AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇದೇ ಕಾರಣಕ್ಕೆ ನೋಡಿ ಒಡಹುಟ್ಟಿದವರು ಯಾವಾಗಲೂ ಕಿತ್ತಾಡುತ್ತಲೇ ಇರೋದು

ಒಡ ಹುಟ್ಟಿದವರು ಅತಿಯಾಗಿ ಕಿತ್ತಾಡುತ್ತಿರುತ್ತಾರೆ, ಪ್ರತಿಯೊಂದು ವಿಷಯಕ್ಕೂ ಜಗಳವಾಡುತ್ತಿರುತ್ತಾರೆ. ನೀವು ಕೂಡ ನಿಮ್ಮ ಒಡಹುಟ್ಟಿದವರ ಜೊತೆ ಈ ರೀತಿ ಸಣ್ಣಪುಟ್ಟ ವಿಷಯಗಳಿಗೂ ಕಿತ್ತಾಡಿರುತ್ತೀರಿ ಅಲ್ವಾ. ಆದ್ರೆ ಒಡಹುಟ್ಟಿದವರು ಹೀಗೆ ಏಕೆ ಜಗಳ ಮಾಡುತ್ತಾರೆ ಗೊತ್ತಾ? ಇದರ ಹಿಂದೆಯೂ ಕಾರಣವಿದೆಯಂತೆ ಅದೇನೆಂಬುದನ್ನು ನೋಡೋಣ ಬನ್ನಿ.

ಇದೇ ಕಾರಣಕ್ಕೆ ನೋಡಿ ಒಡಹುಟ್ಟಿದವರು ಯಾವಾಗಲೂ ಕಿತ್ತಾಡುತ್ತಲೇ ಇರೋದು
ಸಾಂದರ್ಭಿಕ ಚಿತ್ರ Image Credit source: Getty Images
ಮಾಲಾಶ್ರೀ ಅಂಚನ್​
|

Updated on:Aug 05, 2025 | 8:25 PM

Share

ಒಡ ಹುಟ್ಟಿದವರ  (Siblings) ಸಂಬಂಧ ತುಂಬಾನೇ ವಿಶೇಷವಾದದ್ದು. ಅಲ್ಲಿ ಪ್ರೀತಿ, ಜಗಳ, ಅಸೂಯೆ ಎಲ್ಲವೂ ಇದೆ. ಒಡಹುಟ್ಟಿದವರ ನಡುವೆ ಎಷ್ಟೇ ಪ್ರೀತಿ ಇದ್ದರೂ ಅವರು ಜಗಳವಾಡಿಕೊಳ್ಳುವುದನ್ನು ಬಿಡುವುದಿಲ್ಲ.  ಸಣ್ಣ ವಯಸ್ಸಿನಿಂದಲೇ ಅಣ್ಣ-ತಂಗಿ, ಅಕ್ಕ-ತಂಗಿ, ಅಣ್ಣ-ತಮ್ಮ ಹೀಗೆ ಒಡಹುಟ್ಟಿದವರು ಕಿರಿಕ್‌ (siblings rivalry) ಮಾಡಿಕೊಳ್ಳುತ್ತಾರೆ. ಹೌದು ಬಟ್ಟೆ, ತಿಂಡಿ, ಊಟ, ಟಿವಿ ರಿಮೋಟ್‌, ಆಟಿಕೆ ಹೀಗೆ ಪ್ರತಿಯೊಂದು ವಿಷಯಕ್ಕೂ ಕಿತ್ತಾಡಿಕೊಂಡು, ಜಗಳವಾಡುತ್ತಾ ಮನೆಯವರಿಗೆ ಟೆನ್ಷನ್‌ ಕೊಡುತ್ತಿರುತ್ತಾರೆ. ಪ್ರತಿ ಮನೆಯಲ್ಲೂ ಇದು ತುಂಬಾನೇ ಕಾಮನ್‌ ಬಿಡಿ. ನೀವು ಸಹ ನಿಮ್ಮ ಒಡ ಹುಟ್ಟಿದವರೊಂದಿಗೆ ಇದೇ ರೀತಿ ಕಿತ್ತಾಡಿರುತ್ತೀರಿ ಅಲ್ವಾ. ಆದ್ರೆ ಒಡಹುಟ್ಟಿದವರು ಈ ರೀತಿ ಜಗಳವಾಡುವುದರ ಹಿಂದಿನ ಕಾರಣ ಏನೆಂಬುದು ನಿಮಗೆ ಗೊತ್ತಾ? ಇದಕ್ಕೂ ಒಂದಷ್ಟು ಕಾರಣಗಳಿವೆಯಂತೆ, ಅದರ ಸಂಪೂರ್ಣ ವಿವರ ಇಲ್ಲಿದೆ.

ಒಡ ಹುಟ್ಟಿದವರ ಕಿತ್ತಾಟಕ್ಕೆ ಕಾರಣಗಳು:

ಒಡಹುಟ್ಟಿದವರು ತಾವು ದೊಡ್ಡವರದಾ ಬಳಿಕವೂ ಟಾಮ್‌ ಆಂಡ್‌ ಜೆರ್ರಿ ತರಹ ಜಗಳವಾಡುತ್ತಲೇ ಇರುತ್ತಾರೆ. ಸಹೋದರ-ಸಹೋದರಿಯರು ಎಷ್ಟೇ ಪ್ರೀತಿಯಿಂದ ಇದ್ದರೂ, ಕೆಲವೊಂದು ಬಾರಿ ಸಿಕ್ಕಾಪಟ್ಟೆ ಜಗಳವಾಡಿಕೊಳ್ಳುತ್ತಾರೆ. ಇದಕ್ಕೆ ಕಾರಣ ಏನೆಂಬುದನ್ನು ನೋಡೋಣ.

  • ಪೋಷಕರು ಒಂದು ಮಗುವಿನ ಬಗ್ಗೆ ಹೆಚ್ಚು ಗಮನ ಹರಿಸಲು ಪ್ರಾರಂಭಿಸಿದಾಗ ವಿಶೇಷವಾಗಿ ಎರಡನೇ ಮಗುವಿನೊಂದಿಗೆ ಹೆಚ್ಚು ಸಮಯ ಕಳೆಯಲು ಪ್ರಾರಂಭಿಸಿದಾಗ, ಅದು ಮೊದಲ  ಮಗುವಿಗೆ ಕೆಟ್ಟ ಭಾವನೆ ಮೂಡಿಸಬಹುದು. ಆಗ ಆ ಮಗು  ತನ್ನ ಹೆತ್ತವರ ಗಮನ ಸೆಳೆಯಲು ಇನ್ನೊಂದು ಮಗುವಿನ ಜೊತೆ ಜಗಳವಾಡಲು ಪ್ರಾರಂಭಿಸುತ್ತದೆ.
  • ಒಡಹುಟ್ಟಿದವರ ಜಗಳಗಳು ಪ್ರಾರಂಭವಾಗುವುದೇ ಪರಸ್ಪರ ಅಸೂಯೆಯಿಂದ. ಎರಡನೇ ಮಗು ಜನಿಸಿದ ನಂತರ ಪೋಷಕರ ಗಮನವೆಲ್ಲಾ ಎರಡನೇ ಮಗುವಿನ ಮೇಲೆಯೇ ಇರುತ್ತದೆ. ಅಷ್ಟೇ ಅಲ್ಲದೆ ಚಿಕ್ಕವನು, ಎರಡನೇ ಮಗುವನ್ನು ಚಿಕ್ಕವಳು ಅಂತ ಹೇಳಿ ಮೊದಲನೇ ಮಗುವಿಗೆಯೇ ಹೆಚ್ಚಾಗಿ ಬೈಯುತ್ತಿರುತ್ತಾರೆ. ಇದು ಕೂಡಾ ಒಡ ಹುಟ್ಟಿದವರ ನಡುವೆ ಜಗಳ ನಡೆಯಲು ಕಾರಣ.
  • ಮಕ್ಕಳಿಗೆ ಸಮಾನ ಪ್ರೀತಿ ಸಿಗದಿದ್ದರೆ, ಅವರು ತಮ್ಮ ಸಹೋದರ ಸಹೋದರಿಯರ ಮೇಲೆ ಕೋಪಗೊಳ್ಳುತ್ತಾರೆ ಮತ್ತು ಅವರ ಮನಸ್ಸಿನಲ್ಲಿ ದ್ವೇಷವನ್ನು ಬೆಳೆಸಿಕೊಳ್ಳುತ್ತಾರೆ. ಇದು ಜಗಳಕ್ಕೆ ಕಾರಣವಾಗುತ್ತದೆ.
  • ಒಡಹುಟ್ಟಿದವರ ನಡುವೆ ಆಲೋಚನೆಗಳು ಮತ್ತು ಭಾವನೆಗಳಲ್ಲಿ ಭಿನ್ನಾಭಿಪ್ರಾಯಗಳು ಇರುತ್ತವೆ. ಈ ವಿಭಿನ್ನ ಅಭಿರುಚಿಗಳು ಕೂಡಾ ಜಗಳಗಳಿಗೆ ಕಾರಣವಾಗಬಹುದು. ಉದಾಹರಣೆಗೆ ಟಿವಿ ನೋಡುವ ವಿಚಾರದಲ್ಲಿ ನನಗೆ ಇದುವೇ ಕಾರ್ಟೂನ್‌ ಬೇಕು, ನಾನು ಇದೇ ಫಿಲ್ಮ್‌ ನೋಡ್ತೇನೆ ಎಂದು ಮಕ್ಕಳು ಮನೆಯಲ್ಲಿ ಜಗಳ ಮಾಡಿಕೊಳ್ಳುತ್ತಾರೆ.
  • ಒಡಹುಟ್ಟಿದವರ ನಡುವಿನ ಘರ್ಷಣೆ ಹೆಚ್ಚಾಗಲು ಮನೆಯ ವಾತಾವರಣವೂ ಒಂದು ಕಾರಣ. ಹೆತ್ತವರು ಮಕ್ಕಳ ಎದುರಲ್ಲಿ ಕೂಗಾಡುತ್ತಾ ಮಾತನಾಡಿದರೆ, ಮಕ್ಕಳು ಕೂಡಾ ಇದೇ ರೀತಿ ನಡೆದುಕೊಳ್ಳುತ್ತಾರೆ.

ಇದನ್ನೂ ಓದಿ: 10 ವರ್ಷ ತುಂಬುವ ಮೊದಲೇ ಮಕ್ಕಳಿಗೆ ಪೋಷಕರು ತಪ್ಪದೆ ಈ ವಿಚಾರಗಳನ್ನು ಕಲಿಸಬೇಕಂತೆ

ಇದನ್ನೂ ಓದಿ
Image
ಮೊಮ್ಮಕ್ಕಳು ಅಜ್ಜ-ಅಜ್ಜಿಯೊಂದಿಗೆ ಸಮಯ ಕಳೆಯಬೇಕು ಎನ್ನುವುದು ಇದಕ್ಕೆ ನೋಡಿ
Image
ನಿಮ್ಮ ಮಕ್ಕಳ ನೆನಪಿನ ಶಕ್ತಿಯನ್ನು ಹೆಚ್ಚಿಸಲು ಹೀಗೆ ಮಾಡಿ
Image
ಪೋಷಕರು ಪದೇ ಪದೇ ಮಕ್ಕಳ ಮುಂದೆ ಜಗಳವಾಡಿದರೆ ಏನಾಗುತ್ತದೆ ಗೊತ್ತಾ?
Image
ತಂದೆ ತನ್ನ ಮಗಳ ಮುಂದೆ ತಪ್ಪಿಯೂ ಈ ರೀತಿ ವರ್ತಿಸಬಾರದು

ಹೀಗೆ ಒಡಹುಟ್ಟಿದವರು ಜಗಳವಾಡುವಾಗ, ಪೋಷಕರು ಅವರನ್ನು ಸಮಾನವಾಗಿ ನಡೆಸಿಕೊಳ್ಳುವತ್ತ ಗಮನ ಹರಿಸಬೇಕು. ಒಬ್ಬರದ್ದೇ ತಪ್ಪು ಎಂದು ಒಂದು ಮಗುವಿಗೆ ಬೈದು, ಇನ್ನೊಂದು ಮಗುವನ್ನು ವಹಿಸಿ ಮಾತನಾಡಿದರೆ, ಆ ಮಗು ಮತ್ತಷ್ಟು ಕೋಪಗೊಳ್ಳುತ್ತದೆ. ಹಾಗಾಗಿ ಪೋಷಕರು ಇಬ್ಬರು ಮಕ್ಕಳನ್ನು ಸಮಾನವಾಗಿ ನಡೆಸಿಕೊಳ್ಳಬೇಕು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:24 pm, Tue, 5 August 25

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ