AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲವಂಗದ ಟೀಯನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕಾ? ಊಟವಾದ ಮೇಲೆ ಕುಡಿಯಬೇಕಾ?

ಲವಂಗದಿಂದ ಮಾಡಿದ ಟೀಯನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಹಲವು ರೀತಿಯ ಪ್ರಯೋಜನಗಳಿವೆ. ನಿಮಗೆ ಚಹಾ ಬಹಳ ಇಷ್ಟವಾಗಿದ್ದರೆ ಲವಂಗ ಹಾಕಿದ ಟೀಯನ್ನು ಸೇವಿಸಿದರೆ ಆರೋಗ್ಯಕ್ಕೆ ಉತ್ತಮವಾಗುತ್ತದೆ. ಆದರೆ, ಯಾವ ಸಮಯದಲ್ಲಿ ಲವಂಗದ ಟೀ ಕುಡಿಯಬೇಕು? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಲವಂಗದ ಟೀಯನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕಾ? ಊಟವಾದ ಮೇಲೆ ಕುಡಿಯಬೇಕಾ?
ಲವಂಗದ ಚಹಾImage Credit source: iStock
ಸುಷ್ಮಾ ಚಕ್ರೆ
|

Updated on: Jan 15, 2024 | 2:47 PM

Share

ಲವಂಗ ನಮ್ಮ ದೇಹವನ್ನು ಬೆಚ್ಚಗಾಗಿಸುವ ಮಸಾಲೆಯಾಗಿದ್ದು, ಇದನ್ನು ಭಾರತದ ಅಡುಗೆಯಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಜೀರ್ಣಕ್ರಿಯೆಗೆ ಲವಂಗ ಬಹಳ ಸಹಕಾರಿಯಾಗಿದೆ. ಲವಂಗ ನಂಜುನಿರೋಧಕ, ಆ್ಯಂಟಿವೈರಲ್ ಮತ್ತು ಆ್ಯಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮಾತ್ರವಲ್ಲದೆ ಹಲವು ರೀತಿಯ ಸೋಂಕುಗಳನ್ನು ನಿಭಾಯಿಸಲು ಸಹಾಯ ಮಾಡುತ್ತದೆ. ಲವಂಗವು ನೋವು ನಿವಾರಕ ಗುಣಗಳನ್ನು ಹೊಂದಿದೆ. ಹಲ್ಲುನೋವನ್ನು ಇದು ಶೀಘ್ರದಲ್ಲೇ ವಾಸಿ ಮಾಡುತ್ತದೆ.

ಲವಂಗದಿಂದ ಮಾಡಿದ ಟೀಯನ್ನು ಸೇವಿಸಿವುದರಿಂದ ಆರೋಗ್ಯಕ್ಕೆ ಅನೇಕ ಪ್ರಯೋಜನಗಳಿವೆ. ನಿಮಗೆ ಚಹಾ ಬಹಳ ಇಷ್ಟವಾಗಿದ್ದರೆ ಲವಂಗ ಹಾಕಿದ ಟೀಯನ್ನು ಸೇವಿಸಿದರೆ ಆರೋಗ್ಯ ಉತ್ತಮವಾಗುತ್ತದೆ. ಆದರೆ, ಈ ಲವಂಗದ ಚಹಾವನ್ನು ಊಟದ ನಂತರ ಕುಡಿಯಬೇಕಾ? ಮಲಗುವ ಮೊದಲು ಸೇವಿಸಬೇಕಾ? ಅಥವಾ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಚಹಾದ ಬಳಿಕ ನೀರು ಕುಡಿಯುವ ಅಭ್ಯಾಸ ನಿಮಗಿದ್ದರೇ ಈ ಕೂಡಲೇ ಬಿಟ್ಟು ಬಿಡಿ

ಲವಂಗದ ಚಹಾವನ್ನು ದಿನಕ್ಕೆ 1-2 ಬಾರಿ ಸೇವಿಸಬಹುದು. ಲವಂಗವು ಜೀರ್ಣಕಾರಿ ಕಿಣ್ವಗಳ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ನೀವು ಹೊಟ್ಟೆ ಬಿರಿಯುವಷ್ಟು ಊಟವನ್ನು ಮಾಡಿದಾಗ ಲವಂಗದ ಟೀ ಕುಡಿಯುವುದರಿಂದ ಬಹಳ ಉಪಯೋಗವಿದೆ. ಲವಂಗ ಚಹಾವನ್ನು ತಯಾರಿಸಲು 4ರಿಂದ 5 ಲವಂಗದ ಎಸಳುಗಳನ್ನು ಪುಡಿಮಾಡಿ, ಅದಕ್ಕೆ ಸ್ವಲ್ಪ ತುರಿದ ಶುಂಠಿ ಮತ್ತು ದಾಲ್ಚಿನ್ನಿ ತುಂಡುಗಳನ್ನು ಹಾಕಿ ಬಿಸಿ ನೀರಿನಲ್ಲಿ ಕುದಿಸಿ. ಅವುಗಳನ್ನು ಒಂದೆರಡು ನಿಮಿಷಗಳ ಕಾಲ ಕುದಿಸಿ, ಲೋಟಕ್ಕೆ ಹಾಕಿಡಿ. ಅದರ ರುಚಿಯನ್ನು ಹೆಚ್ಚಿಸಲು ನೀವು ಜೇನುತುಪ್ಪ ಮತ್ತು ನಿಂಬೆ ರಸವನ್ನು ಸೇರಿಸಬಹುದು. ಲವಂಗವು ಅದರ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳಿಂದಾಗಿ ಬಾಯಿಯ ಕೆಟ್ಟ ವಾಸನೆಯನ್ನು ಕೂಡ ನಿವಾರಿಸುತ್ತದೆ.

ಲವಂಗದ ಚಹಾವನ್ನು ಸೇವಿಸಲು ಉತ್ತಮ ಸಮಯ ಯಾವುದು?:

– ಲವಂಗದ ಚಹಾವು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದನ್ನು ಊಟದ ನಂತರ ಅಥವಾ ಮಲಗುವ ಮುನ್ನ ಒಂದು ಕಪ್ ಸೇವಿಸುವುದು ಉತ್ತಮ.

– ಊಟದ ನಂತರ ಲವಂಗದ ಟೀ ಸೇವಿಸಿದರೆ ಜೀರ್ಣಕ್ರಿಯೆಗೆ ಸಹಾಯವಾಗುತ್ತದೆ. ಯಾವುದೇ ಅಸ್ವಸ್ಥತೆಯನ್ನು ನಿವಾರಿಸಲು ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡಲು ಊಟದ ನಂತರ 1 ಕಪ್ ಲವಂಗದ ಟೀಯನ್ನು ಕುಡಿಯಿರಿ.

ಇದನ್ನೂ ಓದಿ: Heart Disease: ಬೆಳಗ್ಗಿನ ಒಂದು ಕಪ್​​​ ಚಹಾ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ

– ಮಧ್ಯಾಹ್ನ ಲವಂಗದ ಟೀ ಕುಡಿಯುವುದರಿಂದ ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

– ರಾತ್ರಿ ಮಲಗುವ ಮುನ್ನ ಲವಂಗ ಚಹಾ ಸೇವಿಸುವುದರಿಂದ ದೇಹಕ್ಕೆ ಮತ್ತು ದೇಹದ ಅಂಗಗಳಿಗೆ ವಿಶ್ರಾಂತಿಯನ್ನು ನೀಡುತ್ತದೆ.

– ಲವಂಗದ ಚಹಾವನ್ನು ದಿನವೂ ಕುಡಿಯುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ. ಹರ್ಬಲ್ ಟೀ ಅನೇಕ ರೋಗಗಳನ್ನು ಕೂಡ ನಿಯಂತ್ರಿಸಲು ಸಹಕಾರಿಯಾಗಿದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!