ವೈರಲ್ ಸೋಂಕು ನಿಯಂತ್ರಿಸಲು ಬೆಳಗ್ಗೆ ಈ 5 ಪಾನೀಯ ಸೇವಿಸಿ

|

Updated on: Mar 05, 2024 | 3:51 PM

ಬೇಸಿಗೆಯಲ್ಲಿ ಬಿಸಿಲ ಧಗೆಗೆ ದೇಹದಲ್ಲಿ ಹಲವು ರೀತಿಯ ಸೋಂಕು ತಗುಲುವ ಅಪಾಯವೂ ಇರುತ್ತದೆ. ಈ ರೀತಿಯಲ್ಲಿ ಆಯಾ ಋತುಮಾನದ ಬದಲಾವಣೆಯಿಂದ ಉಂಟಾಗುವ ಸೋಂಕನ್ನು ನಿಯಂತ್ರಿಸಲು ಕೆಲವು ಆರೋಗ್ಯಕರ ಪಾನೀಯಗಳು ಸಹಾಯ ಮಾಡುತ್ತವೆ. ಬೆಳಗ್ಗೆ ಸೇವಿಸಬಹುದಾದ 5 ಪಾನೀಯಗಳ ಬಗ್ಗೆ ಮಾಹಿತಿ ಇಲ್ಲಿದೆ.

ವೈರಲ್ ಸೋಂಕು ನಿಯಂತ್ರಿಸಲು ಬೆಳಗ್ಗೆ ಈ 5 ಪಾನೀಯ ಸೇವಿಸಿ
ಕುಂಬಳಕಾಯಿ ರಸ
Image Credit source: iStock
Follow us on

ಚಳಿಗಾಲವು ದೂರವಾಗುವುದರೊಂದಿಗೆ ಮತ್ತು ವಸಂತಕಾಲ ಶುರುವಾಗುವುದರೊಂದಿಗೆ ಋತುಗಳ ಈ ಪರಿವರ್ತನೆಯು ತನ್ನದೇ ಆದ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಋತುವಿನ ಬದಲಾವಣೆಯು ಉತ್ತಮ ಆಹ್ಲಾದಕರ ಹವಾಮಾನವನ್ನು ತರಬಹುದು. ಆದರೆ ಇದರಿಂದ ಜನರಿಗೆ ಶೀತ, ಜ್ವರ, ಅಲರ್ಜಿ ಮುಂತಾದ ಸಮಸ್ಯೆಗಳೂ ಉಂಟಾಗುವ ಸಾಧ್ಯತೆ ಇರುತ್ತದೆ. ವೈರಲ್ ಸೋಂಕು, ಗಂಟಲು ನೋವು, ಶೀತ ಮತ್ತು ಕೆಮ್ಮು ಇತ್ಯಾದಿ ಪ್ರಕರಣಗಳು ದೆಹಲಿಯಂತಹ ಮಾಲಿನ್ಯ ಹೆಚ್ಚಾಗಿರುವ ನಗರಗಳಲ್ಲಿ ತೀವ್ರವಾಗಿ ಏರುತ್ತಿವೆ. ಆದ್ದರಿಂದ, ಈ ಸಮಯದಲ್ಲಿ ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಬಹಳ ಮುಖ್ಯವಾಗಿದೆ.

ನಾವು ನಮ್ಮ ದಿನವನ್ನು ಹೇಗೆ ಪ್ರಾರಂಭಿಸುತ್ತೇವೆ ಎಂಬುದು ನಮ್ಮ ಆರೋಗ್ಯದ ಸ್ಥಿತಿಯನ್ನು ನಿರ್ಧರಿಸುತ್ತದೆ. ಜ್ಯೂಸ್‌ಗಳು ಮತ್ತು ಆರೋಗ್ಯಕರ ಪಾನೀಯಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಇರುವ ಒಂದು ಮಾರ್ಗವಾಗಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮಾತ್ರವಲ್ಲದೆ ದೇಹವನ್ನು ದೀರ್ಘಕಾಲದವರೆಗೆ ತೇವಾಂಶದಿಂದ ಇಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: Pomegranate Juice: ದಿನಕ್ಕೆ ಒಂದು ಲೋಟ ದಾಳಿಂಬೆ ಜ್ಯೂಸ್ ಸೇವನೆಯಿಂದಾಗುವ ಉಪಯೋಗ ಒಂದೆರಡಲ್ಲ

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ 5 ಪಾನೀಯಗಳು ಇಲ್ಲಿವೆ…

ಎಳನೀರು:

ನಿಮ್ಮ ಜೀರ್ಣಕ್ರಿಯೆಯನ್ನು ಹೆಚ್ಚಿಸಲು ಸಹಾಯ ಮಾಡುವ ಪರಿಪೂರ್ಣ ಹೈಡ್ರೇಟರ್ ಎಂದರೆ ಅದು ಎಳನೀರು. ನಿಮ್ಮ ಶಕ್ತಿಯನ್ನು ಹೆಚ್ಚಿಸಲು ಬೆಳಗ್ಗೆ ಇದನ್ನು ಸೇವಿಸಿ.

ವಿಟಮಿನ್ ಸಿ ಸಮೃದ್ಧವಾದ ಸ್ಮೂಥಿ:

ವಿಟಮಿನ್ ಸಿ ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಪ್ರಮುಖ ಪೋಷಕಾಂಶವಾಗಿದೆ. ಕಿತ್ತಳೆ, ನಿಂಬೆ ಮುಂತಾದವುಗಳಲ್ಲಿ ವಿಟಮಿನ್ ಸಿ, ಆ್ಯಂಟಿಆಕ್ಸಿಡೆಂಟ್‌ಗಳು ಮತ್ತು ಇತರ ಖನಿಜಗಳು ಸಮೃದ್ಧವಾಗಿವೆ. ಇದು ಸೋಂಕಿನ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಜೇನು-ದಾಲ್ಚಿನ್ನಿ ಚಹಾ:

ದಾಲ್ಚಿನ್ನಿ ಮತ್ತು ಜೇನುತುಪ್ಪ ನಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಮತ್ತು ತೂಕ ಇಳಿಸಲು ಸಹಾಯ ಮಾಡುತ್ತದೆ. ಹಾಗೇ, ಕೊಲೆಸ್ಟ್ರಾಲ್ ನಿಯಂತ್ರಣಕ್ಕೂ ಇದು ಒಳ್ಳೆಯದು. ಬೆಳಿಗ್ಗೆ ಒಂದು ಸಿಪ್ ಈ ಚಹಾವನ್ನು ಸೇವಿಸುವುದರಿಂದ ನಿಮಗೆ ಶಕ್ತಿ ಉಂಟಾಗುತ್ತದೆ. ಇದು ನಿಮ್ಮನ್ನು ತೃಪ್ತಿ ಪಡಿಸುತ್ತದೆ ಮತ್ತು ದೇಹದ ನಿರ್ವಿಶೀಕರಣಕ್ಕೆ ಸಹಾಯ ಮಾಡುತ್ತದೆ.

ನೆಲ್ಲಿ- ಶುಂಠಿ ಶಾಟ್:

ಕೇವಲ 30 ಮಿ.ಲೀ ಶಾಟ್ ತಾಜಾ ನೆಲ್ಲಿಕಾಯಿ ರಸವನ್ನು 1 ಟೀ ಸ್ಪೂನ್ ಶುಂಠಿ ರಸದೊಂದಿಗೆ ಬೆರೆಸಿ ಸೇವಿಸಬಹುದು. ಇದು ಋತುವಿನ ಬದಲಾವಣೆಯ ಸಮಯದಲ್ಲಿ ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅಧಿಕ ರಕ್ತದ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸಲು ಪ್ರಯತ್ನಿಸುತ್ತಿರುವ ಯಾರಿಗಾದರೂ ಇದು ಅತ್ಯುತ್ತಮವಾದ ಸೇರ್ಪಡೆಯಾಗಿದೆ.

ಇದನ್ನೂ ಓದಿ: Constipation: ಮಲಬದ್ಧತೆಯಿಂದ ಬಳಲುತ್ತಿದ್ದರೆ ಈ ಜ್ಯೂಸ್​ಗಳನ್ನು ಸೇವಿಸಿ

ಕುಂಬಳಕಾಯಿ ರಸ:

ನೀವು ತಡರಾತ್ರಿಯಾದರೂ ನಿದ್ರೆ ಮಾಡಲು ಒದ್ದಾಡುತ್ತಿದ್ದರೆ, ಗ್ಯಾಸ್ಟ್ರಿಕ್, ಎಸಿಡಿಟಿ ಮತ್ತು ಮಲಬದ್ಧತೆಯಂತಹ ಜೀರ್ಣಕಾರಿ ಸಮಸ್ಯೆಗಳನ್ನು ಅನುಭವಿಸುತ್ತಿದ್ದರೆ ಬೆಳಗ್ಗೆ ಕುಂಬಳಕಾಯಿ ಜ್ಯೂಸ್ ಸೇವಿಸುವುದು ಉತ್ತಮ.

ಪಾನೀಯಗಳ ಹೊರತಾಗಿಯೂ ಆರೋಗ್ಯಕರ ಮತ್ತು ಪೌಷ್ಠಿಕಾಂಶ ಭರಿತ ಆಹಾರವನ್ನು ಸೇವಿಸುವುದು ಮುಖ್ಯವಾಗಿದೆ. ಇದು ನಮ್ಮ ದೇಹಕ್ಕೆ ಸಾಕಷ್ಟು ಪೋಷಕಾಂಶಗಳು, ವಿಟಮಿನ್​ಗಳು, ಖನಿಜಗಳು ಬ್ಯಾಕ್ಟೀರಿಯಾ ಮತ್ತು ರೋಗಕಾರಕ ಆಕ್ರಮಣವನ್ನು ತಡೆಗಟ್ಟಲು ಅಗತ್ಯವಿರುತ್ತದೆ. ಹೆಚ್ಚಿನ ತರಕಾರಿಗಳು, ಜ್ಯೂಸ್, ನಿಯಮಿತ ದೈಹಿಕ ವ್ಯಾಯಾಮ, ನಿದ್ರೆ ಇತ್ಯಾದಿಗಳನ್ನು ಸೇರಿಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮರೆಯಬೇಡಿ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ