
ಉದ್ದನೆಯ ಕಪ್ಪು ಕೂದಲು ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ. ಈ ಕಾರಣಕ್ಕಾಗಿಯೇ ಹೆಚ್ಚಿನ ಹೆಣ್ಣು ಮಕ್ಕಳು, ಉದ್ದವಾದ, ಕಪ್ಪು ಮತ್ತು ದಪ್ಪ ಕೂದಲು ಹೊಂದಲು ಬಯಸುತ್ತಾರೆ. ನಮಗೆ ವಯಸ್ಸಾದಂತೆ ಕೂದಲಿನ ಸಮಸ್ಯೆಗಳನ್ನು ಎದುರಾಗುತ್ತವೆ. ಕೂದಲು ಉದುರುವುದು, ಬಿಳಿಯಾಗುವುದು, ಶುಷ್ಕತೆ, ತುದಿ ಸೀಳುವುದು ಮುಂತಾದ ಸಮಸ್ಯೆಗಳನ್ನು ಪ್ರತಿಯೊಬ್ಬರೂ ಎದುರಿಸುತ್ತಾರೆ. ಈ ಐದು ಬಗೆಯ ಹೂವುಗಳನ್ನು ಬಳಸುವುದರಿಂದ ಕೂದಲಿಗೆ ಶಕ್ತಿ ಮತ್ತು ಆರೋಗ್ಯವನ್ನು ನೀಡುತ್ತದೆ.

ಗುಲಾಬಿ ಹೂ: ಗುಲಾಬಿ ಹೂ ಸೌಂದರ್ಯಕ್ಕೆ ಮಾತ್ರವಲ್ಲ. ಕೂದಲಿಗೆ ಕೂಡ ಬಳಸಬಹುದು. ಇದು ನೆತ್ತಿಯ ಮೇಲೆ ಹೆಚ್ಚುವರಿ ಎಣ್ಣೆ ಉತ್ಪಾದನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ತಲೆಹೊಟ್ಟು ಮತ್ತು ಒಣ ಕೂದಲನ್ನು ಮೃದುಗೊಳಿಸುತ್ತದೆ. ಮೊದಲು ಗುಲಾಬಿ ದಳಗಳನ್ನು ಒಣಗಿಸಿ ಮತ್ತು ಅವುಗಳನ್ನು ಸಂಪೂರ್ಣವಾಗಿ ಪುಡಿಮಾಡಿ. ನಂತರ ತೆಂಗಿನ ಎಣ್ಣೆ, ರೋಸ್ ವಾಟರ್ ಮತ್ತು ಜೇನುತುಪ್ಪವನ್ನು ಬೆರೆಸಿ ಹೇರ್ ಪ್ಯಾಕ್ ಆಗಿ ಹಚ್ಚಬಹುದು.

ದಾಸವಾಳ ಹೂ: ಈ ಹೂವಿನಲ್ಲಿ ಸಾಕಷ್ಟು ಪ್ರಮಾಣದ ವಿಟಮಿನ್ ಸಿ ಇದೆ. ಇದು ಕೂದಲಿಗೆ ನೈಸರ್ಗಿಕ ಪೋಷಣೆಯನ್ನು ಒದಗಿಸುತ್ತದೆ. ಹೂವಿನ ಹೊರತಾಗಿ ಇದರ ಎಲೆಗಳು ಕೂದಲಿನ ಆರೋಗ್ಯಕ್ಕೆ ಪ್ರಯೋಜನಕಾರಿ. ಕೂದಲು ಉದುರುವುದನ್ನು ತಡೆಯಲು 5-6 ದಾಸವಾಳದ ಹೂಗಳನ್ನು ಅರೆದು ತಲೆಗೆ ಹಚ್ಚಬೇಕು. ಇದಕ್ಕೆ ಸ್ವಲ್ಪ ತೆಂಗಿನೆಣ್ಣೆಯನ್ನೂ ಬೆರೆಸಿ ತಲೆಗೆ ಹಚ್ಚಿಕೊಳ್ಳಬಹುದು.

ಮಲ್ಲಿಗೆ ಹೂ: ಮಲ್ಲಿಗೆ ಹೂವುಗಳು ನೆತ್ತಿಯನ್ನು ತೇವ ಮತ್ತು ಸ್ವಚ್ಛವಾಗಿಡುವ ಗುಣಗಳನ್ನು ಹೊಂದಿವೆ.

ರೋಸ್ಮರಿ ಹೂ: ಈ ಹೂವಿನ ಎಣ್ಣೆ ವೇಗವಾಗಿ ಕೂದಲು ಬೆಳವಣಿಗೆಗೆ ಉಪಯುಕ್ತವಾಗಿದೆ. ರೋಸ್ಮರಿ ರಸವನ್ನು ನೆತ್ತಿಯ ಮೇಲೆ ಅನ್ವಯಿಸುವುದರಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ ಮತ್ತು ನೈಸರ್ಗಿಕ ಕೂದಲು ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಇದು ಕೂದಲು ಉದುರುವಿಕೆ, ಬೋಳು ಮತ್ತು ತಲೆಹೊಟ್ಟು ಸಮಸ್ಯೆಗಳನ್ನು ತಡೆಯುತ್ತದೆ.

ಬೆರ್ಗಮಾಟ್ ಹೂ: ವಿಟಮಿನ್-ಸಿ ಸಮೃದ್ಧವಾಗಿರುವ ಬೆರ್ಗಮಾಟ್ ಹೂವುಗಳು ನೆತ್ತಿಗೆ ಪೋಷಣೆ ನೀಡುತ್ತದೆ. ಇದು ನೈಸರ್ಗಿಕ ಹೇರ್ ಕಂಡಿಷನರ್ ಆಗಿ ಕಾರ್ಯನಿರ್ವಹಿಸುವುದಲ್ಲದೆ, ಕೂದಲನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದು ಆಂಟಿಮೈಕ್ರೊಬಿಯಲ್ ಮತ್ತು ಆಂಟಿ-ಆಕ್ಸಿಡೆಂಟ್ ಗುಣಗಳಿಂದ ಸಮೃದ್ಧವಾಗಿದೆ. ಇದು ವೇಗವಾಗಿ ಕೂದಲು ಬೆಳವಣಿಗೆಯನ್ನು ಉತ್ತೇಜಿಸುತ್ತದೆ.