ನಮ್ಮ ದೇಹದಲ್ಲಿ ಉತ್ತಮ ಕೊಲೆಸ್ಟ್ರಾಲ್ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಎಂಬ ಎರಡು ರೀತಿಯ ಕೊಬ್ಬುಗಳಿರುತ್ತವೆ. ಉತ್ತಮ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸಲು ಕೆಲವು ತರಕಾರಿ, ಹಣ್ಣುಗಳು ಸಹಾಯ ಮಾಡುತ್ತವೆ. ನಮ್ಮ ದೇಹದ ಉತ್ತಮ ಕೊಬ್ಬು ಅರ್ಥಾತ್ HDL ನಮ್ಮ ಲಿವರ್ಗೆ ಕೊಲೆಸ್ಟ್ರಾಲ್ ಅನ್ನು ಸಾಗಿಸುತ್ತವೆ. ನಮ್ಮ ಲಿವರ್ ನಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ಸಮತೋಲನದಲ್ಲಿರಿಸುತ್ತದೆ. ನಮ್ಮ ಲಿವರ್ಗೆ ಕೊಲೆಸ್ಟ್ರಾಲ್ ಅನ್ನು ಸಾಗಿಸಲು ನಾವು ಸಾಕಷ್ಟು ಎಚ್‌ಡಿಎಲ್‌ಗಳನ್ನು ಹೊಂದಿರಬೇಕು. ಬೇಸಿಗೆಯಲ್ಲಿ ಈ ಎಚ್‌ಡಿಎಲ್‌ಗಳನ್ನು ಹೆಚ್ಚಿಸುವ ಹಣ್ಣುಗಳು ಇಲ್ಲಿವೆ.
ಬೆರಿ:
ಬೆರಿಗಳಲ್ಲಿ ಉತ್ಕರ್ಷಣ ನಿರೋಧಕಗಳು ಅಧಿಕವಾಗಿದ್ದು, ಇದು ಉರಿಯೂತವನ್ನು ಕಡಿಮೆ ಮಾಡಲು ಮತ್ತು ನೈಸರ್ಗಿಕವಾಗಿ HDL ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: Weight Loss: ಬೇಸಿಗೆಯಲ್ಲಿ ತೂಕ ಇಳಿಸಿಕೊಳ್ಳಲು ಈ 5 ಹಣ್ಣುಗಳನ್ನು ತಿನ್ನಿ
ಕಲ್ಲಂಗಡಿ:
ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಕಲ್ಲಂಗಡಿಯನ್ನು ಸಕ್ಕರೆ ತಿಂಡಿಗಳ ಬದಲು ಸೇವಿಸಬಹುದು.
ಕಿವಿ ಹಣ್ಣು:
ಕಿವಿ ಹಣ್ಣುಗಳನ್ನು ತಿನ್ನುವುದರಿಂದ ಕೊಲೆಸ್ಟ್ರಾಲ್ ಮಟ್ಟ ಸುಧಾರಿಸುತ್ತದೆ ಮತ್ತು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಸಂಶೋಧನೆ ತಿಳಿಸಿದೆ.
ಅವಕಾಡೊ:
ಅವಕಾಡೊಗಳು ಹೃದಯಕ್ಕೆ ಆರೋಗ್ಯಕರ ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ. ಇದು ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅವಕಾಡೊಗಳು ಹೃದಯಕ್ಕೆ ಆರೋಗ್ಯಕರ ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ. ಅದು ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಕಿತ್ತಳೆ:
ಕಿತ್ತಳೆ ಹಣ್ಣಿನ ನಿಯಮಿತ ಸೇವನೆಯು HDL ಕೊಲೆಸ್ಟ್ರಾಲ್ ಅನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ತೂಕ ಇಳಿಸಲು ಸ್ವಿಮ್ಮಿಂಗ್ ಒಳ್ಳೆಯದಾ? ಸೈಕ್ಲಿಂಗ್ ಉತ್ತಮವಾ?
ಪಪ್ಪಾಯಿ:
ಪಪ್ಪಾಯಿ ಸಾಮಾನ್ಯ ಭಾರತೀಯ ಬೇಸಿಗೆ ಹಣ್ಣಾಗಿದ್ದು, ಇದು ಅಗತ್ಯ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಪೀಚ್:
ಪೀಚ್ ಹಣ್ಣುಗಳು ಮತ್ತೊಂದು ಬೇಸಿಗೆಯ ಹಣ್ಣಾಗಿದ್ದು, ಇದು ಎಚ್‌ಡಿಎಲ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುವ ಪೋಷಕಾಂಶಗಳ ಉತ್ತಮ ಮೂಲವಾಗಿದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ