
ಆರೋಗ್ಯವನ್ನು ಕಾಪಾಡಿಕೊಳ್ಳಲು ಆರೋಗ್ಯಕರ ಆಹಾರ ಪದ್ಧತಿ, ಜೀವನಶೈಲಿ, ವ್ಯಾಯಾಮ ಎಷ್ಟು ಮುಖ್ಯವೋ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ನಿದ್ರೆಯೂ (sleep) ಬಹಳ ಮುಖ್ಯ. ಆರೋಗ್ಯವಾಗಿರಲು ಪ್ರತಿಯೊಬ್ಬ ವ್ಯಕ್ತಿಯೂ ಕನಿಷ್ಠ 7 ರಿಂ 9 ಗಂಟೆಗಳ ಕಾಲ ಉತ್ತಮ ನಿದ್ರೆ ಮಾಡಬೇಕು. ಆದರೆ ಇಂದು ಅನೇಕರು ಒತ್ತಡ, ಕಳಪೆ ಜೀವನಶೈಲಿಯ ಕಾರಣದಿಂದಾಗಿ ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಬೇಗ ಮಲಗಿದರೂ ಸಹ ನಿದ್ರೆ ಮಾತ್ರ ಬರೋದೆ ಇಲ್ಲ ಎನ್ನುತ್ತಿರುತ್ತಾರೆ. ನಿಮಗೂ ಕೂಡ ಈ ಸಮಸ್ಯೆ ಇದ್ಯಾ? ಹಾಗಿದ್ರೆ ಈ ಒಂದಷ್ಟು ಸಿಂಪಲ್ ಸಲಹೆಗಳನ್ನು ಪಾಲಿಸಿ, ಮಲಗಿದೆ ಎರಡನೇ ನಿಮಿಷಕ್ಕೆ ಸುಖ ನಿದ್ರೆಗೆ ಜಾರುವಿರಿ.
ಲೈಟ್ ಆಫ್ ಮಾಡಿ: ನೀವು ಮಲಗಿದ ತಕ್ಷಣ ನಿದ್ರಿಸಲು ಬಯಸಿದರೆ, ಕೋಣೆಯ ಲೈಟ್ ಆಫ್ ಮಾಡಿ. ಬೆಳಕು ನಿಮ್ಮ ಸಿರ್ಕಾಡಿಯನ್ ಲಯವನ್ನು ಅಡ್ಡಿಪಡಿಸುತ್ತದೆ. ಕೊಠಡಿ ಕತ್ತಲೆಯಾಗಿದ್ದರೆ, ನೀವು ಬೇಗ ನಿದ್ರಿಸುತ್ತೀರಿ. ಹಾಗಾಗಿ ಮಲಗುವ ಕೋಣೆ ಕತ್ತಲೆಯಿಂದಿರುವಂತೆ ನೋಡಿಕೊಳ್ಳಿ.
ಮೊಬೈಲ್ ನೋಡಬೇಡಿ: ಮಲಗುವ ಒಂದು ಗಂಟೆ ಮೊದಲು ನೀವು ಫೋನ್ ನೋಡುವುದನ್ನು ನಿಲ್ಲಿಸಿ. ಫೋನ್ ಮೆಲಟೋನಿನ್ ಉತ್ಪದನೆಗೆ ಅಡ್ಡಿಪಡಿಸಬಹುದು. ಇದು ನಿದ್ರೆ ಮಾಡಲು ಕಷ್ಟವಾಗುತ್ತದೆ. ಹಾಗಾಗಿ ಈ ಅಭ್ಯಾಸವನ್ನು ತಕ್ಷಣ ನಿಲ್ಲಿಸಿ
ಪುಸ್ತಕ ಓದಿ: ರಾತ್ರಿ ಮಲಗುವ ಮುನ್ನ ನಿಮ್ಮಿಷ್ಟದ ಪುಸ್ತಕ ಓದಿ. ಇದರಿಂದ ಮನಸ್ಸು ಹಗುರವಾಗುತ್ತದೆ. ನೀವು ಬೇಗನೆ ನಿದ್ರೆ ಮಾಡಲು ಸಹ ಇದು ಸಹಾಯ ಮಾಡುತ್ತದೆ.
ಧ್ಯಾನ: ಮಲಗುವ ಮುನ್ನ 5 ನಿಮಿಷಗಳ ಕಾಲ ಧ್ಯಾನ ಮಾಡಿ. ಯಾವುದೇ ಆಲೋಚನೆಗಳು ನಿಮ್ಮ ಮನಸ್ಸಿನಲ್ಲಿ ಬರಲು ಬಿಡಬೇಡಿ. ನಿಮ್ಮ ಉಸಿರಾಟದ ಮೇಲೆ ಗಮನಹರಿಸಿ. ಇದು ನಿಮಗೆ ವೇಗವಾಗಿ ನಿದ್ರಿಸಲು ಸಹಾಯ ಮಾಡುತ್ತದೆ.
ಅರೋಮಾಥೆರಪಿ: ರಾತ್ರಿ ಮಲಗುವ ಮುನ್ನ ಅರೋಮಾಥೆರಪಿಯನ್ನು ಅನುಸರಿಸಿ. ಇದು ಮನಸ್ಸನ್ನು ಶಾಂತವಾಗಿಸುತ್ತದೆ ಮತ್ತು ಇದು ನಿಮಗೆ ಚೆನ್ನಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಆರೋಗ್ಯ ಚೆನ್ನಾಗಿರಬೇಕಂದ್ರೆ, ರಾತ್ರಿ ಈ ನಿಗದಿತ ಸಮಯದೊಳಗೆ ಊಟ ಮಾಡುವುದು ಸೂಕ್ತವಂತೆ
ಸಂಗೀತ ಆಲಿಸಿ: ಸಂಗೀತ ಕೇಳುವುದರಿಂದ ಒತ್ತಡ ಮತ್ತು ಆತಂಕ ಕಡಿಮೆಯಾಗುತ್ತದೆ, ಅಲ್ಲದೆ ನಿದ್ರಾಹೀನತೆ ಕಡಿಮೆಯಾಗುತ್ತದೆ. ನೀವು ವೇಗವಾಗಿ ನಿದ್ರಿಸಲು ಸಹಾಯ ಮಾಡುತ್ತದೆ. ಹಾಗಾಗಿ ಮಲಗುವ ಮುನ್ನ ಸಂಗೀತ ಕೇಳಿ.
ಬಿಸಿ ನೀರಿನ ಸ್ನಾನ: ಮಲಗುವ ಮುನ್ನ ಬಿಸಿನೀರಿನ ಸ್ನಾನ ಮಾಡಿ, ಬಿಸಿ ನೀರಿನ ಸ್ನಾನ ಮಾಡುವುದರಿಂದ ಸ್ನಾಯುಗಳು ಸಡಿಲಗೊಳ್ಳುತ್ತವೆ. ದೇಹದ ಉಷ್ಣತೆ ಚೆನ್ನಾಗಿರುತ್ತದೆ, ಇದು ನಿಮಗೆ ಬೇಗನೆ ನಿದ್ರಿಸಲು ಸಹಾಯ ಮಾಡುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ