AC Side Effects: ಎಸಿ ಇಲ್ಲದೆ ಇರುತ್ತೀರಾ? ಸಾಧ್ಯವಿಲ್ಲ ಎನ್ನುವವರು ಇದನ್ನು ಓದಿ
ಹವಾನಿಯಂತ್ರಣಗಳ ಬಳಕೆ ಸಾಕಷ್ಟು ಹೆಚ್ಚಾಗಿದೆ. ಈಗಾಗಲೇ ಎಸಿಗಳನ್ನು ಬಳಸುವ ಅಭ್ಯಾಸವನ್ನು ಹೊಂದಿರುವವರು ಅವುಗಳಿಲ್ಲದೆ ಒಂದು ಕ್ಷಣವೂ ಇರಲು ಸಾಧ್ಯವಿಲ್ಲ ಎನ್ನುವ ಪರಿಸ್ಥಿತಿಗೆ ಬಂದಿದ್ದಾರೆ. ಹಾಗಾಗಿ ಇದರ ಬಗ್ಗೆ ಸರಿಯಾಗಿ ತಿಳಿದುಕೊಂಡು ಅವುಗಳ ಅಡ್ಡಪರಿಣಾಮಗಳ ಬಗ್ಗೆ ಅರಿವು ಮೂಡಿಸಿಕೊಂಡು ಸಾಧ್ಯವಾದಷ್ಟು ಎಸಿ ಬಳಕೆ ಕಡಿಮೆ ಮಾಡುವುದು ಒಳಿತು ಇಲ್ಲವಾದಲ್ಲಿ ಅನಾರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾದರೆ ಎಸಿ ಬಳಸುವುದರಿಂದ ಯಾವ ರೀತಿಯ ತೊಂದರೆಯಾಗುತ್ತದೆ ಎಂಬುದನ್ನು ತಜ್ಞರಿಂದ ತಿಳಿದುಕೊಳ್ಳಿ.

ಎಸಿ ಇಲ್ಲದೆ ಒಂದು ನಿಮಿಷವೂ ಇರಲು ಸಾಧ್ಯವಿಲ್ಲ ಎನ್ನುವವರು ನಮ್ಮ ಮಧ್ಯೆಯೇ ಇದ್ದಾರೆ. ಆದರೆ ಎಸಿ ಗಾಳಿಯನ್ನು ನಿರಂತರವಾಗಿ ಉಸಿರಾಡುವುದು ಆರೋಗ್ಯಕ್ಕೆ ಎಷ್ಟು ಅಪಾಯಕಾರಿ ಎಂಬುದನ್ನು ಯೋಚಿಸಿರುವುದಿಲ್ಲ. ಕೆಲವು ಸಮೀಕ್ಷೆಗಳಿಂದ ತಿಳಿದು ಬಂದ ಮಾಹಿತಿಯ ಪ್ರಕಾರ, ಎಸಿ ಗಾಳಿ ನಮಗರಿವಿಲ್ಲದಂತೆ ಮಾರಣಾಂತಿಕ ಕಾಯಿಲೆಗಳಿಗೆ ಗುರಿಯಾಗಿಸುತ್ತವೆ. ಹಾಗಾಗಿ ಆದಷ್ಟು ಎಸಿಯನ್ನು ಮಿತವಾಗಿ ಬಳಸುವುದು ಸೂಕ್ತ ಎಂದು ತಜ್ಞರು ಹೇಳುತ್ತಾರೆ. ಏಕೆಂದರೆ ಎಸಿಯಲ್ಲಿ ಯಾವಾಗಲೂ ಇರುವವರಿಗೆ ಹೊರಗಿನ ವಾತಾವರಣದಲ್ಲಿ ಹೆಚ್ಚು ಸಮಯ ಇರಲು ಸಾಧ್ಯವಾಗುವುದಿಲ್ಲ. ಹೊರಗಿನ ಬಿಸಿಲು ಸುಡುವ ಅನುಭವ ನೀಡುತ್ತದೆ. ಹಾಗಾಗಿ ನಿಮಗೆ ಎಲ್ಲಾ ಕಡೆ ಎಸಿ ಇದ್ದರೆ ಒಳ್ಳೆಯದಿತ್ತು ಎಂದು ಭಾಸವಾಗುತ್ತದೆ. ಸರಳವಾಗಿ ಹೇಳುವುದಾದರೆ, ಒಮ್ಮೆ ನೀವು ಎಸಿಗೆ ಒಗ್ಗಿಕೊಂಡರೆ ಅದರಿಂದ ದೂರವಿರಲು ಸಾಧ್ಯವಿಲ್ಲ. ಆಗ ನಿಮಗೆ, ಎಸಿ ಗಾಳಿಯನ್ನು ಬಿಟ್ಟಿರಲು ಮನಸ್ಸು ಒಪ್ಪುವುದಿಲ್ಲ ಜೊತೆಗೆ ಹೊರಗಿನ ವಾತಾವರಣಕ್ಕೆ ದೇಹ ಸ್ಪಂದಿಸುವುದಿಲ್ಲ ಎಂಬ ಪರಿಸ್ಥಿತಿ ಬರುತ್ತದೆ. ಹಾಗಾಗಿ ಈ ಬಗ್ಗೆ ಸರಿಯಾಗಿ ತಿಳಿದುಕೊಂಡು ಅವುಗಳ ಬಳಕೆ ಕಡಿಮೆ ಮಾಡುವುದು ಒಳಿತು ಇಲ್ಲವಾದಲ್ಲಿ ಕೆಲವು ಅಡ್ಡಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಹಾಗಾದರೆ ಎಸಿ ಬಳಸುವುದರಿಂದ ಯಾವ ರೀತಿಯ ತೊಂದರೆಯಾಗುತ್ತದೆ ಎಂಬುದನ್ನು ತಿಳಿದುಕೊಳ್ಳಿ.
ಹೆಚ್ಚಾಗಿ ಎಸಿ ಬಳಸುವುದರ ಅಡ್ಡ ಪರಿಣಾಮಗಳು:
ಹವಾನಿಯಂತ್ರಣವನ್ನು ಹೆಚ್ಚಾಗಿ ಬಳಕೆ ಮಾಡುವುದರಿಂದ ಆರೋಗ್ಯ ಹಾಳಾಗುತ್ತದೆ ಮಾತ್ರವಲ್ಲ ಇದು ನಿಮ್ಮ ಚರ್ಮವನ್ನು ಕೂಡ ಹಾನಿಗೊಳಿಸುತ್ತದೆ. ಆದ್ದರಿಂದ, ನಿಮ್ಮ ಮನೆಯನ್ನು ತಂಪಾಗಿಡಲು ನೀವು ಎಸಿ ಬದಲಿಗೆ ನೈಸರ್ಗಿಕ ವಿಧಾನಗಳನ್ನು ಬಳಸಬಹುದು. ಎಸಿಯ ಅಡ್ಡಪರಿಣಾಮಗಳ ಬಗ್ಗೆ ತಿಳಿದುಕೊಂಡು ಅದರ ಬಳಕೆಯನ್ನು ಕಡಿಮೆ ಮಾಡುವುದು ಪರಿಸರಕ್ಕೂ, ಜೊತೆಗೆ ನಿಮ್ಮ ಆರೋಗ್ಯಕ್ಕೂ ಒಳ್ಳೆಯದು.
ಅಸ್ತಮಾ
ಎಸಿಯಿಂದಾಗಿ, ಅಸ್ತಮಾದಂತಹ ಗಂಭೀರ ಮಾರಣಾಂತಿಕ ಕಾಯಿಲೆ ಹೆಚ್ಚಾಗುವ ಸಾಧ್ಯತೆಗಳಿರುತ್ತದೆ. ಮೊದಲೇ ನೀವು ಅಸ್ತಮಾದಿಂದ ಬಳಲುತ್ತಿದ್ದರೆ, ನೀವು ಎಸಿಯನ್ನು ದೀರ್ಘಕಾಲ ಬಳಕೆ ಮಾಡುವುದನ್ನು ತಪ್ಪಿಸಬೇಕು.
ನಿರ್ಜಲೀಕರಣ
ಆರೋಗ್ಯ ತಜ್ಞರ ಪ್ರಕಾರ, ಎಸಿಯಲ್ಲಿ ದೀರ್ಘಕಾಲ ಕುಳಿತುಕೊಳ್ಳುವುದು ನಿರ್ಜಲೀಕರಣಕ್ಕೆ ಕಾರಣವಾಗಬಹುದು. ಅದರಲ್ಲಿಯೂ ಬೇಸಿಗೆಯಲ್ಲಿ ಈ ಸಮಸ್ಯೆಯಿಂದ ನಿಮ್ಮನ್ನು ರಕ್ಷಿಸಿಕೊಳ್ಳುವುದು ಬಹಳ ಮುಖ್ಯ.
ಅಲರ್ಜಿಕ್ ರೈನಿಟಿಸ್
ಎಸಿಯಲ್ಲಿ ಹೆಚ್ಚು ಸಮಯ ಕಳೆಯುವುದು ಅಲರ್ಜಿಕ್ ರಿನೈಟಿಸ್ ಗೆ ಮುಖ್ಯ ಕಾರಣ ಎಂಬುದು ನಿಮಗೆ ತಿಳಿದಿದೆಯೇ? ಹೌದು, ಇದು ನಿಜ. ಅದಕ್ಕಾಗಿಯೇ ನೀವು ಎಸಿಯಲ್ಲಿ ದೀರ್ಘಕಾಲ ಕುಳಿತುಕೊಳ್ಳದಿರುವುದು ಒಳ್ಳೆಯದು. ಅದಲ್ಲದೆ ಬೇರೆ ಬೇರೆ ವಿಧಾನಗಳಿಂದ ಮನೆಯನ್ನು ತಂಪಾಗಿಸಬೇಕು.
ಸೋಂಕಿನ ಅಪಾಯ
ಹವಾನಿಯಂತ್ರಣದಲ್ಲಿ ದೀರ್ಘಕಾಲ ಕುಳಿತುಕೊಳ್ಳುವುದು ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ. ಈ ಗಾಳಿಯು ಶ್ವಾಸನಾಳದ ಮೂಲಕ ಶ್ವಾಸಕೋಶವನ್ನು ಪ್ರವೇಶಿಸಬಹುದು ಮತ್ತು ಅನೇಕ ರೀತಿಯ ಉಸಿರಾಟದ ಸಮಸ್ಯೆಗಳನ್ನು ಉಂಟುಮಾಡಬಹುದು.
ಇದನ್ನೂ ಓದಿ: ಹಲ್ಲು ಚೂರು ಚೂರಾಗಿ ಬೀಳುತ್ತಾ! ಯಾವ ವಿಟಮಿನ್ ಕೊರತೆಯಾಗಿದೆ ತಿಳಿದುಕೊಳ್ಳಿ
ತಲೆನೋವು
ಎಸಿಯ ಅತಿಯಾದ ಬಳಕೆ ಕೆಲವರಲ್ಲಿ ತಲೆ ತಿರುಗುವಿಕೆ, ವಾಂತಿ ಅಥವಾ ತಲೆನೋವಿನಂತಹ ಸಮಸ್ಯೆಗಳನ್ನು ಉಂಟು ಮಾಡಬಹುದು.
ಒಣ ಚರ್ಮ
ಎಸಿ ಗಾಳಿಯು ನಿಮ್ಮ ಚರ್ಮದ ಆರೋಗ್ಯವನ್ನು ಸಹ ಹಾನಿಗೊಳಿಸುತ್ತದೆ. ವಾಸ್ತವದಲ್ಲಿ, ಹವಾನಿಯಂತ್ರಣದಲ್ಲಿ ದೀರ್ಘಕಾಲ ಕುಳಿತುಕೊಳ್ಳುವುದು ನಿಮಗರಿವಿಲ್ಲದಂತೆ ನಿಮ್ಮ ಚರ್ಮವನ್ನು ಒಣಗಿಸುತ್ತದೆ. ಅಂತಹ ಸಮಸ್ಯೆಗಳನ್ನು ತಪ್ಪಿಸಲು, ನೀವು ಎಸಿ ಬದಲಿಗೆ ಮನೆಯಲ್ಲಿ ಸಸ್ಯಗಳು ಬೆಳೆಸಬೇಕು. ಇದರಿಂದ ಶುದ್ಧ ಗಾಳಿ ನಿಮಗೆ ಸಿಗುತ್ತದೆ. ಇದು ನಿಮ್ಮ ಮನೆಗೆ ನೈಸರ್ಗಿಕವಾಗಿ ತಂಪನ್ನು ಒದಗಿಸುತ್ತದೆ. ಅಥವಾ ಒಂದಿಷ್ಟು ಸಮಯ ಮಾತ್ರ ಎಸಿಯಲ್ಲಿ ಕಳೆಯಿರಿ, ಬಳಿಕ ಆ ಅವಧಿಯ ನಂತರ ಎಸಿಯನ್ನು ಸ್ವಿಚ್ ಆಫ್ ಮಾಡುವ ಅಭ್ಯಾಸವನ್ನು ಮಾಡಿಕೊಳ್ಳಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




