Health Tips: 40 ರ ಹರೆಯದ ನಂತರ ಆರೋಗ್ಯಕರವಾಗಿರಬೇಕೆಂದರೆ ಈ ದಿನಚರಿಯನ್ನು ಅನುಸರಿಸಿ

| Updated By: ಅಕ್ಷತಾ ವರ್ಕಾಡಿ

Updated on: Sep 06, 2023 | 12:14 PM

ವಯಸ್ಸಾದಂತೆ ದೇಹವೂ ದುರ್ಬಲವಾಗುತ್ತದೆ. ಅದರಲ್ಲೂ 40 ವರ್ಷ ದಾಟಿದ ನಂತರ ಹಲವು ರೀತಿಯ ದೈಹಿಕ ಸಮಸ್ಯೆಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ಹಾಗಾಗಿ ನಿಮ್ಮ ದೈನಂದಿನ ದಿನಚರಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಆರೋಗ್ಯಕರ ಜೀವನವನ್ನು ನಿಮ್ಮದಾಗಿಸಿಕೊಳ್ಳಬಹುದು.

Health Tips: 40 ರ ಹರೆಯದ ನಂತರ ಆರೋಗ್ಯಕರವಾಗಿರಬೇಕೆಂದರೆ ಈ ದಿನಚರಿಯನ್ನು ಅನುಸರಿಸಿ
Health Tips
Follow us on

ವಯಸ್ಸು ಹೆಚ್ಚಾದಂತೆ ಆರೋಗ್ಯದ ಬಗ್ಗೆ ಕಾಳಜಿ ವಹಿಸದಿದ್ದರೆ, ವಯಸ್ಸಿಗೆ ಮನ್ನವೇ ಮುಖದಲ್ಲಿ ವೃದ್ಧಾಪ್ಯ ಕಾಣಿಸಿಕೊಳ್ಳುತ್ತದೆ. 40 ವರ್ಷ ವಯಸ್ಸಿನ ನಂತರ, ಅನೇಕ ಆರೋಗ್ಯ ಸಂಭವಿಸಲು ಪ್ರಾರಂಭಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ದಿನಚರಿಯನ್ನು ನೀವು ಸುಧಾರಿಸಬೇಕಾಗುತ್ತದೆ. ನಂತರ ಸಮಸ್ಯೆಗಳು ಗಂಭೀರ ಕಾಯಿಲೆಗಳ ರೂಪವನ್ನು ಪಡೆದುಕೊಳ್ಳಬಹುದು. ಇದು ಟೈಪ್-2 ಮಧುಮೇಹ, ಹೃದ್ರೋಗ, ಸ್ಥೂಲಕಾಯತೆ, ಅಧಿಕ ರಕ್ತದೊತ್ತಡ, ಸಂಧಿವಾತದಂತಹ ಕಾಯಿಲೆಗಳಿಗೆ ಕಾರಣವಾಗಬಹುದು. ಹಾಗಿರುವಾಗ ದೇಹದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಬಹಳ ಮುಖ್ಯ. ದೈನಂದಿನ ದಿನಚರಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ನೀವು 40 ರ ಹರೆಯದ ನಂತರವೂ ಫಿಟ್ ಆಗಿ ಆರೋಗ್ಯಕರ ಜೀವನವನ್ನು ನಡೆಸಬಹುದು.

40 ರ ಹರೆಯದ ನಂತರ ಆರೋಗ್ಯಕರ ಜೀವನಕ್ಕೆ ಏನು ಮಾಡಬೇಕು?

  • ಪುರುಷರಿಗಿಂತ ಮಹಿಳೆಯರು 40 ವರ್ಷ ವಯಸ್ಸಿನ ನಂತರ ಹೆಚ್ಚು ಆರೋಗ್ಯ ಸಮಸ್ಯೆಗಳನ್ನು ಎದುರಿಸಲು ಪ್ರಾರಂಭಿಸುತ್ತಾರೆ. ದೇಹದಲ್ಲಿ ಪೌಷ್ಠಿಕಾಂಶದ ಕೊರತೆಯಿಂದ ಬೆನ್ನು ನೋವು, ಮೊಣಕಾಲು ನೋವು ಅಥವಾ ಮೂಳೆಗಳಲ್ಲಿ ನೋವಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಅಂತಹ ಪರಿಸ್ಥಿತಿಯಲ್ಲಿ 40 ವರ್ಷ ವಯಸ್ಸಿನ ನಂತರ ನಿಮ್ಮ ಆಹಾರಕ್ರಮದಲ್ಲಿ ಕ್ಯಾಲ್ಸಿಯಂ ನಲ್ಲಿ ಸಮೃದ್ಧವಾಗಿರುವ ಆಹಾರಗಳನ್ನು ಸೇರಿಸಬೇಕು. ನೀವು ಹಾಲು, ಮೊಸರು, ಹಣ್ಣುಗಳು ಚೀಸ್ ಮುಂತಾದ ಕ್ಯಾಲ್ಸಿಯಂ ಸಮೃದ್ಧ ಆಹಾರವನ್ನು ಸೇವನೆ ಮಾಡಬೇಕು.
  • ದೇಹದಿಂದ ವಿಷವನ್ನು ಹೊರಹಾಕಲು ದಿನಕ್ಕೆ ಕನಿಷ್ಠ 3 ರಿಂದ 4 ಲೀಟರ್ ನೀರನ್ನು ಕುಡಿಯುವ ಅಭ್ಯಾಸವನ್ನು ಮಾಡಿಕೊಳ್ಳಿ. ಇದರಿಂದ ಉತ್ತಮ ಜಲಸಂಚಯನವು ನಿಮ್ಮ ದೇಹಕ್ಕೆ ದೊರೆಯುತ್ತದೆ.
  • ವಯಸ್ಸಾದಂತೆ ಚಯಾಪಚಯ ಕ್ರಿಯೆಯು ನಿಧಾನಗೊಳ್ಳಲು ಪ್ರಾರಂಭಿಸುತ್ತದೆ. ಆದ್ದರಿಂದ ನಿಮ್ಮ ಆಹಾರಕ್ರಮಕ್ಕೆ ಗಮನಗೊಡುವುದು ಮತ್ತು ಸೀಮಿತ ಪ್ರಮಾಣದಲ್ಲಿ ತಿನ್ನುವುದು ಹಾಗೂ ಅತಿಯಾಗಿ ತಿನ್ನುವುದನ್ನು ತಪಪಿಸುವುದು ಬಹಳ ಮುಖ್ಯ. ನಿಮ್ಮ ಆಹಾರದಲ್ಲಿ ಸಾಕಷ್ಟು ಪ್ರಮಾಣದ ಫೈಬರ್ ಅಂಶ ಇರಬೇಕು ಎಂಬುದನ್ನು ನೆನಪಿನಲ್ಲಿಡಿ. ಫೈಬರ್ ನಿಂದ ಸಮೃದ್ಧವಾಗಿರುವ ಆಹಾರಗಳು ನಿಮ್ಮ ಹೊಟ್ಟೆಯನ್ನು ತುಂಬಿಸುತ್ತದೆ ಮತ್ತು ನೀವು ಅತಿಯಾಗಿ ತಿನ್ನುವುದನ್ನು ತಪ್ಪಿಸುತ್ತದೆ.
  • ಆಹಾರವನ್ನು ಚೆನ್ನಾಗಿ ಜಗಿದು ತಿನ್ನಬೇಕು, ಹೀಗೆ ಮಾಡುವುದರಿಂದ ಆಹಾರವು ಸಂಪೂರ್ಣವಾಗಿ ಜೀರ್ಣವಾಗುತ್ತದೆ. ಎಂದು ಹೇಳುವ ಮಾತನ್ನು ಆದರೆ ಇಂದಿನ ವೇಗದ ಜೀವನಶೈಲಿಯಲ್ಲಿ ಜನರು ಅವಸರದಲ್ಲಿ ಆಹಾರವನ್ನು ತಿನ್ನುತ್ತಾರೆ. ನೀವೂ ಕೂಡಾ ಹೀಗೆ ಮಾಡಿದರೆ ಈ ಅಭ್ಯಾಸವನ್ನು ನಿಲ್ಲಿಸಿ. ಆಹಾರವನ್ನು ಚೆನ್ನಾಗಿ ಜಗಿದು ತಿನ್ನಿರಿ, ಇದು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ.

ಇದನ್ನೂ ಓದಿ: ಪ್ರತಿದಿನ ವೀಳ್ಯದೆಲೆ ಜಗಿಯುವುದರಿಂದ ಆಗುವ ಆರೋಗ್ಯಕಾರಿ ಲಾಭಗಳು ನಿಮಗೆ ಗೊತ್ತಾ?

  • ನಿಯಮಿತ ದೈಹಿಕ ಚಟುವಟಿಕೆಯು ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು, ಹೃದಯ ರಕ್ತನಾಳದ ಆರೋಗ್ಯವನ್ನು ಸುಧಾರಿಸಲು ಮತ್ತು ಒಟ್ಟಾರೆ ಫಿಟ್ನೆಸ್ ನ್ನು ಹೆಚ್ಚಿಸಲು ಅಗತ್ಯವಾಗಿದೆ. ಹಾಗಾಗಿ ಪ್ರತಿನಿತ್ಯ ಏರೋಬಿಕ್ಸ್, ವಾಕಿಂಗ್, ಜಾಗಿಂಗ್ ಮುಂತಾದ ದೈಹಿಕ ಚಟುವಟಿಕೆಯಲ್ಲಿ ತೊಡಗಿರಿ.
  • ದೀರ್ಘಕಾಲದ ಒತ್ತಡವು ಆರೋಗ್ಯದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರಬಹುದು. ವಿಶೇಷವಾಗಿ 40 ವರ್ಷ ವಯಸ್ಸಿನ ನಂತರ. ಧ್ಯಾನ, ಆಳವಾದ ಉಸಿರಾಟದ ವ್ಯಾಯಾಮ, ಯೋಗ ಹಾಗೂ ನಿಮಗೆ ವಿಶ್ರಾಂತಿ ನೀಡುವ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಮೂಲಕ ಒತ್ತಡ ನಿರ್ವಹಣೆ ಮಾಡಿ.
  • ವಯಸ್ಸಾದಂತೆ ಹೃದಯ ಸಂಬಂಧಿ ಕಾಯಿಲೆಗಳು, ಅಧಿಕ ರಕ್ತದೊತ್ತಡ ಮುಂತಾದ ಸಮಸ್ಯೆಗಳು ಬಾಧಿಸುವ ಅಪಾಯ ಹೆಚ್ಚು. ಅದಕ್ಕಾಗಿ ಸಿಗರೇಟ್ ಮತ್ತು ಮಧ್ಯವನ್ನು ತ್ಯಜಿಸುವುದು ಅವಶ್ಯಕ. ಧೂಮಪಾನವನ್ನು ತ್ಯಜಿಸುವುದು ದೀರ್ಘಾಯುಷ್ಯಕ್ಕೆ ಕಾರಣವಾಗುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: