Health Tips: ಮೆಣಸಿನ ಪುಡಿ ಸೇವನೆಯಿಂದ ಆಗುವ ಅನಾನುಕೂಲಗಳು

| Updated By: Rakesh Nayak Manchi

Updated on: Oct 01, 2022 | 6:14 PM

ಕೆಲವರಿಗೆ ಕೆಂಪು ಮೆಣಸಿನಕಾಯಿ ಪುಡಿಯನ್ನು ಹೆಚ್ಚು ತಿನ್ನುವ ಅಭ್ಯಾಸವಿರುತ್ತದೆ. ಕಟುವಾದ ಈ ಅಭ್ಯಾಸವು ದೇಹಕ್ಕೆ ಬಹಳಷ್ಟು ಹಾನಿಯನ್ನುಂಟುಮಾಡುತ್ತದೆ ಎಂಬುದನ್ನು ನೆನಪಿನಲ್ಲಿಡಿ.

Health Tips: ಮೆಣಸಿನ ಪುಡಿ ಸೇವನೆಯಿಂದ ಆಗುವ ಅನಾನುಕೂಲಗಳು
ಮೆಣಸಿನ ಪುಡಿ ಸೇವನೆಯಿಂದ ಆಗುವ ಅನಾನುಕೂಲಗಳು
Follow us on

ಭಾರತವನ್ನು ಮಸಾಲೆಗಳ ದೇಶ ಎಂದೂ ಕರೆಯುತ್ತಾರೆ. ಏಕೆಂದರೆ ಅನಾದಿ ಕಾಲದಿಂದಲೂ ಈ ದೇಶವು ಪ್ರಪಂಚಕ್ಕೆ ಮಸಾಲೆಗಳನ್ನು ಆಕರ್ಷಿಸುತ್ತಿದೆ. ಅತಿಯಾದರೆ ಅಮೃತವೂ ವಿಷ ಎಂಬಂತೆ ಖಾರದ ಪುಡಿಯನ್ನು ಹೆಚ್ಚು ಸೇವಿಸುವುದರಿಂದಲೂ ಆರೋಗ್ಯಕ್ಕೆ ಹಾನಿಕಾರಕ ಎಂಬುದನ್ನು ನೆನಪಿನಲ್ಲಿಡಬೇಕು. ಅದಾಗ್ಯೂ ಕೆಲವರಿಗೆ ಕೆಂಪು ಮೆಣಸಿನಕಾಯಿ ಪುಡಿ(Red Chilli Powder) ಯನ್ನು ಹೆಚ್ಚು ತಿನ್ನುವ ಅಭ್ಯಾಸವಿರುತ್ತದೆ. ಪದಾರ್ಥಕ್ಕೆ ಖಾರ ಕಡಿಮೆಯಾಗಿದೆ ನಾಳೆಯಿಂದ ಹೆಚ್ಚು ಖಾರ ಹಾಕಿ ಎಂದು ಖಾರ ಪ್ರಿಯರು ಸೂಚನೆಯನ್ನೂ ನೀಡುವುದುಂಟು. ಕಟುವಾದ ಈ ಅಭ್ಯಾಸವು ದೇಹಕ್ಕೆ ಬಹಳಷ್ಟು ಹಾನಿಯನ್ನುಂಟುಮಾಡುತ್ತದೆ. ಅಧಿಕ ಖಾರ ಸೇವನೆಯಿಂದ ದೇಹದ ಮೇಲಾಗುವ ಅನಾನುಕೂಲಗಳು ಏನೇನು? ಈ ಬಗ್ಗೆ ತಿಳಿದುಕೊಳ್ಳೋಣ.

ಕೆಂಪು ಮೆಣಸಿನ ಪುಡಿಯ ಅನಾನುಕೂಲಗಳು

ಬಹಳ ಜನಪ್ರಿಯವಾದ ಮಸಾಲೆಯಾಗಿರುವ ಕೆಂಪು ಮೆಣಸಿನಕಾಯಿ ಪುಡಿಯನ್ನು ಯಾವುದೇ ಪಾಕವಿಧಾನದಲ್ಲಿ ಬೆರೆಸಿದರೆ ಅದರ ರುಚಿ ಹೆಚ್ಚಾಗುತ್ತದೆ. ದಾಲ್ ಸೇರಿದಂತೆ ಅನೇಕ ಭಕ್ಷ್ಯಗಳಲ್ಲಿ ಅದಿಲ್ಲದಿದ್ದರೆ ಪದಾರ್ಥ ಅಪೂರ್ಣವೆಂದು ತೋರುತ್ತದೆ. ಆದರೆ ಪುಡಿಯನ್ನು ಹೆಚ್ಚು ಬಳಸಿದರೂ ಅಥವಾ ಮಸಾಲೆಯನ್ನು ಅತಿಯಾಗಿ ಸೇವಿಸಿದರೆ ಅನೇಕ ರೋಗಗಳು ಎದುರಾಗಬಹುದು.

ಅತಿಸಾರ: ಕೆಂಪು ಮೆಣಸಿನಕಾಯಿಯನ್ನು ಹೆಚ್ಚಾಗಿ ತಿನ್ನುವುದರಿಂದ ಅತಿಸಾರದ ಆಕ್ರಮಣಕ್ಕೆ ತುತ್ತಾಗಬೇಕಾಗುತ್ತದೆ. ಇದರ ಅತಿಯಾದ ಸೇವನೆ ಹೊಟ್ಟೆಗೆ ಒಳ್ಳೆಯದಲ್ಲ. ಇದನ್ನು ಸೀಮಿತ ಪ್ರಮಾಣದಲ್ಲಿ ತಿನ್ನಬೇಕು. ಸಾಮಾನ್ಯವಾಗಿ ಮಸಾಲೆಗಳನ್ನು ಡೀಪ್ ಫ್ರೈ ಮಾಡಿದಾಗ ಅದು ಹೊಟ್ಟೆಯ ಒಳಭಾಗಕ್ಕೆ ಅಂಟಿಕೊಳ್ಳುವ ಮೂಲಕ ಸಮಸ್ಯೆಗಳನ್ನು ಉಂಟುಮಾಡುತ್ತದೆ.

ಆಮ್ಲೀಯತೆ: ಕೆಂಪು ಮೆಣಸಿನಕಾಯಿಗಳು ಜೀರ್ಣಕ್ರಿಯೆಯ ಸಮಸ್ಯೆಗಳನ್ನು ಉಂಟುಮಾಡಬಹುದು. ಇದು ಹೊಟ್ಟೆಯಲ್ಲಿ ಆಮ್ಲೀಯತೆಯನ್ನು ಉಂಟುಮಾಡಬಹುದು. ಹಾಗೆಯೇ ಕೆಲವರು ಎದೆಯುರಿ ಎಂದು ಆಗಾಗ್ಗೆ ಹೇಳುವುದುಂಟು. ಅಂತಹ ಸಮಸ್ಯೆಯಿಂದ ಬಳಲುತ್ತಿದ್ದರೆ ತಕ್ಷಣ ಕೆಂಪು ಮೆಣಸಿನಕಾಯಿಯನ್ನು ಸೇವಿಸುವುದನ್ನು ನಿಲ್ಲಿಸಿ.

ಹೊಟ್ಟೆಯ ಹುಣ್ಣು: ಸಾಮಾನ್ಯವಾಗಿ ವೈದ್ಯರು ಕೆಂಪು ಮೆಣಸಿನಕಾಯಿಯನ್ನು ಕಡಿಮೆ ತಿನ್ನಲು ಶಿಫಾರಸು ಮಾಡುತ್ತಾರೆ. ಏಕೆಂದರೆ ಹೊಟ್ಟೆಯಲ್ಲಿ ಹುಣ್ಣು ಉಂಟಾಗುತ್ತದೆ ಎಂಬ ಭಯ ಯಾವಾಗಲೂ ಇರುತ್ತದೆ. ಅದರಲ್ಲೂ ಮೆಣಸಿನ ಪುಡಿ ತುಂಬಾ ಅಪಾಯಕಾರಿ. ಇದರ ಕಣಗಳು ಹೊಟ್ಟೆ ಮತ್ತು ಕರುಳಿಗೆ ಅಂಟಿಕೊಳ್ಳುತ್ತವೆ. ಕ್ರಮೇಣ ಇದು ಹುಣ್ಣುಗಳನ್ನು ಉಂಟುಮಾಡುತ್ತವೆ.

(ಸೂಚನೆ: ಈ ಲೇಖನದಲ್ಲಿನ ಮಾಹಿತಿ ಸಾಮಾನ್ಯ ತಿಳಿವಳಿಕೆಗಾಗಿ ಮಾತ್ರ)

ಮತ್ತಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ