Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರತಿದಿನ ವೀಳ್ಯದೆಲೆ ಜಗಿಯುವುದರಿಂದ ಆಗುವ ಆರೋಗ್ಯಕಾರಿ ಲಾಭಗಳು ನಿಮಗೆ ಗೊತ್ತಾ?

Betel Leaves: ಆಧುನಿಕ ಜೀವನಶೈಲಿಯಲ್ಲಿ ಅನೇಕ ಜನರು ಎದುರಿಸುತ್ತಿರುವ ಮಲಬದ್ಧತೆ ಸೇರಿದಂತೆ ವಿವಿಧ ಸಮಸ್ಯೆಗಳಿಂದ ವೀಳ್ಯದೆಲೆ ರಕ್ಷಿಸುತ್ತದೆ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಇರುವವರು, ತಿಂದ ಆಹಾರ ಜೀರ್ಣವಾಗಲು ತೊಂದರೆ ಇರುವವರು, ಮಲಬದ್ಧತೆ ಸಮಸ್ಯೆ ಇರುವವರು ವೀಳ್ಯದೆಲೆ ಸೇವಿಸಿದರೆ ಈ ಸಮಸ್ಯೆಗಳು ಖಂಡಿತ ದೂರವಾಗುತ್ತವೆ. ಪ್ರತಿದಿನ 1-2 ವೀಳ್ಯದೆಲೆಗಳನ್ನು ಅಗಿಯುವುದರಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ.

ಪ್ರತಿದಿನ ವೀಳ್ಯದೆಲೆ ಜಗಿಯುವುದರಿಂದ ಆಗುವ ಆರೋಗ್ಯಕಾರಿ ಲಾಭಗಳು ನಿಮಗೆ ಗೊತ್ತಾ?
ವೀಳ್ಯದೆಲೆ ಜಗಿಯುವುದರಿಂದ ಆಗುವ ಆರೋಗ್ಯಕಾರಿ ಲಾಭಗಳು
Follow us
ಸಾಧು ಶ್ರೀನಾಥ್​
|

Updated on: Sep 05, 2023 | 4:22 PM

ನಮ್ಮ ದೇಶದಲ್ಲಿ ವೀಳ್ಯದೆಲೆಗೆ ಬಹಳ ಮಹತ್ವವಿದೆ. ಈ ಎಲೆಗಳನ್ನು ಹೆಚ್ಚಾಗಿ ಪೂಜಾದಿ ಕಾರ್ಯಕ್ರಮಗಳಲ್ಲಿ ಬಳಸಲಾಗುತ್ತದೆ. ಮತ್ತು ಅನೇಕ ಜನರು ಇದನ್ನು ಪ್ರತಿದಿನ ಪಾನ್ ರೂಪದಲ್ಲಿ ತಿನ್ನುತ್ತಾರೆ. ವೀಳ್ಯದೆಲೆಯಲ್ಲಿ ಹಲವಾರು ಔಷಧೀಯ ಗುಣಗಳಿವೆ. ವೀಳ್ಯದೆಲೆಯನ್ನು (Betel Leaves) ಆಯುರ್ವೇದದಲ್ಲಿಯೂ (Ayurveda) ವ್ಯಾಪಕವಾಗಿ ಬಳಸಲಾಗುತ್ತದೆ. ವೀಳ್ಯದೆಲೆಯಲ್ಲಿ ವಿಟಮಿನ್ ಸಿ, ಕ್ಯಾಲ್ಸಿಯಂ ರೈಬೋಫ್ಲಾವಿನ್, ಥಯಾಮಿನ್, ನಿಯಾಸಿನ್, ಕ್ಯಾರೋಟಿನ್ ಮುಂತಾದ ವಿಟಮಿನ್ ಗಳು ಸಮೃದ್ಧವಾಗಿವೆ. ಅಷ್ಟೇ ಅಲ್ಲ. ವೀಳ್ಯದೆಲೆಯನ್ನು ಅನೇಕ ರೀತಿಯ ರೋಗ ರುಜಿನಗಗಳಿಗೆ ಔಷಧಿಯಾಗಿ ಬಳಸಲಾಗುತ್ತದೆ. ವೀಳ್ಯದೆಲೆಯನ್ನು ಜಗಿಯುವುದು ಅಥವಾ ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಆಧುನಿಕ ಜೀವನಶೈಲಿಯಲ್ಲಿ (Lifestyle) ಅನೇಕ ಜನರು ಎದುರಿಸುತ್ತಿರುವ ಮಲಬದ್ಧತೆ ಸೇರಿದಂತೆ ಅನೇಕ ಸಮಸ್ಯೆಗಳಿಂದ ವೀಳ್ಯದೆಲೆಗಳು ರಕ್ಷಿಸುತ್ತವೆ. ಸಾಮಾನ್ಯವಾಗಿ ಹೆಚ್ಚಿನವರು ಮಲಬದ್ಧತೆಯ ಸಮಸ್ಯೆಯನ್ನು ಲಘುವಾಗಿ ತೆಗೆದುಕೊಳ್ಳುತ್ತಾರೆ. ಆದರೆ, ಇದು ಇತರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂದು ತಿಳಿದಿಲ್ಲ. ಪರಿಸ್ಥಿತಿ ಹದಗೆಟ್ಟರೆ ಅಪಾಯ ಕಟ್ಟಿಟ್ಟ ಬುತ್ತಿ. ಅದಕ್ಕಾಗಿಯೇ ಈ ಸಮಸ್ಯೆಯ ಸಮಯೋಚಿತ ಚಿಕಿತ್ಸೆಯು ಬಹಳ ಮುಖ್ಯವಾಗಿದೆ. ದೇಹದಲ್ಲಿನ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಪರಿಹಾರವು ಪ್ರಕೃತಿಯಲ್ಲಿ ಕಂಡುಬರುವ ವಿವಿಧ ರೀತಿಯ ಸಸ್ಯಗಳು ಮತ್ತು ಪದಾರ್ಥಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ವೀಳ್ಯದೆಲೆಯು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.

ಆಧುನಿಕ ಜೀವನಶೈಲಿಯಲ್ಲಿ ಅನೇಕ ಜನರು ಎದುರಿಸುತ್ತಿರುವ ಮಲಬದ್ಧತೆ ಸೇರಿದಂತೆ ವಿವಿಧ ಸಮಸ್ಯೆಗಳಿಂದ ವೀಳ್ಯದೆಲೆ ರಕ್ಷಿಸುತ್ತದೆ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಇರುವವರು, ತಿಂದ ಆಹಾರ ಜೀರ್ಣವಾಗಲು ತೊಂದರೆ ಇರುವವರು, ಮಲಬದ್ಧತೆ ಸಮಸ್ಯೆ ಇರುವವರು ವೀಳ್ಯದೆಲೆ ಸೇವಿಸಿದರೆ ಈ ಸಮಸ್ಯೆಗಳು ಖಂಡಿತ ದೂರವಾಗುತ್ತವೆ. ಪ್ರತಿದಿನ 1-2 ವೀಳ್ಯದೆಲೆಗಳನ್ನು ಅಗಿಯುವುದರಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ. ಜೀರ್ಣ ಶಕ್ತಿ ಚೆನ್ನಾಗಿದ್ದರೆ.. ಮಲಬದ್ಧತೆ ಸಮಸ್ಯೆಯೂ ದೂರವಾಗುತ್ತದೆ. ಏಕೆಂದರೆ ಆಧುನಿಕ ಜೀವನಶೈಲಿಯಲ್ಲಿ ಮಲಬದ್ಧತೆ ಹೆಚ್ಚು ಸಾಮಾನ್ಯವಾಗಿದೆ.

ಜಂಕ್ ಫುಡ್, ಫಾಸ್ಟ್ ಫುಡ್, ಎಣ್ಣೆಯುಕ್ತ ಆಹಾರ ಸೇವನೆಯಿಂದ ಇದು ಸಂಭವಿಸುತ್ತದೆ. ಅವು ಅಜೀರ್ಣ ಮತ್ತು ಸೌಮ್ಯವಾದ ಮಲಬದ್ಧತೆಗೆ ಕಾರಣವಾಗುತ್ತವೆ. ಚರ್ಮ ಸಂಬಂಧಿ ಸಮಸ್ಯೆಗಳಿರುವವರಿಗೆ ವೀಳ್ಯದೆಲೆ ಅದ್ಭುತಗಳನ್ನು ಮಾಡುತ್ತದೆ. ಏಕೆಂದರೆ ಇದು ಬ್ಯಾಕ್ಟೀರಿಯಾ ವಿರೋಧಿ ಮತ್ತು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ವೀಳ್ಯದೆಲೆಯನ್ನು ಸಾಮಾನ್ಯವಾಗಿ ಮೌತ್ ಫ್ರೆಶ್ನರ್ ಎಂದು ಪರಿಗಣಿಸಲಾಗುತ್ತದೆ. ವೀಳ್ಯದೆಲೆ ದುರ್ವಾಸನೆ ಹೋಗಲಾಡಿಸುತ್ತದೆ. ಅಷ್ಟೇ ಅಲ್ಲ. ಹಲ್ಲಿನ ಕುಳಿಗಳು ಮತ್ತು ಹಲ್ಲಿನ ಕೊಳೆತವನ್ನು ತಡೆಯುತ್ತದೆ ಮತ್ತು ಬಾಯಿಯನ್ನು ಆರೋಗ್ಯವಾಗಿಡುತ್ತದೆ. ಇದರ ಆ್ಯಂಟಿ ಮೈಕ್ರೋಬಿಯಲ್ ಗುಣಲಕ್ಷಣಗಳು ನಿಮ್ಮ ದುರ್ವಾಸನೆ ನಿವಾರಿಸುತ್ತದೆ. ಕೆಮ್ಮು ಮತ್ತು ಶೀತಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ವೀಳ್ಯದೆಲೆಯನ್ನು ಸಹ ಬಳಸಲಾಗುತ್ತದೆ. ಎದೆಯಲ್ಲಿನ ಕಫ, ಶ್ವಾಸಕೋಶದ ಸಮಸ್ಯೆಗಳು ಮತ್ತು ಅಸ್ತಮಾ ಪೀಡಿತರಿಗೆ ವೀಳ್ಯದೆಲೆ ಅತ್ಯುತ್ತಮ ಪರಿಹಾರವಾಗಿ ಕಾರ್ಯನಿರ್ವಹಿಸುತ್ತದೆ.

ಹೆಚ್ಚಿನ ಜೀವನಶೈಲಿ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ.

ಕೇಕ್ ಕಟ್ ಮಾಡಿ ಮೊದಲ ಪೀಸನ್ನು ಶಿವಕುಮಾರ್​ಗೆ ನೀಡಿದ ಸಿದ್ದರಾಮಯ್ಯ
ಕೇಕ್ ಕಟ್ ಮಾಡಿ ಮೊದಲ ಪೀಸನ್ನು ಶಿವಕುಮಾರ್​ಗೆ ನೀಡಿದ ಸಿದ್ದರಾಮಯ್ಯ
ಮ್ಯಾಜಿಸ್ಟ್ರೇಟ್ 50,000 ರೂ. ಲಂಚ ಕೇಳಿದ್ದಕ್ಕೆ ಮರ ಹತ್ತಿದ ವೃದ್ಧೆ!
ಮ್ಯಾಜಿಸ್ಟ್ರೇಟ್ 50,000 ರೂ. ಲಂಚ ಕೇಳಿದ್ದಕ್ಕೆ ಮರ ಹತ್ತಿದ ವೃದ್ಧೆ!
ಮತ್ತೆ ಜೈಲಿಗೆ ಹೋದ ರಜತ್ ಬಗ್ಗೆ ಕೇಳಿದ್ದಕ್ಕೆ ವಿನಯ್ ಗೌಡ ಹೇಳಿದ್ದೇನು?
ಮತ್ತೆ ಜೈಲಿಗೆ ಹೋದ ರಜತ್ ಬಗ್ಗೆ ಕೇಳಿದ್ದಕ್ಕೆ ವಿನಯ್ ಗೌಡ ಹೇಳಿದ್ದೇನು?
ಸಂಪುಟ ಪುನಾರಚನೆ ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಷಯವಾಗಿದೆ: ಸಚಿವ
ಸಂಪುಟ ಪುನಾರಚನೆ ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಷಯವಾಗಿದೆ: ಸಚಿವ
ಪುಣೆ ಆಸ್ಪತ್ರೆಯಲ್ಲಿ ಅಂಗವಿಕಲ ನೆಲದಲ್ಲಿ ತೆವಳಿ ಹೋಗುತ್ತಿರುವ ವಿಡಿಯೋ
ಪುಣೆ ಆಸ್ಪತ್ರೆಯಲ್ಲಿ ಅಂಗವಿಕಲ ನೆಲದಲ್ಲಿ ತೆವಳಿ ಹೋಗುತ್ತಿರುವ ವಿಡಿಯೋ
ಮನೋಹರ್, ಹನುಮಂತರಾಯಪ್ಪ, ವೆಂಕಟೇಶ್ ನೇತೃತ್ವದಲ್ಲಿ ಪ್ರತಿಭಟನೆ
ಮನೋಹರ್, ಹನುಮಂತರಾಯಪ್ಪ, ವೆಂಕಟೇಶ್ ನೇತೃತ್ವದಲ್ಲಿ ಪ್ರತಿಭಟನೆ
ಪೋಷಕರಲ್ಲಿ ನಿರಾಳತೆ ಉಂಟು ಮಾಡಿದ ಸರ್ಕಾರದ ನಿರ್ಧಾರ
ಪೋಷಕರಲ್ಲಿ ನಿರಾಳತೆ ಉಂಟು ಮಾಡಿದ ಸರ್ಕಾರದ ನಿರ್ಧಾರ
ಆಟೋಗ್ರಾಫ್ ಕೇಳುವವರೆ ಇರಲಿಲ್ಲ.. ಈಗ ಕ್ಯೂ ನಿಲ್ಲುತ್ತಿದ್ದಾರೆ; ಜಿತೇಶ್
ಆಟೋಗ್ರಾಫ್ ಕೇಳುವವರೆ ಇರಲಿಲ್ಲ.. ಈಗ ಕ್ಯೂ ನಿಲ್ಲುತ್ತಿದ್ದಾರೆ; ಜಿತೇಶ್
ಸರ್ಕಾರಗಳು ನಮ್ಮ ಬವಣೆಯನ್ನು ಅರ್ಥಮಾಡಿಕೊಳ್ಳಬೇಕು: ಲಾರಿ ಮಾಲೀಕ
ಸರ್ಕಾರಗಳು ನಮ್ಮ ಬವಣೆಯನ್ನು ಅರ್ಥಮಾಡಿಕೊಳ್ಳಬೇಕು: ಲಾರಿ ಮಾಲೀಕ
ವರದಿಯಲ್ಲಿರುವ ಶಿಫಾರಸ್ಸುಗಳನ್ನು ಸರ್ಕಾರ ತಿರಸ್ಕರಿಸಬಹುದಾಗಿದೆ: ಖರ್ಗೆ
ವರದಿಯಲ್ಲಿರುವ ಶಿಫಾರಸ್ಸುಗಳನ್ನು ಸರ್ಕಾರ ತಿರಸ್ಕರಿಸಬಹುದಾಗಿದೆ: ಖರ್ಗೆ