ಚಳಿಗಾಲದಲ್ಲಿ ಬೆಲ್ಲದ ಚಹಾ ಕುಡಿಯುವುದರಿಂದ ಆರೋಗ್ಯ ಲಾಭಗಳು ಅಧಿಕ!
ಚಳಿಗಾಲದಲ್ಲಿ ಹವಾಮಾನದಲ್ಲಾಗುವ ಬದಲಾವಣೆಗಳು ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ತಂದೊಡ್ಡಬಲ್ಲದು. ಈ ಸಮಯದಲ್ಲಿ ಮೈ ಬೆಚ್ಚಗೇನಿಸುವ ಉಡುಪುಗಳು ಹಾಗೂ ಸ್ಕಿನ್ ಕೇರ್ ಪ್ರಾಡಕ್ಟ್ ಗಳನ್ನು ಬಳಸುವುದರ ಜೊತೆಗೆ ಋತುವಿಗೆ ಅನುಸಾರವಾಗಿ ಆಹಾರ ಕ್ರಮಗಳಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಈ ಋತುವಿನಲ್ಲಿ ಮೈ ಕೊರೆಯುವ ಚಳಿಯಲ್ಲಿ ಒಂದು ಕಪ್ ಬೆಲ್ಲದ ಟೀ ಇದ್ದರೆ ಅದರ ಮಜಾನೇ ಬೇರೆ. ಸಕ್ಕರೆಯ ಬದಲಾಗಿ ಬೆಲ್ಲದ ಚಹಾವನ್ನು ಕುಡಿಯುವುದರಿಂದ ಆರೋಗ್ಯ ಲಾಭಗಳು ಅಧಿಕವಾಗಿದ್ದು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ನಾನಾ ರೀತಿಯ ಸಮಸ್ಯೆಗಳಿಗೆ ರಾಮಬಾಣವಾಗಿದೆ.
ಮೈ ಕೊರೆಯುವ ಚಳಿಯ ನಡುವೆ ಬಿಸಿ ಬಿಸಿ ಆಹಾರವನ್ನು ನೀಡಿದರೆ ಯಾರು ಕೂಡ ಬೇಡ ಎನ್ನುವುದಿಲ್ಲ. ಈ ಚಳಿಗಾಲದಲ್ಲಿ ಎಲ್ಲರೂ ಕೂಡ ಬಿಸಿ ಬಿಸಿ ಆಹಾರವನ್ನು ಸೇವಿಸಲು ಇಷ್ಟ ಪಡುತ್ತಾರೆ. ಮೈ ಕೊರೆಯುವ ಚಳಿಯ ನಡುವೆ ಬಿಸಿ ಬಿಸಿ ಆಹಾರ ಮನಸ್ಸಿಗೆ ಹಾಗೂ ದೇಹಕ್ಕೆ ಬೆಚ್ಚನೆಯ ಅನುಭವವನ್ನು ನೀಡುತ್ತದೆ. ಹೀಗಾಗಿ ಹೆಚ್ಚಾಗೂ ಟೀ ಕಾಫಿಯನ್ನು ಹೆಚ್ಚಾಗಿ ಸೇವಿಸುತ್ತಾರೆ. ಈ ಸಮಯದಲ್ಲಿ ಬೆಲ್ಲದ ಚಹಾ (jaggery tea) ವನ್ನು ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಬಹಳ ಒಳ್ಳೆಯದು ಎನ್ನಬಹುದು. ಕೆಲವರು ಬೆಲ್ಲದ ಜೊತೆಗೆ ಮಸಾಲೆಯುಕ್ತ ಪದಾರ್ಥಗಳನ್ನು ಹಾಕಿ ಮಾಡಿದ ಚಹಾವನ್ನು ಇಷ್ಟ ಪಡುತ್ತಾರೆ. ಆದರೆ ಈ ಬೆಲ್ಲವನ್ನು ಹಾಕಿ ಚಹಾ ಮಾಡಿದರೆ ಅದರ ಸುವಾಸನೆಯೇ ಬೇರೆ.
ಬೆಲ್ಲದಲ್ಲಿ ವಿಟಮಿನ್ ಎ, ಮತ್ತು ಬಿ, ರಂಜಕ, ಕಬ್ಬಿಣ, ಸುಕ್ರೋಸ್, ಜೀವಸತ್ವಗಳು, ಖನಿಜಗಳು ಮತ್ತು ಪೋಷಕಾಂಶಗಳು ಹೇರಳವಾಗಿದ್ದು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣವು ಹೆಚ್ಚಾಗಿರುವುದರಿಂದ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.
ಬೆಲ್ಲದ ಚಹಾದ ಆರೋಗ್ಯ ಪ್ರಯೋಜನಗಳು ಹಲವು:
- ದೇಹವನ್ನು ಬೆಚ್ಚರಿಸಿ ಆರೋಗ್ಯವನ್ನು ಕಾಪಾಡುತ್ತದೆ : ಬೆಲ್ಲದ ಚಹಾವನ್ನು ಕುಡಿಯುವುದರಿಂದ ದೇಹವನ್ನು ಬೆಚ್ಚಗಿರಿಸುತ್ತದೆ. ಅದಲ್ಲದೇ, ಶೀತ ಮತ್ತು ಕೆಮ್ಮಿನಂತಹ ಸಮಸ್ಯೆಗಳನ್ನು ನಿವಾರಿಸಿ ಆರೋಗ್ಯವನ್ನು ಕಾಪಾಡುತ್ತದೆ.
- ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ : ಬೆಲ್ಲದಲ್ಲಿ ಸತು ಮತ್ತು ಸೆಲೆನಿಯಂ ಸೇರಿದಂತೆ ಇನ್ನಿತ್ತರ ಖನಿಜಗಳಿದ್ದು, ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಆರೋಗ್ಯ ಸಮಸ್ಯೆ ಬಾರದಂತೆ ತಡೆಯುತ್ತದೆ.
- ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ : ಬೆಲ್ಲ ಚಹಾದಲ್ಲಿ ಪೊಟ್ಯಾಸಿಯಮ್ ಅಂಶವು ಹೇರಳವಾಗಿದ್ದು, ರಕ್ತದೊತ್ತಡದ ಮಟ್ಟವನ್ನು ನಿಯಂತ್ರಿಸುತ್ತದೆ. ಹೀಗಾಗಿ ಮದುಮೇಹಿಗಳು ಕೂಡ ಯಾವುದೇ ಆತಂಕವಿಲ್ಲದೇ ಬೆಲ್ಲದ ಚಹಾವನ್ನು ಕುಡಿಯಬಹುದು.
- ಜೀರ್ಣಕ್ರಿಯೆಯಂತಹ ಸಮಸ್ಯೆಗಳಿಗೆ ಶಮನಕಾರಿ : ಬೆಲ್ಲದ ಚಹಾವನ್ನು ಕುಡಿಯುವುದರಿಂದ ಜೀರ್ಣಕಾರಿ ಕಿಣ್ವಗಳು ಉತ್ಪತ್ನಿ ಮಾಡಿ ಜೀರ್ಣಕ್ರಿಯೆಯು ಸರಾಗವಾಗಿ ಆಗುತ್ತದೆ.
- ಕೆಂಪು ರಕ್ತಕಣಗಳ ಉತ್ಪಾದನೆ: ಬೆಲ್ಲದ ಚಹಾದಲ್ಲಿ ಕಬ್ಬಿಣಾಂಶವು ಹೇರಳವಾಗಿದ್ದು, ಕೆಂಪು ರಕ್ತ ಕಣಗಳ ಉತ್ಪಾದನೆಗೆ ಸಹಾಯಕವಾಗಿದೆ. ಹೀಗಾಗಿ ರಕ್ತ ಹೀನತೆ ಸಮಸ್ಯೆಗಳು ಬರುವುದಿಲ್ಲ.
- ಕೀಲು ನೋವಿಗೆ ರಾಮಬಾಣ: ಬೆಲ್ಲದ ಚಹಾದ ಸೇವನೆಯಿಂದಾಗಿ ಉರಿಯೂತ, ಸಂಧಿವಾತ ಹಾಗೂ ಇನ್ನಿತ್ತರ ಸಮಸ್ಯೆಗಳು ನಿವಾರಣೆಯಾಗುತ್ತದೆ.
ಲೇಖನ: ಸಾಯಿನಂದ
ಮತ್ತಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.