ಸಾಂದರ್ಭಿಕ ಚಿತ್ರ
ಏನೇ ಮಾಡಿದ್ರು ಕೂದಲು ಉದುರುವುದು ಮಾತ್ರ ನಿಲ್ಲುತ್ತಿಲ್ಲ ಎಂದು ಎಷ್ಟೋ ಜನರು ಹೇಳುವುದನ್ನು ಕೇಳುತ್ತಿರಬಹುದು. ಹೀಗಾಗಿ ಹೆಚ್ಚಿನವರು ಇರೋ ನಾಲ್ಕು ಕೂದಲನ್ನು ಉಳಿಸಿಕೊಳ್ಳಲು ಹಣ ಖರ್ಚು ಮಾಡಿ ದುಬಾರಿ ಬೆಲೆಯ ಉತ್ಪನ್ನಗಳನ್ನು ಖರೀದಿಸುತ್ತಿದ್ದಾರೆ. ಇದರಿಂದ ಆ ಕ್ಷಣಕ್ಕೆ ಮಾತ್ರ ಪರಿಹಾರ ಸಿಗಬಹುದು. ಆದರೆ, ಕೂದಲು ಚೆನ್ನಾಗಿ ಬೆಳೆಯಬೇಕೆಂದರೆ ಸೇವಿಸುವ ಆಹಾರದ ಕಡೆಗೆ ಹೆಚ್ಚು ಗಮನ ಕೊಡಬೇಕು. ಹೀಗಾಗಿ ಕೂದಲಿನ ಪೋಷಣೆಗೆ ಹಾಗೂ ಸೊಂಪಾದ ಕೂದಲು ನಿಮ್ಮದಾಗಬೇಕಂದ್ರೆ ಈ ಆಹಾರವನ್ನು ಸೇವಿಸುವುದನ್ನು ಮರೆಯದಿರಿ.
- ಪಾಲಕ್ ಸೊಪ್ಪು : ಪಾಲಕ್ ಸೊಪ್ಪಿನಲ್ಲಿ ಕಬ್ಬಿಣ, ವಿಟಮಿನ್ ಎ, ಸಿ ಮತ್ತು ಫೋಲೇಟ್ ಸಮೃದ್ಧವಾಗಿದೆ. ಕಬ್ಬಿಣವು ಕೂದಲಿನ ಕಿರುಚೀಲಗಳಿಗೆ ಆಮ್ಲಜನಕವನ್ನು ತಲುಪಿಸಲು ಸಹಾಯ ಮಾಡಿ, ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಇದರಲ್ಲಿರುವ ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳು ಕೂದಲಿನ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.
- ಮೊಟ್ಟೆ : ಮೊಟ್ಟೆಗಳಲ್ಲಿ ಪ್ರೋಟೀನ್, ಬಯೋಟಿನ್ ಮತ್ತು ಅಗತ್ಯವಾದ ಅಮೈನೋ ಆಮ್ಲಗಳು ಹೇರಳವಾಗಿದೆ. ಇದರಲ್ಲಿರುವ ಪ್ರೋಟೀನ್ ಕೂದಲು ಉದುರುವಿಕೆಯನ್ನು ಕಡಿಮೆ ಮಾಡಿ ಕೂದಲು ಉದ್ದ ಹಾಗೂ ದಟ್ಟವಾಗಿ ಬೆಳೆಯಲು ಸಹಾಯ ಮಾಡುತ್ತದೆ.
- ಮೀನು : ಸಾಲ್ಮನ್ ಮೀನಿನಲ್ಲಿ ಒಮೆಗಾ -3 ಕೊಬ್ಬಿನಾಮ್ಲಗಳು, ಪ್ರೋಟೀನ್, ವಿಟಮಿನ್ ಡಿ ಮತ್ತು ಆಂಟಿ-ಆಕ್ಸಿಡೆಂಟ್ ಗಳು ಹೇರಳವಾಗಿದೆ. ಇದರಲ್ಲಿಯು ಒಮೆಗಾ -3 ಕೊಬ್ಬಿನಾಮ್ಲಗಳು ಕೂದಲು ಕಿರುಚೀಲಗಳನ್ನು ಪೋಷಿಸಲು ಮತ್ತು ನೆತ್ತಿಯ ಆರೋಗ್ಯವನ್ನು ಕಾಪಾಡುತ್ತದೆ. ಇದರಿಂದ ಕೂದಲು ಸೊಂಪಾಗಿ ದಟ್ಟವಾಗಿ ಬೆಳೆಯುತ್ತದೆ.
- ದ್ವಿದಳ ಧಾನ್ಯಗಳು: ಕಡಲೆ, ತೊಗರಿ, ಬೀನ್ಸ್ ಸೇರಿದಂತೆ ಇನ್ನಿತ್ತರ ದ್ವಿದಳ ಧಾನ್ಯಗಳು ಸತು, ಪ್ರೋಟೀನ್ ಮತ್ತು ಫೈಬರ್ ನಿಂದ ಸಮೃದ್ಧವಾಗಿದೆ. ಇವುಗಳ ಸೇವನೆಯಿಂದ ಕೂದಲು ದಟ್ಟವಾಗಿ ಬೆಳೆಯುವುದಲ್ಲದೆ ಆರೋಗ್ಯಕರ ಕೂದಲನ್ನು ನಿಮ್ಮದಾಗಿಸಿಕೊಳ್ಳಬಹುದು. ಈ ದ್ವಿದಳ ಧಾನ್ಯಗಳನ್ನು ಸೂಪ್‌ಗಳು, ಸಲಾಡ್‌ಗಳಳು, ಸೈಡ್ ಡಿಶ್ ಆಗಿ ಸೇವಿಸಬಹುದು.
- ನಟ್ಸ್‌ಗಳು : ನಟ್ಸ್‌ಗಳ ಸೇವನೆ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿಯೋ , ಕೂದಲಿನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಹೀಗಾಗಿ ಬಾದಾಮಿ ಅಥವಾ ಸೂರ್ಯಕಾಂತಿ ಬೀಜಗಳಲ್ಲಿ ಬಯೋಟಿನ್ ಮತ್ತು ಇತರ ಬಿ ವಿಟಮಿನ್‌ಗಳನ್ನು ಹೊಂದಿದ್ದು, ಇದು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
- ಸಿಹಿ ಗೆಣಸು : ಸಿಹಿ ಗೆಣಸಿನಲ್ಲಿ ಕೂದಲಿನ ಬೆಳವಣಿಗೆಗೆ ಅಗತ್ಯವಾದ ಪೋಷಕಾಂಶಗಳಾದ ವಿಟಮಿನ್ ಬಿ, ಪೊಟ್ಯಾಸಿಯಮ್, ವಿಟಮಿನ್ ಸಿ ಮತ್ತು ಸತುವಿದೆ. ಈ ಸಿಹಿ ಗೆಣಸು ಕೂದಲಿನಲ್ಲಿರುವ ಪೋಷಕಾಂಶಗಳ ಕೊರತೆಯನ್ನು ನೀಗಿಸಿ ಕೂದಲು ಸೊಂಪಾಗಿ ಬೆಳೆಯುವಂತೆ ನೋಡಿಕೊಳ್ಳುತ್ತದೆ
- ಕ್ಯಾರೆಟ್ : ಕ್ಯಾರೆಟ್ ವಿಟಮಿನ್, ಫೈಬರ್, ಪೊಟ್ಯಾಸಿಯಮ್, ಕಬ್ಬಿಣ, ಸತು, ರಂಜಕ, ಬೀಟಾ-ಕ್ಯಾರೋಟಿನ್ ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ. ಕ್ಯಾರೆಟ್‌ನಲ್ಲಿರುವ ವಿಟಮಿನ್ ಎ ನೆತ್ತಿಯನ್ನು ಆರೋಗ್ಯಕರವಾಗಿಸಿ, ಕೂದಲು ಉದುರುವುದನ್ನು ತಡೆಯುತ್ತದೆ. ಇದರಲ್ಲಿರುವ ಜೀವಸತ್ವಗಳು ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಬಯೋಟಿನ್ ಹಾಗೂ ವಿಟಮಿನ್ ಎ, ಕೆರಾಟಿನ್ ಬೆಳವಣಿಗೆಯನ್ನು ಉತ್ತೇಜಿಸಿ ಕೂದಲಿನ ಆರೋಗ್ಯವನ್ನು ಕಾಪಾಡುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ