ಒಂದೇ ವಾರದಲ್ಲಿ ನೈಸರ್ಗಿಕವಾಗಿ ನಿಮ್ಮ ತುಟಿಯನ್ನು ಪಿಂಕ್ ಆಗಿಸುವುದು ಹೇಗೆ?
ಸಾಕಷ್ಟು ನೀರು ಕುಡಿಯುವುದರಿಂದ ತುಟಿ ಶುಷ್ಕವಾಗುವುದು ತಪ್ಪುತ್ತದೆ. ನಿಮ್ಮ ತುಟಿಗಳನ್ನು ಒಳಗಿನಿಂದ ಹೈಡ್ರೀಕರಿಸಲು ಹೆಚ್ಚು ನೀರು ಕುಡಿಯಿರಿ. ನಿಮ್ಮ ತುಟಿಗಳನ್ನು ನೆಕ್ಕುವುದರಿಂದ ತುಟಿ ಒಣಗಲು ಕಾರಣವಾಗಬಹುದು.
ಗುಲಾಬಿ ಬಣ್ಣದ ತುಟಿಗಳನ್ನು ಹೊಂದಿರುವುದು ನಿಮ್ಮ ದೇಹ ಆರೋಗ್ಯಕರವಾಗಿದೆ ಮತ್ತು ನಿಮ್ಮ ದೇಹದಲ್ಲಿ ಸಾಕಷ್ಟು ನೀರಿನಂಶವಿದೆ ಎಂಬುದರ ಸಂಕೇತವಾಗಿದೆ. ತುಟಿಗಳು ಒಣಗಲು, ಒಡೆದುಹೋಗಲು ಮತ್ತು ಕಪ್ಪು ಬಣ್ಣಕ್ಕೆ ತಿರುಗಲು ಕಾರಣವಾಗುವ ಹಲವು ಅಂಶಗಳಿವೆ. ಅವುಗಳಲ್ಲಿ ಮುಖ್ಯವಾದುವೆಂದರೆ ಸೂರ್ಯನಿಗೆ ಒಡ್ಡಿಕೊಳ್ಳುವುದು, ನಿರ್ಜಲೀಕರಣ, ಧೂಮಪಾನ, ಮಸಾಲೆಯುಕ್ತ ಆಹಾರವನ್ನು ತಿನ್ನುವುದು ಮತ್ತು ನಿಮ್ಮ ತುಟಿಗಳನ್ನು ನೆಕ್ಕುವುದು. ಒಂದು ವಾರದಲ್ಲಿ ನೈಸರ್ಗಿಕವಾಗಿ ನಿಮ್ಮ ತುಟಿಯನ್ನು ಗುಲಾಬಿ ಬಣ್ಣಕ್ಕೆ ತಿರುಗಿಸುವ 10 ಮನೆಮದ್ದುಗಳು ಇಲ್ಲಿವೆ.
– ನಿಮ್ಮ ತುಟಿಗಳ ಮೇಲಿನ ಡೆಡ್ ಸ್ಕಿನ್ ಅಥವಾ ಸತ್ತ ಚರ್ಮದ ಪದರವನ್ನು ತೆಗೆದುಹಾಕಲು ಸಕ್ಕರೆಯಿಂದ ಸ್ಕ್ರಬ್ ಮಾಡಿಕೊಳ್ಳಿ.
– ನಿಮ್ಮ ತುಟಿಗಳನ್ನು ತೇವಗೊಳಿಸಲು ಆಗಾಗ ಜೇನುತುಪ್ಪ, ಅಲೋವೆರಾ ಅಥವಾ ತೆಂಗಿನ ಎಣ್ಣೆಯ ಲಿಪ್ ಮಾಸ್ಕ್ ಬಳಸಿ.
ಇದನ್ನೂ ಓದಿ: ಮಕ್ಕಳ ಕಣ್ಣಿನ ಆರೋಗ್ಯಕ್ಕೆ ಇಲ್ಲಿದೆ 5 ಸುಲಭ ಯೋಗಾಸನ
– SPF ಇರುವ ಲಿಪ್ ಬಾಮ್ ಬಳಸಿ. ಸೂರ್ಯನ ಹಾನಿಕಾರಕ ಕಿರಣಗಳಿಂದ ನಿಮ್ಮ ತುಟಿಗಳನ್ನು ರಕ್ಷಿಸಲು SPF ಲಿಪ್ ಬಾಮ್ ಬಳಸಿ.
– ಸಾಕಷ್ಟು ನೀರು ಕುಡಿಯುವುದರಿಂದ ತುಟಿ ಶುಷ್ಕವಾಗುವುದು ತಪ್ಪುತ್ತದೆ. ನಿಮ್ಮ ತುಟಿಗಳನ್ನು ಒಳಗಿನಿಂದ ಹೈಡ್ರೀಕರಿಸಲು ಹೆಚ್ಚು ನೀರು ಕುಡಿಯಿರಿ.
– ನಿಮ್ಮ ತುಟಿಗಳನ್ನು ನೆಕ್ಕುತ್ತಾ ಇರಬೇಡಿ. ನಿಮ್ಮ ತುಟಿಗಳನ್ನು ನೆಕ್ಕುವುದರಿಂದ ತುಟಿ ಒಣಗಲು ಕಾರಣವಾಗಬಹುದು.
– ಆರೋಗ್ಯಕರ ಆಹಾರವನ್ನು ಸೇವಿಸಿ. ಪೋಷಕಾಂಶಗಳು ದಟ್ಟವಾಗಿರುವ ಆಹಾರವನ್ನು ಸೇವಿಸುವುದರಿಂದ ಇಡೀ ದೇಹದ ಎಲ್ಲ ಅಂಗಗಳೂ ಆರೋಗ್ಯಯುತವಾಗಿರುತ್ತದೆ.
ಇದನ್ನೂ ಓದಿ: Pregnancy Health Tips: ಗರ್ಭಾವಸ್ಥೆಯಲ್ಲಿ ತುಟಿಗಳು ಕಪ್ಪಾಗದಂತೆ ತಡೆಯಲು ಇಲ್ಲಿವೆ 6 ಸಲಹೆಗಳು
– ಬೀಟ್ರೂಟ್ ಮತ್ತು ಲಿಂಬೆ ಹಣ್ಣು ಎರಡರಲ್ಲಿರುವ ವಿಟಮಿನ್ ಸಿ ಗುಣಲಕ್ಷಣಗಳು ನಿಮ್ಮ ತುಟಿಗಳನ್ನು ಹೊಳೆಯುವಂತೆ ಮಾಡುತ್ತದೆ. ಹೀಗಾಗಿ, ಒಂದು ಬೀಟ್ರೂಟ್ ತುಂಡನ್ನು ಪೇಸ್ಟ್ ಮಾಡಿ. ಸ್ವಲ್ಪ ರೋಸ್ ವಾಟರ್ ಮತ್ತು ಹಾಲಿನ ಕೆನೆ ಸೇರಿಸಿ ಲಿಪ್ ಮಾಸ್ಕ್ ಮಾಡಿ, ತುಟಿಗೆ ಹಚ್ಚಿ 20 ನಿಮಿಷಗಳ ನಂತರ ತಣ್ಣೀರಿನಿಂದ ತೊಳೆಯಿರಿ.
– ಸಾಕಷ್ಟು ನಿದ್ರೆ ಮಾಡಿ. ದಿನಕ್ಕೆ 8 ಗಂಟೆಗಳವರೆಗೆ ನಿದ್ರೆ ಮಾಡಿ.
– ಧೂಮಪಾನವನ್ನು ಮಾಡಬೇಡಿ. ಸಿಗರೇಟ್ ಸೇದುವುದರಿಂದ ತುಟಿಗಳು ಒಣಗುತ್ತವೆ.
– ಚಳಿಗೆ ತುಟಿ ಒಡೆದಾಗ ಹಾಲಿನ ಕೆನೆ ಅಥವಾ ಬೆಣ್ಣೆ ಹಚ್ಚಿ. ಜಾಸ್ತಿ ಪೆಟ್ರೋಲಿಯಂ ಅಂಶ ಇರುವ ಲಿಪ್ ಬಾಮ್ ಬಳಸಬೇಡಿ.