ಅತಿಯಾಗಿ ಹಣ್ಣಾದ ಬಾಳೆಹಣ್ಣುಗಳನ್ನು ಏನು ಮಾಡಬೇಕೆಂದು ಯೋಚಿಸುತ್ತಿದ್ದೀರಾ? ಈ ಸುಲಭ ಆರೋಗ್ಯಕರ ಪಾಕವಿಧಾನಗಳನ್ನು ಟ್ರೈ ಮಾಡಿ

ಬಾಳೆಹಣ್ಣಿನ ಶೇಖರಣಾ ಅವಧಿ ಬಹಳ ಕಡಿಮೆ. ಕೆಲವೊಮ್ಮೆ ನೀವು ಎಲ್ಲವನ್ನೂ ಮೂರರಿಂದ ನಾಲ್ಕು ದಿನಗಳಲ್ಲಿ ಮುಗಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ, ನೀವು ಅತಿಯಾಗಿ ಹಣ್ಣಾದ ಬಾಳೆಹಣ್ಣುಗಳನ್ನು ಎಸೆಯುವ ಬದಲು ಈ ಆರೋಗ್ಯಕರ ಮತ್ತು ಸುಲಭ ಹಣ್ಣಾದ ಬಾಳೆಹಣ್ಣಿನ ಪಾಕವಿಧಾನಗಳನ್ನು ಪ್ರಯತ್ನಿಸಿ, ರುಚಿ ನೋಡಿ.

ಅತಿಯಾಗಿ ಹಣ್ಣಾದ ಬಾಳೆಹಣ್ಣುಗಳನ್ನು ಏನು ಮಾಡಬೇಕೆಂದು ಯೋಚಿಸುತ್ತಿದ್ದೀರಾ? ಈ ಸುಲಭ ಆರೋಗ್ಯಕರ ಪಾಕವಿಧಾನಗಳನ್ನು ಟ್ರೈ ಮಾಡಿ
Overripe bananas
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷತಾ ವರ್ಕಾಡಿ

Updated on: Sep 09, 2023 | 6:59 AM

ಬಾಳೆಹಣ್ಣು ಗಟ್ಟಿಯಿದ್ದಾಗ ಅಥವಾ ಬಲಿತಾಗ ಉತ್ತಮ ರುಚಿಯನ್ನು ನೀಡುತ್ತದೆ. ನೀವು ಇದನ್ನು ಲಘು ಆಹಾರವಾಗಿ ತಿನ್ನಬಹುದು ಅಥವಾ ಸಲಾಡ್ ತಯಾರಿಸಲು ಇತರ ಹಣ್ಣುಗಳೊಂದಿಗೆ ಸೇರಿಸಿಕೊಳ್ಳಬಹುದು. ಆದರೆ ಅದು ಕುಂಟಿದಾಗ, ಸ್ವಲ್ಪ ಕಂದು ಬಣ್ಣಕ್ಕೆ ತಿರುಗಿದಾಗ, ಅದನ್ನು ತಿನ್ನಲು ನಮಗೆ ಇಷ್ಟವಾಗುವುದಿಲ್ಲ. ಇಂತಹ ಬಾಳೆಹಣ್ಣುಗಳನ್ನು ಎಸೆಯುವ ಬದಲು ಅದನ್ನು ಮ್ಯಾಶ್ ಅಥವಾ ಕಿವುಚಿ ಅದನ್ನು ವಿವಿಧ ರೀತಿಯಲ್ಲಿ ಬಳಸಬಹುದು. ಅತಿಯಾಗಿ ಹಣ್ಣಾದ ಬಾಳೆಹಣ್ಣುಗಳನ್ನು ಈ ಆರೋಗ್ಯಕರ ಪಾಕವಿಧಾನಗಳ ಮೂಲಕ ಪ್ರಯತ್ನಿಸಿ, ರುಚಿ ನೋಡಿ.

ಅತಿಯಾಗಿ ಹಣ್ಣಾದ ಬಾಳೆಹಣ್ಣು ಕಡಿಮೆ ಆಕರ್ಷಕವಾಗಿ ಕಾಣುವುದರಿಂದ, ಅದು ತನ್ನ ಪೋಷಕಾಂಶಗಳನ್ನು ಕಳೆದುಕೊಳ್ಳುತ್ತದೆ ಎಂದು ಅರ್ಥವಲ್ಲ. ಅತಿಯಾಗಿ ಹಣ್ಣಾದ ಬಾಳೆಹಣ್ಣಿನಲ್ಲಿ ಫೈಬರ್ ಮತ್ತು ಪೊಟ್ಯಾಸಿಯಮ್ ಸಮೃದ್ಧವಾಗಿದೆ ಮತ್ತು ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲವಾಗಿದೆ, ಇದು ಜೀವಕೋಶಗಳನ್ನು ಹಾನಿಯಿಂದ ರಕ್ಷಿಸಲು ಸಹಾಯ ಮಾಡುತ್ತದೆ ಎಂದು ಬೆಂಗಳೂರಿನ ಓಲ್ಡ್ ಏರ್ಪೋರ್ಟ್ ರಸ್ತೆಯ ಕ್ಲೌಡ್ನೈನ್ ಗ್ರೂಪ್ ಆಫ್ ಹಾಸ್ಪಿಟಲ್ಸ್ನ ಪೌಷ್ಟಿಕತಜ್ಞೆ ಸಮ್ರೀನ್ ಸಾನಿಯಾ ಹೇಳುತ್ತಾರೆ.

ಅತಿಯಾಗಿ ಹಣ್ಣಾದ ಬಾಳೆಹಣ್ಣಿನ ಪಾಕವಿಧಾನ ಇಲ್ಲಿವೆ:

1. ಬಾಳೆಹಣ್ಣಿನ ಶೀರಾ: 

ಬೇಕಾಗುವ ಸಾಮಗ್ರಿಗಳು:

  • 1 ಕಪ್ ಸುಜಿ ಅಥವಾ ನುಣ್ಣನೆಯ ರವೆ
  • 2 ಟೇಬಲ್ ಚಮಚ ತುಪ್ಪ
  • ಅತಿಯಾಗಿ ಹಣ್ಣಾದ 2 ಬಾಳೆಹಣ್ಣುಗಳು
  • 3 ಕಪ್ ನೀರು ಅಥವಾ ಹಾಲು
  • ಒಂದು ಚಿಟಿಕೆ ಕೇಸರಿ
  • ಒಣ ಹಣ್ಣುಗಳು (ಡ್ರೈ ಫ್ರೂಟ್ಸ್)

ಮಾಡುವ ವಿಧಾನ:

  •  ಒಂದು ಕಪ್ ರವೆಯನ್ನು ತುಪ್ಪದಲ್ಲಿ ಲಘುವಾಗಿ ಹುರಿಯಿರಿ.
  • ಕತ್ತರಿಸಿದ ಎರಡು ಬಾಳೆಹಣ್ಣುಗಳನ್ನು ಸೇರಿಸಿ ಚೆನ್ನಾಗಿ ಕಲಸಿ .
  • ಅದಕ್ಕೆ 2.5 ಕಪ್ ಬಿಸಿ ನೀರು ಅಥವಾ ಹಾಲನ್ನು ಸೇರಿಸಿ.
  • ಮಿಶ್ರಣವನ್ನು ಸಮನಾಗಿ ಉಂಡೆಗಳು ಇಲ್ಲದಂತೆ ಕಲಕಿ.
  • ಕೆಲವು ನಿಮಿಷಗಳ ಕಾಲ ಬೇಯಿಸಿ ನಂತರ ಡ್ರೈ ಫ್ರೂಟ್ಸ್ ಗಳಿಂದ ಅಲಂಕರಿಸಿ.

2. ಬಾಳೆಹಣ್ಣಿನ ಪಲ್ಯ ಅಥವಾ ಕೇಲೆ ಕಿ ಸಬ್ಜಿ:

ಬೇಕಾಗುವ ಸಾಮಗ್ರಿಗಳು:

  • ಅತಿಯಾಗಿ ಹಣ್ಣಾದ 2 ಬಾಳೆಹಣ್ಣುಗಳು
  • ಒಂದು ಚಿಟಿಕೆ ಇಂಗು
  • ಅರ್ಧ ಟೀ ಚಮಚ ಸಾಸಿವೆ
  • 2 ಟೀ ಚಮಚ ಎಣ್ಣೆ
  • ಅರ್ಧ ಟೀ ಚಮಚ ಮೆಣಸಿನ ಪುಡಿ
  • ಅರ್ಧ ಟೀ ಚಮಚ ಕೊತ್ತಂಬರಿ ಪುಡಿ
  • ಅರ್ಧ ಟೀ ಚಮಚಕ್ಕಿಂತ ಕಡಿಮೆ ಅರಿಶಿನ ಪುಡಿ
  • ಅರ್ಧ ಟೀ ಚಮಚ ಜೀರಿಗೆ ಪುಡಿ
  • ಅರ್ಧ ಟೀ ಚಮಚ ಸಕ್ಕರೆ
  • ಒಂದು ಚಿಟಿಕೆ ಉಪ್ಪು

ಮಾಡುವ ವಿಧಾನ:

  • ಸಾಸಿವೆ ಮತ್ತು ಒಂದು ಚಿಟಿಕೆ ಇಂಗನ್ನು( ಅಸಾಫೋಟಿಡಾ) ಎಣ್ಣೆಯಲ್ಲಿ ಹಾಕಿ.
  • ಬಾಳೆಹಣ್ಣುಗಳನ್ನು ವೃತ್ತಾಕಾರದಲ್ಲಿ ಕತ್ತರಿಸಿ, ಸೇರಿಸಿ.
  •  ಸ್ವಲ್ಪ ಕಲಕಿ ನಂತರ ಮೆಣಸು, ಅರಿಶಿನ, ಕೊತ್ತಂಬರಿ ಮತ್ತು ಜೀರಿಗೆ ಪುಡಿಗಳನ್ನು ಸೇರಿಸಿ.
  • ಸಕ್ಕರೆ ಮತ್ತು ಉಪ್ಪನ್ನು ಸೇರಿಸಿ ಮಧ್ಯಮ ಉರಿಯಲ್ಲಿ ಎರಡು ನಿಮಿಷಗಳ ಕಾಲ ಬೇಯಿಸಿ ನಂತರ ಬಡಿಸಿ.

3. ಅತಿಯಾಗಿ ಹಣ್ಣಾದ ಬಾಳೆಹಣ್ಣಿನ ಓಟ್ ಮೀಲ್:

ಬೇಕಾಗುವ ಸಾಮಗ್ರಿಗಳು:

  • 1/2 ಕಪ್ ಓಟ್ಸ್
  •  1 ಕಪ್ ನೀರು
  • 1/2 ಕಪ್ ಹಾಲು
  • 1 ಅತಿಯಾಗಿ ಹಣ್ಣಾದ ಬಾಳೆಹಣ್ಣು (ಜಜ್ಜಿದ)
  • 1/4 ಡ್ರೈ ಫ್ರೂಟ್ಸ್

ಮಾಡುವ ವಿಧಾನ:

  • ಒಂದು ಸಣ್ಣ ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ಓಟ್ಸ್, ನೀರು ಮತ್ತು ಹಾಲನ್ನು ಹಾಕಿ.
  • ಇದನ್ನು ಕುದಿಸಿ ನಂತರ ಶಾಖವನ್ನು ಕಡಿಮೆ ಮಾಡಿ ಮತ್ತು ಐದು ನಿಮಿಷಗಳ ಕಾಲ ಕುದಿಯಲು ಬಿಡಿ ಅಥವಾ ಓಟ್ಸ್ ಬೇಯುವವರೆಗೆ ಕಾಯಿರಿ.
  •  ಜಜ್ಜಿದ ಬಾಳೆಹಣ್ಣು, ಡ್ರೈ ಫ್ರೂಟ್ಸ್ ಸೇರಿಸಿ ನಂತರ ಬಡಿಸಿ.

ಇದನ್ನೂ ಓದಿ: ಪ್ರತಿನಿತ್ಯ ಬಾದಾಮಿ ಸೇವನೆ ಮಾಡುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿದಿದೆಯಾ?

4. ಬಾಳೆಹಣ್ಣಿನ ಸ್ಮೂಥಿ:

ಬೇಕಾಗುವ ಸಾಮಾಗ್ರಿಗಳು:

  • 1 ಹಣ್ಣಾದ ಬಾಳೆಹಣ್ಣು
  •  1 ಕಪ್ ಮೊಸರು
  •  1/2 ಕಪ್ ಹಣ್ಣು
  • 1/2 ಕಪ್ ಹಾಲು

ಮಾಡುವ ವಿಧಾನ:

ಎಲ್ಲಾ ಪದಾರ್ಥಗಳನ್ನು ಬ್ಲೆಂಡರ್ ನಲ್ಲಿ ಬೆರೆಸಿ ನಯವಾಗುವವರೆಗೆ ಮಿಶ್ರಣ ಮಾಡಿದರೆ ಬಾಳೆಹಣ್ಣಿನ ಸ್ಮೂಥಿ ತಯಾರಾಗುತ್ತದೆ.

5. ಬಾಳೆಹಣ್ಣಿನ ಐಸ್ ಕ್ರೀಮ್:

ಬೇಕಾಗುವ ಸಾಮಾಗ್ರಿಗಳು:

  • ಅತಿಯಾಗಿ ಹಣ್ಣಾದ 2 ಬಾಳೆಹಣ್ಣುಗಳು
  • 1 ಟೇಬಲ್ ಚಮಚ ಬೆಣ್ಣೆ
  • 1 ಟೇಬಲ್ ಚಮಚ ಕೋಕೋ ಪೌಡರ್

ಮಾಡುವ ವಿಧಾನ:

  • ಒಂದು ಮಿಕ್ಸರ್ ಜಾರ್ ತೆಗೆದುಕೊಂಡು ನಂತರ ಹೆಪ್ಪುಗಟ್ಟಿದ ಬಾಳೆಹಣ್ಣು, ಕಡಲೆಕಾಯಿ ಬೆಣ್ಣೆ ಮತ್ತು ಕೋಕೋ ಪೌಡರ್ ಅನ್ನು ಸೇರಿಸಿ.
  • ಎಲ್ಲವನ್ನೂ ನಯವಾಗುವವರೆಗೆ ಮಿಶ್ರಣ ಮಾಡಿ.
  • 20 ರಿಂದ 30 ನಿಮಿಷಗಳ ಕಾಲ ಫ್ರೀಜ್ ನಲ್ಲಿಡಿ ನಂತರ ಐಸ್ ಕ್ರೀಮ್ ನಂತೆ ಎಲ್ಲರಿಗೂ ನೀಡಿ.

ಅತಿಯಾಗಿ ಹಣ್ಣಾದ ಬಾಳೆಹಣ್ಣುಗಳನ್ನು ತಿನ್ನುವುದನ್ನು ಯಾರು ತಪ್ಪಿಸಬೇಕು?

ಇವುಗಳನ್ನು ಹೆಚ್ಚಿನ ಜನರು ಆನಂದಿಸಬಹುದು, ಆದರೆ ಮಧುಮೇಹ ಹೊಂದಿರುವ ಜನರು ಅತಿಯಾಗಿ ಹಣ್ಣಾದ ಬಾಳೆಹಣ್ಣುಗಳನ್ನು ತಿನ್ನುವುದನ್ನು ತಪ್ಪಿಸಬೇಕು ಎಂದು ಸಾನಿಯಾ ಹೇಳುತ್ತಾರೆ. ಏಕೆಂದರೆ ಅತಿಯಾಗಿ ಹಣ್ಣಾದ ಬಾಳೆಹಣ್ಣುಗಳು ಹೆಚ್ಚಿನ ಗ್ಲೈಸೆಮಿಕ್ ಸೂಚ್ಯಂಕವನ್ನು ಹೊಂದಿರುತ್ತವೆ. ಅಂದರೆ ನೀವು ಮಧುಮೇಹಿಗಳಾಗಿದ್ದರೆ ರಕ್ತದಲ್ಲಿನ ಸಕ್ಕರೆ ಮಟ್ಟವು ತ್ವರಿತವಾಗಿ ಏರಿಕೆಯಾಗಬಹುದು. ಜೊತೆಗೆ ಕರುಳಿನ ಸಿಂಡ್ರೋಮ್ ಅಥವಾ ಇತರ ಜೀರ್ಣಕಾರಿ ಸಮಸ್ಯೆಗಳನ್ನು ಹೊಂದಿರುವ ಜನರು ಅತಿಯಾಗಿ ಹಣ್ಣಾದ ಬಾಳೆಹಣ್ಣುಗಳನ್ನು ಸೇವಿಸುವುದನ್ನು ತಪ್ಪಿಸಬೇಕು. ಇವು ಜೀರ್ಣಿಸಿಕೊಳ್ಳಲು ಕಷ್ಟವಾಗಬಹುದು ಮತ್ತು ಉಬ್ಬರ, ಗ್ಯಾಸ್ ಅಥವಾ ಅತಿಸಾರಕ್ಕೆ ಕಾರಣವಾಗಬಹುದು. ಅಲ್ಲದೆ ನೀವು ತೂಕ ಇಳಿಸಿಕೊಳ್ಳುವ ಗುರಿಯನ್ನು ಹೊಂದಿದ್ದರೆ, ನೀವು ಅತಿಯಾಗಿ ಹಣ್ಣಾದ ಬಾಳೆಹಣ್ಣುಗಳನ್ನು ತಿನ್ನುವುದನ್ನು ತಪ್ಪಿಸಬೇಕು.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ