AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಳಿಗಾಲದಲ್ಲಿ ನಿಮ್ಮ ಚರ್ಮದ ರಕ್ಷಣೆಯನ್ನು ಹೀಗೆ ಮಾಡಿ: ಇಲ್ಲಿದೆ ಸರಳ ಟಿಪ್ಸ್!

ಚಳಿಗಾಲ ಬಂತೆಂದರೆ ಸಾಕು, ಮೈ ಕೊರೆಯುವ ಚಳಿ ಒಂದೆಡೆಯಾದರೆ ಬಿಡದ ಕಾಡುವ ಆರೋಗ್ಯ ಸಮಸ್ಯೆಗಳು ಮತ್ತೊಂದೆಡೆ. ಈ ವೇಳೆಯಲ್ಲಿ ಆರೋಗ್ಯ ಕೈ ಕೊಡುವುದರ ಜೊತೆಗೆ ಚರ್ಮದ ಕಾಂತಿಯು ಹದಗೆಡುತ್ತವೆ. ಚಳಿಗಾಲದ ಸಮಯದಲ್ಲಿ ಚರ್ಮವು ಒಣಗಿದಂತಾಗಿ ಬಿರುಕುಗಳು ಕಾಣಿಸಿಕೊಳ್ಳುತ್ತದೆ. ಈ ಸಮಯದಲ್ಲಿ ನೀರು ಕುಡಿಯುವುದರ ಜೊತೆಗೆ ಈ ಕೆಲವೊಂದು ಅಗತ್ಯ ಕ್ರಮಗಳನ್ನು ಪಾಲಿಸುವ ಮೂಲಕ ಚರ್ಮ ಹಾಗೂ ತ್ವಚೆಯನ್ನು ರಕ್ಷಣೆ ಮಾಡಬಹುದಾಗಿದೆ.

ಚಳಿಗಾಲದಲ್ಲಿ ನಿಮ್ಮ ಚರ್ಮದ ರಕ್ಷಣೆಯನ್ನು ಹೀಗೆ ಮಾಡಿ: ಇಲ್ಲಿದೆ ಸರಳ ಟಿಪ್ಸ್!
ಪ್ರಾತಿನಿಧಿಕ ಚಿತ್ರ
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on:Jan 15, 2024 | 5:17 PM

Share

ಚಳಿಗಾಲ (winter) ವನ್ನು ಕೆಲವರು ಇಷ್ಟ ಪಟ್ಟರೆ, ಇನ್ನು ಕೆಲವರು ಬೇಡಪ್ಪ ಬೇಡ ಎಂದು ಹೇಳುವುದು ಇದೆ. ಇದಕ್ಕೆ ಮುಖ್ಯ ಕಾರಣ ಆರೋಗ್ಯ ಸಮಸ್ಯೆಗಳು. ಚಳಿಗಾಲದ ಸಮಯದಲ್ಲಿ ಕೆಲವೊಮ್ಮೆ ವಿಪರೀತ ಬಿಸಿಲು ಬೆಚ್ಚಗೆಯ ಅನುಭವವನ್ನು ನೀಡಿದರೆ ಸಂಜೆ ಹಾಗೂ ಬೆಳಗ್ಗಿನ ಸಮಯದಲ್ಲಿ ಮೈ ಕೊರೆಯುವ ಚಳಿಯು ನೇರವಾಗಿ ಪರಿಣಾಮವನ್ನು ಬೀರುವುದು ತ್ವಚೆ ಹಾಗೂ ಚರ್ಮದ ಮೇಲೆ ಈ ಸಮಯದಲ್ಲಿ ಚರ್ಮ ಒಡೆಯುವುದು, ತುಟಿ ಒಡೆಯುವುದು ಹಾಗೂ ಪಾದಗಳಲ್ಲಿ ಬಿರುಕು ಕಾಣಿಸಿಕೊಳ್ಳುತ್ತವೆ. ಈ ಕಾಲದಲ್ಲಿ ಚರ್ಮದ ಆರೈಕೆ ಮಾಡುವುದು ಬಹಳ ಮುಖ್ಯ. ಹಾಗಾದ್ರೆ ಚಳಿಗಾಲದಲ್ಲಿ ಈ ಎಲ್ಲಾ ಸಮಸ್ಯೆಗಳಿಂದ ಚರ್ಮವನ್ನು ರಕ್ಷಿಸಿಕೊಳ್ಳುವುದು ಹೇಗೆ ಎನ್ನುವುದನ್ನು ತಿಳಿಯೋಣ ಬನ್ನಿ.

ಚಳಿಗಾಲದಲ್ಲಿ ಚರ್ಮವನ್ನು ರಕ್ಷಿಸುವುದು ಹೇಗೆ?

  • ಚಳಿಗಾಲದಲ್ಲಿ ಚರ್ಮವು ತೇವನ್ನು ಕಳೆದುಕೊಳ್ಳುತ್ತದೆ. ಹೀಗಾಗಿ ಎಣ್ಣೆ ಆಧಾರಿತ ಮಾಯಿಶ್ಚರೈಸರ್ ಬಳಸುವುದರಿಂದ ಶುಷ್ಕ ಚರ್ಮವನ್ನು ನಿವಾರಿಸುತ್ತದೆ. ಈ ಕಾರಣದಿಂದಾಗಿ ಸ್ನಾನದ ನಂತರ ಯಾವಾಗಲೂ ನಿಮ್ಮ ಮಾಯಿಶ್ಚರೈಸರ್ ಅನ್ನು ಹಚ್ಚುವುದನನ್ನು ತಪ್ಪಿಸಬೇಡಿ. ಮಾಯಿಶ್ಚರೈಸರ್ ಹಚ್ಚುತ್ತಿದ್ದರೆ ಚರ್ಮವು ಸ್ವಲ್ಪ ತೇವವಾಗಿ ತೇವಾಂಶವನ್ನು ಉಳಿಸಿಕೊಳ್ಳುತ್ತದೆ.
  • ಚಳಿಗಾಲದ ಸಮಯದಲ್ಲಿ ಚರ್ಮಕ್ಕೆ ತೆಂಗಿನ ಎಣ್ಣೆಯಿಂದ ಮಸಾಜ್ ಮಾಡುವುದನ್ನು ಮುಖ್ಯ. ತೆಂಗಿನೆಣ್ಣೆಯು ಔಷಧೀಯ ಗುಣಗಳಿಂದ ಸಮೃದ್ಧವಾಗಿದ್ದು, ಈ ಎಣ್ಣೆ ಬಳಸುವುದರಿಂದ ಚರ್ಮ ಮೃದುವಾಗುತ್ತದೆ. ಒಣ ತ್ವಚೆಯನ್ನು ನಿವಾರಿಸಿ ತೇವಾಂಶಯುಕ್ತವಾಗಿರುವಂತೆ ಮಾಡುತ್ತದೆ.
  • ಚಳಿಗಾಲದಲ್ಲಿ ತಾಪಮಾನ ಕಡಿಮೆಯಾದಂತೆ ಬಾಯಾರಿಕೆಯಾಗುವುದಿಲ್ಲ. ಹೀಗಾಗಿ ನೀರು ಕುಡಿಯುವ ಪ್ರಮಾಣವು ಏಕಾಏಕಿ ಕಡಿಮೆಯಾಗುತ್ತದೆ. ಆದರೆ ನೀವು ಬಾಯಾರಿಕೆಯಾಗುವುದಿಲ್ಲ ಎಂದು ನೀರು ಕುಡಿಯುವ ಅಭ್ಯಾಸವನ್ನು ಕಡಿಮೆ ಮಾಡುವುದು ಸೂಕ್ತವಲ್ಲ. ಈ ಸಮಯದಲ್ಲಿ ಚರ್ಮವು ಒಣಗದಂತೆ ನೋಡಿಕೊಳ್ಳುವುದು ತುಂಬಾ ಮುಖ್ಯ. ಹೀಗಾಗಿ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವ ಅಭ್ಯಾಸವನ್ನು ರೂಢಿಸಿಕೊಳ್ಳಿ.
  • ಚಳಿಗಾಲದಲ್ಲಿ ಸನ್‌ಸ್ಕ್ರೀನ್ ಹಚ್ಚುವುದು ಮರೆಯಬೇಡಿ. ಚಳಿಗಾಲದಲ್ಲಿ ಸೂರ್ಯನ ಕಿರಣವು ಚರ್ಮಕ್ಕೆ ನಾನಾ ರೀತಿಯ ಸಮಸ್ಯೆಗಳನ್ನು ತಂದೊಡ್ಡಬಲ್ಲದು. ಹೀಗಾಗಿ ಯಾವುದೇ ತೆರೆದ ಚರ್ಮಕ್ಕೆ ವಿಶಾಲ-ಸ್ಪೆಕ್ಟ್ರಮ್ ಸನ್‌ಸ್ಕ್ರೀನ್ ಅನ್ನು ಬಳಸಿ ಚರ್ಮದ ರಕ್ಷಣೆಯನ್ನು ಮಾಡಬೇಕು.
  • ಸ್ನಾನದ ಸಮಯದಲ್ಲಿ ಸೋಪಿನ ಬದಲು ಕಡಲೆ ಹಿಟ್ಟು ಬಳಸಿದರೆ ಉತ್ತಮ . ಕಡಲೆ ಹಿಟ್ಟಿಗೆ, ಮೊಸರು, ಹಾಲು ಅಥವಾ ನೀರು ಬೆರೆಸಿ ಲೇಪಿಸಿಕೊಂಡರೆ ಚರ್ಮವು ಮೃದುವಾಗುವುದರ ಜೊತೆಗೆ ತೇವಾಂಶವಾಗಿರುತ್ತದೆ.

ಲೇಖನ: ಸಾಯಿನಂದ

ಮತ್ತಷ್ಟು ಜೀನವಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 5:17 pm, Mon, 15 January 24