Fashion Tips : 90ರ ದಶಕದಲ್ಲಿ ಫ್ಯಾಷನ್ ಪ್ರಿಯರ ಮನಸ್ಸು ಗೆದ್ದ ಉಡುಪುಗಳಿವು

| Updated By: ಅಕ್ಷಯ್​ ಪಲ್ಲಮಜಲು​​

Updated on: Apr 29, 2024 | 2:47 PM

ಫ್ಯಾಷನ್ ಲೋಕವೇ ಹಾಗೆ, ಇವತ್ತಿಂದ ಫ್ಯಾಷನ್ ಟ್ರೆಂಡ್ ಗಳು ನಾಳೆ ಇರಲ್ಲ. ಹಳೆಯ ಫ್ಯಾಷನ್ ಗಳು ಮತ್ತೆ ಮತ್ತೆ ಮರುಕಳಿಸುತ್ತಿರುತ್ತವೆ. ಹೊಸದು ಹಳೆಯದಾಗುತ್ತಾ, ಹಳೆ ಫ್ಯಾಷನ್‌ಗಳು ಮತ್ತೆ ಬರುತ್ತಾ ಮಾರುಕಟ್ಟೆಯಲ್ಲಿ ಗಮನ ಸೆಳೆಯುತ್ತವೆ. ಇಂದಿನ ಫ್ಯಾಷನ್ ಯುಗದಲ್ಲಿ ಆಫ್‌ ಶೋಲ್ಡರ್‌ ಡ್ರೆಸ್‌ಗಳು, ಬಾರ್ಡಾಟ್‌ ಡ್ರೆಸ್‌ಗಳು, ಶೋಲ್ಡರ್‌ನ ಸೀರೆ ಬ್ಲೌಸ್‌, ಆಫ್‌ ಶೋಲ್ಡರ್‌ ಜೀನ್ಸ್‌ ಟಾಪ್‌, ಆಫ್‌ ಶೋಲ್ಡರ್‌ ಗೌನ್‌, ಆಫ್‌ ಶೋಲ್ಡರ್ ವೆಸ್ಟರ್ನ್‌ ಗೌನ್‌ ನೆಚ್ಚಿನ ಡ್ರೆಸ್ ಗಳ ಪಟ್ಟಿಗೆ ಸೇರಿಕೊಂಡಿವೆ. ಆದರೆ 80 ಹಾಗೂ 90ರ ದಶಕದಲ್ಲಿ ಫ್ಯಾಷನ್ ಪ್ರಿಯರ ಮನಸ್ಸು ಗೆದ್ದ ಉಡುಪುಗಳ ಬಗೆಗಿನ ಮಾಹಿತಿಯು ಇಲ್ಲಿದೆ.

Fashion Tips : 90ರ ದಶಕದಲ್ಲಿ ಫ್ಯಾಷನ್ ಪ್ರಿಯರ ಮನಸ್ಸು ಗೆದ್ದ ಉಡುಪುಗಳಿವು
Follow us on

ಫ್ಯಾಷನ್ ಲೋಕವು ಕಾಲ ಕಾಲಕ್ಕೆ ಬದಲಾಗುತ್ತಿರುತ್ತದೆ 90 ದಶಕದಲ್ಲಿ ಬಾಲಿವುಡ್ ನಟ ನಟಿಯರಾದ ಕಾಜೋಲ್, ಶಿಲ್ಪಾ ಶೆಟ್ಟಿ, ಜೂಹಿ ಚಾವ್ಲಾ, ರಾಣಿ ಮುಖರ್ಜಿ, ಐಶ್ವರ್ಯ ರೈ, ಕರಿಷ್ಮಾ ಕಪೂರ್, ಅಮಿತಾಭ್ ಬಚ್ಚನ್, ಹೃತಿಕ್ ರೋಷನ್ ಸೇರಿದಂತೆ ಸಿನಿಮಾಗಳಲ್ಲಿ ಹಾಗೂ ಪಾರ್ಟಿಗಳಲ್ಲಿ ಈ ಫ್ಯಾಷನ್ ಉಡುಗೆಯಲ್ಲಿ ಮಿಂಚಿದ್ದಾರೆ. ಆದರೆ ಕಳೆದ ಕೆಲವು ವರ್ಷಗಳಿಂದ 80 ಹಾಗೂ 90ರ ದಶಕದ ಉಡುಪುಗಳು ಹೊಸ ರೂಪ ಪಡೆದು ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದ್ದು ಫ್ಯಾಷನ್ ಪ್ರಿಯರ ಮನಸ್ಸನ್ನು ಗೆಲ್ಲುತ್ತಿದೆ.

90 ದಶಕದಲ್ಲಿ ಫ್ಯಾಷನ್ ಪ್ರಿಯರ ಗಮನ ಸೆಳೆದಿದ್ದ ಉಡುಗೆಗಳು

ವೆಲ್ವೆಟ್ ಉಡುಪುಗಳು

90 ರ ದಶಕದಲ್ಲಿ ಜನಪ್ರಿಯತೆಯನ್ನು ಗಳಿಸಿಕೊಂಡಿದ್ದ ಉಡುಪುಗಳಲ್ಲಿ ಫ್ಯಾಬ್ರಿಕ್, ವೆಲ್ವೆಟ್ ಉಡುಪುಗಳು ಕೂಡ ಒಂದಾಗಿತ್ತು. ವೆಲ್ವೆಟ್ ಉಡುಪಿನ ವಿನ್ಯಾಸ ಮತ್ತು ನೋಟದಿಂದಲೇ ಫ್ಯಾಷನ್ ಪ್ರಿಯರ ನೆಚ್ಚಿನ ಉಡುಪುಗಳ ಸಾಲಿಗೆ ಸೇರಿತ್ತು.

ಬೆಲ್ ಬಾಟಮ್ ಜೀನ್ಸ್

ಬೆಲ್ ಬಾಟಮ್‌ಗಳು ಫ್ಯಾಷನ್ ಮತ್ತೆ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ. 90 ರ ದಶಕದಲ್ಲಿ ಸೆಲೆಬ್ರಿಟಿಗಳ ಫ್ಯಾಷನ್ ಉಡುಪುಗಳ ಸಾಲಿಗೆ ಈ ಬೆಲ್ ಬಾಟಮ್ ಜೀನ್ಸ್ ಗಳು ಸೇರಿತ್ತು. ಆದರೆ ಇತ್ತೀಚೆಗಿನ ದಿನಗಳಲ್ಲಿ ಈ ಟ್ರೆಂಡ್ ಮತ್ತೆ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ.

ಪಂಕ್ ಫ್ಯಾಷನ್

ಫ್ಯಾಷನ್ ಲೋಕದಲ್ಲಿ ಪ್ರಖ್ಯಾತಿ ಪಡೆದ ಈ ಪಂಕ್ ಫ್ಯಾಷನ್ ಉಡುಗೆಗಳನ್ನು 80 ಹಾಗೂ 90 ದಶಕದ ವೇಳೆಗೆ ಫ್ಯಾಷನ್ ಪ್ರಿಯರು ಹೆಚ್ಚು ಧರಿಸುತ್ತಿದ್ದರು. ರಿಪ್ಟ್ ಜೀನ್ಸ್, ಲೆದರ್ ಜಾಕೆಟ್, ದಪ್ಪನೆಯ ಬೂಟ್ಸ್ ಹಾಗೂ ಬ್ಯಾಂಡ್ ಟೀ ಶರ್ಟ್ ಪಂಕ್ ಫ್ಯಾಷನ್‌ ಟ್ರೆಂಡ್ ಆಗಿತ್ತು.

ಇದನ್ನೂ ಓದಿ: ಆರೋಗ್ಯ ಸುಧಾರಿಸುವ ಚಿಕಿತ್ಸಾ ವಿಧಾನವೇ ಈ ‘ನೃತ್ಯ’

ಹಿಪ್ ಹಾಪ್ ಸ್ಟೈಲ್ ಫ್ಯಾಷನ್

80 ಹಾಗೂ 90 ದಶಕದ ಸಮಯದಲ್ಲಿ ಹಿಪ್ ಹಾಪ್ ಸಂಗೀತಗಾರರಿಂದ ಸ್ಫೂರ್ತಿ ಪಡೆದು ಈ ಫ್ಯಾಷನ್ ಉಡುಗೆಗಳು ಮಾರುಕಟ್ಟೆಯಲ್ಲಿ ಟ್ರೆಂಡ್ ಆಗಿ ಬದಲಾಯಿತು. ಗಾಢ ಬಣ್ಣದ ಸಡಿಲವಾದ ಉಡುಗೆಗಳು ಹೆಚ್ಚು ಆಕರ್ಷಕವಾದ ನೋಟವನ್ನು ನೀಡಿತ್ತು. ಅದೇ ಫ್ಯಾಷನ್ ಗಳು ಇಂದಿಗೂ ಮರುಕಳಿಸಿದೆ. ಉದ್ದ ತೋಳಿನ ಬಣ್ಣ ಬಣ್ಣದ ಶರ್ಟ್‌ಗೆ ಒಪ್ಪುವಂತಹ ಜೀನ್ಸ್, ಜೀನ್ಸ್ ಧರಿಸಿ ಬೆಲ್ಟ್ ಹಾಕಿ ಇನ್‌ಶರ್ಟ್ ಮಾಡಿಕೊಳ್ಳುವುದು ಆಗಿನ ಕಾಲದ ಫ್ಯಾಷನ್ ಗಳಲ್ಲಿ ಒಂದಾಗಿದ್ದು, ಇದೀಗ ಈ ಫ್ಯಾಷನ್ ಮತ್ತೆ ಮರುಕಳಿಸಿದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ