ಲವಂಗದ ಬಗ್ಗೆ ನೀವು ಕೇಳಿರದ ಅಚ್ಚರಿಯ ಮಾಹಿತಿ ಇಲ್ಲಿದೆ
ಲವಂಗದ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ಬಾಯಿಯ ಆರೋಗ್ಯವನ್ನು ಹೆಚ್ಚಿಸುತ್ತದೆ. ಲವಂಗದಲ್ಲಿರುವ ಪ್ರಯೋಜನಕಾರಿ ಸಂಯುಕ್ತಗಳು ಯಕೃತ್ತಿನ ಆರೋಗ್ಯವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ತೀವ್ರವಾದ ತಲೆನೋವಿದ್ದರೆ ಲವಂಗದ ಎಣ್ಣೆಯನ್ನು ಹಣೆಗೆ ಹಚ್ಚಿ ಮಸಾಜ್ ಮಾಡಿಕೊಂಡರೆ ಆರಾಮವೆನಿಸುತ್ತದೆ.
ಪ್ರತಿಯೊಬ್ಬರ ಅಡುಗೆ ಮನೆಯಲ್ಲೂ ಲವಂಗ ಇದ್ದೇ ಇರುತ್ತದೆ. ಮಸಾಲೆ ಪದಾರ್ಥವಾದ ಈ ಲವಂಗದಿಂದ ಆರೋಗ್ಯಕ್ಕೂ ಹಲವು ಪ್ರಯೋಜನಗಳಿವೆ. ಇದನ್ನು ಸಾಂಪ್ರದಾಯಿಕ ಔಷಧದಲ್ಲಿಯೂ ಬಳಸಲಾಗುತ್ತದೆ. ಆಯುರ್ವೇದದಲ್ಲಿ ಲವಂಗಕ್ಕೆ ಬಹಳ ಪ್ರಮುಖ ಸ್ಥಾನವಿದೆ. ಗ್ಯಾಸ್ಟ್ರಿಕ್, ಮೂಳೆಯ ಸಮಸ್ಯೆ, ಹಲ್ಲು ನೋವು, ಬಾಯಿಯ ಸಮಸ್ಯೆ ಹೀಗೆ ಅನೇಕ ಸಮಸ್ಯೆಗಳಿಗೆ ಲವಂಗದಿಂದ ಪರಿಹಾರ ಸಿಗುತ್ತದೆ.
ಲವಂಗಗಳು ಫೈಬರ್, ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುತ್ತವೆ. ಆದ್ದರಿಂದ ನಿಮ್ಮ ಆಹಾರಕ್ಕೆ ಪರಿಮಳವನ್ನು ಒದಗಿಸುತ್ತದೆ. ಹಲವಾರು ಪ್ರಮುಖ ಜೀವಸತ್ವಗಳು ಮತ್ತು ಖನಿಜಗಳನ್ನು ಒಳಗೊಂಡಿರುವುದರ ಜೊತೆಗೆ ಲವಂಗವು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ.
ಗ್ಯಾಸ್ಟ್ರಿಕ್ ಅಥವಾ ಅಸಿಡಿಟಿಯಿಂದ ಬಳಲುತ್ತಿರುವವರಿಗೆ ಲವಂಗ ಹೇಳಿಮಾಡಿಸಿದ ಔಷಧಿ. ರಾತ್ರಿ ಮಲಗುವ ಮೊದಲು 2 ಲವಂಗ ತಿಂದು, ಬಿಸಿನೀರು ಕುಡಿದರೆ ಗ್ಯಾಸ್ಟ್ರಿಕ್ ಸಮಸ್ಯೆ ದೂರವಾಗುತ್ತದೆ. ಹಲ್ಲು ನೋವಿದ್ದಾಗ ಒಂದು ಎಸಳು ಲವಂಗವನ್ನು ಆ ಹಲ್ಲಿನ ಮೇಲಿಟ್ಟುಕೊಂಡು ಸ್ವಲ್ಪ ಹೊತ್ತಿನ ಬಳಿಕ ತೆಗೆದರೆ ಹಲ್ಲು ನೋವು ಕಡಿಮೆಯಾಗಿರುತ್ತದೆ. ಲವಂಗದ ಎಸಳಿನ ಬದಲು ಲವಂಗದೆಣ್ಣೆಯನ್ನೂ ಕೂಡ ಬಳಸಬಹುದು.
ಇದನ್ನೂ ಓದಿ: ಅಡುಗೆಗೆ ಮಾತ್ರವಲ್ಲ, ಆರೋಗ್ಯದಲ್ಲೂ ಇಂಗಿನ ಪ್ರಯೋಜನ ಅಪಾರ
ಲವಂಗದಲ್ಲಿ ಕಂಡುಬರುವ ಸಂಯುಕ್ತಗಳು ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಎಂದು ಕೆಲವು ಸಂಶೋಧನೆಗಳು ಸೂಚಿಸುತ್ತವೆ. ಹಾಗೇ, ಲವಂಗಗಳು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿವೆ. ಅಂದರೆ, ಅದು ಬ್ಯಾಕ್ಟೀರಿಯಾದಂತಹ ಸೂಕ್ಷ್ಮಜೀವಿಗಳ ಬೆಳವಣಿಗೆಯನ್ನು ನಿಲ್ಲಿಸಲು ಸಹಾಯ ಮಾಡುತ್ತದೆ.
ಲವಂಗದ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ಬಾಯಿಯ ಆರೋಗ್ಯವನ್ನು ಹೆಚ್ಚಿಸುತ್ತದೆ. ಲವಂಗದಲ್ಲಿರುವ ಪ್ರಯೋಜನಕಾರಿ ಸಂಯುಕ್ತಗಳು ಯಕೃತ್ತಿನ ಆರೋಗ್ಯವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಲವಂಗ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಲವಂಗದಲ್ಲಿ ಕಂಡುಬರುವ ಸಂಯುಕ್ತಗಳು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ ಎಂದು ಸಂಶೋಧನೆ ತಿಳಿಸಿದೆ.
ಇದನ್ನೂ ಓದಿ: ತಲೆಕೂದಲಿನಿಂದ ಕ್ಯಾನ್ಸರ್ವರೆಗೆ; ಸೋಯಾದ ಪ್ರಯೋಜನ ಒಂದೆರಡಲ್ಲ
ತೀವ್ರವಾದ ತಲೆನೋವಿದ್ದರೆ ಲವಂಗದ ಎಣ್ಣೆಯನ್ನು ಹಣೆಗೆ ಹಚ್ಚಿ ಮಸಾಜ್ ಮಾಡಿಕೊಂಡರೆ ಆರಾಮವೆನಿಸುತ್ತದೆ. ಗಾಯದ ನೋವು, ಕಾಲು ನೋವಿದ್ದರೂ ಈ ಎಣ್ಣೆಯನ್ನು ಹಚ್ಚಿಕೊಳ್ಳಬಹುದು. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಲವಂಗ ತಿಂದರೆ ಜೀರ್ಣಕ್ರಿಯೆಯ ಸಮಸ್ಯೆ ಪರಿಹಾರವಾಗುತ್ತದೆ.