ಗುರು ಪೂರ್ಣಿಮಾ
ಒಬ್ಬ ವ್ಯಕ್ತಿಯ ಜೀವನದಲ್ಲಿ ತಂದೆ ತಾಯಿಯನ್ನು ಹೊರತು ಪಡಿಸಿ ಗುರುವಿನ ಪಾತ್ರವು ಬಹುದೊಡ್ಡದು. ಗುರುವಿಗೆ ನಮನ ಸಲ್ಲಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಆಷಾಢ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯಂದು ಗುರು ಪೂರ್ಣಿಮಾವನ್ನು ಆಚರಿಸಲಾಗುತ್ತದೆ. ಅದಲ್ಲದೇ, ವೇದವ್ಯಾಸರು ಈ ದಿನದಂದೇ ಜನಿಸಿದ್ದು, ಈ ದಿನದಂದು ವೇದವ್ಯಾಸರ ಜನ್ಮದಿನವೆಂದು ಆಚರಿಸಲಾಗುತ್ತದೆ. ಈ ದಿನವನ್ನು ಬದುಕಿಗೆ ಸರಿ ದಾರಿ ತೋರಿದ ಶಿಕ್ಷಕರು ಮತ್ತು ಮಾರ್ಗದರ್ಶಕರಿಗೆ ಗೌರವ ಮತ್ತು ಕೃತಜ್ಞತೆಯನ್ನು ಸಲ್ಲಿಸುವ ದಿನವಾಗಿದೆ. ಹೀಗಾಗಿ ವಿಶೇಷ ದಿನದಂದು ಗುರುಗಳಿಗೆ ಈ ರೀತಿಯಾಗಿ ಸಂದೇಶ ಕಳುಹಿಸಿ, ಅವರಿಗೆ ಗೌರವವನ್ನು ಸಲ್ಲಿಸಬಹುದಾಗಿದೆ.
- ಗುರುಬ್ರಹ್ಮ ಗುರುರ್ವಿಷ್ಣುಃ ಗುರುದೇವೋ ಮಹೇಶ್ವರಃ ಗುರುಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ ಸರ್ವರಿಗೂ ಗುರುಪೂರ್ಣಿಮ ದಿನದ ಶುಭಾಶಯಗಳು.
- ಎದೆಯ ಹಣತೆಯಲ್ಲಿ ಅಕ್ಷರದ ದೀಪ ಹೊತ್ತಿಸಿ ಅನೇಕ ಮಂದಿಯ ಬಾಳಿಗೆ ಭವ್ಯ ಬೆಳಕು ಚೆಲ್ಲುವ ಗುರುಗಳಿಗೆ ಗುರು ಪೂರ್ಣಿಮಾದ ಶುಭಾಶಯಗಳು.
- ನನ್ನನ್ನು ಉತ್ತಮ ವ್ಯಕ್ತಿಯನ್ನಾಗಿ ಮಾಡಿದ್ದಕ್ಕಾಗಿ ಎಲ್ಲಾ ಗುರುಗಳಿಗೆ ತುಂಬು ಹೃದಯದ ಧನ್ಯವಾದಗಳು. ಗುರು ಪೂರ್ಣಿಮೆಯ ಶುಭಾಶಯಗಳು.
- ನನ್ನ ಬದುಕಿನ ಪುಸ್ತಕಕ್ಕೆ ರೂಪಕೊಟ್ಟು, ಗುರಿಯೆಡೆಗೆ ನಕ್ಷೆ ಹಾಕಿ ಕೊಟ್ಟು ನನ್ನ ಯಶಸ್ಸಿನಲ್ಲಿ ಖುಷಿಕಂಡ ಗುರುವಿಗೆ ಗುರುಪೂರ್ಣಿಮದ ಶುಭಾಶಯಗಳು.
- ನನ್ನ ಜೀವನದ ದಾರಿ ತೋರಿ ಮುನ್ನಡೆಸಿದ ಗುರುವಿಗೆ ಗುರುಪೂರ್ಣಿಮದ ಶುಭಾಶಯಗಳು.
- ತಪ್ಪಿದ್ದಲ್ಲಿ ತಿದ್ದಿ, ಬುದ್ದಿ ಹೇಳಿ ಮಾರ್ಗದರ್ಶನವಿತ್ತ ಗುರುವೃಂದಕ್ಕೆ ಗುರುಪೂರ್ಣಿಮದ ಶುಭಾಶಯಗಳು.
- ಗುರುವೆಂದರೆ ಕೇವಲ ಶಿಕ್ಷಕರಷ್ಟೇ ಅಲ್ಲ, ಜೀವನದಲ್ಲಿ ಸರಿಯಾದ ದಾರಿ ತೋರುವ ಪ್ರತಿಯೊಬ್ಬರೂ ಗುರುಗಳೇ, ಇಂತಹ ಎಲ್ಲಾ ಗುರುವೃಂದಕ್ಕೂ ಗುರುಪೂರ್ಣಿಮದ ಶುಭಾಶಯಗಳು.
- ಅಜ್ಞಾನವೆಂಬ ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯುವ ಮಹಾನ್ ಬೆಳಕು ಈ ಗುರು. ನಿಮಗೆ ಗುರು ಪೂರ್ಣಿಮೆಯ ಶುಭಾಶಯಗಳು.
- ನೀವು ನನಗೆ ಹೇಳಿಕೊಟ್ಟ ಪ್ರತಿಯೊಂದು ಪಾಠಕ್ಕೂ ನಾನು ಆಭಾರಿಯಾಗಿದ್ದೇನೆ. ನಿಮಗೆ ಗುರು ಪೂರ್ಣಿಮಾ ಶುಭಾಶಯಗಳು
- ನನ್ನ ಜೀವನದ ಪ್ರತಿಯೊಂದು ಹಂತದಲ್ಲಿ, ನನ್ನನ್ನು ತಿದ್ದಿ ತೀಡಿದ ಪ್ರೀತಿಯ ಗುರುವಿಗೆ ಗುರುಪೂರ್ಣಿಮ ದಿನದ ಶುಭಾಶಯಗಳು.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ