಲುಗಳನ್ನು ಹಾನಿಗೊಳಿಸುತ್ತದೆ. ಆದ್ದರಿಂದ, ನಿಂಬೆ ನೀರನ್ನು ಕುಡಿದ ತಕ್ಷಣ ಬಾಯಿಯನ್ನು ತೊಳೆಯುವುದನ್ನು ಮರೆಯಬಾರದು.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




