AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಬ್ರೋ ಶೇಪ್‌ ಮಾಡುವ ಮುನ್ನ ಹುಷಾರು; ಸೌಂದರ್ಯ ಹೆಚ್ಚಿಸಲು ಹೋಗಿ ಅಪಾಯ ತಂದುಕೊಳ್ಳಬೇಡಿ

ಸೌಂದರ್ಯ ಕಾಪಾಡಿಕೊಳ್ಳಲು ಹುಬ್ಬಿಗೆ ಒಂದು ಚೆಂದದ ಆಕಾರ ನೀಡುವುದಕ್ಕಾಗಿ ಪಾರ್ಲರ್‌ಗಳಿಗೆ ಹೋಗುವ ಹುಡುಗಿಯರು ಮತ್ತು ಮಹಿಳೆಯರಿಗೆ ಇದು ಒಂದು ಎಚ್ಚರಿಕೆ. ಅನಾರೋಗ್ಯಕರ ಥ್ರೆಡ್ಡಿಂಗ್ ಯಕೃತ್ತಿನ ಹಾನಿ, ಹೆಪಟೈಟಿಸ್ ಮತ್ತು ಎಚ್‌ಐವಿಯಂತಹ ಗಂಭೀರ ಸೋಂಕುಗಳಿಗೆ ಕಾರಣವಾಗಬಹುದು ಎಂದು ವೈದ್ಯರು ಮತ್ತು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ. ಹಾಗಾದರೆ ಥ್ರೆಡ್ಡಿಂಗ್ ನಿಂದ ಆರೋಗ್ಯ ಸಮಸ್ಯೆಗಳು ಹೇಗೆ ಬರುತ್ತವೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಐಬ್ರೋ ಶೇಪ್‌ ಮಾಡುವ ಮುನ್ನ ಹುಷಾರು; ಸೌಂದರ್ಯ ಹೆಚ್ಚಿಸಲು ಹೋಗಿ ಅಪಾಯ ತಂದುಕೊಳ್ಳಬೇಡಿ
Beauty Vs. Health
ಪ್ರೀತಿ ಭಟ್​, ಗುಣವಂತೆ
|

Updated on: Aug 05, 2025 | 5:42 PM

Share

ಇತ್ತೀಚಿನ ದಿನಗಳಲ್ಲಿ, ಅನೇಕ ಮಹಿಳೆಯರು ಹುಬ್ಬಿಗೆ ಒಂದು ಚೆಂದದ ಆಕಾರ ನೀಡುವುದಕ್ಕಾಗಿ ಬ್ಯೂಟಿ ಪಾರ್ಲರ್‌ಗಳಿಗೆ ಹೋಗುವುದನ್ನು ಸಾಮಾನ್ಯವಾಗಿದೆ. ಮುಖಕ್ಕೆ ಒಂದು ಹೊಸ ಆಕರ್ಷಣೆ ನೀಡುವ ಈ ಥ್ರೆಡ್ಡಿಂಗ್ ಪ್ರಕ್ರಿಯೆಯು ಕಡಿಮೆ ವೆಚ್ಚ ಮತ್ತು ಸಮಯದಲ್ಲಿ ಪೂರ್ಣಗೊಳ್ಳುತ್ತದೆ. ಆದರೆ ನಿಮ್ಮ ಗಮನ ಸೌಂದರ್ಯದ ಮೇಲೆ ಮಾತ್ರ ಕೇಂದ್ರೀಕೃತವಾಗಿರಬಾರದು ಬದಲಾಗಿ ಪಾರ್ಲರ್‌ ನವರು ಅಳವಡಿಸಿಕೊಂಡಿರುವ ನೈರ್ಮಲ್ಯ ಅಭ್ಯಾಸಗಳ ಬಗ್ಗೆಯೂ ಗಮನಹರಿಸುವುದು ಅವಶ್ಯವಾಗಿರುತ್ತದೆ. ಏಕೆಂದರೆ ಪಾರ್ಲರ್‌ (parlor) ಗಳಿಗೆ ಹೋಗುವವರಿಗೆ ಅನೇಕ ರೀತಿಯ ಆರೋಗ್ಯ (Health) ಸಮಸ್ಯೆಗಳು ಕಂಡು ಬರುತ್ತಿದ್ದು, ಕೆಲವು ಪಾರ್ಲರ್‌ಗಳಲ್ಲಿ, ಒಂದೇ ದಾರವನ್ನು ಬಹು ಕ್ಲೈಂಟ್‌ಗಳಿಗೆ ಬಳಸುವುದರಿಂದ ಅಂತಹ ವೈರಸ್‌ಗಳು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ಹರಡುವ ಅಪಾಯ ಹೆಚ್ಚಾಗಿರುತ್ತದೆ ಹಾಗಾಗಿ ಪಾರ್ಲರ್ ನಲ್ಲಿ ಥ್ರೆಡ್ಡಿಂಗ್ (Threading) ಮಾಡುವಾಗ ಬಹಳ ಹುಷಾರಾಗಿರಬೇಕು. ಹಾಗಾದರೆ ಯಾವ ರೀತಿಯ ಕಾಯಿಲೆ ಹರಡುತ್ತದೆ? ಥ್ರೆಡ್ಡಿಂಗ್ ನಿಂದ ಆರೋಗ್ಯ ಸಮಸ್ಯೆಗಳು ಹೇಗೆ ಬರುತ್ತವೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ವಿಶ್ವ ಆರೋಗ್ಯ ಸಂಸ್ಥೆ ಹೇಳುವುದೇನು?

ಇದಕ್ಕೆ ಪೂರಕ ಎಂಬಂತೆ ಇತ್ತೀಚೆಗೆ, ಗುಜರಾತ್ ನಲ್ಲಿ ಒಬ್ಬ ಮಹಿಳೆಪಾರ್ಲರ್‌ ಹೋಗಿ ಬಂದ ಬಳಿಕ ಆರೋಗ್ಯ ಸಮಸ್ಯೆಗಳು ಕಂಡು ಬಂದಿದ್ದು, ವೈದ್ಯರನ್ನು ಸಂಪರ್ಕ ಮಾಡಿ ಕೇಳಿದಾಗ ಆಕೆಗೆ ಹೆಪಟೈಟಿಸ್ ಬಿ ಎಂಬ ವೈರಲ್ ಸೋಂಕು ಇದೆ ಎಂದು ಹೇಳಿದ್ದಾರೆ. ಥ್ರೆಡ್ಡಿಂಗ್‌ಗೆ ಬಳಸುವ ದಾರ ಈ ಸೋಂಕಿಗೆ ಕಾರಣ ಎಂಬುದು ಕಂಡುಬಂದಿದೆ. ಯಕೃತ್ತಿನ ಹಾನಿ, ಹೆಪಟೈಟಿಸ್ ಬಿ ಮತ್ತು ಸಿ ನಂತಹ ಸೋಂಕುಗಳ ಜೊತೆಗೆ, ಇಂತಹ ಅಶುದ್ಧ ಅಭ್ಯಾಸಗಳಿಂದ ಎಚ್ಐವಿ ನಂತಹ ಗಂಭೀರ ಕಾಯಿಲೆಗಳು ಹರಡುವ ಅಪಾಯವೂ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಈಗಾಗಲೇ ಈ ವಿಷಯದ ಬಗ್ಗೆ ಎಚ್ಚರಿಕೆ ನೀಡಿದೆ. ಶುಚಿತ್ವ ಕಾಪಾಡಿಕೊಳ್ಳದೆ ರೇಜರ್‌ ಅಥವಾ ದಾರ ಪದೇ ಪದೇ ಉಪಯೋಗ ಮಾಡುವುದರಿಂದ ಸೋಂಕುಗಳ ಅಪಾಯ ಹೆಚ್ಚಳವಾಗುವುದಕ್ಕೆ ಕಾರಣವಾಗುತ್ತಿವೆ. ಏಕೆಂದರೆ ಬಳಸಿದ ಉಪಕರಣಗಳ ಮೇಲೆ ಈ ವೈರಸ್‌ಗಳು ಹಲವಾರು ದಿನಗಳವರೆಗೆ ಬದುಕಬಲ್ಲವು ಎಂದು ಅಧ್ಯಯನಗಳು ಕೂಡ ಬಹಿರಂಗಪಡಿಸಿದೆ.

ಇದನ್ನೂ ಓದಿ: ಗರ್ಭಿಣಿಯರು ಯಾವುದೇ ಕಾರಣಕ್ಕೂ ಬ್ಯೂಟಿ ಪಾರ್ಲರ್​​​ಗಳಲ್ಲಿ ಇವುಗಳನ್ನು ಮಾಡಿಸಬಾರದು

ಇದನ್ನೂ ಓದಿ
Image
ಪ್ರತಿದಿನ ಕಾಫಿ ಕುಡಿಯುವುದರಿಂದ ಏನೆಲ್ಲಾ ಆಗುತ್ತೆ ಗೊತ್ತಾ?
Image
ಹೃದಯಾಘಾತಕ್ಕೂ ಮುನ್ನ ಚರ್ಮದಲ್ಲಿ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತಂತೆ
Image
ಈ ಆಯುರ್ವೇದ ಅಭ್ಯಾಸಗಳನ್ನು ಅನುಸರಿಸಿದರೆ ಲಿವರ್ ಆರೋಗ್ಯವಾಗಿರುತ್ತೆ!
Image
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ರೀತಿ ಅಂಜೂರ ಸೇವನೆ ಮಾಡಿ

ಸಣ್ಣ ನಿರ್ಲಕ್ಷ್ಯ ತೀವ್ರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು

ಆರೋಗ್ಯಕರ ದೇಹ ವೈರಸ್ ಗಳ ವಿರುದ್ಧ ಹೋರಾಡಬಹುದಾದರೂ ಕೂಡ ರೋಗನಿರೋಧಕ ಶಕ್ತಿ ಕಡಿಮೆಯಾದಾಗ, ತೀವ್ರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ತೀವ್ರವಾದ ಹೆಪಟೈಟಿಸ್ ಬಿ ಆರು ತಿಂಗಳ ವರೆಗೆ ಇರುತ್ತದೆ, ಈ ಸಮಯದಲ್ಲಿ ವೈರಸ್ ದೇಹದಾದ್ಯಂತ ಹರಡುತ್ತದೆ. ಸಾಮಾನ್ಯ ಹೆಪಟೈಟಿಸ್ ಆದರೆ ಬೇಗನೆ ಚೇತರಿಸಿಕೊಳ್ಳಬಹುದು. ಆದ್ದರಿಂದ, ಥ್ರೆಡ್ಡಿಂಗ್‌ಗೆ ಒಳಗಾಗುವ ಮೊದಲು, ಪಾರ್ಲರ್‌ನ ಸ್ವಚ್ಛತೆ ಮತ್ತು ಬಳಸುತ್ತಿರುವ ಉಪಕರಣಗಳು ಸುರಕ್ಷಿತವಾಗಿದೆಯೇ ಎಂದು ಖಂಡಿತವಾಗಿಯೂ ಪರಿಶೀಲಿಸಬೇಕು. ಸಣ್ಣ ನಿರ್ಲಕ್ಷ್ಯವು ತೀವ್ರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂಬುದನ್ನು ನೆನಪಿನಲ್ಲಿಡಬೇಕು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Preethi Bhat Gunavante
Preethi Bhat Gunavante

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು