ಗೂಗಲ್ ಸ್ಪೋರ್ಟ್ಸ್ ಈವೆಂಟ್‌ಗಳ ಡೂಡಲ್‌ಗಳನ್ನು ಹಂಚಿಕೊಳ್ಳುತ್ತಿರುವುದು ಹೊಸದೇನಲ್ಲ. ಇತ್ತೀಚೆಗಷ್ಟೇ ಗೂಗಲ್ ದಿನಕ್ಕೊಂದು ಡೂಡಲ್ ಮೂಲಕ ಪ್ಯಾರಿಸ್ ಒಲಿಂಪಿಕ್ಸ್ 2024 ಕ್ರೀಡಾಕೂಟಕ್ಕೆ ಗೌರವ ಸಲ್ಲಿಸಿತ್ತು. ಆದರೆ ಇಂದು ವಿಶ್ವ ಚೆಸ್ ಚಾಂಪಿಯನ್‌ಶಿಪ್ ಪಂದ್ಯಕ್ಕೆ ವಿಶೇಷ ಡೂಡಲ್ ರಚಿಸುವ ಮೂಲಕ ಗೂಗಲ್ ವಿಶೇಷ ಗೌರವವನ್ನು ಸಲ್ಲಿಸಿದೆ.
ಅತ್ಯಂತ ಹಳೆಯ ಆಟಗಳಲ್ಲಿ ಒಂದಾಗಿರುವ ಚೆಸ್ ಆಟವು, ತನ್ನ ಬುದ್ಧಿವಂತಿಕೆ ಹಾಗೂ ಕಾರ್ಯತಂತ್ರದಿಂದಲೇ ಶತಮಾನಗಳಿಂದ ಎಲ್ಲರ ಮನಸ್ಸನ್ನು ಗೆದ್ದುಕೊಂಡಿದೆ. 64 ಕಪ್ಪು ಬಿಳುಪು ಚೌಕಗಳನ್ನು ಹೊಂದಿರುವ ಬೋರ್ಡ್‌ನಲ್ಲಿ ಆಡುವ ಚೆಸ್‌ನ ಐತಿಹಾಸಿಕ ಮತ್ತು ಕಾರ್ಯತಂತ್ರದ ಆಟವನ್ನು ಇಂದಿನ ಡೂಡಲ್‌ನೊಂದಿಗೆ ಗೂಗಲ್ ಆಚರಿಸಿದೆ. ಈ ಗೂಗಲ್ ಡೂಡಲ್ ನಲ್ಲಿ ಹಳದಿ, ಕೆಂಪು, ನೀಲಿ ಹಾಗೂ ಬಿಳಿ ಬಣ್ಣದ ಚೆಸ್ ದಾಳದ ಚಿಹ್ನೆಗಳನ್ನು ತೋರಿಸಲಾಗಿದೆ. ಇಂದಿನ ವಿಶ್ವ ಚೆಸ್ ಚಾಂಪಿಯನ್‌ಶಿಪ್ ಪಂದ್ಯವನ್ನು ಗೂಗಲ್ ಈ ವಿಶೇಷ ಡೂಡಲ್ ಮೂಲಕ ಹೈ ಲೈಟ್ ಮಾಡಿದೆ.
ಇದನ್ನೂ ಓದಿ: ಡಿಸೆಂಬರ್ ತಿಂಗಳಲ್ಲಿ ಆಚರಿಸಲಾಗುವ ರಾಷ್ಟ್ರೀಯ, ಅಂತಾರಾಷ್ಟ್ರೀಯ ದಿನಾಚರಣೆಗಳು
ವಿಶ್ವ ಚಾಂಪಿಯನ್‌ಶಿಪ್ ಪಂದ್ಯವು (ಇಂದು) ನವೆಂಬರ್ 25 ರಿಂದ ಡಿಸೆಂಬರ್ 13 ರವರೆಗೆ ಸಿಂಗಾಪುರದ ರೆಸಾರ್ಟ್ಸ್ ವರ್ಲ್ಡ್ ಸೆಂಟೋಸಾದಲ್ಲಿರುವ ಈಕ್ವೇರಿಯಸ್ ಹೋಟೆಲ್‌ನಲ್ಲಿ ನಡೆಯಲಿದೆ. ಸಿಂಗಾಪುರದಲ್ಲಿ ನಡೆಯುತ್ತಿರುವ ಬಹುನಿರೀಕ್ಷಿತ ಕೂಟದ ಮೊದಲ ಸುತ್ತಿನಲ್ಲೇ ಗುಕೇಶ್, ಚೀನಾದ ಹಾಲಿ ಚಾಂಪಿಯನ್ ಡಿಂಗ್ ಲಿರೆನ್ ಅವರನ್ನು ಎದುರಿಸಲಿದ್ದಾರೆ. ಒಂದು ವೇಳೆ ಭಾರತೀಯ ಚೆಸ್ ಆಟಗಾರ ಗುಕೇಶ್ ಈ ವಿಶ್ವ ಚೆಸ್ ಚಾಂಪಿಯನ್‌ಶಿಪ್ ಗೆದ್ದು ಕೊಂಡರೆ ವಿಶ್ವದ ಅತ್ಯಂತ ಕಿರಿಯ ಚೆಸ್ ಚತುರ ಎನ್ನುವ ಖ್ಯಾತಿಗೆ ಪಾತ್ರರಾಗಲಿದ್ದಾರೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ