AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Happy Deepavali: ಕಷ್ಟಗಳೆಂಬ ಕತ್ತಲೆ ಕಳೆದು ಬಾಳಲಿ ಮೂಡಲಿ ಬೆಳಕು; ಇಲ್ಲಿವೆ ದೀಪಾವಳಿಯ ಅರ್ಥಪೂರ್ಣ ಶುಭ ಸಂದೇಶ

ಹೊಸ ಬೆಳಕು, ಭರವಸೆ, ಸಂತೋಷ ಮತ್ತು ಸಮೃದ್ಧಿಯ ಸಂಕೇತವಾಗಿರುವ ಬೆಳಕಿನ ಹಬ್ಬ ದೀಪಾವಳಿಯನ್ನು ದೇಶಾದ್ಯಂತ ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ವರ್ಷ ನವೆಂಬರ್ 8 ಭಾನುವಾರದಂದು ದೀಪಾವಳಿಯನ್ನು ಆಚರಿಸಲಾಗುತ್ತಿದ್ದು, ಈ ವಿಶೇಷ ಸಂದರ್ಭದಲ್ಲಿ ನಿಮ್ಮ ಸ್ನೇಹಿತರು, ಕುಟುಂಬ ಮತ್ತು ಆಪ್ತರಿಗೆ ಸುಂದರವಾದ ದೀಪಾವಳಿ ಶುಭಾಶಯಗಳನ್ನು ಕಳುಹಿಸಲು ನೀವು ಬಯಸಿದರೆ, ಇಲ್ಲಿವೆ ನಿಮಗಾಗಿ ಮುತ್ತಿನಂತ ಶುಭ ಸಂದೇಶಗಳು.

Happy Deepavali: ಕಷ್ಟಗಳೆಂಬ ಕತ್ತಲೆ ಕಳೆದು ಬಾಳಲಿ ಮೂಡಲಿ ಬೆಳಕು; ಇಲ್ಲಿವೆ ದೀಪಾವಳಿಯ ಅರ್ಥಪೂರ್ಣ ಶುಭ ಸಂದೇಶ
ದೀಪಾವಳಿ ಹಬ್ಬದ ಶುಭಾಶಯಗಳುImage Credit source: pixabay
ಮಾಲಾಶ್ರೀ ಅಂಚನ್​
|

Updated on: Nov 08, 2026 | 8:45 AM

Share

ಬೆಳಕಿನ ಹಬ್ಬ ದೀಪಾವಳಿ (Deepavali)  ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಒಂದು. ಈ ಹಬ್ಬವನ್ನು ದೀಪಗಳನ್ನು ಬೆಳಗಿ, ಪಟಾಕಿ ಹಚ್ಚಿ, ಸಿಹಿ ಹಂಚಿ ಸ್ನೇಹಿತರು ಮತ್ತು ಕುಟುಂಬದೊಂದಿದೆ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಅಲ್ಲದೆ ಈ ದಿನ ಲಕ್ಷ್ಮೀ ದೇವಿಯನ್ನು ಪೂಜಿಸಿ ಮನೆಯನ್ನು ದೀಪಗಳಿಂದ ಅಲಂಕರಿಸುತ್ತಾರೆ.  ಈ ಬಾರಿ ನವೆಂಬರ್‌ 8 ಅಂದರೆ ಇಂದು ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತಿದ್ದು, ಈ ಶುಭ ಸಂದರ್ಭದಲ್ಲಿ ನಿಮ್ಮ ಸ್ನೇಹಿತರು, ಆಪ್ತರಿಗೆ ಸುಂದರವಾದ ಸಂದೇಶವನ್ನು ಕಳುಹಿಸಿ, ಶುಭಾಶಯಗಳನ್ನು ತಿಳಿಸುವ ಮೂಲಕ ಹಬ್ಬದ ಸಂತಸವನ್ನು ಹೆಚ್ಚಿಸಬಹುದು. ಸಂಬಂಧವನ್ನು ಮತ್ತಷ್ಟು ಬಲಪಡಿಸಬಹುದು. ಇಲ್ಲಿದೆ ದೀಪಾವಳಿಯ ಅರ್ಥಪೂರ್ಣ ಶುಭ ಸಂದೇಶಗಳು.

ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಅದ್ಭುತ ಸಂದೇಶಗಳು:

  • ದೀಪಗಳ ಬೆಳಕು ನಿಮ್ಮ ಜೀವನದ ಕಷ್ಟಗಳೆಂಬ ಎಲ್ಲಾ ಕತ್ತಲೆಯನ್ನು ಹೋಗಲಾಡಿಸಲಿ. ಲಕ್ಷ್ಮಿ ದೇವಿಯ ಆಶೀರ್ವಾದವು ನಿಮ್ಮ ಮನೆಗೆ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ತರಲಿ. ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ದೀಪಾವಳಿಯ ಶುಭಾಶಯಗಳು.
  • ಅಜ್ಞಾನ ಅಂಧಕಾರ ತೊಡೆದು ಜ್ಞಾನದ ದೀಪ ಹಚ್ಚೋಣ, ದ್ವೇಷ ಅಸೂಯೆ ಬಿಟ್ಟು ಪ್ರೀತಿಯ ದೀಪ ಬೆಳಗೋಣ. ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು.
  • ದೀಪದ ಬೆಳಕಿನಲ್ಲಿ ಕತ್ತಲು ಕರಗುವಂತೆ ನಿಮ್ಮ ಕಷ್ಟಗಳೆಲ್ಲಾ ಕರಗಲಿ, ದೀಪದ ಬೆಳಕಿನಂತೆ ನಿಮ್ಮ ಜೀವನದಲ್ಲಿ ಸಂತೋಷ, ಸಮೃದ್ಧಿ ಹೊಳೆಯಲಿ. ನಿಮಗೆಲ್ಲರಿಗೂ ದೀಪಾವಳಿಯ ಹಾರ್ದಿಕ ಶುಭಾಶಯಗಳು.
  • ಮಣ್ಣಿನ ಹಣತೆಯಲ್ಲಿ ಉರಿಯುವ ಬೆಳಕಿನಂತೆ ನಿಮ್ಮ ಬದುಕು ಬೆಳಗಲಿ. ದೀಪಾವಳಿಯ ಶುಭಾಶಯಗಳು.
  • ಈ ದೀಪಾವಳಿಯು ನಿಮ್ಮ ಮನೆಗೆ ದೀಪಗಳ ಬೆಳಕು ಮಾತ್ರವಲ್ಲದೆ ಸಂತೋಷ, ಸಮೃದ್ಧಿ ಮತ್ತು ಯಶಸ್ಸಿನ ಬೆಳಕನ್ನು ತರಲಿ. ನಿಮಗೆ ದೀಪಾವಳಿಯ ಶುಭಾಶಯಗಳು.
  • ಪ್ರತಿ ಮನೆಯೂ ಸಂತೋಷದಿಂದ ತುಂಬಿರಲಿ, ಪ್ರತಿ ಮುಖವೂ ನಗುದಿಂದ ತುಂಬಿರಲಿ, ಮತ್ತು ಪ್ರತಿ ದಿನವೂ ನಿಮಗೆ ಹೊಸ ಭರವಸೆಯನ್ನು ತರಲಿ. ದೀಪಾವಳಿಯ ಶುಭಾಶಯಗಳು.
  • ಲಕ್ಷ್ಮಿ ದೇವಿಯು ನಿಮ್ಮ ಮನೆಗೆ ಸಂತೋಷ ಮತ್ತು ಸಮೃದ್ಧಿಯನ್ನು ತರಲಿ, ಮತ್ತು ಗಣೇಶನು ನಿಮ್ಮ ಜೀವನದಿಂದ ಎಲ್ಲಾ ಅಡೆತಡೆಗಳನ್ನು ತೆಗೆದುಹಾಕಲಿ. ನಿಮಗೂ ನಿಮ್ಮ ಕುಟುಂಬಕ್ಕೂ ದೀಪಾವಳಿ ಹಬ್ಬದ ಶುಭಾಶಯಗಳು.
  • ಈ ಬೆಳಕಿನ ಹಬ್ಬವು ನಿಮ್ಮ ಜೀವನದಲ್ಲಿ ಹೊಸ ಆರಂಭಗಳು, ಹೊಸ ಭರವಸೆಗಳು ಮತ್ತು ಹೇರಳವಾದ ಸಂತೋಷವನ್ನು ತರಲಿ. ನಿಮ್ಮ ಇಡೀ ಕುಟುಂಬಕ್ಕೆ ದೀಪಾವಳಿಯ ಶುಭಾಶಯಗಳು.
  • ದೀಪಾವಳಿಯ ದೀಪಗಳ ಬೆಳಕು ನಿಮ್ಮ ಮನೆ ಬಾಗಿಲು ಮಾತ್ರವಲ್ಲ ನಿಮ್ಮ ಬದುಕನ್ನೂ ಪ್ರಜ್ವಲಿಸಲಿ. ದೀಪಾವಳಿಯ ಶುಭಾಶಯಗಳು.
  • ಮೂಡಲಿ ಖುಷಿಯ ಚಿತ್ತಾರ, ದೂರವಾಗಲಿ ಬದುಕಿನ ಅಂಧಕಾರ, ತುಂಬಲಿ ಮನೆ ಮನಗಳಲ್ಲಿ ಸಡಗರ… ಹ್ಯಾಪಿ ದೀಪಾವಳಿ.
  • ದೀಪ ಬೆಳಗುವಂಯೆ ಸಂತೋಷ, ಶಾಂತಿ ಮತ್ತು ಯಶಸ್ಸು ನಿಮ್ಮ ಜೀವನದಲ್ಲಿ ಬೆಳಗಲಿ. ದೀಪಾವಳಿ ಹಬ್ಬದ ಶುಭಾಶಯಗಳು.
  • ದೀಪಾವಳಿ ನಿಮ್ಮ ಜೀವನದಲ್ಲಿ ಅಪಾರ ಬೆಳಕನ್ನು ತರಲಿ, ಯಶಸ್ಸು, ಪ್ರೀತಿ ಬೆಳೆಯುತ್ತಲೇ ಇರಲಿ, ನಮ್ಮ ಈ ಸ್ನೇಹ ಶಾಶ್ವತವಾಗಿರಲಿ. ಹ್ಯಾಪಿ ದೀಪಾವಳಿ.
  • ದೀಪಗಳ ಬೆಳಕು ನಿಮ್ಮ ಜೀವನದ ಎಲ್ಲಾ ಕತ್ತಲೆಯನ್ನು ಹೋಗಲಾಡಿಸಲಿ, ಮತ್ತು ಲಕ್ಷ್ಮಿ ದೇವಿಯ ಆಶೀರ್ವಾದವು ನಿಮ್ಮ ಮನೆಯಲ್ಲಿ ಸಂತೋಷವನ್ನು ತುಂಬಲಿ. ದೀಪಾವಳಿಯ ಶುಭಾಶಯಗಳು.
  • ದೀಪಾವಳಿಯ ಈ ಶುಭ ಸಂದರ್ಭದಲ್ಲಿ, ನಿಮ್ಮ ಜೀವನದಲ್ಲಿ ಭರವಸೆಯ ಹೊಸ ದೀಪಗಳು ಬೆಳಗಲಿ, ನಿಮ್ಮ ಜೀವನದಲ್ಲಿ ಪ್ರತಿದಿನವೂ ಸಂತೋಷದಿಂದ ತುಂಬಿರಲಿ, ಮತ್ತು ದೇವರ ಆಶೀರ್ವಾದವು ನಿಮ್ಮ ಮತ್ತು ನಿಮ್ಮ ಕುಟುಂಬದ ಮೇಲೆ ಸದಾ ಇರಲಿ. ದೀಪಾವಳಿಯ ಶುಭಾಶಯಗಳು.
  • ಈ ಶುಭ ದೀಪಾವಳಿ ಹಬ್ಬವು ನಿಮ್ಮ ಜೀವನದಲ್ಲಿ ಹೊಸ ಉತ್ಸಾಹ, ಹೊಸ ಶಕ್ತಿ ಮತ್ತು ಹೊಸ ಭರವಸೆಯನ್ನು ತರಲಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಮಾಲಾಶ್ರೀ ಅಂಚನ್​
ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
ದೀಪಾವಳಿ ಹಬ್ಬದ ಖರೀದಿ ಭರಾಟೆ:  ಕೆ.ಆರ್.ಮಾರ್ಕೆಟ್‌ನಲ್ಲಿ ಜನಸಾಗರ
ದೀಪಾವಳಿ ಹಬ್ಬದ ಖರೀದಿ ಭರಾಟೆ:  ಕೆ.ಆರ್.ಮಾರ್ಕೆಟ್‌ನಲ್ಲಿ ಜನಸಾಗರ
ಇಂದು ಈ ರಾಶಿಯವರು ಸಂಗಾತಿಯ ಸಲಹೆಯನ್ನು ಪಡೆದು ನಿರ್ಧಾರ ತೆಗೆದುಕೊಳ್ಳಿ
ಇಂದು ಈ ರಾಶಿಯವರು ಸಂಗಾತಿಯ ಸಲಹೆಯನ್ನು ಪಡೆದು ನಿರ್ಧಾರ ತೆಗೆದುಕೊಳ್ಳಿ
ದೇವಿರಮ್ಮ ಬೆಟ್ಟದಿಂದ ಜಾರಿಬಿದ್ದ ಯುವಕ: ಗಂಭೀರ ಗಾಯ
ದೇವಿರಮ್ಮ ಬೆಟ್ಟದಿಂದ ಜಾರಿಬಿದ್ದ ಯುವಕ: ಗಂಭೀರ ಗಾಯ
ಕರ್ನಾಟಕದ ಡಿಪಿಆರ್‌ ತಿರಸ್ಕರಿಸಲು ಪ್ರಧಾನಿಗೆ ತಮಿಳುನಾಡು ಸಿಎಂ ಪತ್ರ
ಕರ್ನಾಟಕದ ಡಿಪಿಆರ್‌ ತಿರಸ್ಕರಿಸಲು ಪ್ರಧಾನಿಗೆ ತಮಿಳುನಾಡು ಸಿಎಂ ಪತ್ರ
ಪೋಲೆಂಡ್‌ನ ಕ್ರಾಕೋವ್‌ನಲ್ಲಿ ಗುಂಡಿನ ದಾಳಿ; 5 ಜನ ಸಾವು
ಪೋಲೆಂಡ್‌ನ ಕ್ರಾಕೋವ್‌ನಲ್ಲಿ ಗುಂಡಿನ ದಾಳಿ; 5 ಜನ ಸಾವು
ಸ್ಟಿಂಗ್​​​ನಿಂದ ಕರ್ನಾಟಕ ತಲೆ ತಗ್ಗಿಸುವಂತಾಗಿದೆ ಎಂದ ಡಾ. ಕೆ. ಸುಧಾಕರ್
ಸ್ಟಿಂಗ್​​​ನಿಂದ ಕರ್ನಾಟಕ ತಲೆ ತಗ್ಗಿಸುವಂತಾಗಿದೆ ಎಂದ ಡಾ. ಕೆ. ಸುಧಾಕರ್
ವೈಷ್ಣವಿ ಸಾವಿಗೆ ಕಾರಣವಾಯ್ತಾ ಅರಮನೆ ರಸ್ತೆಯ ಪ್ರೀ-ವೆಡ್ಡಿಂಗ್ ಶೂಟಿಂಗ್?
ವೈಷ್ಣವಿ ಸಾವಿಗೆ ಕಾರಣವಾಯ್ತಾ ಅರಮನೆ ರಸ್ತೆಯ ಪ್ರೀ-ವೆಡ್ಡಿಂಗ್ ಶೂಟಿಂಗ್?
ದೀಪಾವಳಿಗೆ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದೆ ಅಯೋಧ್ಯೆ ರಾಮ ಮಂದಿರ
ದೀಪಾವಳಿಗೆ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದೆ ಅಯೋಧ್ಯೆ ರಾಮ ಮಂದಿರ
ಬೆಂಗಳೂರಲ್ಲಿ ಸರಣಿ ಕೊಲೆ ಕೇಸ್: ತಮಿಳುನಾಡಿನ ಸೇಲಂನಲ್ಲಿ ಎರಡು ಶವ ಪತ್ತೆ
ಬೆಂಗಳೂರಲ್ಲಿ ಸರಣಿ ಕೊಲೆ ಕೇಸ್: ತಮಿಳುನಾಡಿನ ಸೇಲಂನಲ್ಲಿ ಎರಡು ಶವ ಪತ್ತೆ
30 ಲಕ್ಷಕ್ಕೂ ಹೆಚ್ಚು ದೀಪಗಳು; ಸರಯೂ ದಡದಲ್ಲಿ ಮತ್ತೊಂದು ವಿಶ್ವದಾಖಲೆ
30 ಲಕ್ಷಕ್ಕೂ ಹೆಚ್ಚು ದೀಪಗಳು; ಸರಯೂ ದಡದಲ್ಲಿ ಮತ್ತೊಂದು ವಿಶ್ವದಾಖಲೆ