ಮಹಿಳೆಯರು ಸೌಂದರ್ಯ ಪ್ರಿಯರು. ಹೀಗಾಗಿಯೇ ಮಹಿಳೆಯರು ಸದಾ ಯಂಗ್ ಆಗಿ ಕಾಣಲು ಬಯಸುವುದರಿಂದ ಮಾರುಕಟ್ಟೆಯಲ್ಲಿ ಸಿಗುವ ವಿವಿಧ ಉತ್ಪನ್ನಗಳನ್ನು ಖರೀದಿಸಿ ಪ್ರಯೋಗವನ್ನು ಮಾಡುತ್ತಿರುತ್ತಾರೆ. ಕೆಲವರಂತೂ ತಮ್ಮ ಸೌಂದರ್ಯದ ರಹಸ್ಯವನ್ನು ಬಿಟ್ಟುಕೊಡುವುದಿಲ್ಲ. ಹೆಚ್ಚಿನವರು ತಮ್ಮ ಮುಖದ ಕಾಂತಿಯು ಹಾಳಾಗದಂತೆ ರೋಸ್ ವಾಟರ್ (Rose Water) ಅನ್ನು ಬಳಸುವುದಿದೆ. ನೈಸರ್ಗಿಕವಾಗಿ ಸಿಗುವ ಗುಲಾಬಿ ದಳಗಳ ನೀರು ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ಆಯಿಲಿ ಸ್ಕಿನ್, ಡ್ರೈ ಸ್ಕಿನ್, ಸೆನ್ಸಿಟಿವ್ ಸ್ಕಿನ್ ಹೀಗೆ ಯಾವ ರೀತಿಯ ಸ್ಕಿನ್ ಹೊಂದಿದವರು ರೋಸ್ ವಾಟರ್ ಅನ್ನು ಬಳಸಬಹುದು. ಹಾಗಾದ್ರೆ ಈ ರೋಸ್ ವಾಟರ್ ನಿಂದ ಏನೆಲ್ಲಾ ಪ್ರಯೋಜನಗಳಿವೆ ಎಂದು ತಿಳಿಯೋಣ ಬನ್ನಿ.
ಗುಲಾಬಿ ಹೂವು ನೋಡುವುದಕ್ಕೆ ಎಷ್ಟು ಚಂದವೋ, ಅದೇ ರೀತಿ ಈ ಹೂವಿನ ದಳಗಳಿಂದ ತಯಾರಿಸುವ ರೋಸ್ ವಾಟರ್ ಕೂಡ ಅಷ್ಟೇ ಉಪಯುಕ್ತ. ಮಾರುಕಟ್ಟೆಯಲ್ಲಿ ಸಿಗುವ ಸೌಂದರ್ಯ ವರ್ಧಕಗಳಲ್ಲಿ ಈ ರೋಸ್ ವಾಟರ್ ಕೂಡ ಒಂದಾಗಿದ್ದು ಹೆಂಗಳೆಯರ ನೆಚ್ಚಿನ ಪ್ರಾಡಕ್ಟ್ ಕೂಡ ಹೌದು. ರೋಸ್ ವಾಟರ್ ನಲ್ಲಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತ ಗುಣವಿರುವುದರಿಂದ ಮುಖದಲ್ಲಿರುವ ಮೊಡವೆ, ಕಪ್ಪು ಕಲೆಗಳು ಹಾಗಿ ಡಾರ್ಕ್ ಸರ್ಕಲ್ ಸೇರಿದಂತೆ ಇನ್ನಿತ್ತರ ಸಮಸ್ಯೆಗಳು ನಿವಾರಣೆ ಮಾಡಿ ಮುಖವನ್ನು ಹೊಳೆಯುವಂತೆ ಮಾಡುತ್ತದೆ.
ಇದನ್ನೂ ಓದಿ: ಪ್ರಾಚೀನ ಕಾಲದ ಈ ಸೌಂದರ್ಯ ರಹಸ್ಯವನ್ನು ನಿರ್ಲಕ್ಷ್ಯ ಮಾಡಬೇಡಿ
ರೋಸ್ ವಾಟರ್ ಅನ್ನು ಮನೆಯಲ್ಲಿಯೇ ತಯಾರಿಸುವುದು ತುಂಬಾನೇ ಸುಲಭ. ಎರಡು ಗುಲಾಬಿಯನ್ನು ತೆಗೆದುಕೊಂಡು ಅದರ ದಳಗಳನ್ನು ಬೇರ್ಪಡಿಸಬೇಕು. ದಳಗಳನ್ನು ಶುದ್ಧ ನೀರಿನಿಂದ ತೊಳೆದು ಇಟ್ಟುಕೊಳ್ಳಬೇಕು. ಒಂದು ಪಾತ್ರೆಯಲ್ಲಿ 2 ಕಪ್ ಬಿಸಿ ನೀರನ್ನು ಕುದಿಸಬೇಕು. ಆ ಬಿಸಿ ನೀರಿಗೆ ಗುಲಾಬಿ ದಳಗಳನ್ನು ಸೇರಿಸಿ ಮಿಶ್ರಣಮಾಡಿಕೊಳ್ಳಿ. ಬಳಿಕ ಬಿಗಿಯಾಗಿ ಪಾತ್ರೆಯ ಮುಚ್ಚಳವನ್ನು ಮುಚ್ಚಿಕೊಳ್ಳಿ. ನೀರು ತಣ್ಣಗಾದ ಬಳಿಕ ಸೋಸಿದರೆದರೆ ಶುದ್ಧ ರೋಸ್ ವಾಟರ್ ಸಿದ್ಧವಾಗಿರುತ್ತದೆ. ಇದನ್ನು ಬಾಟಲಿಯಲ್ಲಿ ತುಂಬಿಸಿ ಫ್ರಿಜ್ ನಲ್ಲಿಟ್ಟುಕೊಂಡು ಬೇಕಾದಾಗ ಉಪಯೋಗಿಸಿಕೊಳ್ಳಬಹುದು.
ಮತ್ತಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:18 pm, Mon, 15 January 24