ಅಡುಗೆಗೆ ಮಾತ್ರವಲ್ಲ, ಆರೋಗ್ಯದಲ್ಲೂ ಇಂಗಿನ ಪ್ರಯೋಜನ ಅಪಾರ

ಇಂಗಿನಲ್ಲಿರುವ ಉತ್ಕರ್ಷಣ ನಿರೋಧಕಗಳು ದೀರ್ಘಕಾಲದ ಉರಿಯೂತ, ಹೃದ್ರೋಗ, ಕ್ಯಾನ್ಸರ್ ಮತ್ತು ಟೈಪ್ 2 ಮಧುಮೇಹದಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಕಿಬ್ಬೊಟ್ಟೆಯ ನೋವು, ಹೊಟ್ಟೆ ಉಬ್ಬರಿಸುವುದು ಮತ್ತು ಗ್ಯಾಸ್, ಮಲಬದ್ಧತೆ, ಅತಿಸಾರದಂತಹ ಸಮಸ್ಯೆಗಳನ್ನು ದೂರ ಮಾಡುತ್ತದೆ.

ಅಡುಗೆಗೆ ಮಾತ್ರವಲ್ಲ, ಆರೋಗ್ಯದಲ್ಲೂ ಇಂಗಿನ ಪ್ರಯೋಜನ ಅಪಾರ
ಇಂಗು
Follow us
|

Updated on: Sep 09, 2023 | 11:22 AM

ಇಂಗು ಕೇವಲ ನಿಮ್ಮ ಅಡುಗೆಗೆ ಘಮ ನೀಡುವುದು ಮಾತ್ರವಲ್ಲದೆ ಆರೋಗ್ಯಕ್ಕೂ ಸಾಕಷ್ಟು ಉಪಯೋಗಕರವಾಗಿದೆ. ಇಂಗು ಅಫ್ಘಾನಿಸ್ತಾನ ಮತ್ತು ಇರಾನ್‌ ಮೂಲದ್ದಾಗಿದ್ದಾದರೂ ಇಂಗನ್ನು ಸಾಮಾನ್ಯವಾಗಿ ಭಾರತೀಯ ಅಡುಗೆಯಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಮಸಾಲೆಯಾಗಿ ಇಂಗು (Asafoetida) ತನ್ನ ಕಟುವಾದ ವಾಸನೆಗೆ ಹೆಸರುವಾಸಿಯಾಗಿದೆ. ಆಯುರ್ವೇದ ಔಷಧದಲ್ಲಿ ಇಂಗನ್ನು (Hing) ಜೀರ್ಣಕ್ರಿಯೆ ಮತ್ತು ಗ್ಯಾಸ್ಟ್ರಿಕ್​ಗೆ ಸಹಾಯ ಮಾಡಲು ಬಳಸಲಾಗುತ್ತದೆ. ಜೊತೆಗೆ ಬ್ರಾಂಕೈಟಿಸ್ ಮತ್ತು ಮೂತ್ರಪಿಂಡದ ಕಲ್ಲುಗಳ ಸಮಸ್ಯೆಗೆ ಚಿಕಿತ್ಸೆ ನೀಡುತ್ತದೆ. ಮಧ್ಯಕಾಲೀನ ಯುಗದಲ್ಲಿ ಕೆಲವರು ಸೋಂಕು ಮತ್ತು ರೋಗವನ್ನು ದೂರವಿಡಲು ಸಹಾಯ ಮಾಡಲು ತಮ್ಮ ಕುತ್ತಿಗೆಗೆ ಒಣಗಿದ ಗಮ್ ಅನ್ನು ಧರಿಸುತ್ತಿದ್ದರು.

ಇಂಗಿನಲ್ಲಿರುವ ಉತ್ಕರ್ಷಣ ನಿರೋಧಕಗಳು ದೀರ್ಘಕಾಲದ ಉರಿಯೂತ, ಹೃದ್ರೋಗ, ಕ್ಯಾನ್ಸರ್ ಮತ್ತು ಟೈಪ್ 2 ಮಧುಮೇಹದಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಕಿಬ್ಬೊಟ್ಟೆಯ ನೋವು, ಹೊಟ್ಟೆ ಉಬ್ಬರಿಸುವುದು ಮತ್ತು ಗ್ಯಾಸ್, ಮಲಬದ್ಧತೆ, ಅತಿಸಾರದಂತಹ ಸಮಸ್ಯೆಗಳನ್ನು ದೂರ ಮಾಡುತ್ತದೆ. ಒಂದು ಲೋಟ ನೀರಿಗೆ ಅಥವಾ ಮಜ್ಜಿಗೆಗೆ ಇಂಗು ಹಾಕಿಕೊಂಡು ಕುಡಿದರೆ ಅಸಿಡಿಟಿ ಬಹಳ ಬೇಗ ಕಡಿಮೆಯಾಗುತ್ತದೆ. ಊಟದ ಜೊತೆ ಇಂಗು ಹಾಕಿದ ಮಜ್ಜಿಗೆ ಅಥವಾ ಸಾರನ್ನು ಕುಡಿಯುವುದರಿಂದ ಜೀರ್ಣಕ್ರಿಯೆ ಸುಲಭವಾಗುತ್ತದೆ.

ಇದನ್ನೂ ಓದಿ: ನೀವು ಮೋಮೋಸ್​ ಪ್ರಿಯರಾ?; ಆರೋಗ್ಯದ ಬಗ್ಗೆ ಇರಲಿ ಎಚ್ಚರ

ನಿಮಗೆ ಹಲ್ಲು ನೋವಿದ್ದರೆ ಅಥವಾ ಇನ್ಫೆಕ್ಷನ್ ಆಗಿದ್ದರೆ ಅಥವಾ ಒಸಡಿನಲ್ಲಿ ರಕ್ತ ಬರುತ್ತಿದ್ದರೆ ಇಂಗನ್ನು ಬಳಸಿ. ಇಂಗಿನಲ್ಲಿ ಅನೇಕ ಪ್ರಕಾರದ ಆಂಟಿ ಆಕ್ಸಿಡೆಂಟ್ಸ್ ಇರುವುದರಿಂದ ಇದು ಸೋಂಕು ಮತ್ತು ನೋವಿನ ಸಮಸ್ಯೆಗೆ ಪರಿಹಾರ ನೀಡುತ್ತದೆ. ಶ್ವಾಸನಾಳದ ಸೋಂಕು ಚಿಕಿತ್ಸೆಗಾಗಿ ಇಂಗು ಪ್ರಯೋಜನಕಾರಿ. ಜೇನು, ಶುಂಠಿ, ಇಂಗು ಬೆರೆಸಿ ಸೇವಿಸಿದರೆ ಒಣ ಕೆಮ್ಮು, ಅಸ್ತಮಾ ಉಪಶಮನವಾಗುತ್ತದೆ.

ಇಂಗು ಮುಟ್ಟಿನ ನೋವು ಮತ್ತು ಹೊಟ್ಟೆಯ ಕೆಳಭಾಗ ಮತ್ತು ಬೆನ್ನಿನ ಸೆಳೆತವನ್ನು ನಿವಾರಿಸುತ್ತದೆ. ಇದು ಸುಲಭವಾಗಿ ರಕ್ತದ ಹರಿವನ್ನು ಉತ್ತೇಜಿಸುವ ಪ್ರೊಜೆಸ್ಟರಾನ್ ಸ್ರವಿಸುವಿಕೆಯನ್ನು ಹೆಚ್ಚಿಸುತ್ತದೆ. ಹೀಗಾಗಿ ಮುಟ್ಟಿನ ಸಂದರ್ಭದ ನೋವಿನಿಂದ ಪರಿಹಾರವನ್ನು ನೀಡುತ್ತದೆ. ಕಫದ ಸಮಸ್ಯೆಯಿದ್ದರೆ ಅದಕ್ಕೂ ಇಂಗು ಪ್ರಯೋಜನಕಾರಿ. ತಲೆನೋವಿಗೂ ಇಂಗು ಪರಿಹಾರ ನೀಡುತ್ತದೆ. ನೀರಿನಲ್ಲಿ ಕರಗಿಸಿ ಇಂಗನ್ನು ಸೇವಿಸಿದರೆ, ತಲೆನೋವು ಅಥವಾ ಮೈಗ್ರೇನ್ ಸಮಸ್ಯೆ ಕಡಿಮೆಯಾಗುತ್ತದೆ.

ಇದನ್ನೂ ಓದಿ: ಅತಿಯಾಗಿ ಹಣ್ಣಾದ ಬಾಳೆಹಣ್ಣುಗಳನ್ನು ಏನು ಮಾಡಬೇಕೆಂದು ಯೋಚಿಸುತ್ತಿದ್ದೀರಾ? ಈ ಸುಲಭ ಆರೋಗ್ಯಕರ ಪಾಕವಿಧಾನಗಳನ್ನು ಟ್ರೈ ಮಾಡಿ

ಮುಖದ ಕಾಂತಿಯನ್ನು ಕೂಡ ಇಂಗು ಹೆಚ್ಚಿಸುತ್ತದೆ. ಮುಖದ ಹೊಳಪು ಹೆಚ್ಚಾಗಲು ಇಂಗಿನ ಪೇಸ್ಟನ್ನು ಹಚ್ಚಿಕೊಳ್ಳಬಹುದು. ಇಂಗನ್ನು ನೀರು ಅಥವಾ ರೋಸ್ ವಾಟರ್‌ನೊಂದಿಗೆ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ. ಇಂಗನ್ನು ಸ್ವಲ್ಪ ನೀರಿನೊಂದಿಗೆ ಕರಗಿಸಿ ಮೊಡವೆ ಇರುವ ಜಾಗಕ್ಕೆ ಲೇಪಿಸುವುದರಿಂದ ಮೊಡವೆಯೂ ನಿವಾರಣೆಯಾಗುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್