ಸಾಮಾನ್ಯವಾಗಿ ಬೆಳಗಿನ ಉಪಹಾರ(Morning Breakfast) ದಲ್ಲಿ ಪುಲಾವ್ ಇರುತ್ತದೆ. ಪುಲಾವ್(Pulao) ನಿಮ್ಮ ಆರೋಗ್ಯಕ್ಕೂ ಒಳ್ಳೆಯದು. ಯಾಕೆಂದರೆ ಇದರಲ್ಲಿ ಸಾಕಷ್ಟು ತರಕಾರಿಗಳನ್ನು ಬಳಸಲಾಗುತ್ತದೆ. ಇದು ನಿಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಇಂದೂ ದಾಸವಾಳ ಹೂವಿನಿಂದ ಮಾಡಲಾಗುವ ಆರೋಗ್ಯಕರ ಪುಲಾವ್ ರೆಸಿಪಿ ಇಲ್ಲಿದೆ. ಇದರೊಂದಿಗೆ ತೆಂಗಿನ ಕಾಯಿಯನ್ನು ಬಳಸುವುರಿಂದ ರುಚಿಯ ಜೊತೆಗೆ ಒಳ್ಳೆಯ ಸುವಾಸನೆಯನ್ನು ನೀಡುತ್ತದೆ. ಆದ್ದರಿಂದ ನಿಮ್ಮ ಮನೆಯಲ್ಲಿಯೂ ಒಮ್ಮೆ ಪ್ರಯತ್ನಿಸಿ. ದಾಸವಾಳವನ್ನು ತಿನ್ನುವುದರಿಂದ ಮಹಿಳೆಯರ ಮುಟ್ಟಿನ ಸಮಸ್ಯೆಗೆ ಉತ್ತಮ ಔಷಧಿಯಾಗಿದೆ. ಇದಲ್ಲದೇ ದಾಸವಾಳ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.
ಹಂತ 1
ಮೊದಲು ತೆಂಗಿನ ಅನ್ನ ಮಾಡಲು ತೆಂಗಿನ ಕಾಯಿ ನೀರು, ನೆನೆಸಿದ ಅಕ್ಕಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಬೇಯಲು ಇಡಿ.
ಹಂತ 2:
ದಾಸವಾಳದ ಹೂವಿನ ರಸ ತಯಾರಿಸಿ. ಇದಕ್ಕಾಗಿ ನೀವು ಮೊದಲಿಗೆ ನೀರು ಬಿಸಿ ಮಾಡಿ ಮತ್ತು ನೀರು ಕುದಿಯುತ್ತಿರುವಾಗ ಅದಕ್ಕೆ ದಾಸವಾಳವನ್ನು ಹಾಕಿ. ಇದನ್ನು 2 ರಿಂದ 3 ನಿಮಿಷಗಳ ಕಾಲ ಕುದಿಸಿ, ನಂತರ ಅದನ್ನು ಪಕ್ಕಕ್ಕೆ ಇರಿಸಿ, ತಣ್ಣಗಾಗಲು ಬಿಡಿ. ಈಗ ಸೋಸಿ ಮತ್ತು ಹೂವುಗಳನ್ನು ತೆಗೆಯಿರಿ. ನೀರು ಗುಲಾಬಿ ಬಣ್ಣಕೆ ತಿರುಗಿರುತ್ತದೆ. ಈ ನೀರನ್ನು ಮತ್ತೆ ಕುದಿಸಿ ಮತ್ತು ಈಗಾಗಲೇ ಮಾಡಿಟ್ಟ (ಹಂತ 1) ಅನ್ನವನ್ನು ಸೇರಿಸಿ.
ಇದನ್ನೂ ಓದಿ: ಕೊಂಕಣಿ ಶೈಲಿಯ ದಾಲ್ ತೋವೆ ತಯಾರಿಸಲು ಸಿಂಪಲ್ ಟಿಪ್ಸ್ ಇಲ್ಲಿದೆ
ಹಂತ 3:
ಪುಲಾವ್ ಮಾಡಲು, ತುಪ್ಪವನ್ನು ಬಿಸಿ ಮಾಡಿ, ಜೀರಿಗೆ, ಏಲಕ್ಕಿ, ದಾಲ್ಚಿನ್ನಿ, ಕೆಂಪು ಮೆಣಸಿನಕಾಯಿ, ಕರಿಬೇವಿನ ಎಲೆಗಳು, ಹಸಿರು ಮೆಣಸಿನಕಾಯಿಗಳು ಮತ್ತು ಈರುಳ್ಳಿ ಸೇರಿಸಿ. ಬೇಯಿಸಿದ ಅನ್ನ, ಪನೀರ್, ಗೋಡಂಬಿ, ಬಾದಾಮಿ ಸೇರಿಸಿ. ಇದಕ್ಕೆ . ಉಪ್ಪು ಮತ್ತು ನಿಂಬೆ ರಸವನ್ನು ಸೇರಿಸಿ, ಮಿಶ್ರಣ ಮಾಡಿ. ಕೊತ್ತಂಬರಿ ಸೊಪ್ಪು ಸೇರಿಸಿ. ಪುಲಾವ್ ಸಿದ್ದವಾಗಿದೆ.
ಹಂತ 4:
ಹೆಚ್ಚಿನ ಅಲಂಕರವನ್ನು ನೀಡಲು ಒಂದು ತೆಂಗಿನ ಕಾಯಿಯನ್ನು ತೆಗೆದುಕೊಂಡು ಅದಕ್ಕೆ ಈಗಾಗಲೇ ಮಾಡಿಟ್ಟ ಪುಲಾವ್ ಸೇರಿಸಿ. ಈಗ ತೆಂಗಿನಕಾಯಿಯ ಸುಗಂಧ ಭರಿತ ದಾಸವಾಳದ ಪುಲಾವ್ ಸಿದ್ದವಾಗಿದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 11:05 am, Wed, 21 December 22