Matcha Tea: ಮಚ್ಚಾ ಟೀ ಬಗ್ಗೆ ನಿಮಗೆಷ್ಟು ಗೊತ್ತು? ಇದರ ಆರೋಗ್ಯ ಪ್ರಯೋಜನಗಳನ್ನು ತಿಳಿದುಕೊಳ್ಳಿ

|

Updated on: Jun 24, 2023 | 4:40 PM

ಏನಿದು ಮಚ್ಚಾ ಟೀ? ಹಾಗೂ ಇದನ್ನು ಕುಡಿಯುವುದರಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಎಂದು ಈ ಲೇಖದಲ್ಲಿ ತಿಳಿದುಕೊಳ್ಳಿ.

Matcha Tea: ಮಚ್ಚಾ ಟೀ ಬಗ್ಗೆ ನಿಮಗೆಷ್ಟು ಗೊತ್ತು? ಇದರ ಆರೋಗ್ಯ ಪ್ರಯೋಜನಗಳನ್ನು ತಿಳಿದುಕೊಳ್ಳಿ
ಮಚ್ಚಾ ಟೀ
Follow us on

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಬಗೆಯ ಟೀಗಳು ಕಂಡುಬರುತ್ತದೆ. ಗ್ರೀನ್​​ ಟೀ ಜೊತೆಗೆ ಇದೀಗಾ ಮಚ್ಚಾ ಟೀ ಹೆಸರು ಕೂಡ ಕೇಳಿಬರುತ್ತಿವೆ. ಏನಿದು ಮಚ್ಚಾ ಟೀ? ಹಾಗೂ ಇದನ್ನು ಕುಡಿಯುವುದರಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಎಂದು ಈ ಲೇಖದಲ್ಲಿ ತಿಳಿದುಕೊಳ್ಳಿ. ಮೂಲತಃ ಜಪಾನ್‌ನಲ್ಲಿ ಪ್ರಾರಂಭವಾದ ಈ ಮಚ್ಚಾ ಟೀ ಇದೀಗಾ ಭಾರತದಲ್ಲೂ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಹೆಚ್‌ಟಿ ಲೈಫ್‌ಸ್ಟೈಲ್‌ಗೆ ನೀಡಿದ ಸಂದರ್ಶನದಲ್ಲಿ, ಟೀ ಸೊಮೆಲಿಯರ್ ಮತ್ತು ಚೆರೈಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಸಂಸ್ಥಾಪಕರಾದ ಪರಿಮಳ ಷಾ ಅವರು ಮಚ್ಚಾ ಚಹಾದ ಕೆಲವು ಆರೋಗ್ಯ ಪ್ರಯೋಜನಗಳನ್ನು ಹಂಚಿಕೊಂಡಿದ್ದಾರೆ. ಅವರ ಪ್ರಕಾರ ಮಚ್ಚಾ ಕೇವಲ ಒಂದು ಕಪ್ ಚಹಾವಲ್ಲ, ಇದು ಉತ್ಕರ್ಷಣ ನಿರೋಧಕಗಳ ಶಕ್ತಿ ಕೇಂದ್ರವಾಗಿದೆ. ಜೊತೆಗೆ ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ಪ್ರಯೋಜನಗಳನ್ನು ಹೊಂದಿದೆ ಎಂದು ಹೇಳಿದ್ದಾರೆ.

ಕ್ಯಾಮೆಲಿಯಾ ಸೈನೆನ್ಸಿಸ್ ಸಸ್ಯದ ಎಲೆಗಳಿಂದ ತಯಾರಿಸಲಾಗುವ ಈ ಚಹಾ ಹೆಚ್ಚಿನ ಪ್ರಮಾಣದ ಪಾಲಿಫಿನಾಲ್ಗಳನ್ನು ಹೊಂದಿರುತ್ತದೆ. ಇದಲ್ಲದೇ ಇದು ಉರಿಯೂತದ ಮತ್ತು ಕ್ಯಾನ್ಸರ್ ವಿರೋಧಿ ಗುಣಲಕ್ಷಣಗಳನ್ನು ಒಳಗೊಂಡಿದೆ. ಆದ್ದರಿಂದ ಮಚ್ಚಾ ಟೀಯ ಇನ್ನಷ್ಟು ಆರೋಗ್ಯ ಪ್ರಯೋಜನಗಳನ್ನು ಇಲ್ಲಿ ತಿಳಿದುಕೊಳ್ಳೋಣ ಬನ್ನಿ.

ಮೆದುಳಿನ ಆರೋಗ್ಯ:

ಗಮನ, ಸ್ಮರಣೆ ಮತ್ತು ಪ್ರತಿಕ್ರಿಯೆ ಸಮಯದಲ್ಲಿ ಗಮನಾರ್ಹ ಸುಧಾರಣೆಗಳು ಮಚ್ಚಾವನ್ನು ಸೇವಿಸುವ ಜನರಲ್ಲಿ ಕಂಡುಬಂದಿವೆ ಎಂದು ತಿಳಿದು ಬಂದಿದೆ. ಮೆದುಳಿನ ಆರೋಗ್ಯಕ್ಕೆ ಸಂಬಂಧಿಸಿದಂತೆ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಪರಿಮಳ ಷಾ ಸಲಹೆ ನೀಡುತ್ತಾರೆ.

ಹೃದಯದ ಆರೋಗ್ಯಕ್ಕೆ ಬೆಂಬಲ:

ಎಪಿಗಲ್ಲೊಕಾಟೆಚಿನ್-3-ಗ್ಯಾಲೇಟ್ (ಇಜಿಸಿಜಿ) ಎಂಬ ಸೂಕ್ಷ್ಮ ಪೋಷಕಾಂಶವು ಮಚ್ಚಾದಲ್ಲಿ ಹೇರಳವಾಗಿ ಕಂಡುಬರುತ್ತದೆ. ಈ ಪೋಷಕಾಂಶವು ಉರಿಯೂತದ, ಉತ್ಕರ್ಷಣ ನಿರೋಧಕ, ಆಂಟಿ-ಎಥೆರೋಸ್ಕ್ಲೆರೋಸಿಸ್ ಮತ್ತು ಮಧುಮೇಹ-ವಿರೋಧಿ ಮುಂತಾದ ಅನೇಕ ಚಿಕಿತ್ಸಕ ಗುಣಗಳನ್ನು ಹೊಂದಿದೆ.

ಇದನ್ನೂ ಓದಿ: ಗರ್ಭಾವಸ್ಥೆಯಲ್ಲಿ ಆರೋಗ್ಯಕರ ಕಣ್ಣುಗಳಿಗಾಗಿ ಸಲಹೆಗಳು ಇಲ್ಲಿವೆ

ತೂಕ ನಷ್ಟಕ್ಕೆ ಸಹಾಯಕ:

ಹೆಚ್ಚುವರಿ ಕಿಲೋಗ್ರಾಂಗಳಷ್ಟು ತೂಕವನ್ನು ಕಳೆದುಕೊಳ್ಳಲು ಬಯಸುವವರು ಮಚ್ಚಾ ಚಹಾವನ್ನು ಕುಡಿಯುವುದು ಉತ್ತಮ ಆಯ್ಕೆ ಆಗಿದೆ.

ಚರ್ಮದ ಆರೋಗ್ಯ:

ಮಚ್ಚಾದಲ್ಲಿರುವ ವಿಟಮಿನ್ ಸಿ ಚರ್ಮದ ಕಾಲಜನ್ ಉತ್ಪಾದನೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಅದರ ವಿಟಮಿನ್ ಬಿ ಅಂಶವು ಚರ್ಮದ ಕೋಶಗಳ ಆರೋಗ್ಯವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಮಚ್ಚಾ ಚರ್ಮದ ಉರಿಯೂತವನ್ನು ಕಡಿಮೆ ಮಾಡುತ್ತದೆ.

ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ:

ಈ ಚಹಾದ ಸೇವನೆಯು ಹೊಟ್ಟೆಯ ಕ್ಯಾನ್ಸರ್ನ ಅಪಾಯವನ್ನು ಕಡಿಮೆ ಮಾಡುತ್ತದೆ. ಮಚ್ಚಾದಲ್ಲಿ ಇರುವ ಕ್ಯಾಟೆಚಿನ್‌ಗಳು ಮತ್ತು ಗ್ಯಾಲಿಕ್ ಆಮ್ಲದಂತಹ ಕೆಲವು ಫೈಟೊಕೆಮಿಕಲ್‌ಗಳು (ಸಸ್ಯಗಳಿಂದ ಉತ್ಪತ್ತಿಯಾಗುವ ರಾಸಾಯನಿಕ ಸಂಯುಕ್ತಗಳು) ಕ್ಯಾನ್ಸರ್ ರೋಗಿಗಳಿಗೆ ಕೀಮೋಥೆರಪಿ ಚಿಕಿತ್ಸೆಗಳಲ್ಲಿ ಬಳಸಲಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: