ಮಕ್ಕಳಿಗೆ ಹೆಚ್ಚು ಫೋನ್ ನೋಡಲು ಬಿಡ್ಬೇಡಿ; ಯಾಕೆ ಗೊತ್ತಾ?
ಈ ಡಿಜಿಟಲ್ ಯುಗದಲ್ಲಿ ಪುಟ್ಟ ಪುಟ್ಟ ಮಕ್ಕಳು ಸ್ಮಾರ್ಟ್ ಫೋನ್ ವ್ಯಸನಿಗಳಾಗಿದ್ದಾರೆ. ಹೊರಗಡೆ ಆಟವಾಡಲು ಹೋಗುವ ಬದಲು ಮೊಬೈಲ್ ನೋಡುತ್ತಲೇ ಸಮಯ ಕಳೆಯುತ್ತಾರೆ. ಇನ್ನೂ ಪೋಷಕರು ಅಷ್ಟೆ ಮಕ್ಕಳು ಅತ್ತರೆ ಅಥವಾ ಅವರು ಊಟ ಮಾಡಲ್ಲ ಎಂದು ಹಠ ಮಾಡಿದಾಗ ಮೊಬೈಲ್ ಕೊಟ್ಟು ಬಿಡುತ್ತಾರೆ. ಹೀಗೆ ಹೆಚ್ಚು ಮಕ್ಕಳಿಗೆ ಮೊಬೈಲ್ ಕೊಟ್ಟರೆ ಏನಾಗುತ್ತದೆ ಎಂಬುದನ್ನು ನೀವು ತಿಳಿಯಲೇಬೇಕು ನೋಡಿ.

ಈಗಿನ ಕಾಲದ ಮಕ್ಕಳು ಸ್ನೇಹಿತರು, ಒಡ ಹುಟ್ಟಿದವರ ಜೊತೆ ಆಟವಾಡುತ್ತಾ ಸಮಯ ಕಳೆಯುವುದಕ್ಕಿಂತ ಮೊಬೈಲ್ (phones) ನೋಡುತ್ತಾ ಸಮಯ ಕಳೆಯುವುದೇ ಹೆಚ್ಚಾಗಿದೆ. ಮಕ್ಕಳಂತೂ ಮೊಬೈಲ್ ಚಟಕ್ಕೆ (Mobile addiction) ಬಿದ್ದಿದ್ದು, ಗೇಮ್ಸ್, ಸೋಷಿಯಲ್ ಮೀಡಿಯಾದ ಅಂತೆಲ್ಲಾ ದಿನದ ಹೆಚ್ಚಿನ ಸಮಯ ಫೋನ್‌ನಲ್ಲಿಯೇ ಕಳೆಯುತ್ತಿದ್ದಾರೆ. ಮಕ್ಕಳು ಹಠ ಮಾಡ್ತಾರೆ ಅನ್ನೋ ಕಾರಣಕ್ಕೆ ನೀವು ಪೋಷಕರಾದ ನೀವು ಸಹ ಅವರಿಗೆ ಮೊಬೈಲ್ ಕೊಡುತ್ತಿದ್ದೀರಾ? ಹೀಗೆ ಫೋನನ್ನು ಹೆಚ್ಚು ಹೊತ್ತು ನೋಡೋದ್ರಿಂದ ಏನಾಗುತ್ತೆ ಗೊತ್ತಾ? ಇದು ಮಕ್ಕಳ ಮೇಲೆ ಯಾವ ರೀತಿಯ ಪರಿಣಾಮವನ್ನು ಬೀರುತ್ತದೆ ಎಂಬುದನ್ನು ತಿಳಿಯಿರಿ.
ಮಕ್ಕಳಿಗೆ ಫೋನ್ ಕೊಟ್ಟರೆ ಏನಾಗುತ್ತದೆ?
ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ: ಅತಿಯಾದ ಮೊಬೈಲ್ ಬಳಕೆ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನಿರಂತರವಾಗಿ ಫೋನ್ ನೋಡುವುದರಿಂದ ಅವರ ಏಕಾಗ್ರತೆ ಕಡಿಮೆಯಾಗುತ್ತದೆ. ಇದು ಅವರ ಅಧ್ಯಯನ ಮತ್ತು ಇತರ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದೆ. ಇದಲ್ಲದೆ ಹೆಚ್ಚು ಫೋನ್ ನೋಡುವುದರಿಂದ ಕಿರಿಕಿರಿ ಮತ್ತು ಕೋಪಗೊಳ್ಳುತ್ತಾರೆ.
ನಿದ್ರೆ ಸಂಬಂಧಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಕೆಲವೊಂದು ಮಕ್ಕಳು ರಾತ್ರಿ ಹೆಚ್ಚು ಹೊತ್ತು ಮೊಬೈಲ್ ನೋಡುತ್ತಾರೆ. ಇದು ಅವರ ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ನಿದ್ರಾಹೀನತೆಗೆ ಕಾರಣವಾಗಬಹುದು. ಅಲ್ಲದೆ ಫೋನ್‌ನಿಂದ ಬರುವ ನೀಲಿ ಬೆಳಕು ನಿದ್ರೆಯನ್ನು ನಿಯಂತ್ರಿಸುವ ಮೆಲಟೋನಿನ್ ಹಾರ್ಮೋನ್ ಮೇಲೆ ಪರಿಣಾಮ ಬೀರುತ್ತದೆ. ಪರಿಣಾಮವಾಗಿ, ಮಕ್ಕಳು ರಾತ್ರಿಯಲ್ಲಿ ಸರಿಯಾಗಿ ನಿದ್ರೆ ಮಾಡಲು ಸಾಧ್ಯವಾಗುವುದಿಲ್ಲ.
ಕಣ್ಣುಗಳ ಮೇಲೆ ಪರಿಣಾಮ ಬೀರುತ್ತದೆ: ಫೋನ್ ಪರದೆಗಳಿಂದ ಬರುವ ನೀಲಿ ವಿಕಿರಣವು ಮಕ್ಕಳ ಸೂಕ್ಷ್ಮ ಕಣ್ಣುಗಳಿಗೆ ಹಾನಿ ಉಂಟುಮಾಡುತ್ತದೆ. ಇದರಿಂದ ದೃಷ್ಟಿ ಮಂದವಾಗುವುದು, ಕಣ್ಣಿನ ಕಿರಿಕಿರಿ ಮತ್ತು ಕಣ್ಣುಗಳಲ್ಲಿ ನೀರು ಬರುವಂತಹ ಸಮಸ್ಯೆಗಳನ್ನು ಉಂಟುಮಾಡಬಹುದು.
ಇದನ್ನೂ ಓದಿ: ಮೊಮ್ಮಕ್ಕಳು ಅಜ್ಜ-ಅಜ್ಜಿಯೊಂದಿಗೆ ಸಮಯ ಕಳೆಯಬೇಕು ಎನ್ನುವುದು ಇದಕ್ಕೆ ನೋಡಿ
ದೈಹಿಕ ಚಟುವಟಿಕೆಯ ಕೊರತೆ: ಹೆಚ್ಚು ಕಾಲ ಫೋನ್ ನೋಡುತ್ತಾ ಸಮಯ ಕಳೆಯುವ ಮಕ್ಕಳು ಹೊರಾಂಗಣ ಆಟಗಳನ್ನು ಆಡುವುದೇ ಇಲ್ಲ. ಇದು ದೈಹಿಕ ಚಟುವಟಿಕೆಯ ಕೊರತೆಗೆ ಕಾರಣವಾಗುತ್ತದೆ. ಇದು ಮಕ್ಕಳ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಅಲ್ಲದೆ ಇದು ಮಕ್ಕಳ ತೂಕ ಹೆಚ್ಚಾಗಲು ಕಾರಣವಾಗುತ್ತದೆ, ಇದು ಬೊಜ್ಜಿನ ಸಮಸ್ಯೆಯನ್ನು ಉಂಟುಮಾಡುತ್ತದೆ.
ಸಾಮಾಜಿಕ ಕೌಶಲ್ಯಗಳು ಪರಿಣಾಮ ಬೀರುತ್ತವೆ: ಹೆಚ್ಚು ಹೊತ್ತು ಮೊಬೈಲ್‌ನಲ್ಲಿ ಸಮಯ ಕಳೆಯುವುದರಿಂದ ಸಾಮಾಜಿಕವಾಗಿ ದೌರ್ಬಲರಾಗಿರುತ್ತಾರೆ. ಅವು ಯಾರೊಂದಿಗೂ ಹೆಚ್ಚು ಸಂವಹನ ನಡೆಸುವುದಿಲ್ಲ. ಇದು ಮಕ್ಕಳ ಸಂವಹನ ಕೌಶಲ್ಯ, ಚುರುಕುತನ ಮತ್ತು ಆತ್ಮವಿಶ್ವಾಸವನ್ನು ಕಡಿಮೆ ಮಾಡುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








